Category: ಅಂಕಣ

ಅಂಕಣ

ಅಂಕಣ ಬರಹ ಕಗ್ಗಗಳ ಲೋಕ ಆದರಣೀಯ ಡಾII ಡಿ. ವಿ. ಗುಂಡಪ್ಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ಒಂದು ಮೇರುಕೃತಿ. ಅವರ ಒಂದೊಂದು ಮುಕ್ತಕವೂ ಕೂಡ ಸಾರ್ವಕಾಲಿಕ ಸತ್ಯ! ಜೀವನದಲ್ಲಿ ಎದುರಾಗುವ ಸಾವಿರಾರು ಪ್ರಶ್ನೆಗಳಿಗೆ ತತ್ವಶಾಸ್ತ್ರ,ಸ್ವಾನುಭವ ಮತ್ತು ಆಧ್ಯಾತ್ಮದ ಹಿನ್ನೆಲೆಯಲ್ಲಿ ಉತ್ತರ ನೀಡುವ ಕಗ್ಗಗಳು ಓದುಗರಿಗೆ ಆಪ್ತವಾಗಿ ಬಿಡುತ್ತವೆ. ಒಬ್ಬ ಸಾಮಾನ್ಯ ಮನುಷ್ಯನಂತೆ ಮೈತ್ರಿಭಾವದಿಂದ ಬರೆದ ಈ ಕಗ್ಗಗಳು ಅಸಂಖ್ಯ ಮಂದಿಗೆ ಸಾಂತ್ವನ ನೀಡುತ್ತವೆ. “ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯದನ್ನೇ ಕಂಡು , ಜೀವನದ ಸೊಬಗನ್ನು ಸವಿಯಬೇಕು” ಎಂದು ದಾರಿತೋರುವ […]

ಅಂಕಣ ಬರಹ ರಂಗ ರಂಗೋಲಿ-03 ಜಾತ್ರೆಯ ಲೋಕ ಕಲಾವಿದಳೆನಿಸಿಕೊಳ್ಳುವ ಹಂಬಲಿಕೆಗೆ,ಒಲವಿಗೆ ಬಾಲ್ಯದ ಅನುಭವಸ್ವನಗಳು  ಓಂ ಕಾರಗಳಾಗಿ ಮೂಡಿರಬೇಕು. ಹಲವು ಕಥೆಗಳು,ಹಲವು ಪಾತ್ರಗಳು,ಆ ಪಾತ್ರಗಳ ಅಭಿನಯ..ಎದುರಿಗೊಬ್ಬ ಕಾಣದ ನಿರ್ದೇಶಕ. ಅವನಿಗೆ ಶರಣಾಗಿ ಬದುಕಿನ ರಂಗಭೂಮಿಯಲ್ಲಿ ಬಗೆಬಗೆಯ ಪಾತ್ರ ಕಥೆ ಅನಾವರಣಗೊಳ್ಳುತ್ತಿತ್ತು. ಈ ‘ಸಿರಿ’ ನೋಟ ಒಬ್ಬ ಕಲಾವಿದೆಯ ಒಳಗನ್ನು..ಅಥವಾ ಕಲೆಯ ಬಗ್ಗೆ ಅತೀವ ಪ್ರೀತಿಭಾವವನ್ನು ಚಿಲುಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಊರ ಉತ್ಸವ ಮುಗಿದರೂ ಅದೇ‌ ಮಂಪರು.  ನಾಲ್ಕು ದಿನದ ಜಾತ್ರೆ ರಥೋತ್ಸವದೊಂದಿಗೆ ಸಂಪನ್ನಗೊಳ್ಳುತ್ತಿತ್ತು. ಮರುದಿನವೂ ಹಗಲಿಗೆ ಬೆಳಗಾದಾಗ […]

