ಕೆಲವೊಮ್ಮೆ ವೈಯಕ್ತಿಕ ದ್ವೇಷಕ್ಕೂ ಸಾಕು ಪ್ರಾಣಿಗಳು ಬಲಿಯಾಗುತ್ತವೆ. ವಿಷ ಉಣಿಸಿಯೋ, ಅಪಘಾತ ಮಾಡಿಸಿಯೋ ಕೊಲ್ಲುವುದು ಮನುಷ್ಯರಾದವರು ಮಾತ್ರ ಮಾಡಬಹುದಾದ ನೀಚ ಕ್ರಿಯೆ. ಮತ್ತೆ ಕೆಲವು ಕಡೆ ತಮಗೆ ಆಗದವರ ಮೇಲೆ ನಾಯಿಗಳನ್ನು ‘ಚೂ..’ ಬಿಟ್ಟು ಕಚ್ಚಿಸುವುದೂ ಉಂಟೆಂಬ ವಿಷಯ ಗೊತ್ತಾದಾಗ ಭಯವಾಗುತ್ತದೆ.
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—41 ಆತ್ಮಾನುಸಂಧಾನ ಅಧ್ಯಾಪಕ ವೃತ್ತಿಯ ಆರಂಭದ ದಿನಗಳು ೧೯೭೫ ರ ಜುಲೈ ಒಂದರಂದು ನಾನು ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕರ್ತವ್ಯಕ್ಕೆ ಹಾಜರಾದೆ. ಅಂದು ನನ್ನ ಜೊತೆಯಲ್ಲಿಯೇ ನಮ್ಮ ನಾಡು ಮಾಸ್ಕೇರಿಯವರೇ ಆದ ಶ್ರೀ ಎನ್.ಎಚ್.ನಾಯಕ. ಜೀವಶಾಸ್ತ್ರ ವಿಭಾಗಕ್ಕೆ, ಅಂಕೋಲಾ ತಾಲೂಕಿನ ಬಾಸಗೋಡಿನ ಶ್ರೀ ವಿ.ಆರ್.ಕಾಮತ ರಸಾಯನ ಶಾಸ್ತ್ರ ವಿಭಾಗಕ್ಕೆ ಉಪನ್ಯಾಸಕರಾಗಿ ಸೇರಿದರು. ನಮ್ಮ ಕಾಲೇಜಿನ ಆಡಳಿತ ಕಚೇರಿಯಲ್ಲಿ ನಮ್ಮ ಹಾಜರಾತಿಯ ಪ್ರಕ್ರಿಯೆ ನಡೆಯುವಾಗ ಬಹುತೇಕ ಎಲ್ಲ […]
ಸಾಧಕಿಯರ ಯಶೋಗಾಥೆ
‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ…
ಇದರ ಮೊದಲ ಕಂತು ನಿಮ್ಮ ಮುಂದಿದೆ
ಹೆಸರಿನಲ್ಲಿ ‘ಸಮಾಜಶಾಸ್ತ್ರಜ್ಞೆ’ ಎಂದು ಇರುವುದರಿಂದ ಆಕೆ ಯಾರು? ಎಂಬ ಕುತೂಹಲದೊಡನೆ ಕತೆಗೆ ಪ್ರವೇಶ ಪಡೆದರೆ, ‘ನನ್ನ ಕಾಲದಲ್ಲಿ ಹೀಗಿತ್ತೆ? ನಾಲ್ಕು ದಿನದ ಮದುವೆ. ಈಗಿನದೆಲ್ಲಾ ಎಂತದು, ಬರೀ ನಾಟಕದ ಹಾಗೆ’ ಎಂದು ಗೊಣಗುತ್ತಾ ಸಮಾಜದ ಬದಲಾವಣೆಯ ಬಗ್ಗೆ ತಮ್ಮ ಟೀಕೆ-ಟಿಪ್ಪಣಿಗೆ ತೊಡಗುವುದರಿಂದ ಎದುರಾಗುವ ವಾಗತ್ತೆಯೇ ಸಮಾಜಶಾಸ್ತ್ರಜ್ಞೆ ಇರಬಹುದೇ ಎಂದು ಸಂಶಯಪಡಬೇಕಾಗುತ್ತದೆ. ಆದರೆ ವಾಗತ್ತೆ ಹಾಗೆ ಸಂಶಯಪಡಲು ಒಂದು ನಿಮಿತ್ತ ಜೀವ.
