ಹೊಸ ಅಂಕಣ

ಧಮ್ಮಲಾಲ್ ಛೋಪ್ರಾ

ತೆಲುಗು ಮೂಲ : ಮಧುರಾಂತಕಂ ನರೇಂದ್ರ
ಕನ್ನಡಕ್ಕೆ : ಕುಂ. ವೀರಭದ್ರಪ್ಪ
ಪ್ರ : ಆಕೃತಿ ಪುಸ್ತಕ, ಬೆಂಗಳೂರು
ಪ್ರಕಟಣೆಯ ರ್ಷ : ೨೦೧೭
ಬೆಲೆ : ರೂ.೧೦೦
ಪುಟಗಳು : ೧೧೨

ವಿಶಿಷ್ಟ ಕಥಾವಸ್ತು, ತಂತ್ರ ಮತ್ತು ವಿನ್ಯಾಸಗಳಿರುವ  ಈ ಕಾದಂಬರಿಯಲ್ಲಿ  ನಡೆಯುವ ಹೆಚ್ಚಿನೆಲ್ಲ ಘಟನೆಗಳು ಮತ್ತು ಪಾತ್ರಗಳು ಎದುರಾಗುವ ಸನ್ನಿವೇಶಗಳು ಆಮ್‌ಸ್ಟರ್‌ಡಾಂ ನಗರದ ವಿಮಾನ ನಿಲ್ದಾಣದಲ್ಲಿ ನಡೆಯುತ್ತವೆ . ಕಥೆಯ ನಿರೂಪಕ ವಿಚಿತ್ರ ಹೆಸರಿನ ಗರ‍್ರಂಕೊಂಡ ಗರ‍್ರಂ ಪುರೌತು. ಜೈಸಲ್ಮೇರ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ.  ಆತ ಮೆಕ್ಸಿಕೋದಲ್ಲಿ ನಡೆಯುವ  ಒಂದು ವಿಚಾರಸಂಕಿರಣದಲ್ಲಿ  ಭಾಗವಹಿಸಲು ಹೊರಟಿದ್ದಾನೆ.  ಮೊದಲ ಬಾರಿ ವಿದೇಶ ಪ್ರಯಾಣ ಮಾಡುತ್ತಿರುವುದರಿಂದ  ತನಗೆ ಅಲ್ಲಿಗೆ ಹೋಗುವ  ಯಾರಾದರೂ ಇನ್ನೊಬ್ಬರು ಪ್ರಯಾಣಿಕರ  ಜತೆಗೆ ಟಿಕೆಟ್ ಮಾಡಿಸಬೇಕೆಂದು  ಏಜೆಂಟರಲ್ಲಿ ಕೇಳಿಕೊಂಡ ಪ್ರಕಾರ  ಆತನಿಗೆ ಸಿಗುವ ಜತೆಗಾರ  ಅತಿ ವಿಚಿತ್ರ ಸ್ವಭಾವದ ಧಮ್ಮಲಾಲ್ ಛೋಪ್ರಾ.  ಅವನು ವಿಶ್ವವಿದ್ಯಾನಿಲಯದ  ಪ್ರಾಧ್ಯಾಪಕನಲ್ಲ.  ಒಬ್ಬ ವ್ಯಾಪಾರಿ.  ಸ್ವಂತ ಆಸಕ್ತಿಯಿಂದ ಎಂ.ಬಿ.ಎ.ಕಲಿತು  ಸಂಶೋಧನೆ ಮಾಡಿ ಪಿ.ಹೆಚ್.ಡಿ.ಪಡೆದವನು. ಆದರೆ ಆತ ಆರಂಭದಿಂದಲೂ ಬಹಳ ವಿಚಿತ್ರವಾಗಿ ಮಾತನಾಡುವುದನ್ನು ನಿರೂಪಕ ಗಮನಿಸುತ್ತಾನೆ.  ಇಂಗ್ಲಿಷ್ ಸರಿಯಾಗಿ ಗೊತ್ತಿಲ್ಲದ ಅವನು ಹಿಂದಿಯಲ್ಲೇ ಸಂಭಾಷಿಸುತ್ತಾನೆ.  ಹಿಂದಿ ಸರಿಯಾಗಿ ಮಾತನಾಡಲಾಗದ ತೆಲುಗಿನವನಾದ ನಿರೂಪಕ ಇಂಗ್ಲಿಷ್ ಮತ್ತು ಹಿಂದಿ ಬೆರೆಸಿ ಹೇಗೋ ನಿಭಾಯಿಸುತ್ತಾನೆ.  ಆಮ್‌ಸ್ಟರ್‌ಡಾಂನಲ್ಲಿ  ಅದ್ಭುತಗಳು  ಸಂಭವಿಸುತ್ತವೆ, ನೋಡುತ್ತಿರಿ’ ಎನ್ನುವ ಧಮ್ಮಲಾಲ್ ಛೋಪ್ರಾ  ತನಲ್ಲಿ ಇದೆಲ್ಲವನ್ನೂ ಮುಂದಾಗಿ ತಿಳಿಸುವ ಆರನೇ ಇಂದ್ರಿಯ ಸಕ್ರಿಯವಾಗಿದೆ ಎನ್ನುತ್ತಾನೆ. ಆಮ್‌ಸ್ಟರ್ ನದಿಗೆ ಕಟ್ಟಿದ ಅಣೆಕಟ್ಟಿನ ನಗರಿ ಆಮ್‌ಸ್ಟg ಡಾಂನಲ್ಲಿ   ಜಲದಿಗ್ಭಂಧನದಲ್ಲಿ ನಾವು ಸಿಲುಕಲಿದ್ದೇವೆ’ ಅನ್ನುತ್ತಾನೆ . ಹುಚ್ಚನಂತೆ ಏನೇನೋ ಬಡಬಡಿಸುವ ಆತನ ಮಾತುಗಳು ನಿರೂಪಕನನ್ನು ಗೊಂದಲಕ್ಕೀಡು ಮಾಡುತ್ತವೆ. 