ಹೊಸ ಅಂಕಣ ಧಮ್ಮಲಾಲ್ ಛೋಪ್ರಾ ತೆಲುಗು ಮೂಲ : ಮಧುರಾಂತಕಂ ನರೇಂದ್ರಕನ್ನಡಕ್ಕೆ : ಕುಂ. ವೀರಭದ್ರಪ್ಪಪ್ರ : ಆಕೃತಿ ಪುಸ್ತಕ, ಬೆಂಗಳೂರುಪ್ರಕಟಣೆಯ ರ್ಷ : ೨೦೧೭ಬೆಲೆ : ರೂ.೧೦೦ಪುಟಗಳು : ೧೧೨ ವಿಶಿಷ್ಟ ಕಥಾವಸ್ತು, ತಂತ್ರ ಮತ್ತು ವಿನ್ಯಾಸಗಳಿರುವ  ಈ ಕಾದಂಬರಿಯಲ್ಲಿ  ನಡೆಯುವ ಹೆಚ್ಚಿನೆಲ್ಲ ಘಟನೆಗಳು ಮತ್ತು ಪಾತ್ರಗಳು ಎದುರಾಗುವ ಸನ್ನಿವೇಶಗಳು ಆಮ್‌ಸ್ಟರ್‌ಡಾಂ ನಗರದ ವಿಮಾನ ನಿಲ್ದಾಣದಲ್ಲಿ ನಡೆಯುತ್ತವೆ . ಕಥೆಯ ನಿರೂಪಕ ವಿಚಿತ್ರ ಹೆಸರಿನ ಗರ‍್ರಂಕೊಂಡ ಗರ‍್ರಂ ಪುರೌತು. ಜೈಸಲ್ಮೇರ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ.  ಆತ ಮೆಕ್ಸಿಕೋದಲ್ಲಿ […]

ಅಂಕಣ ಬರಹ ಅರಿತವರ ಮರೆತು ಸಾಗುವುದೆಂದರೆ … ನಮ್ಮನ್ನು ನಾವು ಹುಡುಕಿಕೊಳ್ಳುವುದು ಎಂದರೆ ಏನು? ನಮ್ಮೊಳಗೆ ನಾವು ಇಳಿಯುವುದು ಎಂದರೆ ಏನು? ನಮಗೇ ಕಾಣದ ನಮ್ಮನ್ನು ಕಂಡುಕೊಳ್ಳುವುದು ಎಂದರೆ ಏನು? ಮತ್ತೆ ಈ ಧಾವಂತದ ಬದುಕಲ್ಲಿ ಅದಕ್ಕೆ ತಗುಲುವ ಸಮಯವನ್ನು ಉಳಿಸಿಟ್ಟುಕೊಳ್ಳುವ ವ್ಯವಧಾನವಾದರೂ ನಮ್ಮಲ್ಲಿ ಉಳಿದಿದೆಯಾ… ಇಂತಹ ಹಲವಾರು ಉತ್ತರ ಸಿಗದ ಪ್ರಶ್ನೆಗಳು, ಗೊಂದಲಗಳು ನನ್ನನ್ನು ಸದಾ ಕಾಡುತ್ತಿರುತ್ತದೆ. ಇಂಥವಕ್ಕೆ  ನಾನೇ ನಾನು ಉತ್ತರಿಸಿಕೊಳ್ಳಬೇಕಿರುತ್ತದೆ. ಆದರೆ ಕೆಲವೊಮ್ಮೆ ಎಂತಹ ಸಂದಿಗ್ಧತೆ ಒದಗಿಬರುತ್ತದೆ ಎಂದರೆ ಉತ್ತರಿಸುವುದಿರಲಿ ಪ್ರಶ್ನೆಯನ್ನು ಎದುರಿಸುವುದೂ […]

ಅಂಕಣ ಬರಹ ಕಗ್ಗಗಳ ಲೋಕ ಆದರಣೀಯ ಡಾII ಡಿ. ವಿ. ಗುಂಡಪ್ಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ಒಂದು ಮೇರುಕೃತಿ. ಅವರ ಒಂದೊಂದು ಮುಕ್ತಕವೂ ಕೂಡ ಸಾರ್ವಕಾಲಿಕ ಸತ್ಯ! ಜೀವನದಲ್ಲಿ ಎದುರಾಗುವ ಸಾವಿರಾರು ಪ್ರಶ್ನೆಗಳಿಗೆ ತತ್ವಶಾಸ್ತ್ರ,ಸ್ವಾನುಭವ ಮತ್ತು ಆಧ್ಯಾತ್ಮದ ಹಿನ್ನೆಲೆಯಲ್ಲಿ ಉತ್ತರ ನೀಡುವ ಕಗ್ಗಗಳು ಓದುಗರಿಗೆ ಆಪ್ತವಾಗಿ ಬಿಡುತ್ತವೆ. ಒಬ್ಬ ಸಾಮಾನ್ಯ ಮನುಷ್ಯನಂತೆ ಮೈತ್ರಿಭಾವದಿಂದ ಬರೆದ ಈ ಕಗ್ಗಗಳು ಅಸಂಖ್ಯ ಮಂದಿಗೆ ಸಾಂತ್ವನ ನೀಡುತ್ತವೆ. “ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯದನ್ನೇ ಕಂಡು , ಜೀವನದ ಸೊಬಗನ್ನು ಸವಿಯಬೇಕು” ಎಂದು ದಾರಿತೋರುವ […]

