ಗಾಂಧಿ ವಿಶೇಷ
ಮಹಾತ್ಮನಾದ ಗಾಂಧಿ
ಮೋಕ್ಷ ಕಂಡಿತು,ಭರತ ಖಂಡ
ಗಾಂಧಿ ಕನಸಿನ ಭಾರತ
ಬಿಳಿ ತೊಗಲುಗಳ ದಬ್ಬಾಳಿಕೆಯಲಿ
ನರಳಿತು ಪ್ರಜೆಗಳ ಹಿತ
ಆಂಗ್ಲರ ನಿರಂಕುಶ ಪ್ರಭುತ್ವ
ತೆರೆಯೆಳೆದ ಗಾಂಧಿ ಮಹಾತ್ಮ
ನೋವು,ತ್ಯಾಗ,ಬಲಿದಾನ
ಬಳಲಿದ ಜೀವಾತ್ಮ
ಸತ್ಯಾಗ್ರಹ,ಚಳವಳಿ,
ಅವಿರತ ಹೋರಾಟ,
ಬಾನೆತ್ತರದಲಿ ತ್ರಿವರ್ಣ ರಂಗಿನ ಬಾವುಟ
ರಾಷ್ಟ್ರಪಿತನ ನೆನಪು
ಸೇರಿತು ಇತಿಹಾಸ ಪುಟ
ಹರಿದು ಛಿದ್ರವಾದ ಬದುಕು,ಬಿಕರಿಯಾದ
ನಮ್ಮ ಮೌಲ್ಯಗಳು
ಸಂಕುಚಿತ ಭಾವನೆಗಳು
ಕಿತ್ತು ತಿನ್ನುವ ವಿಚಾರಗಳು
ಹರಿದ ರಕ್ತದ ಕೋಡಿ
ಕಮಟು ವಾಸನೆ ಬೀರಿದೆ
ನೆಲ,ಜಲ,ಗಲ್ಲಿಗಲ್ಲಿ ಗಳಲಿ
ಉಸಿರುಕಟ್ಟಿ ಹೆಪ್ಪುಗಟ್ಟಿದ
ಭಾವನೆಗಳು ,ಸಿಡಿದ ಕಿಡಿ
ಸರ್ವ ಸ್ವತಂತ್ರದ ಒಂದೇ ಮಂತ್ರ,ನಮ್ಮ ಸ್ವಾತಂತ್ರ್ಯ
ಬತ್ತಿದ ನಮ್ಮ ಆಸೆಗಳು
ಸ್ವಹಿತದ,ದೇಶದ ಕನಸುಗಳಿಗೆ ಬೆತ್ತಲಾದ
ಮೋಹನದಾಸ ಕರಮ ಚಂದ ಗಾಂಧಿ
ತುಳಿದ ಹೋರಾಟದ ದಾರಿ
ಬಲು ಕಠಿಣ
ಹಗಲಿರುಳು ಕಿತ್ತೊಗೆವ
ಗುಲಾಮಗಿರಿಯ ಪಠಣ
ಶಾಂತಿ,ಕರುಣೆ,ಪ್ರೀತಿಯಲಿ
ಮನಸು ಹರಿದ ಪುಟಗಳ
ಸೇರಿಸಿ ,ಸತ್ಯ ಅಹಿಂಸೆಯ ದಾರದಿಂದ ಬಿಗಿದ
ಗಾಂಧಿ ಪರಮಾತ್ಮ
ಜ್ಞಾನ ,ವಿಜ್ಞಾನ,ಶಿಕ್ಷಣದ ಅರಿವು,
ಕೆಚ್ಚು ಹರಿಸಿದೆ ನೆತ್ತರಿನಲಿ
ಸ್ವಾತಂತ್ರ್ಯದ ಹಸಿವು
ಮುಗ್ಗರಿಸಿದ ಆಂಗ್ಲರ ಕಾಯಿದೆ,ಕಾನೂನು
ಬಿತ್ತು ಸ್ವತಂತ್ರದ ಗಾದಿಗೆ
ಭಾರತ
ನಾಥುರಾಮನ ಹೊಡೆತದ
ಗುಂಡು
ಎದೆಯೊಡ್ಡಿ ಸತ್ತ ಕೆಚ್ಚೆದೆಯ ಗಂಡು
ನಮ್ಮ ಮಹಾ”ಭಾರತ,”ದ
ಮಹಾಕಾವ್ಯ,ಗಾಂಧಿ ಪಿತ,
ಮುಗಿಸಿದ ದಂಡಯಾತ್ರೆ
ನನ್ನ ಭಾರತದಲ್ಲೊಂದು
ಸ್ವಾತoತ್ರ್ಯದ ಜಾತ್ರೆ
**********************
ವೀಣಾ ರಮೇಶ್
ಅಭಿನಂದನೆ…ಗಾಂಧಿ ತತ್ವ ನಾವು ಪಾಲಿಸೋಣ.