Category: ಅಂಕಣ

ಅಂಕಣ

ಹಲವು ಭಾವಗಳನ್ನು ಒಟ್ಟಿಗೆ ಸೆರೆಹಿಡಿಯುವ ರೂಪಕಗಳು ಸೂಜಿ ಕಣ್ಣಿಂದ ತೂರಿದದಾರಕ್ಕೆ ಒಳಗಿಲ್ಲ ಹೊರಗಿಲ್ಲ ಈ ಒಂದು ಸಾಲಲ್ಲಿಯೇ ತನ್ನ ಇಡೀ ಕಾವ್ಯದ ಸತ್ವವನ್ನು ನಮ್ಮೆದುರಿಗೆ ತೆರೆದಿಟ್ಟ ಕೃಷ್ಣ ಗಿಳಿಯಾರ ಎಂಬ ವೈದ್ಯರ ಪರಿಚಯ ಯಾರಿಗಿಲ್ಲ ಹೇಳಿ. ವೃತ್ತಿಯಲ್ಲಿ ವೈದ್ಯರಾದರೂ ನವಿರು ಗೆರೆಗಳು ಅವರ ಭಾವಾಭಿವ್ಯಕ್ತಿಯ ಪ್ರತಿರೂಪ. ಭಟ್ಕಳದಲ್ಲಿ ವೈದ್ಯರಾಗಿ ಕಾರ್‍ಯ ನಿರ್ವಹಿಸುತ್ತಿರುವ ಕೃಷ್ಣ ಗಿಳಿಯಾರರ ಕ್ಯಾಮರಾಕ್ಕೆ ಫೋಸ್ ನೀಡಲೆಂದೇ ಬಹಳಷ್ಟು ಹೂವುಗಳು ಅರಳುತ್ತವೆ. ಹೆಚ್ಚಿನ ಪಕ್ಷಿಗಳು ಅವರೆದುರು ಹೊಸ ಮದುವಣಗಿತ್ತಿಯಂತೆ ನುಲಿಯುತ್ತ ನಡೆಯುತ್ತವೆ. ಸೂರ್‍ಯ ಬಳಕುತ್ತ ತನ್ನದೊಂದು […]

ಪಾಲಿಸೋ ಹೂವ ನಾನು ಚಿಕ್ಕವಳಿದ್ದಾಗ ಊರಿನ ಆಂಜನೇಯ ದೇವಸ್ಥಾನದ ದೇವರ ಪಲ್ಲಕ್ಕಿ ವರುಷಕ್ಕೊಮ್ಮೆ ನಮ್ಮ ಮನೆಗೆ ಬರುತ್ತಿತ್ತು. ಮನೆಯ ಹಿರಿಯರೆಲ್ಲರೂ ಭಯ-ಭಕ್ತಿಗಳಿಂದ ದೇವರನ್ನು ಸ್ವಾಗತಿಸಲು ಸಿದ್ಧರಾದರೆ, ನನ್ನ ಮನಸ್ಸಿನಲ್ಲೊಂದು ವಿಚಿತ್ರವಾದ ಸಡಗರ ತುಂಬಿಕೊಳ್ಳುತ್ತಿತ್ತು. ಕಲ್ಲು-ಮುಳ್ಳು ಬಿಸಿಲು ಯಾವುದನ್ನೂ ಲೆಕ್ಕಿಸದೆ ಮಡಿಬಟ್ಟೆಯಲ್ಲಿ ಪಲ್ಲಕ್ಕಿ ಹೊರುತ್ತಿದ್ದ ಗಂಡಸರು, ಅವರ ಕಾಲುಗಳನ್ನು ತಣ್ಣೀರಿನಿಂದ ತೊಳೆದು ಹಳೆಹಾಡುಗಳನ್ನು ಹಾಡುತ್ತ ಪಲ್ಲಕ್ಕಿಯನ್ನು ಸ್ವಾಗತಿಸುತ್ತಿದ್ದ ಹೆಂಗಸರು, ದೇವರು-ಶಾಸ್ತ್ರ ಯಾವುದರ ಬಗ್ಗೆಯೂ ಸ್ಪಷ್ಟ ಕಲ್ಪನೆಯಿಲ್ಲದೆ ದೇವರ ಆಗಮನವನ್ನು ನೆಂಟರು ಬಂದಂತೆ ಸಂಭ್ರಮಿಸುತ್ತಿದ್ದ ಮಕ್ಕಳು ಹೀಗೆ ಬಿಡಿಬಿಡಿಯಾದ ಪ್ರಪಂಚಗಳನ್ನು […]

