Category: ಇತರೆ

ಇತರೆ

ಮನೋಗತ

ಗಾಂಧಿ ವಿಶೇಷ ಮನೋಗತ ಗಾಂಧೀ,ನೀನು ಮಹಾತ್ಮನಂತೆ ನಿಜ –ವಿರಬಹುದು ನೂರಕ್ಕೆ ನೂರುಅದಕ್ಕೆಂದು ಎಲ್ಲರಂತೆ ನಾನೂಆಳೆತ್ತರದ ಕಲ್ಲು ಕಂಬದ ಮೇಲೆನಿನ್ನ ಪ್ರತಿಮೆಯನಿಟ್ಟು;‘ಗಾಂಧೀ ಚೌಕ’ ಎಂಬ ನಾಮಫಲಕ ಕಟ್ಟಿನಿನ್ನ ಜಯಂತಿ – ಪುಣ್ಯ ತಿಥಿಗಳಿಗೊಮ್ಮೆಆಡಂಬರ ಮಾಡಿ,ನಿನ್ನ ನೀತಿ – ತತ್ವಾದರ್ಶಗಳನ್ನುಪೊಳ್ಳು ಭರವಸೆ ಭಾಷಣದಲಿ ತುರುಕಿಆಚರಣೆಯನು ಗಾಳಿಯಲಿ ತೂರಿಚಪ್ಪಾಳೆ ಗಿಟ್ಟಿಸುವ ವ್ಯಕ್ತಿಯಾಗಲಾರೆ!ಯಾಕೆಂದರೆ,ಬೀದಿ ನಾಯಿ, ಬಿಡಾಡಿ ದನ, ಭಿಕಾರಿ ಮಂದಿಹಸಿವಿನಿಂದ ನರಳುತ್ತಾ…ನಿನ್ನ ಪ್ರತಿಮೆಯ ಕೆಳಗೇನೆರಳ ಬಯಸಿ ಅಂಗಾತ ಬಿದ್ದಿರುವಾಗನಾನ್ಹೇಗೆ ನಿನ್ನ ಹಾಡಿ ಹೊಗಳಿ ಷೋಕಿ ಮಾಡಲಿ? ******************************** ಬಾಲಕೃಷ್ಣ ದೇವನಮನೆ

ಕವಿತೆ ಬಾಪೂಜಿ ಮಮತೆಯ ಬಾಪೂಜಿಸತ್ಯಾಗ್ರಹಕೆ ನೀನಾದೆ ರಾಜಿ ಧೀಮಂತ ನೇತಾರಸತ್ಯ ಶಾಂತಿಯ ಮೂರ್ತಿವರ್ಣಾತೀತ ನಿಲುವುಸ್ವಾತಂತ್ರ್ಯದ ಉಷಾಕಿರಣ ದೇಶ ಪ್ರೇಮ ಹುರಿದುಂಬಿಸಿಬ್ರಿಟಿಷರಿಗಾದೆ ಕಂಟಕಬರೆದೆ ನವಯುಗದ ಭಾಷ್ಯನ್ಯಾಯ ಪರತೆಗೆ ಸ್ಪೂರ್ತಿ ದಾಸ್ಯದಿಂದ ಬಿಡುಗಡೆಗೆ ನಿನ್ನ ಕರೆತ್ಯಾಗ ಬಲಿದಾನಕೆ ವರದಾನಮೂಲಶಿಕ್ಷಣದ ಪರತೆಸ್ವಚ್ಛತಾ ಆಂದೋಲನಕೆ ರುವಾರಿ ಮೂಡಿಸಿದೆ ಸಂಚಲನಭಾರತಾಂಬೆಯ ಕುಡಿಯಲಿಬಡವನ ಅಂತಃಕರಣದ ಪ್ರತಿಇದೋ ಮಹಾತ್ಮ ನಿನಗೆ ಒಂದನ‌. ******************************

