ಸಾಧಕಿಯರ ಯಶೋಗಾಥೆ

ಅಂಕಣ ಬರಹ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌.

ಸಾಧಕಿಯರ ಯಶೋಗಾಥೆ01

ಸಾಮಾಜಿಕ ಕಾರ್ಯಕರ್ತೆ, ಶಿಕ್ಷಕಿ, ಬರಹಗಾರ್ತಿ

ಬೇಗಂ ರೂಕಯ್ಯಾ (೧೮೮೦-೧೯೩೨)

ರೂಕಯ್ಯಾ ಬೇಗಂ ಅವರು ಬಂಗಾಳಿ ಸ್ತ್ರೀವಾದಿ ಚಿಂತಕಿ, ಬರಹಗಾರ್ತಿ, ಶಿಕ್ಷಕಿ, ರಾಜಕೀಯ ಕಾರ್ಯಕರ್ತೆಯಾಗಿದ್ದುಕೊಂಡು, ದಕ್ಷೀಣ ಏಷ್ಯಾದಲ್ಲಿನ ಮಹಿಳೆಯರ ವಿಮೋಚನೆಗಾಗಿ ಕೆಲಸವನ್ನು ಮಾಡಿದ್ದಾರೆ.

ರೂಕಯ್ಯಾರವರು ಅಂದಿನ ಬ್ರಿಟಿಷ್ ಭಾರತದ ರಂಗಪುರ ಪೈರಾಬಂದ್ ಗ್ರಾಮದಲ್ಲಿ ೧೮೮೦ ರಲ್ಲಿ ಜನಿಸಿದರು. ಇವರ ಪೂರ್ವಜರು ಮೋಘಲರ ಆಳ್ವಿಕೆಯಲ್ಲಿ ಮಿಲಿಟರಿ ಮತ್ತು ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಿದ್ದರು. ಇವರ ತಂದೆ ಜಹೀರುದ್ದೀನ್ ಮಹಮ್ಮದ್ ಅಬುಅಲಿಯವರು ಬಹುಭಾಷಾ ಬುದ್ದಿ ಜೀವಿಯಾಗಿದ್ದರು. ರೂಕಯ್ಯ ಅವರ ತಂದೆ ನಾಲ್ಕು ಮದುವೆಯಾಗಿದ್ದರು. ಇವರ ತಾಯಿ ರಾಹುತುನ್ನೆಸಾ ರೂಕಯ್ಯರವರಿಗೆ ಇಬ್ಬರು ಸಹೋದರಿಯರು ಮೂರು ಜನ ಸಹೋದರರು. ಅವರಲ್ಲಿ ಒಬ್ಬ ಸಹೋದರ ಬಾಲ್ಯದಲ್ಲಿ ನಿಧನರಾದರು.