      ಮೆಕ್ಸಿಕೋದಲ್ಲಿ  ಎಂಟು ದಿನಗಳ ಕಾಲ ಕಳೆದು ದೆಹಲಿಗೆ ಮರಳಿ ಬರುತ್ತಾ ಆಮ್‌ಸ್ಟರ್‌ಡಾಂನಲ್ಲಿ  ಅವರು ೨೪ ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಕಳೆಯಬೇಕಾಗುತ್ತದೆ.  ಅಲ್ಲಿ ಅವರಿಗೆ ವಿಚಿತ್ರ ಅನುಭವಗಳಾಗುತ್ತವೆ.  ವಿಮಾನ ನಿಲ್ದಾಣಗಳಲ್ಲಿ ಭಯೋತ್ಪಾದಕರು ಇಡುವ  ಬಾಂಬುಗಳುಂಟು ಮಾಡಿದ ಅನಾಹುತಗಳಿಂದ  ಆತಂಕಗೊಂಡ ಅಧಿಕಾರಿಗಳು  ಪ್ರತಿಯೊಬ್ಬ ಪ್ರಯಾಣಿಕರನ್ನೂ  ಅನುಮಾನದ ದೃಷ್ಟಿಯಿಂದಲೇ ನೋಡುತ್ತಾರೆ.  ಸೆಕ್ಯೂರಿಟಿಗಳು ಭದ್ರತೆಯ ಬಿಗಿಯನ್ನು ಹೆಚ್ಚಿಸಿ ಅನಗತ್ಯ ಪ್ರಶ್ನೆಗಳಿಂದ ಅವರನ್ನು ಮಾನಸಿಕ ಹಿಂಸೆಗೆ ಗುರಿ ಪಡಿಸುತ್ತಾರೆ. ತಿನ್ನಲು ಸರಿಯಾದ ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಅವರು ಬಳಲುತ್ತಾರೆ.  ಅವರನ್ನು ಸೇರಿಸಿಕೊಂಡ ಹೋಟೆಲಿನೊಳಗಿನ ವಾತಾವರಣ  ಭಯಜನಕವಾಗಿರುತ್ತದೆ.  ಅವರು ಹೊಕ್ಕು ಬರುವ ಕತ್ತಲ ಲೋಕ ಇಡಿಯ ಜಗತ್ತನ್ನು ತುಂಬಿರುವ  ಸಂರ‍್ಷದ ಯಾತನೆಯನ್ನು ಪ್ರತಿಬಿಂಬಿಸುತ್ತದೆ. ಕೊನೆಯ ತನಕವೂ ಛೋಪ್ರಾ ತಾನೊಬ್ಬ ಆಧ್ಯಾತ್ಮಿಕ ಗುರು ಎಂಬಂತೆ ರ‍್ತಿಸುತ್ತಾನೆ. ಆದರೆ ನಿರೂಪಕ ಅದನ್ನು ನಂಬುವುದಿಲ್ಲ.  ಈ ಕಾದಂಬರಿ ಆಧುನಿಕ ಜಗತ್ತಿನ ಸ್ಥಿತಿಗೆ ಹಿಡಿದ  ಕನ್ನಡಿಯಂತಿದೆ. ಅನುವಾದದ ಭಾಷೆ ಪ್ರಬುದ್ಧವಾಗಿದೆ

*******************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Leave a Reply

Back To Top