ಗಾಂಧಿ ವಿಶೇಷ ಮಹಾತ್ಮನಿಗೆರಡು ಕವಿತೆಗಳು ಕವಿತೆ-ಒಂದು ನಿನ್ನ ಜಯಂತಿಯ ದಿನನಿನ್ನ ನೆನೆಸುವುದು ಕಮ್ಮಿಯಾಗಿಚರ್ಚೆಗಳೇ ಜಾಸ್ತಿಯಾಗಿದ್ದರುಬೇಸರಿಸಬೇಡ ಮಹಾತ್ಮಾಸತ್ಯ ಅಹಿಂಸೆಗಳ ಜೊತೆಉಪವಾಸವೂ ಆಯುಧವಾಗಿಸಿದ್ದುಹೊರಗಿನವರಿಗೆ ಸ್ಫೂರ್ತಿಯಾದರೂನಮಗದು ಹಿಡಿಸಲಿಲ್ಲನಿನ್ನ ಹುಟ್ಟು ಹಬ್ಬದ ದಿನಕಕ್ಕಸುಗಳ ಉದ್ಘಾಟನೆಕಡ್ಡಾಯವಾಗಿ ಹೆಂಡ ನಿಷೇಧಮಕ್ಕಳ ಕಿವಿ ಹಿಂಡಿ ಆಚರಣೆ ಇಷ್ಟೇನಿನ್ನ ’ಅರ್ಧರಾತ್ರಿಯ ಹೆಣ್ಣೊಬ್ಬಳ’ ಹೇಳಿಕೆಯನ್ನುಪರೀಕ್ಷಿಸಲು ಹೋಗಿಬೀದಿ ಕಾಮುಕರ ತೆಕ್ಕೆಯಲ್ಲಿಅದೆಷ್ಟು ಹೆಣ್ಣುಗಳು ಸತ್ತಿರುವರೋಎಪ್ಪತ್ಮೂರು ವರ್ಷವಾಯಿತುಎರಡು ಹೊಸ ತಲೆಮಾರು ಬಂತುಪಡೆಪಾಟಲು ಇವರಿಗೇನು ಗೊತ್ತುವಿಪರೀತ ಸ್ವತಂತ್ರ ಇವರ ಸ್ವತ್ತುಈಗಲೂ ಸರಕಾರ ಕೊಡುವ ರಜೆಟಿವಿಗಳಲ್ಲಿ ಪತ್ರಿಕೆಗಳಲ್ಲಿ ಬರುವ ಸುದ್ದಿನಿನ್ನನ್ನು ನೆನಪಿಸುತ್ತವೇ ಆಗಲಿಸವಲೆನಿಸುತ್ತಿರುವ ನಿನ್ನ ಸೂಕ್ತಿಗಳಲ್ಲನಾವಿಷ್ಟೇ ಮಹನೀಯರನ್ನುಅತಿ […]

ಗಾಂಧಿ ವಿಶೇಷ ಆಶಯ ಪಾಪು ಅಲ್ಲಿದೆ ಬಾಪುವಿನ ಚಿತ್ರ ಅದರ ಕಣ್ಣ ಹೊಳಪು ನಿನ್ನದಾಗಲಿ ಅದರಲ್ಲಿದೆ ಶ್ವೇತ ಬಣ್ಣ, ಹತ್ತಿರ ಹೋಗು ನಿನಗೂ ಸಿಗಬಹುದು… ಆಪ್ತತೆಯ ಮೃದು ಹೃದಯ ಅದು ನಿನ್ನದೂ ಆಗಲಿ… ಒಂದಿಷ್ಟು ಹೊತ್ತು ಅಲ್ಲೇ ಕುಳಿತಿರು ಆಲೋಚಿಸು… ಬೆಳಕು ಆವರಿಸಿ ಕಣ್ಣು ತುಂಬೀತು ಬಂದೀತು ಹೊಸ ದೃಷ್ಟಿ ಅಳಿಯಬಹುದು ಪಾಪ ಸೃಷ್ಟಿ. ************************************ ಚಿತ್ರ-ಕವಿತೆ ತಮ್ಮಣ್ಣ ಬೀಗಾರ.