            ರೂಕಯ್ಯರವರ ತಂದೆ ಮಗಳಿಗೆ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳನ್ನು ಕಲಿಸುವ ಬದಲು ಬಂಗಾಳಿ ಮತ್ತು ಇಂಗ್ಲಿಷ್ ಕಲಿಸಿದರು, ಅದಕ್ಕೆ ಕುಟುಂಬದವರು ವಿರೋಧಿಸಿದರೂ, ಕುಟುಂಬದವರ ಆಶಯಕ್ಕೆ ವಿರುದ್ಧವಾಗಿ ಮಗಳಿಗೆ ಕಲಿಸಿದರು. ರೂಕಯ್ಯ ೧೮ನೇ ವಯಸ್ಸಿನಲ್ಲಿ ೧೮೯೮ ರಲ್ಲಿ ೩೮ ವರ್ಷದ ಖಾನ್ ಬಹುದ್ದೂರ್ ಸಖಾವತ್ ಹುಸೇನ್ ಎಂಬುವರನ್ನು ವಿವಾಹವಾದರು. ಹುಸೇನ್‌ರವರು ಬಾಗಲ್ಪುರ ಉರ್ದು ವಿಭಾಗದ ಉಪ ಮ್ಯಾಜಿಸ್ಟ್ರೇಟ್ ಆಗಿದ್ದರು. ಹುಸೇನ್ ಅವರು ಉರ್ದು ಭಾಷೆಯನ್ನು ಮಾತನಾಡುತ್ತಿದ್ದರು. ಹುಸೆನ್‌ರವರು ಇಂಗ್ಲೆಂಡಿನಿಂದ ಕೃಷಿ ಪದವಿ ಪಡೆಯುವುದರ ಜೊತೆಗೆ ರಾಯಲ್ ಅಗ್ರಿಕಲ್ಚರಲ್ ಸೊಸೈಟಿ ಆಫ್ ಇಂಗ್ಲೆಂಡ್‌ನಿಂದ ಸದಸ್ಯರಾಗಿದ್ದರು. ಹುಸೇನ್ ರವರು ಮೊದಲನೇ ಹೆಂಡತಿಯ ಮರಣದ ನಂತರ ರೂಕಯ್ಯರವರನ್ನು ವಿವಾಹವಾಗಿದ್ದರು. ಇವರು ರೂಕಯ್ಯರವರಿಗೆ ಬಂಗಾಳಿ ಮತ್ತು ಇಂಗ್ಲೀಷ್ ಕಲಿಯಲು ಮತ್ತು ಬರೆಯಲು ಪ್ರೋತ್ಸಾಹಿಸಿದರು. ರೂಕಯ್ಯಾರವರು ಪತಿಯ ಸಲಹೆ ಮೇರೆಗೆ ಬಂಗಾಳಿ ಭಾಷೆಯಲ್ಲಿ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದರು.

            ರೂಕಯ್ಯರವರು ೧೯೦೧ ರಲ್ಲಿ ಪಿಪಾಸಾ (ಬಾಯಾರಿಕೆ) ಎಂಬ ಕೃತಿಯೊಂದಿಗೆ ತಮ್ಮ ಸಾಹಿತ್ಯ ಬರವಣಿಗೆಯನ್ನು ಪ್ರಾರಂಭಿಸಿದರು. ಮ್ಯಾಟಿಚರ್ (೧೯೦೫) ಮತ್ತು ಸುಲ್ತಾನಾಸ್ ಡ್ರೀಮ್ (೧೯೦೯) ಈ ಎರಡು ಪುಸ್ತಕಗಳನ್ನು ಪ್ರಕಟಿಸಿದರು. ಸುಲ್ತಾನಾಸ್ ಡ್ರೀಮ್ಸ್ ನಲ್ಲಿ ಪುರುಷರು ಮತ್ತು ಮಹಿಳೆಯರ ಪಾತ್ರಗಳ ಕುರಿತು ವಿವರವಾಗಿ ಈ ಕೃತಿಯಲ್ಲಿ ಇದರಲ್ಲಿ ಮಹಿಳೆ ದೃಷ್ಠಿಕೋನವನ್ನು ಇಟ್ಟುಕೊಂಡು ಬರೆದರು. ೧೯೦೯ರಲ್ಲಿ ಇವರ ಪತಿಯ ಮರಣದ ನಂತರ ರೂಕಯ್ಯರವರು ನಿಯಮಿತವಾಗಿ ಆನೇಕ ಪತ್ರಿಕೆಗಳಿಗೆ ಬರೆಯ ತೊಡಗಿದರು.

