ವಿನಂತಿಯಷ್ಟೇ…

ಕವಿತೆ

ಮಧುಸೂದನ ಮದ್ದೂರು

ನಿನ್ನ ಒಂದೇ ಒಂದು ಕನಸಿಗೆ ಇಷ್ಟು ಪರಿತಪಿಸ ಬೇಕಿತ್ತೆ…..?

ನಿನ್ನ ಕುಡಿಮಿಂಚ ಕಣ್ಣೋಟ
ಎದೆ ಇರಿದಿದ್ದರೆ ಸಾಕಿತ್ತು..
ಎದೆಗೆ ನಿನ್ನ ನೆನಪುಗಳ ಭರ್ಜಿಯಿಂದ
ಇರಿದುಕೊಳ್ಳಬೇಕಿರಲಿಲ್ಲ..
ನಿನ್ನ ತುಸು ಸ್ಪರ್ಶದ ಕೆನೆಗಾಳಿ ಎದೆಗೆ ಸೊಂಕಿದ್ದರೆ ಸಾಕಿತ್ತು…

ನಿನ್ನ ಸಿಹಿ ಮುತ್ತೊಂದು ಸಿಕ್ಕಿದ್ದರೆ ಸಾಕಿತ್ತು..
ಮಧುಶಾಲೆಗೆ ಎಡತಾಕಿ ಮತ್ತಿನ ಬಾಟಲಿಗಳಿಗೆ ಮುತ್ತಿಕ್ಕುವ ಪ್ರಮೇಯವೇ ಇರುತ್ತಿರಲಿಲ್ಲ…

ನಿನ್ನ ನವಿರು ಬಿಸಿಯುಸಿರು ನನ್ನೆದೆಗೆ ಸುಳಿಗಾಳಿಯಾಗಿದ್ದರೆ ಸಾಕಿತ್ತು..
ಧೂಮಲೀಲಾ ವಿನೋದವಳಿಗೆ ಅಗ್ನಿಮಿತ್ರನಾಗುತ್ತಿರಲಿಲ್ಲ..

ಈಗಲೂ ಕಾಲ‌ಮಿಂಚಿಲ್ಲ..
ಒಂದೇ ಒಂದು ಬಾರಿ ಕನಸಿಗೆ ಬಂದು ಬಿಡು ಸಾಕು
ಈ‌ ನನ್ನಿ ವ್ಯಸನಗಳ ಸಾಮ್ರಾಜ್ಯವ ಸೋಲಿಸಿ
ಎದೆಯ ಸಿಂಹಾಸನದ ಪಟ್ಟದ ಸಾಮ್ರಾಜ್ಞಿಯಾಗು…
ಇದೀಷ್ಟೇ ಈ ಬಡ ಪಕೀರನ ವಿನಂತಿ ಮಾತ್ರವಷ್ಟೇ…

**********

One thought on “ವಿನಂತಿಯಷ್ಟೇ…

Leave a Reply

Back To Top