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—40 ಆತ್ಮಾನುಸಂಧಾನ ಆಗೇರ ಸಮಾಜದ ತರುಣನಿಗೆ ಪ್ರಾಧ್ಯಾಪಕ ಹುದ್ದೆ”— ಎಂದು ಸುದ್ದಿಯಾದೆ : ಧಾರವಾಡ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಎರಡು ವರ್ಷಗಳು ಕಳೆದು ಹೋದದ್ದೇ ತಿಳಿಯಲಿಲ್ಲ. ಬಹುಪಾಲು ತಂಪಾಗಿಯೇ ಇರುವ ಪ್ರಾಕೃತಿಕ ಪರಿಸರ, ಬಯಲು ಸೀಮೆಯ ಆಪ್ತವೆನ್ನಿಸುವ ಕನ್ನಡ ಭಾಷೆಯ ಸೊಗಸು, ಮತ್ತೆ ಮತ್ತೆ ಕರ್ನಾಟಕ ವಿದ್ಯಾವರ್ಧಕ ಸಂಘದ, ಕನ್ನಡ ವಿಭಾಗದ ಕಾರ್ಯಕ್ರಮಗಳು, ಅಲ್ಲಿಗೆ ಬಂದು ಹೋಗುವ ಹಿರಿ-ಕಿರಿಯ ಲೇಖಕರು, ಕವಿಗಳು, ವಿದ್ವಾಂಸರು ಇವರನ್ನೆಲ್ಲ ನೋಡುವುದೇ ಕೇಳುವುದೇ […]
ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ
ದಾನದೊಡನೆ ಸಿಗುವ ಸಾಧನಗಳನ್ನು ದಾನಕೊಟ್ಟವರ ಯೋಗ್ಯತೆ ಅಳೆಯಲು ಮಾಪಕವಾಗಿ ಬಳಸುವ ಮಂದಿಯೇ ಈಗ ಹೆಚ್ಚು. ಹೇಗೋ ಬಂದು ಸೇರಿಬಿಟ್ಟ ತಮಗೆ ಇಷ್ಟವಾಗದ ದಾನದ ವಸ್ತುವನ್ನು ಹಾಗೆಯೇ ಮತ್ತೊಂದು ನೆಪ ಮಾಡಿ ಮತ್ತೊಬ್ಬರಿಗೆ ದಾಟಿಸುವುದು ಈಗಿನವರ ಚಾಣಾಕ್ಷತನ. ಆದ್ದರಿಂದಲೇ ನಾವು ‘ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳಹಾಕುವುದು’
ನಾಡಿನ ಕ್ರಾಂತಿಕಾರಿ ಕವಿ, ರೈತ ಚಳುವಳಿಯ ನಾಯಕ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆನರಾವೆಲ್‌ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಮೂಲಕ ಅಕ್ಷರ ಸೂಯನನ್ನು ಬೆಳಗಿಸಿದ ಮಾನ್ಯ ಡಾ|| ದಿನಕರ ದೇಸಾಯಿಯವರ ಕೃಪಾ ದೃಷ್ಟಿಗೆ ಪಾತ್ರನಾದ ಬಾಲಕ ಸಣ್ಣು ಅವರ ಆಶ್ರಯದಲ್ಲೇ ಇದ್ದುಕೊಂಡು ಇಂಟರ್ ಮೀಡಿಯೇಟ್ ವರೆಗೆ ಶಿಕ್ಷಣ ಪಡೆದದ್ದು ಬಹುದೊಡ್ಡ ಅದೃಷ್ಟವೇ ಸರಿ.
ಕೊಟ್ಟ ಮಾತು, ವಾಗ್ದಾನ, ವಚನ, ಆಣೆ, ಮಾತುಕೊಡು ಇವೆಲ್ಲಾ ಪ್ರತಿಜ್ಞೆ ಪದದ ಸಮಾನಾರ್ಥಕಗಳು. ಆದರೆ ಎಲ್ಲವೂ ಪ್ರತಿಜ್ಞೆಯೇ ಆಗುವುದಿಲ್ಲ. ಹರಕೆ, ವ್ರತ, ಅಂದುಕೊಳ್ಳುವುದು, ಇಚ್ಛೆ, ಶಪಥ, ಆಸೆ, ಬಯಕೆ ಎಂಬಿತ್ಯಾದಿ ನಾನಾರ್ಥಗಳನ್ನು ಆರೋಪಿಸಬಹುದಾದರೂ ಪ್ರತಿಜ್ಞೆಯ ತೂಕವೇ ಬೇರೆ. ಅಂದುಕೊಂಡಂತೆ ನಡೆದುಕೊಂಡರೆ!! ವಾಗ್ದಾನ ಮುರಿದವರೆಷ್ಟು ಮಂದಿಯಿಲ್ಲ? ಯಾವುದೋ ಆವೇಶ, ಉದ್ವೇಗ, ಚಿತಾವಣೆಗೆ ಒಳಗಾಗಿ ಪ್ರತಿಜ್ಞೆ ಮಾಡಿ ಮುಂದೆ ಪೇಚಿಗೆ ಸಿಲುಕಿ ಪಜೀತಿ ಪಟ್ಟವರು ಹಲವಾರು ಮಂದಿ ಇರುತ್ತಾರೆ.
ಪೂರ್ಣಚಂದ್ರ ತೇಜಸ್ವಿ ಅವರು ‘ಮರವೆನ್ನುವ ಕಾರ್ಖಾನೆ’ ಎಂಬ ಬರಹದಲ್ಲಿ “ಮರಗಳು ತಮ್ಮ ಜಟಿಲವಾದ ಬೇರಿನ ಜಾಲದಿಂದ ನೂರಾರು ಅಡಿ ಎತ್ತರಕ್ಕೆ ನೆಲದಿಂದ ನೀರನ್ನೆತ್ತುತ್ತವೆ. ಒಂದು ಸಾಧಾರಣ ಮರ ಎಲೆಗಳ ಮುಖಾಂತರ ಜೈವಿಕ ಕ್ರಿಯೆಯಲ್ಲಿ ಆವಿಯಾಗಿ ಬಿಡುಗಡೆ ಮಾಡುವ ನೀರಿನ ಪ್ರಮಾಣ ದಿನಕ್ಕೆ ಐವತ್ತು ಲೀಟರ್! ಈ ಕ್ರಿಯೆಯಲ್ಲಿ ಒಂದು ಮರ ತಿಂಗಳಿಗೆ ಸರಾಸರಿ ಹದಿನಾಲ್ಕು ಟನ್ ನೀರನ್ನು ನೆಲದಾಳದಿಂದ ಮೇಲಕ್ಕೆತ್ತಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ”