ಗಝಲ್

ಶಶಿಕಾಂತೆ
ನಿನ್ನನ್ನು ಎದೆಯಾಳದಿಂದ ಅನಂತವಾಗಿ ಪ್ರೀತಿಸುತಿರುವೆನು
ಆಣೆ ಇಡಲೇ,ನನ್ನೊಲವನ್ನೆಲ್ಲಾ ನಿನಗಾಗೇ ಮುಡಿಪಾಗಿಡುವೆನು.
ಜೀವನವೆಂಬುದು ಮೂರು ದಿನದ ಸಂತೆಯಂತೆ ಚೆಲುವೆ.
ಆ ಸಂತೆಯಲ್ಲಿ ನೀ ನೀಡಿದೆ ನನಗೆ ಯಾರೂ ನೀಡದ ಸ್ನೇಹವನು.
ನೀನೀಗ ಹೃದಯ ವೀಣೆ ಮೀಟಿಯಾಗಿದೆ ದೂರ ಹೋಗದಿರು ಸಖಿ
ತಾಳಿಕೊಳ್ಳಲಾರದು ನನ್ನೆದೆ ವಿರಹದ ಬೇಗೆಯನು.
ಈ ಬಾಳು ಬರಡು ಬಂಜರುಭೂಮಿ ಆಗಿತ್ತು ನಿನ್ನಾಗಮದ ಮೊದಲು.
ಪ್ರೇಮ ಸಿಂಚನದಿಂದ ಮನದಲಿ ನೀ ಮೂಡಿಸಿದೆ ಹೊಸ ಬಯಕೆಗಳನು
ನಿನ್ನ ಹೆಸರೇ ನನ್ನುಸಿರಾಗಿದೆ ನಾವು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದಾಗದಿಂದ.
ಬಾ ಜಾನು, ನನ್ನೆದೆಗೊರಗಿ ಮಲಗಿ ಕೇಳು ನನ್ನ ಪ್ರೇಮದೇವತೆಯ ಹೆಸರನು.
ಮನಸುಗಳು ಒಂದಾದ ಮೇಲೆ ಬಳಿ ಇರಲು ಭಯವೇತಕಿನ್ನು ನಿನಗೆ.
ಅಧರಗಳ ಮಧುಪಾನ ಮಾಡೋಣ ಮರೆಯಲು ಎಲ್ಲಾ ಚಿಂತೆಯನು.
ನಗುವ ಶಶಿಯಿಲ್ಲದ ಬಾನಿನಲ್ಲಿ ಏನಾದರೂ ಕಳೆ ಇದೆಯೇ ಹೇಳು ಚಿನ್ನು.
ನಿನ್ನ ಪ್ರೀತಿಯಿಲ್ಲದೆ ಹೋದರೆ ಈ ಜೀವನ ಶೂನ್ಯವಲ್ಲವೇನು.