ಮಕ್ಕಳ ಕವಿತೆ

 ಗಾಂಧಿತಾತ

 

ಗಾಂಧಿತಾತ ನಮ್ಮತಾತ

ದೇಶಕ್ಕಾಗಿ ಮಡಿದ

ಮಹಾತ್ಮಾನಾತ…|| ಪ||

ಬಾಲ ಮೋಹನ ಗಾಂಧಿ

ತಾಯಿ-ಗುರುವಿನ ಮಾತಿನಲ್ಲೇ

ಜಗವ ಬೆಳಗಲು ಹೊರಟುಬಿಟ್ಟ…|| ೧||

ಶಾಲೆಯಲ್ಲಿ ಜಾಣನಲ್ಲ

ನೀತಿಯಲ್ಲಿ ಜಗವಬಲ್ಲ

ಅಂತರಾತ್ಮ ಬಂಧದಲ್ಲಿ ನಡೆದುಬಿಟ್ಟ….|| ೨||

ಬಡವ ನನ್ನ ದೇಶ

ಕೋಟು ಸೂಟು ಬೇಡ

ಪಂಚೆವುಟ್ಟು ಸಾಗಿಬಿಟ್ಟ…|| ೩||

ಅಸ್ತ್ರ ಎಂದು ಹಿಡಿಯಲಿಲ್ಲ

ಹನಿ ರಕ್ತ ಚೆಲ್ಲಲಿಲ್ಲ

ಯುದ್ಧ ಮಾತ್ರ ಗೆದ್ದುಬಿಟ್ಟ….|| ೪||

ಸತ್ಯಾಗ್ರಹ ಶಸ್ತ್ರದಿಂದ

ಅಹಿಂಸೆ ಮಾರ್ಗದಲ್ಲಿ

ಬ್ರಿಟಿಷರನ್ನು ನಡುಗಿಸಿಟ್ಟ…|| ೫||

ಮಾಡು ಇಲ್ಲ ಮಡಿ

ದೇಶ ಬಿಟ್ಟು ನಡಿ ಎನುತಾ

ಬ್ರಿಟಿಷರನ್ನು ತೊಲಗಿಸಿಟ್ಟ…|| ೬||

ಸತ್ಯ ಶಾಂತಿ ನ್ಯಾಯ ಕರ್ಮ

ಸಹನೆ ಪ್ರೀತಿ ನನ್ನ ಧರ್ಮ ಎನುತಾ

ಅಜ್ಞಾನ ಅಂಧಕಾರವ ಕಳಚಿಬಿಟ್ಟ….|| ೮||

ನನ್ನ ಜೀವನವೇ

ನನ್ನ ಸಾರ ಎನ್ನುತಾ

ಬದುಕಿಬಿಟ್ಟ….|| ೯||

************************

ಮಲಿಕಜಾನ ಶೇಖ…

Leave a Reply

Back To Top