ಅಂಕಣ ಬರಹ ನಾಗರಾಜ ಎಂ ಹುಡೇದ       ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತಂಗೋಡ ಹುಟ್ಟೂರು. ಬಡತನದಲ್ಲಿ ಬೆಳೆದು, ಪರಿಶ್ರಮದಿಂದ ಶಿಕ್ಷಣವನ್ನು ಪಡೆದು ೨೦೦೪ ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೈಲಂದೂರು ಗೌಳಿವಾಡದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹದಿನೇಳು ವರ್ಷಗಳಿಂದ ಅದೇ ಕುಗ್ರಾಮದಲ್ಲಿ ಅಚ್ಚುಮೆಚ್ಚಿನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಗುಣಮಟ್ಟದ ಉತ್ತಮ ಶಾಲೆಯನ್ನಾಗಿಸಿದ್ದಾರೆ.      ಬೋಧನೆಯನ್ನು ವೃತ್ತಿಯಾಗಿಸಿಕೊಂಡು ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡು ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ನಿರಂತರ ಅಭ್ಯಾಸ, ಸಾಹಿತ್ಯಿಕ ಕಾರ್ಯಕ್ರಮಗಳ […]

ಅಂಕಣ ಬರಹ ಕರುಳು ಹಿಂಡುವ ಬಡಪಾಯಿಯೊಬ್ಬನ ಕರುಣ ಕಥೆ ‘ಆಡು ಜೀವನ’ ‘ಆಡು ಜೀವನ’ಮೂಲ : ಬೆನ್ಯಾಮಿನ್ಕನ್ನಡಕ್ಕೆ : ಡಾ.ಅಶೋಕ ಕುಮಾರ್ಪ್ರಕಾಶಕರು : ಹೇಮಂತ ಸಾಹಿತ್ಯಪ್ರಕಟಣೆಯ ವರ್ಷ: ೨೦೧೨ಬೆಲೆ : ರೂ.೧೦೦ಪುಟಗಳು : ೧೮೪ ಬಡತನದ ಬೇಗೆಯನ್ನು ತಾಳಲಾರದೆ ಉತ್ತಮ ಭವಿಷ್ಯದ ಕನಸು ಕಾಣುತ್ತ ಕೊಲ್ಲಿ ರಾಷ್ಟçಕ್ಕೆ ಹೋಗಿ ಅಲ್ಲೂ  ದುರಾದೃಷ್ಟದ ಅನಿರೀಕ್ಷಿತ ಹೊಡೆತದಿಂದ ಅಸಹನೀಯ ವೇದನೆಯನ್ನನುಭವಿಸಿದ ಬಡಪಾಯಿಯ ಕರುಣ ಕತೆ ‘ಆಡು ಜೀವನ’. ಅಶಿಕ್ಷಿತನಾದ ಆತನ ಬಾಯಿಯಿಂದ ಕೇಳಿದ ಕತೆಗೆ ಲೇಖಕ ಬೆನ್ಯಾಮಿನ್ ಅವರು ಕಾದಂಬರಿಯ […]

ಅಂಕಣ ಬರಹ ಅಂಕಣ ಬರಹ ಒಂದು ಸಲ, ರೈತರ ಕಮ್ಮಟದಲ್ಲಿ ಮಾತಾಡುವ ಅವಕಾಶ ಒದಗಿತು. ನನ್ನ ಮಾತಿನ ಸಾರವನ್ನು ಹೀಗೆ ಹಿಡಿದಿಡಬಹುದು: “ಯಾವುದೇ ಚಳುವಳಿಗೆ ರಾಜಕೀಯ, ಆರ್ಥಿಕ ಸಾಂಸ್ಕೃತಿಕ ಆಯಾಮಗಳಿರುತ್ತವೆ. ಸದ್ಯದ ಮಾರುಕಟ್ಟೆ ಆರ್ಥಿಕತೆಯ ಸನ್ನಿವೇಶವು ರೈತರನ್ನು ದಲಿತರ ಹಾಗೂ ಮಹಿಳೆಯರ ಹಾಗೆ ದಮನಿತ ವರ್ಗಕ್ಕೆ ಇಳಿಸಿದೆ. ಇದಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಸಂಭವಿಸಿರುವ ಅವರ ಸಾವುಗಳೇ ಸಾಕ್ಷಿ. ರೈತರ ಮುಖ್ಯ ಬೇಡಿಕೆಗಳೆಂದರೆ, ಜಮೀನನ್ನು ತಮ್ಮಿಚ್ಛೆಗೆ ವಿರುದ್ಧವಾಗಿ ಕಿತ್ತು ಉದ್ಯಮಿಗಳಿಗೆ ಕೊಡುವುದರಿಂದ ರಕ್ಷಿಸಿಕೊಳ್ಳುವುದು; ಬೀಜ ಗೊಬ್ಬರ ಕೊಳ್ಳಲು ಕಡಿಮೆ […]