ಜುಮ್ಮಾ- ಕಥಾ ಸಂಕಲನ ಜುಮ್ಮಾ- ಕಥಾ ಸಂಕಲನತೆಲುಗು ಮೂಲ: ವೇಂಪಲ್ಲಿ ಶರೀಫ್ಕನ್ನಡಕ್ಕೆ:ಸೃಜನ್ಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೭೫ಪುಟಗಳು : ೯೬ ಮುಸ್ಲಿಂ ಸಂವೇದನೆಗಳಿಗೆ ಧ್ವನಿ ನೀಡುವ ಮತ್ತು ಓದುಗರ ಮನಮಿಡಿಯುವಂತೆ ಮಾಡುವ ೧೩ ಹೃದಯಸ್ಪರ್ಶಿ ಕಥೆಗಳ ಸಂಕಲನವಿದು. ಮುಖ್ಯವಾಗಿ ಗ್ರಾಮೀಣ ತಳ ಸಮುದಾಯದವರ ಕುರಿತಾದ ಕಥೆಗಳು ಇಲ್ಲಿವೆ. ಬದುಕಿನಲ್ಲಿ ಸುಖವೆಂದರೇನೆಂದೇ ತಿಳಿಯದ ಅಸ್ತಿತ್ವಕ್ಕಾಗಿ ಹೆಣಗಾಡುವ ಮಂದಿ ಇಲ್ಲಿದ್ದಾರೆ.  ಲೇಖಕರಾದ ವೇಂಪಲ್ಲಿ ಶರೀಫ್ ತಮ್ಮ ಸುತ್ತಮುತ್ತ ತಾವು ಕಂಡ ಜಗತ್ತನ್ನು ಸ್ವಲ್ಪವೂ ಉತ್ಪ್ರೇಕ್ಷೆಯಿಲ್ಲದೆ […]

ಅಂಕಣ ಬರಹ ಘೋಷಣೆಗಳ ನಡುವೆ ರೂಪಕಗಳಿಗೂ ಕಾತರಿಸುವ ಕಲ್ಮೇಶ ತೋಟದ್  ಕವಿತೆಗಳು ಕಲ್ಮೇಶ ತೋಟದ್ . ಮೂರು ಗೇಣಿನಷ್ಟೇ ಅಂತರ ಭಾಸವಾಗುತ್ತಿದ್ದ ಬಾನಹಂದರ ನೋಡಲದೆಷ್ಟು ಸುಂದರ ಆಕಾಶ ಭೂಮಿ ಮಂದಾರ ಅಪ್ಪನ ಹೆಗಲದು ಸುಂದರ ಇಂಥ ಭಾವುಕ ಸಾಲುಗಳಲ್ಲಿ ಅಪ್ಪನ ಹೆಗಲನ್ನು ವರ್ಣಿಸಿ ಅಪ್ಪನನ್ನು ಕುರಿತಂತೆ ಈವರೆಗೂ ಇದ್ದ ಇಮೇಜುಗಳಿಗೆ ಮತ್ತೊಂದು ಹೊಸ ರೂಪಕವನ್ನು ಕೊಡಮಾಡಿರುವ ೨೬ರ ಹರಯದ ಯುವ ಕವಿ ಕಲ್ಮೇಶ ತೋಟದ ಅವರ ಕವಿತೆಗಳನ್ನು ಪರಿಚಯಿಸುವುದಕ್ಕೆ ಸಂತೋಷ ಮತ್ತು ಸಂಭ್ರಮಗಳು ಮೇಳೈಸುತ್ತವೆ.  “ಕೌದಿ” ಶೀರ್ಷಿಕೆಯಲ್ಲಿ […]

ಮರೆವಿಗೆ ಇಲ್ಲಿದೆ ರಾಮಬಾಣ           ಹಗಲು ರಾತ್ರಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಓದ್ತಿನಿ.ಆದರೂ ಬೇಕೆಂದಾಗ ನೆನಪಿಗೆ ಬರುವುದೇ ಇಲ್ಲ. ಅದೂ ಪರೀಕ್ಷೆ ಸಮಯದಲ್ಲಂತೂ ಸರಿಯಾಗಿ ಕೈ ಕೊಡುತ್ತದೆ ಏನು ಮಾಡಬೇಕು ತಿಳಿಯುತ್ತಿಲ್ಲ. ಎನ್ನುವುದು ಬಹಳಷ್ಟು ಪರೀಕ್ಷಾರ್ಥಿಗಳ ದೊಡ್ಡ ಸಮಸ್ಯೆ. ನನ್ನ ಮಕ್ಕಳು ಓದಲ್ಲ ಅಂತಿಲ್ಲ. ಎಲ್ಲವನ್ನೂ ಓದ್ತಾರೆ.ಆದರೆ ಅವರಿಗೆ ಜ್ಞಾಪಕ ಶಕ್ತಿದೇ ಸಮಸ್ಯೆ. ಪರೀಕ್ಷೆಯಲ್ಲಿ ಓದಿದ್ದು ಚೆನ್ನಾಗಿ ನೆನಪಿಗೆ ಬರಲಿಲ್ಲ ಅದಕ್ಕೆ ಅಂಕ ಕಡಿಮೆ ಬಂದಿದೆ ಎಂದು ಕಣ್ಣಿರಿಡುತ್ತಾರೆ ನಮಗೇನು ಮಾಡಬೇಕು ಅಂತ ಹೊಳಿತಿಲ್ಲ ಎನ್ನುವುದು ಹಲವು […]