            ರೂಕಯ್ಯರವರು ಪತಿಯ ಮರಣಾನಂತರ ಒಂದು ಹೈಸ್ಕೂಲ್‌ನ್ನು ಸಹ ಸ್ಥಾಪಿಸಿದರು. ಅದಕ್ಕೆ ಸಖಾವೆತ್ ಸ್ಮಾರಕ್ ಬಾಲಕಿಯರ ಪ್ರೌಢಶಾಲೆ ಎಂದು ಹೆಸರಿಸಿದರು. ಇದು ಐದು ವಿದ್ಯಾರ್ಥಿಗಳೊಂದಿಗೆ ಉರ್ದು ಮಾತನಾಡುವ ಬಾಗಲ್ಬುರದಲ್ಲಿ ಸಾಂಪ್ರದಾಯಿಕವಾಗಿ ಪ್ರಾರಂಭಿಸಿದರು. ನಂತರ ಪತಿಯ ಆಸ್ತಿಯ ವಿಚಾರವಾಗಿ ನಡೆದ ವಿವಾದದಿಂದ ತಮ್ಮ ಶಾಲೆಯನ್ನು ಕಲ್ಕತ್ತಾಗೆ ಸ್ಥಳಾಂತರಿಸಿ ಸತತವಾಗಿ ಇವರು ೨೪ ವರ್ಷಗಳ ಕಾಲ ಶಾಲೆಯನ್ನು ನಡೆಸಿದರು.

ರೂಕಯ್ಯ ರವರು ಎ-ಖವತೀನ ಇ-ಇಸ್ಲಾಂ(ಇಸ್ಲಾಮಿಕ್ ಮಹಿಳಾ ಸಂಘವನ್ನು) ಸ್ಥಾಪಿಸಿದರು. ಈ ಸಂಘವು ಮಹಿಳೆಯರ ಸ್ಥಿತಿ ಮತ್ತು ಅರವರ ಶಿಕ್ಷಕಣದ ಬಗ್ಗೆ ಚರ್ಚೆಗಳು ಮತ್ತು ಸಮಾವೇಶಗಳನ್ನು ನಡೆಸುವಲ್ಲಿ ಸಕ್ರಿಯವಾಗಿತ್ತು. ಮಹಿಳೆಯರ ಸುಧಾರಣೆಗಾಗಿ ಹಲವು ಕೆಲಸಗಳನ್ನು ಮಾಡಿದರು. ಬ್ರಿಟಿಷ್ ಭಾರತದಲ್ಲಿ ಮುಸ್ಲಿಂ ಕಡೆಗೆ ಗಮನವನ್ನು ನೀಡುತ್ತಿಲ್ಲವೆಂದು ಮತ್ತು ಸಂಕುಚಿತ ಮನೋಭಾವನೆ ತೋರುತ್ತಿದೆ ಎಂದು ಕೊಂಡರು. ಹಾಗಾಗಿ ಇಸ್ಲಾಮಿಕ್ ಮಹಿಳಾ ಸಂಘವು ಇಸ್ಲಾಂ ಧರ್ಮದ ಮೂಲ ಬೋಧನೆಗಳ ಆಧಾರದ ಮೇಲೆ ಸಾಮಾಜಿಕ ಸುಧಾರಣೆಗಳಿಗೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿತ್ತು.

            ರೂಕಯ್ಯರವರು ಸಣ್ಣ ಕಥೆಗಳು ಕವನಗಳು, ಪ್ರಬಂಧಗಳು, ಕಾದಂಬರಿಗಳು, ಅನೇಕ ವಿಶ್ಲೇಷಣಾತ್ಮಕ ಬರಹಗಳನ್ನು ಬರೆದಿದ್ದಾರೆ. ಇವರು ಒಂದು ವಿಶಿಷ್ಠವಾದ ಸಾಹಿತ್ಯಕ ಶೈಲಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಸೃಜನಶೀಲತೆಯ ತರ್ಕ ಮತ್ತು ಹಾಸ್ಯ ಪ್ರಜ್ಞೆಯಿಂದ ಕೂಡಿರುತ್ತಿದ್ದವು, ಇವರ ಬರಹಗಳು ಯಾವಾಗಲು ಮಹಿಳೆಯ ಸಮಾಜದಲ್ಲಿ ನಡೆಯುವ ಅನ್ಯಾಯದ ತಾರತಮ್ಯದ ಮತ್ತು ಸಮಾಜಿಕ ಅಡೆತಡೆಗಳ ವಿರುದ್ಧ ಹೋರಾಡಬೇಕು ಎಂಬುದಾಗಿಯೂ ಹಾಗೆಯೇ ಇರುವ ಮಿತಿಗಳನ್ನು ಮುರಿದು ಹೊರಗೆ ಬರಬೇಕೆಂಬುದಾಗಿದ್ದವು.

