ಗಾಂಧಿ ವಿಶೇಷ

ಆಶಯ

ಪಾಪು ಅಲ್ಲಿದೆ ಬಾಪುವಿನ ಚಿತ್ರ

ಅದರ ಕಣ್ಣ ಹೊಳಪು ನಿನ್ನದಾಗಲಿ

ಅದರಲ್ಲಿದೆ ಶ್ವೇತ ಬಣ್ಣ, ಹತ್ತಿರ ಹೋಗು

ನಿನಗೂ ಸಿಗಬಹುದು…

ಆಪ್ತತೆಯ ಮೃದು ಹೃದಯ

ಅದು ನಿನ್ನದೂ ಆಗಲಿ…

ಒಂದಿಷ್ಟು ಹೊತ್ತು ಅಲ್ಲೇ ಕುಳಿತಿರು

ಆಲೋಚಿಸು… ಬೆಳಕು ಆವರಿಸಿ

ಕಣ್ಣು ತುಂಬೀತು

ಬಂದೀತು ಹೊಸ ದೃಷ್ಟಿ

ಅಳಿಯಬಹುದು ಪಾಪ ಸೃಷ್ಟಿ.

************************************

ಚಿತ್ರ-ಕವಿತೆ

ತಮ್ಮಣ್ಣ ಬೀಗಾರ.

6 thoughts on “

    1. ಚಿತ್ರ ಮತ್ತು ಕವಿತೆ ಎರಡೂ ತುಂಬಾ ಚೆನ್ನಾಗಿವೆ ಸರ್.

  1. ಪಾಪುವಿಗೆ ಬಾಪುವಿನ ಪುಟ್ಟ ಚಿತ್ರ.ಆಕರ್ಷಕ ಬೀಗಾರ್.

Leave a Reply

Back To Top