ಗಾಂಧಿ ವಿಶೇಷ ಬಾಪೂ ಸತ್ಯಸಂಧ ಸರಳ ಗಾಂಧಿ ಮೋಹನಸತ್ಯಾಗ್ರಹದಿಂದ ಜಯವ ತಂದವನಅತಿಮೋಸದಿಂದ ಕೊಂದರಲ್ಲ ಬಾಪೂ ಗುಂಡು ತುಂಡುಗಳ ಮುಟ್ಟದವನಗುಂಡಿನಿಂದಲೇ ನಿನ್ನ ದೇಹವನುತುಂಡುಮಾಡಿ ಕೊಂದರಲ್ಲ ಬಾಪೂ ಅಹಿಂಸೆಯೇ ಪರಮಧರ್ಮವೆಂದವನರಕ್ತಪಾತವಿಲ್ಲದೆ ಸ್ವಾತಂತ್ರ್ಯ ತಂದವನಹಿಂಸೆಯಿಂದಲೇ ಕೊಂದರಲ್ಲ ಬಾಪೂ ಸಾಟಿಯಿಲ್ಲದ ಪ್ರಾಮಾಣಿಕ ಅವಧೂತನನೋಟಿಗಳ ಮೇಲೆ ಹಾಕಿ ನಿನ್ನ ಚಿತ್ರಣಅಟ್ಟಹಾಸದ ಭ್ರಷ್ಟಾಚಾರಗೈದರಲ್ಲ ಬಾಪೂ ದೇವದೂತನಂತ ಶಾಂತ ಜೀವನದ ಸಂತನಜೀವಂತವಿರುವಾಗ ಕಡೆಗಣಿಸಿ ರಾಮಭಕ್ತನಸಾವಿನ ನಂತರ ನಿನ್ನ ಪೂಜಿಸಿದರಲ್ಲ ಬಾಪೂ ಸ್ವಚ್ಛತಾ ಅಭಿಯಾನದ ಸುಳ್ಳು ಹೆಸರಿನಲಿನಿಶ್ಚಲ ನಿರ್ಮಲ ನಿನ್ನ ಸಾತ್ವಿಕ ತತ್ವಗಳನೆಲ್ಲಕೊಚ್ಚೆಯಂತೆ ಗುಡಿಸಿ ಒಗೆದರಲ್ಲ ಬಾಪೂ ರಾಮರಾಜ್ಯದ […]

ಗಾಂಧಿ ವಿಶೇಷ ಗಾಂಧಿ ಸ್ಮರಣೆ ಕೆಟ್ಟದ್ದನ್ನು ………. ಆಡುವುದಿಲ್ಲ, ಕೇಳುವುದಿಲ್ಲ, ನೋಡುವುದಿಲ್ಲ ಎನ್ನುತ್ತಲೇ ‘ಮಾಡುತ್ತೇವೆ’ ಅನ್ನುತ್ತಾರಲ್ಲ                 ಮಹತ್ಮಾ ನೀ ಮೆಚ್ಚಿದ ಮೂರರ ಜೊತೆ                 ಕೈಕಾಲುಕಟ್ಟಿದ ಮಂಗನ ಗೊಂಬೆ ಬೇಕಲ್ಲ !                 ತಂದರೂ ನಡೆನುಡಿ ಹೊಂದಬೇಕಲ್ಲ ! ಜನನಿ ಪ್ರೇಮದ ಪುತ್ಥಳಿ ಮಡದಿ ತ್ಯಾಗದ ಮೂರುತಿ ಸರ್ವಜನಾಂಗ ಬಂದsÄ ಬಳಗ ಕನಸಿನ ರಾಮರಾಜ್ಯ ನನಸೇ ?                 ನೀನಿಂದು ಇಲ್ಲಿಗೆ ಬಂದುದಾದರೆ                 ಗುಂಡೇಟು ಇಲ್ಲದೇ ಗುಂಡಿಗೆ ಒಡೆವುದು                 ನಡುರಾತ್ರಿಯಲ್ಲಿ ಹೆಣ್ಣು ನಡೆವಂದು […]

