ನನ್ನ ಇಷ್ಟದ ಕವಿತೆ
ಪೂಜಾ ನಾಯಕ್ ಬೆಳಗು ಜಾವ ರಚನೆ :ದ. ರಾ. ಬೇಂದ್ರೆ ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಹೆದೆಗೆ, ಹೂಬಾಣ ಹೂಡಿ, ಜುಮ್ಮೆಂದು ಬಿಟ್ಟ ಮಾರ ಗುಡಿಗೋಪುರಕ್ಕು, ಬಲೆ ಬೀಸಿ ಬಂದ, ಅಗೋ ಬೆಳಕು-ಬೇಟೆಗಾರ. ನಿಶೆಯಿಳಿದ ಉಷೆಯ, ಎಳನಗೆಯ ಬಗೆಗೆ, ಸೋತಿರಲು ಜಗವು ಸವಿಗೆ ಕಣ್ಣಿದಿರು ಒಂದು, ಕಟ್ಟಿತ್ತು ಕನಸು; ಕೂಗೊಂದು ಬಂತು ಕಿವಿಗೆ. ಮಕ್ಕಳಿರ ಕೇಳಿ, ರಸ ಕುಡಿಯಲೇಳಿ, ಹುಸಿನಿದ್ದೆಗಿದ್ದೆ ಸಾಕು […]
ಮಕ್ಕಳ ಕವಿತೆ
ಧೂರ್ತ ಆಮೆ ನೀ.ಶ್ರೀಶೈಲ ಹುಲ್ಲೂರು ಹಂಸವೆರಡು ಕೊಳದ ಬಳಿನೀರನರಸಿ ಬಂದವುನೀರು ಕುಡಿದು ತಣಿದ ಮೇಲೆಆಮೆ ನೋಡಿ ನಿಂದವು ಹರಟೆ ಮಲ್ಲ ಆಮೆ ತಾನೆಕೊಳದ ರಾಜನೆಂದಿತುಅದನು ಇದನು ಏನೊ ಹೇಳಿಅವುಗಳ ತಲೆ ತಿಂದಿತು ಸರಿ,ನಾವು ಬರುವೆವಿನ್ನುಮತ್ತೆ ಸಿಗುವೆವೆಂದವುಬಿಡದ ಆಮೆ ನಡೆಯ ನೋಡಿಮನದಿ ತಾವೆ ನೊಂದವು ನನಗೆ ಕೊಳದ ಸಂಗ ಸಾಕುನದಿಯಲೀಜಬೇಕುಹಾಡಿ ಜಿಗಿದು ಕುಣಿದು ತಣಿದುಜಲದಿ ತೇಲಬೇಕು ದಮ್ಮಯ್ಯ ಎನುವೆ ನಾನುಮಾಡಿ ನೀವ್ ಉಪಾಯವಏನೆ ಬಂದರೂ ಸರಿಯೆಗೆಲುವೆ ನಾ ಅಪಾಯವ ಹಂಸವೆರಡು ಬಡಿಗೆ ತಂದುಆಚೆ ಈಚೆ ಹಿಡಿದವುನಡುವೆ ಆಮೆ ಬಡಿಗೆ […]
ನಾನು ಈಜು ಕಲಿತ ಪ್ರಸಂಗ:
ಪ್ರಬಂದ ನಾನು ಈಜು ಕಲಿತ ಪ್ರಸಂಗ: ಲಕ್ಷ್ಮಿನಾರಾಯಣ್ ಭಟ್ ಪಿ. ಚಿಕ್ಕಂದಿನಲ್ಲಿ ನನಗೆ ಈಜು ಕಲಿಯುವ ಉಮೇದು. ಅದಕ್ಕೆ ಮನೆಯಲ್ಲಿ ಯಥಾಪ್ರಕಾರ ಅಡ್ಡಿ – ‘ಮಾಣಿಗೆ ಏನಾದ್ರೂ ಹೆಚ್ಚು-ಕಮ್ಮಿ’ (ನೇರ ಮಾತಲ್ಲಿ ‘ಗೊಟಕ್!’) ಆದರೆ ಎಂಬ ಭಯ! ಅದಕ್ಕೆ ಸರಿಯಾಗಿ ಅದೇ ಸಮಯಕ್ಕೆ ನಮ್ಮ ಮನೆ ಪಕ್ಕದ ಸುಬ್ರಾಯ ದೇವಸ್ಥಾನದ ಚಿಕ್ಕ, ಅಷ್ಟೇನೂ ಆಳವಿಲ್ಲದಿದ್ದ ಕೆರೆಯಲ್ಲಿ ಈಜು ಕಲಿಯುವಾಗ ಓರಗೆಯ ಹುಡುಗನೊಬ್ಬ ಮುಳುಗಿ ಪ್ರಾಣಬಿಟ್ಟಿದ್ದ. ಅವನು ಮುಳುಗುವುದನ್ನು ನೋಡಿ ಉಳಿದ ಚಿಳ್ಳೆಪಿಳ್ಳೆಗಳೆಲ್ಲಾ ಹೆದರಿ ಪದ್ರಾಡ್! ( ತುಳು […]
ಮಕ್ಕಳ ಕವಿತೆ
ಇರುವೆ-ಆನೆ ಗಣಪ ಮತ್ತು ಪುಟ್ಟಿ ವಿಜಯಶ್ರೀ ಹಾಲಾಡಿ ಗಣಪನ ತಿಂಡಿ ಇರುವೆ ತಿಂದರೆತಪ್ಪು ಏನಮ್ಮಆನೆಮರಿಯೇ ಗಣಪ ಎಂದುಅಜ್ಜಿ ಅಂದಿಲ್ವ? ಆನೆಗೆ ಇರುವೆ ಗೆಳೆಯನು ತಾನೇನಾನೇ ನೋಡಿಲ್ವಕಾಡಿನ ಬಿಲದಲಿ ಹುಲ್ಲಿನ ಬೀಜಕೂಡಿ ಹಾಕಿಲ್ವ? ಹುಲ್ಲು ಮೊಳೆತು ಮಳೆಯ ಬೆರೆತುಆನೆಯು ತಿಂದಿಲ್ವಆನೆಗು ಇರುವೆಗು ಭೇದವೆ ಇಲ್ಲಬೆಲ್ಲ ಕದ್ದಿಲ್ವ? ಪುಟ್ಟಿಯ ಮಾತು ಸಿಡಿಯೋ ಅರಳುತಲೆಯು ಕೆಟ್ಟಿಲ್ವ!!ಅಮ್ಮ ಅಪ್ಪ ಅಜ್ಜಿ ಅಜ್ಜಬಿದ್ದು ನಕ್ಕಿಲ್ವ? ******************************
ಶಿಶುತನದ ಹದನದೊಳು ಬದುಕಲೆಳಸಿ
ಪ್ರಬಂಧ ಶಿಶುತನದ ಹದನದೊಳು ಬದುಕಲೆಳಸಿ ಡಾ.ಲಕ್ಷ್ಮಿನಾರಾಯಣ ಭಟ್ ಈ ಸುಂದರ ಮುಂಜಾನೆ ನನಗೆ ತುಂಬಾ ಪ್ರಿಯವಾದ ಹಾಡೊಂದರ ಸಾಲುಗಳು ನನ್ನ ಮನ:ಪಟಲದಲ್ಲಿ ಭಾವ ತರಂಗಗಳನ್ನು ಎಬ್ಬಿಸುತ್ತಿವೆ. ನಾನು ಹಾಡುಗಾರನಲ್ಲದಿದ್ದರೂ, ಈ ಸಾಲುಗಳಿಗೆ ದಯವಿಟ್ಟು ಕಿವಿಗೊಡಿ. ನೆನಪಿದೆಯೇ ನಿನಗೆ? ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ನಿಂದು ಮರಳು ಮನೆಗಳ ಕಟ್ಟಿ ಆಟವಾಡಿದ್ದು ನಿನಗೆ ನೆನಪಿದೆಯೇ ನಿನಗೆ? ಬಾ ಗೆಳೆಯ ಬಾರಯ್ಯಾ, ಆಟವಾಡೋಣ ಬಾಲ್ಯದ ನೆನಪನು ಮರಳಿ ಕಟ್ಟೋಣ. ನೆನಪಿದೆಯೇ ನಿನಗೆ? ನನಗೆ ಬೇಜಾರಾದಾಗಲೆಲ್ಲಾ ಈ ಸಾಲುಗಳನ್ನು ಗುಣುಗುಣಿಸುತ್ತೇನೆ. ಆಗ […]
ಲಲಿತ ಪ್ರಬಂಧ
ಹಲಸಿನ ಕಡುಬು. ಶೀಲಾ ಭಂಡಾರ್ಕರ್ ನಮ್ಮೂರ ಕಡೆ ಹಲಸಿನ ಹಣ್ಣಿನ ಕಾಲದಲ್ಲಿ ಹಲಸಿನ ಹಣ್ಣಿನಿಂದ ಬಗೆ ಬಗೆಯ ಖಾದ್ಯಗಳನ್ನು ಮಾಡುತ್ತಾರೆ. ಹಪ್ಪಳ, ಚಿಪ್ಸ್, ದೋಸೆ, ಕಡುಬು, ಮುಳಕ, ಪಾಯಸ.. ಇನ್ನೂ ಎಷ್ಟೋ ಬಗೆ. ಅದರಲ್ಲಿ ಹಲಸಿನ ಕಡುಬು ನನಗೆ ಪಂಚಪ್ರಾಣ.ಅಕ್ಕಿಯನ್ನು ನೆನೆಸಿ, ತೆಂಗಿನ ತುರಿ, ಬೆಲ್ಲ, ಬಿಡಿಸಿದ ಹಲಸಿನ ತೊಳೆಯ ಜತೆ ತರಿ ತರಿಯಾಗಿ ರುಬ್ಬಿ ತೇಗದ ಎಲೆಯಲ್ಲಿ, ಕೆಂಡ ಸಂಪಿಗೆ ಎಲೆಯಲ್ಲಿ, ಅಥವಾ ತಟ್ಟೆಯಲ್ಲಿಟ್ಟು, ಹಬೆಯಲ್ಲಿ ಬೇಯಿಸಿ ಮಾಡುವ ಕಡುಬು.. ಆಹಾ..!!! ಘಮ್ ಅಂತ ನಾಲ್ಕೂ […]
ಲಲಿತ ಪ್ರಬಂಧ
ನೆನಪಿಗೆ ಬರುತ್ತಿಲ್ಲ ಶೀಲಾ ಭಂಡಾರ್ಕರ್ ತಂಗಿ ಫೋನ್ ಮಾಡಿ..” ಅಕ್ಕಾ.. ಈ ಸಲ ದಸರಾ ರಜದಲ್ಲಿ ಊರಿಗೆ ಬಂದಾಗ ಸಾಲೆತ್ತೂರಿಗೆ ಹೋಗಿ ಬರೋಣ್ವಾ? ” ಅಂದಾಗ ನಾನು ಖುಷಿಯಿಂದ “ಹೇಯ್ ನಾನೂ ಅದನ್ನೇ ಯೋಚಿಸ್ತಿದ್ದೆ.. ಖಂಡಿತ ಹೋಗೋಣ” ಅಂದೆ. ಅದಕ್ಕವಳು “ಎಷ್ಟೋ ದಿನದಿಂದ ನನಗೆ ತುಂಬಾ ಆಸೆ ಆಗ್ತಿದೆ ನಾವು ಕಲಿತ ಸ್ಕೂಲು, ಅಪ್ಪನ ಬ್ಯಾಂಕು, ನಾವಿದ್ದ ಮನೆ, ಶೇಷಪ್ಪನ ಅಂಗಡಿ” … ಅನ್ನುವಾಗ ನಾನು ಪಟಕ್ಕನೆ., “ರತ್ನಾಕರ. ನಾನು ರತ್ನಾಕರನನ್ನು ನೋಡಬೇಕು” ಅನ್ನುವುದರೊಳಗೆ ನಮ್ಮವರು ಮನೆಯೊಳಗೆ […]
ಲೀಲಾ ಕಲಕೋಟಿ ಎರಡು ಬರಹಗಳು
ಲೀಲಾ ಕಲಕೋಟಿ ನ್ಯಾನೋ ಕಥೆ ಸಂಜೆಯಾಗಿ ತಾಸೆರಡಾಗಿತ್ತು. ಹಂಗೆ.. ಹೊರಗ ಹೊಂಟೆ.ಅವನು ನನ್ನ ನೋಡಕೋತ ನನ್ನ ಜೋಡಿ ಬೆನ್ನ ಹತ್ತಿದಾ .ಆದರೂ ಸುಮ್ಮನೆ ಹೊಂಟೆ.ಅವನೂ ಮತ್ತ ನನ್ನ……!ಸ್ವಲ್ಪ ನಿಂತೆ ಅವನೂ ನಿಂತು ನನ್ನ ನೋಡಿ ನಗಾಕ್ಹತ್ತಿದಾ.ಮನೀಕಡೆ ಹೊಂಟೆ ನನ್ನ ನೆಳ್ಳನೂ ನನ್ನ ಜೋಡಿ ಬರದಂಗ ಮಾಡಿದಾ . ಮನಿ ಮುಟ್ಟಿದೆ ಖರೆ ಲೈಟ್ ಹೋಗಿತ್ತು. ಅವನು ಕತ್ತಲೆ ಕರಗಿಸಿ ತನ್ನ ಬೆಳದಿಂಗಳ ಬಾಹು ಬಂಧನದಿ ಮೈಮನಕೆ ಮುದ ನೀಡಿದ. ಅವನನ್ನೇ ನೋಡುತ್ತ ಮೌನ ಮುರಿದು ನನಗರಿವಿಲ್ಲದಂತೆ ಕಟ್ಟಿಗೆ […]
ಕಾರ್ಟೂನ್ ಸಂಗಾತಿ
ಕಾರ್ಟೂನ್ ಸಂಗಾತಿ ವಾ. ಮುರಳೀಧರತೀರ್ಥಹಳ್ಳಿ
ಮುನಿಸೇತಕೆ ಈ ಬಗೆ
ಮುನಿಸೇತಕೆ ಈ ಬಗೆ ಸ್ಮಿತಾ ರಾಘವೇಂದ್ರ ಮಳೆ ಇಲ್ಲದೇ ಬದುಕು ಸಾಗುತ್ತದಾ ಜೀವ ಉಳಿಯುತ್ತದಾ, ಬೆಳೆ ಬೆಳೆಯುತ್ತದಾ? ಇವೆಲ್ಲ ಕಾಲ ಕಾಲಕ್ಕೆ ತಕ್ಕಂತೆ ಆಗುತ್ತಿದ್ದರೇ ಚಂದ. ಕೋಪ ಯಾಕೆ ಬರುತ್ತದೆ ಹೇಳು ತಪ್ಪು ಮಾಡಿದಾಗ ತಾನೇ. ಪ್ರಕೃತಿ ಕೋಪಿಸಿಕೊಳ್ಳಲೂ ಸಕಾರಣವಿರುತ್ತದೆ. ನೀರು, ವಾಯು,ಅಗ್ನಿ, ಶಿವನ ಮೂರು ಕಣ್ಣುಗಳು. ಎಲ್ಲಿ ಯಾವುದು ಬೇಕು ಹೇಗೆ ತರೆದು ಕೊಳ್ಳಬೇಕು ಎಂಬುದು ಆ ಶಿವನೇ ನಿರ್ಧರಿಸುತ್ತಾನೆ. ಪ್ರಕೃತಿ ಮಾತೆ ಎಷ್ಟೊಂದು ನೋವಿಗೆ ಒಳಗಾಗಿದ್ದಾಳೆ. ಕ್ರೂರ ಕೈಗಳ ನಡುವೆ ನುಲುಗಿ ಹೋಗಿದ್ದಾಳೆ. ಕಿತ್ತು […]