ರೂಕಯ್ಯರವರು ಬರೆದಿರುವ ಕೆಲವು ಕೃತಿಗಳು

೧)ಪಿಪಾಸಾ (ಬಾಯಾರಿಕೆ) ೨)ಮಾಟಿಚೂರ (ಪ್ರಬಂಧಗಳು ೧ನೇ ಸಂಪುಟ ೧೯೦೪, ೨ನೇ ಸಂಪುಟ ೧೯೨೨) ಕಥೆಗಳು ಮತ್ತು ಕಾಲ್ಪನಿಕ ಕಥೆಗಳನ್ನು ಒಳಗೊಂಡಿದೆ ೩) ನಾರಿದೃಷ್ಠಿ ೪) ಮುಕ್ತಿಪಾಲ್ ೫) ಡೆಲಿಷಿಯಾ ೬) ಸುಲ್ತಾನನ ಕನಸ್ಸು ೭) ಬೊಲಿಗಾರ್ಟೊ ೮) ಪದ್ಮರಾಗ ೯) ನಾರೀಕ್ ಅಧಿಕಾರ ೧೦) ಗಾಡ್‌ಗಿವ್ಸ್ ಮ್ಯಾನ್‌ರಾಬ್ಸ್ ೧೧) ಎಜುಕೇಷನ್ ಐಡಿಯಲ್ಸ್ ಫಾರ ದಿ ಮಾರ್ಡ್ನ್ ಇಂಡಿಯನ್ ಗರ್ಲ್ಸ್ ಮುಂತಾದವು.

            ರೂಕಯ್ಯರವರು ತಮ್ಮ ೫೨ನೇಯ ಹುಟ್ಟು ಹಬ್ಬದಂದು ೯ ಡಿಸೆಂಬರ್ ೧೯೩೨ ರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದ ನಿಧನರಾದರು. ಡಿಸೆಂಬರ್ ೯ನ್ನು ಬಾಂಗ್ಲಾದೇಶದಲ್ಲಿ ರೂಕ್ಕ ದಿನವೆಂದು ಆಚರಿಸಲಾಗುತ್ತದೆ. ರೂಕಯ್ಯ ಅವರನ್ನು ಬಂಗಾಳದ ಪತ್ರಕರ್ತೆ ಸ್ತ್ರೀ ಸಮಾನತಾವಾದಿ ಎಂದು ಕರೆಯುವುದರ ಜೊತೆಗೆ ಬಾಂಗ್ಲಾದೇಶದಲ್ಲಿ ರೂಕಯ್ಯ ಸ್ಮರಣಾರ್ಥವಾಗಿ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯಗಳು, ಸಾರ್ವಜನಿಕ ಕಟ್ಟಡಗಳು, ರಾಷ್ಟ್ರೀಯ ಪ್ರಶಸ್ತಿಗಳನ್ನು ಇಡಲಾಗಿದೆ.

            ಡಿಸೆಂಬರ್ ೯. ೨೦೧೭ ರಂದು ಗೂಗಲ್ ತನ್ನ ೧೩೭ನೇ ಹುಟ್ಟು ಹಬ್ಬವನ್ನು ಗೂಗಲ್ ಡೂಡಲ್ ಮೂಲಕ ಆಚರಿಸಲಾಯಿತು.

***************************

ಡಾ.ಸುರೇಖಾ ಜಿ.ರಾಠೋಡ

ಸುರೇಖಾ ರಾಠೋಡ್  ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು:  ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿದೆ

Leave a Reply

Back To Top