ಅಂಕಣ ಬರಹ ಕಬ್ಬಿಗರ ಅಬ್ಬಿ  ಕ್ಯಾನುವಾಸು ಮತ್ತು ಕಾವ್ಯ ರಾತ್ರೆ ಆಗಷ್ಟೇ ಲಂಗದಾವಣಿ ತೊಟ್ಟು ಕುಳಿತಿತ್ತು. ಆ ಹೊತ್ತಿಗೆ ಆ ಪುಟ್ಟ ಮನೆಯೊಳಗೆ ಬಡಕಲು ಕ್ಯಾಂಡಲ್ ಮಾತ್ರ ಉರಿಯುತ್ತಿದೆ. ನಸುಗೆನ್ನೆಯ ಹೊಳೆವ ಕಣ್ಣುಗಳ ಬಾಲಕ ಮತ್ತು ಆತನ ಉಬ್ಬುಗೆನ್ನೆಯ ಕನಸುನೇತ್ರದ ತಂಗಿಗೆ ತಿನ್ನಲು ಬರೇ ಎರಡು ಸ್ಲೈಸ್ ಬ್ರೆಡ್ ಮಾತ್ರ ಉಳಿದಿದೆ. ಆ ಮಕ್ಕಳ ಅಮ್ಮ ಬ್ರೆಡ್ ಬಿಸಿ ಮಾಡಿಕೊಡಲು ವಿದ್ಯುತ್ ಪೂರೈಕೆ ಇಲ್ಲದೇ, ಆ ಛಳಿಯಲ್ಲೂ ತಣ್ಣಗಿನ ಬ್ರೆಡ್ ಮಕ್ಕಳಿಗೆ ತಿನ್ನಲು ಕೊಡುತ್ತಾಳೆ. ಎರಡನೇ ಮಹಾಯುದ್ಧದ […]

ರಾಮಕೃಷ್ಣ ಗುಂದಿ ಆತ್ಮಕತೆ–02 ಗುಂದಿ ಹಿತ್ತಲದಲ್ಲಿ ಕಡ್ಲೆ ಬೇಸಾಯ ಗಂಗಾವಳಿ ನದಿಯ ದಕ್ಷಿಣ ತೀರದಿಂದ ನದಿಯ ಶಾಖೆಯಾಗಿ ಚಿಕ್ಕ ಹಳ್ಳವೊಂದು ಅಗ್ಗರಗೋಣ ಗ್ರಾಮದ ಅಂಚಿನಿಂದ ಹೆಗ್ರೆ ಗ್ರಾಮದವರೆಗೆ ಹರಿದು ಅಗ್ರಗೋಣ ಮತ್ತು ನಾಡುಮಾಸ್ಕೇರಿ ಗ್ರಾಮಗಳ ನಡುವೆ ಗಡಿರೇಖೆಯೊಂದನ್ನು ನಿರ್ಮಿಸಿದೆ. ಹಳ್ಳದ ಇಕ್ಕೆಲದಲ್ಲೂ ವಿಸ್ತಾರವಾದ ಗದ್ದೆಬಯಲು ಹನೇಹಳ್ಳಿಯ ಅಂಚಿನವರೆಗೂ ವ್ಯಾಪಿಸಿದೆ. ಹಳ್ಳದ ಪೂರ್ವ ದಂಡೆಯ ಅಗ್ಗರಗೋಣ ಗ್ರಾಮ ವ್ಯಾಪ್ತಿಯ ಬಯಲಲ್ಲಿ ಒಂದು ಪುಟ್ಟ ದಿನ್ನೆಯಿದೆ. ಹಳ್ಳಕ್ಕೆ ಹತ್ತಿರವಾಗಿ ಎರಡು-ಮೂರು ಗುಂಟೆಯ ಅಳತೆಯಲ್ಲಿ ವಿಸ್ತರಿಸಿಕೊಂಡಿರುವ ಈ ಗುಂದವನ್ನು ಜನರು ವಾಡಿಕೆಯಲ್ಲಿ […]

Back To Top