ಹೆತ್ತಿರುವ ತಾಯಿ, ನಮ್ಮನ್ನು ಹೊತ್ತಿರುವ ಭೂಮಿಗಿಂತ ದೊಡ್ಡ ಧರ್ಮವಿಲ್ಲ’ ಫಾಲ್ಗುಣ ಗೌಡ ತಣ್ಣಗಿನ ವ್ಯಕ್ತಿತ್ವದ ಸರಳ ಮನುಷ್ಯ ನಮ್ಮ ಫಾಲ್ಗುಣ ಗೌಡ. ಹುಟ್ಟಿದ್ದು ಅಂಕೋಲಾ ತಾಲೂಕಿನ ಅಚವೆ. ಕಾಲೇಜು ಹಂತದಲ್ಲಿ ಬರವಣಿಗೆ ಪ್ರಾರಂಭಿಸಿದರು. ಜಿ.ಸಿ .ಕಾಲೇಜಿನ ಭಿತ್ತಿ ಪತ್ರ ವಿಭಾಗದಿಂದ ಕವಿತೆ ಬರೆಯಲು ಪ್ರಾರಂಭ.  ಬೆಂಗಳೂರಿನ ಕ್ರೈಸ್ಟ್ ಕಾಲೇಜು ಏರ್ಪಡಿಸಿದ ಬೇಂದ್ರೆ ಸ್ಮ್ರತಿ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಸತತ ಎರಡು ಸಲ ಬಹುಮಾನ ಪಡೆದರು ಪಾಲ್ಗುಣ.  ಬೆಂಗಳೂರಿನ ಸಾಂಸ್ಕೃತಿಕ ಪತ್ರಿಕೆ  `ಸಂಚಯ’ ನಡೆಸುವ ರಾಜ್ಯ ಮಟ್ಟದ […]

ಶತಮಾನದ ಕವಿ ಯೇಟ್ಸ್

ಅಂಕಣ ಬರಹ ಶತಮಾನದ ಕವಿ ಯೇಟ್ಸ್ ಅನುವಾದ :ಡಾ. ಯು.ಆರ್.ಅನಂತಮೂರ್ತಿಪ್ರ : ಅಭಿನವ ಪ್ರಕಾಶನಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೭೫಻ಪುಟಗಳು : ೧೨೮ ಜಗತ್ಪ್ರಸಿದ್ಧ ಇಂಗ್ಲಿಷ್ ಕವಿ ಡಬ್ಲಿಯೂ.ಬಿ.ಯೇಟ್ಸ್ನ ಮಹ ತ್ವದ ೧೭ ಕವನಗಳ ಅನುವಾದ ಈ ಸಂಕಲನದಲ್ಲಿದೆ.  ಜೊತೆಗೆ ಕವಿ-ಕಾವ್ಯ ಪರಿಚಯ,ಪ್ರವೇಶಿಕೆ ಮತ್ತು ವಿಶ್ಲೇಷ ಣೆಗಳೂ ಇವೆ. ಕಾವ್ಯ ರಚನೆಯ ಹಿಂದಿನ ಶ್ರಮ ಮತ್ತು  ಗಂಡು-ಹೆಣ್ಣು ಪರಸ್ಪರ ತಮ್ಮೊಳಗೆ ಹುಟ್ಟಿಕೊಳ್ಳುವ ಪ್ರೀತಿ ಯನ್ನು ತೆರೆದು ಹೇಳಿಕೊಳ್ಳಲು ಪಡುವ ಒದ್ದಾಟಗಳ ಕುರಿ ತು ‘ಆದಮ್ಮಿನ ಶಾಪ’ […]

ಮನೆಖರೀದಿ ಪತ್ರ 2009ನೇ ಇಸವಿ. ಹೆಸರಾಂತ ರಿವಾಯತ್ ಗಾಯಕರಾದ ಕದರಮಂಡಲಗಿ ಅಲ್ಲಾಬಕ್ಷರ ಭೇಟಿ ಮುಗಿಸಿಕೊಂಡು, ಬ್ಯಾಡಗಿಯಿಂದ ಹಂಪಿಗೆ ಹಿಂತಿರುಗುತ್ತಿದ್ದೆ. ದಾರಿಯಲ್ಲಿ ಬಳ್ಳಾರಿ ಜಿಲ್ಲೆ ಪ್ರವೇಶಿಸುವಾಗ ಹಾವೇರಿ ಜಿಲ್ಲೆಯ ಕೊನೆಯ ಊರು ಗುತ್ತಲ ಸಿಕ್ಕಿತು. ಅಲ್ಲೊಬ್ಬ ಗಾಯಕ ಇದ್ದಾನೆಂದು ತಿಳಿದು ಹುಡುಕಿಕೊಂಡು ಹೊರಟೆ. ಹೆಸರು ಗೌಸ್‍ಸಾಬ್ ಹಾಲಗಿ. ಗೌಸ್‍ಸಾಬರು ಮನೆಯೊಂದರ ಜಗುಲಿಕಟ್ಟೆಯ ಮೇಲೆ ಕುಳಿತು ಮನೆಖರೀದಿ ಪತ್ರ ಬರೆಯುತ್ತಿದ್ದರು. ಈ ಕೆಲಸಕ್ಕೆ ರೆವಿನ್ಯೊ ಇಲಾಖೆಯಲ್ಲಿ `ಬಿಕ್ಕಲಂ’ ಎನ್ನುವರು. ಪ್ರಾಮಿಸರಿ ನೋಟಿನ ಬರೆಹ ಮುಗಿದ ಬಳಿಕ ಅವರಿಂದ ರಿವಾಯತ್ ಹಾಡನ್ನೂ […]

ಕಬ್ಬಿಗರ ಅಬ್ಬಿ ೧೧.  ಹಸಿವಿನಿಂದ ಹಸಿರಿನತ್ತ  ಹಸಿವಿನಿಂದ ಹಸಿರಿನತ್ತ “Generations to come will scarce believe that such a one as this ever in flesh and blood walked upon this earth” .(Albert Einstein, About Mahatma Gandhi) ” ಮುಂದಿನ ಪೀಳಿಗೆಯ ಮಕ್ಕಳು ಆಶ್ಚರ್ಯ ಪಡುವ ದಿನ ಬರಲಿದೆ, ಇಂತಹಾ  ಮನುಷ್ಯ ದೇಹ, ಈ ಭೂಮಿಯ ಮೇಲೆ ನಡೆದಾಡಿರಬಹುದೇ?” ( ಆಲ್ಬರ್ಟ್ ಐನ್ ಸ್ಟೈನ್ ,ಮಹಾತ್ಮಾ ಗಾಂಧಿ ಅವರ […]

ದೇಹದ ಹಂಗು ತೊರೆದು; ಹೊಸದನ್ನು ಹುಡುಕಿ         ಯಾರಾದರೂ ವ್ಯಾಟ್ಸ್‌ಆಪ್ ಅಥವಾ ಫೇಸ್‌ಬುಕ್‌ನ ಇನ್ ಬಾಕ್ಸ್‌ಗೆ ಬಂದು ಅಡ್ರೆಸ್ ಕೊಡಲು ಕೇಳಿದರೆ ನಾನು ಮಾತನಾಡದೇ ಕೊಟ್ಟುಬಿಡುವುದು ನನಗೆ ರೂಢಿಯಾಗಿಬಿಟ್ಟಿದೆ. ಯಾಕೆಂದರೆ ಬಹುತೇಕ ಹಾಗೆ ಕೇಳುವವರು ಸಾಹಿತಿ ಮಿತ್ರರೇ. ಅದೂ ಆಗಷ್ಟೇ ಅವರ ಪುಸ್ತಕ ಪ್ರಕಟವಾದವರು. ಹೀಗಾಗಿ ಪ್ರಕಾಶ ನಾಯಕರು ವಿಳಾಸ ತಿಳಿಸು ಎಂದು ವ್ಯಾಟ್ಸ್ ಆಪ್‌ನಲ್ಲಿ ಕೇಳಿದಾಗ ಅವರ ಅಂತೂ ಫೇಸ್‌ಬುಕ್‌ನಲ್ಲಿ ಸದ್ದು ಮಾಡ್ತಿರೋದನ್ನು ಗಮನಿಸಿದ್ದರಿಂದ ಅಷ್ಟೇನು ಗಮನವಹಿಸದೇ ಕೊಟ್ಟುಬಿಟ್ಟೆ. ಅದಾದ ನಂತರ […]

Back To Top