ಗಾಂಧಿ ವಿಶೇಷ ಗಾಂಧಿ‌ ನೆನಪಲ್ಲಾ‌… ನೀಲ ಆಗಸದ ಮನಸುಬೇರುಬಿಟ್ಟ ಹೂ ಹಣ್ಣು ಕನಸುಪ್ರೀತಿ ಪ್ರೇಮ ಕರುಣೆಯೇಮೈವೆತ್ತಿ ಬಂದಂತೆ ಸೊಗಸು. ತಾನು ತನ್ನದೆಂಬ ಹಂಗು ಹರಿದುಎಲ್ಲರನ್ನೂ ತನ್ನ ಪ್ರೇಮತೆಕ್ಕೆಯಲಿ ಸೆಳೆದುಸ್ವತಂತ್ರ ಸ್ವದೇಶದ ಮುನ್ನುಡಿ ಬರೆದುಊರಿಕೊಂಡು ಊರುಗೋಲುಬಾರಿಸದೆಯೇ ಬಗ್ಗಿಸಿದಮೌನದಲಿ ಅಸಹಕಾರದಲಿಹಿಡಿ ಕಡಲೆಕಾಯಿ ಜಗಿದು. ಕೂಡಿಟ್ಟು ಕೊಟ್ಟೆ ಸ್ವಾತಂತ್ರ್ಯಸಹನೆ,ಅಹಿಂಸೆಯ ಪಥದಲಿಬೀದೀಲಿ ಚೆಲ್ಲಿ ರಕ್ತಧೋಕುಳಿಕೊಂದು ಸತ್ಯ ಮತ್ತು ಮಹಾತ್ಮನನಡೆಸಿದ್ದೇವೆ‌ ಪ್ರಜಾಪ್ರಭುತ್ವ. ಗಾಂಧಿ‌,ನೋಟಿನಲಿ ಕನ್ನಡಕದಲಿಟೋಪಿ ಚೇರಿನಲಿ ಪಟದಲ್ಲೂ ಕೂಡಿಸಿ ಹಾರಹಾಕಿದ್ದೇವೆ.ಸತ್ಯ ಅಹಿಂಸೆಯ ಕತ್ತು ಹಿಚುಕಿಶಾಂತಿ ನೆಮ್ಮದಿ ಹಣಕ್ಕೆ ಮಾರಿಯಂತ್ರ ತಂತ್ರ ಕುತಂತ್ರದಿಅಭಿವೃದ್ಧಿ ಕಂಡೂ ಕಂಡೂಉದ್ದಾರವಾಗಿಬಿಟ್ಟಿದ್ದೇವೆ.!? […]

ಗಾಂಧಿ ವಿಶೇಷ ಮಹಾತ್ಮನಾದ ಗಾಂಧಿ ಮೋಕ್ಷ ಕಂಡಿತು,ಭರತ ಖಂಡಗಾಂಧಿ ಕನಸಿನ ಭಾರತಬಿಳಿ ತೊಗಲುಗಳ ದಬ್ಬಾಳಿಕೆಯಲಿನರಳಿತು ಪ್ರಜೆಗಳ ಹಿತ ಆಂಗ್ಲರ ನಿರಂಕುಶ ಪ್ರಭುತ್ವತೆರೆಯೆಳೆದ ಗಾಂಧಿ ಮಹಾತ್ಮನೋವು,ತ್ಯಾಗ,ಬಲಿದಾನಬಳಲಿದ ಜೀವಾತ್ಮ ಸತ್ಯಾಗ್ರಹ,ಚಳವಳಿ,ಅವಿರತ ಹೋರಾಟ,ಬಾನೆತ್ತರದಲಿ ತ್ರಿವರ್ಣ ರಂಗಿನ ಬಾವುಟರಾಷ್ಟ್ರಪಿತನ ನೆನಪುಸೇರಿತು ಇತಿಹಾಸ ಪುಟ ಹರಿದು ಛಿದ್ರವಾದ ಬದುಕು,ಬಿಕರಿಯಾದನಮ್ಮ ಮೌಲ್ಯಗಳುಸಂಕುಚಿತ ಭಾವನೆಗಳುಕಿತ್ತು ತಿನ್ನುವ ವಿಚಾರಗಳು ಹರಿದ ರಕ್ತದ ಕೋಡಿಕಮಟು ವಾಸನೆ ಬೀರಿದೆನೆಲ,ಜಲ,ಗಲ್ಲಿಗಲ್ಲಿ ಗಳಲಿಉಸಿರುಕಟ್ಟಿ ಹೆಪ್ಪುಗಟ್ಟಿದಭಾವನೆಗಳು ,ಸಿಡಿದ ಕಿಡಿಸರ್ವ ಸ್ವತಂತ್ರದ ಒಂದೇ ಮಂತ್ರ,ನಮ್ಮ ಸ್ವಾತಂತ್ರ್ಯಬತ್ತಿದ ನಮ್ಮ ಆಸೆಗಳುಸ್ವಹಿತದ,ದೇಶದ ಕನಸುಗಳಿಗೆ ಬೆತ್ತಲಾದಮೋಹನದಾಸ ಕರಮ ಚಂದ ಗಾಂಧಿ ತುಳಿದ […]

