ಗಾಂಧಿ ವಿಶೇಷ
ಮನೋಗತ
ಗಾಂಧೀ,
ನೀನು ಮಹಾತ್ಮನಂತೆ ನಿಜ –
ವಿರಬಹುದು ನೂರಕ್ಕೆ ನೂರು
ಅದಕ್ಕೆಂದು ಎಲ್ಲರಂತೆ ನಾನೂ
ಆಳೆತ್ತರದ ಕಲ್ಲು ಕಂಬದ ಮೇಲೆ
ನಿನ್ನ ಪ್ರತಿಮೆಯನಿಟ್ಟು;
‘ಗಾಂಧೀ ಚೌಕ’ ಎಂಬ ನಾಮಫಲಕ ಕಟ್ಟಿ
ನಿನ್ನ ಜಯಂತಿ – ಪುಣ್ಯ ತಿಥಿಗಳಿಗೊಮ್ಮೆ
ಆಡಂಬರ ಮಾಡಿ,
ನಿನ್ನ ನೀತಿ – ತತ್ವಾದರ್ಶಗಳನ್ನು
ಪೊಳ್ಳು ಭರವಸೆ ಭಾಷಣದಲಿ ತುರುಕಿ
ಆಚರಣೆಯನು ಗಾಳಿಯಲಿ ತೂರಿ
ಚಪ್ಪಾಳೆ ಗಿಟ್ಟಿಸುವ ವ್ಯಕ್ತಿಯಾಗಲಾರೆ!
ಯಾಕೆಂದರೆ,
ಬೀದಿ ನಾಯಿ, ಬಿಡಾಡಿ ದನ, ಭಿಕಾರಿ ಮಂದಿ
ಹಸಿವಿನಿಂದ ನರಳುತ್ತಾ…
ನಿನ್ನ ಪ್ರತಿಮೆಯ ಕೆಳಗೇ
ನೆರಳ ಬಯಸಿ ಅಂಗಾತ ಬಿದ್ದಿರುವಾಗ
ನಾನ್ಹೇಗೆ ನಿನ್ನ ಹಾಡಿ ಹೊಗಳಿ ಷೋಕಿ ಮಾಡಲಿ?
********************************
ಬಾಲಕೃಷ್ಣ ದೇವನಮನೆ
ಅರ್ಥಪೂರ್ಣ ಕವಿತೆ.. ಅಭಿನಂದನೆ
ತುಂಬಾ ಅರ್ಥವತ್ತಾಗಿ ಪ್ರಸ್ತುತ ಸನ್ನಿವೇಶವನ್ನು ಕವನದ ಮೂಲಕ ಹೇಳಿದಿರಿ.