ಮಕ್ಕಳ ಕವಿತೆ  ಗಾಂಧಿತಾತ   ಗಾಂಧಿತಾತ ನಮ್ಮತಾತ ದೇಶಕ್ಕಾಗಿ ಮಡಿದ ಮಹಾತ್ಮಾನಾತ…|| ಪ|| ಬಾಲ ಮೋಹನ ಗಾಂಧಿ ತಾಯಿ-ಗುರುವಿನ ಮಾತಿನಲ್ಲೇ ಜಗವ ಬೆಳಗಲು ಹೊರಟುಬಿಟ್ಟ…|| ೧|| ಶಾಲೆಯಲ್ಲಿ ಜಾಣನಲ್ಲ ನೀತಿಯಲ್ಲಿ ಜಗವಬಲ್ಲ ಅಂತರಾತ್ಮ ಬಂಧದಲ್ಲಿ ನಡೆದುಬಿಟ್ಟ….|| ೨|| ಬಡವ ನನ್ನ ದೇಶ ಕೋಟು ಸೂಟು ಬೇಡ ಪಂಚೆವುಟ್ಟು ಸಾಗಿಬಿಟ್ಟ…|| ೩|| ಅಸ್ತ್ರ ಎಂದು ಹಿಡಿಯಲಿಲ್ಲ ಹನಿ ರಕ್ತ ಚೆಲ್ಲಲಿಲ್ಲ ಯುದ್ಧ ಮಾತ್ರ ಗೆದ್ದುಬಿಟ್ಟ….|| ೪|| ಸತ್ಯಾಗ್ರಹ ಶಸ್ತ್ರದಿಂದ ಅಹಿಂಸೆ ಮಾರ್ಗದಲ್ಲಿ ಬ್ರಿಟಿಷರನ್ನು ನಡುಗಿಸಿಟ್ಟ…|| ೫|| ಮಾಡು ಇಲ್ಲ […]

ಗಾಂಧಿ ವಿಶೇಷ ಗಾಂಧಿ ಎಂಬ ಶಕ್ತಿ! ಗಾಂಧೀಜಿ ‘ – ಎಂಬುದು ಒಂದು ವ್ಯಕ್ತಿಯೇ, ಒಂದು ಸಂಸ್ಥೆಯೇ,  ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ, ನೈತಿಕ  ಚಿಂತನೆಗಳ ಮೊತ್ತವೇ? ಹೇಗೆ ಅರ್ಥೈಸಬೇಕು ? ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಲ್ಲಿ ಹೋದರೂ ಜನರನ್ನು ಆಯಸ್ಕಾಂತದಂತೆ ಸೆಳೆಯುತ್ತಿದ್ದರು. ನಿಸ್ವಾರ್ಥ, ನಿರ್ಭೀತಿ, ಆಧುನಿಕ ಮನೋಭಾವ ಹಾಗೂ ಪಾರಂಪರಿಕ ನಿಷ್ಠೆ, ಸಮುದಾಯ ನಿಷ್ಠೆ, ಸರಳತೆ ಮೊದಲಾದವನ್ನು ಉಸಿರಾಡುತ್ತ ಜಾತಿ-ಮತಗಳಲ್ಲಿ ಸಮಭಾವ ಕಂಡವರು. ಗೀತೆ ಮತ್ತು ಉಪನಿಷತ್ತಿನ ಆರಾಧಕರು. ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡವರು. ಇಂದಿನ […]

Back To Top