Category: ಕಥಾಗುಚ್ಛ

ಕಥಾಗುಚ್ಛ

ನಿರ್ಧಾರ

ದಿನಗಳೆದಂತೆ ಯೋಗಿಯೊಂದಿಗಿನ ಆತ್ಮೀಯತೆ ವಿನುತಳಲ್ಲಿ ಹೊಸ ಹುರುಪು ಮೂಡಿಸಿತ್ತು.ಯೋಗಿಯು ವಿನುತಳನ್ನು ಅನುರಾಗದ ಭಾವದಿಂದ ನೋಡುತಿದ್ದ.ಇಬ್ಬರಲ್ಲಿ ಮೂಡಿದ ಪ್ರೀತಿ ತೋರ್ಪಡಿಸದಿರಲು ಇಬ್ಬರು ಹೆಣಗುತಿದ್ದರು .ಆದರೆ ಇದರ ಅರಿವು ಮೋದಲಾದದ್ದು ಸುಮಿತ್ರಳಿಗೆ. ವಿನುತ ಜೀವನದಲ್ಲಿ ಮುಂದುವರೆಯುವದು ಸುಮಿತ್ರಳಿಗೆ ಖುಷಿಯ ವಿಷಯವಾಗಿತ್ತು.

ಶಾಂಭವಿ, ಬಣ್ಣ, ಜಾತಿ ಮುಂತಾಗಿ..

ಸಣ್ಣಕಥೆ ಶಾಂಭವಿ, ಬಣ್ಣ, ಜಾತಿ ಮುಂತಾಗಿ.. ಡಾ. ಅರಕಲಗೂಡು ನೀಲಕಂಠ ಮೂರ್ತಿ –01– ಮೊಬೈಲ್  ವಾಟ್ಸ್ಯಾಪ್ ರಿಂಗಾದಾಗ ಸುಮಾರು ರಾತ್ರಿ ಹತ್ತು ಗಂಟೆಯ ಸಮಯ. ಊಟ ಮುಗಿಸಿ, ಪಾತ್ರೆ ತೊಳೆಯುವುದು ಇನ್ನೂ ಬಾಕಿ. ಅಷ್ಟರಲ್ಲಿ ಫೋನ್. ಉದ್ದ ರಿಂಗ್ ಆದಾಗಲೇ ಬಹುಶಃ ಇದು ಭಾರತದ್ದಲ್ಲ ಅನ್ನಿಸಿತು. ನಿರಂಜನ್ ತಮ್ಮ ಆಫೀಸಿನ ಫೈಲ್ ಹಿಡಿದು ಮಗ್ನರಾಗಿದ್ದರು. ಇಂತಹ ಫೋನ್ ಕಾಲ್ ಗಳು ಬರುವುದೇ ಅವರಿಗೆ. ಹಾಗಿದ್ದರೂ ಸುಮ್ಮನೆ ಫೈಲೊಳಗೇ ಇಳಿದಿದ್ದಾರೆ. ನಾನು ಕಿಚನ್ನಿನಲ್ಲಿದ್ದೇನೆ, ಹಾಲ್ನಲ್ಲಲ್ಲ, ಅಂತ ಅರಿತೂ ಸಹ. […]

ಜೂನಿಯರ್ಸ್

ತಾಯಿಯ ಅನಾರೋಗ್ಯದ ಆತಂಕ, ಅನುಭವೀ ಗುಮಾಸ್ತರ ಅಮಾನುಷ ವರ್ತನೆಯಿ೦ದ ರೋಷಗೊಂಡ ನಾನು ಬದಲು ಮಾತನಾಡದೆ ಅರ್ಜಿಯನ್ನು ಅವರ ಮುಂದಿಟ್ಟು ನಿರ್ಗಮಿಸಬೇಕೆನ್ನುವಾಗ ಇಲಾಖೆಯಲ್ಲಿ ೧೫ ವರ್ಷ ಹಳಬರಾದ ಮಹಿಳೆಯೊಬ್ಬರು ರಜಾ ಅರ್ಜಿಯೊಂದಿಗೆ ಹಾಜರಾದರು. ಅವರನ್ನು ಕಂಡ ಕೂಡಲೇ ನಾಟಕೀಯ ವಾಗಿ ನಗುತ್ತ “ಏನ್ ಮೇಡಂ ಏನಾಗಬೇಕಿತ್ತು’ ಎಂದು ವಿನೀತನಾಗಿ ಕೇಳಿದ ಅವರನ್ನು ನೋಡಿ ಈಗ ತಾನೇ ಮಾನವೀಯತೆ ಇಲ್ಲದ ಗುರುಗುಟ್ಟಿದ ಮನುಷ್ಯ ಈತನೇನ ಅನ್ನಿಸಿತು.

ಇಳಿ ಸಂಜೆ

ಕಲ್ಲ ಬೆಂಚಿನ ಮೇಲೆ ಕೂತು ಪಾರ್ಕ್ ನಲ್ಲಿ ಆಡುತ್ತಿದ್ದ ಮಕ್ಕಳತ್ತ ನೋಡುತ್ತಿದ್ದರು. ಆ ಮಕ್ಕಳು ತಮ್ಮ ಅಜ್ಜ – ಅಜ್ಜಿಯರೊಂದಿಗೆ ಅಲ್ಲಿಗೆ ಬರುತ್ತಿದ್ದರು. ಅವರೆಲ್ಲರ ಇಳಿ ವಯಸ್ಸಿಗೆ ಮೊಮ್ಮಕ್ಕಳು ಮುಲಾಮುಗಳಾದರೆ, ನನಗೆ ಪಾರ್ವತಿ-ಪಾರ್ವತಿಗೆ ನಾನು ಔಷಧಿ ಎಂದುಕೊಂಡು ತಣ್ಣಗೆ ನಕ್ಕರು ರಾಯರು.

“ತುಂಡು ಭೂಮಿ ಮತ್ತು ಬುದ್ಧ”

ಶ್ಯಾಮೇಗೌಡರು ಮನೆಯ ಚಾವಡಿ ತಲುಪಿದಾಗ ಅವರ ದೊಡ್ಡ ಮೊಮ್ಮಗ ಶಾಲೆಯ ಪಠ್ಯಪುಸ್ತಕ ಹಿಡಿದುಕೊಂಡು ಬುದ್ಧನ ಬೋಧನೆಗಳನ್ನು ಜೋರಾಗಿ ಉರುಹೊಡೆಯುತ್ತಿದ್ದ- “ಇತರರನ್ನು ಕ್ಷಮಿಸಬೇಕಾದದ್ದು ಅವರು ಕ್ಷಮೆಗೆ ಅರ್ಹರೆಂಬ ಕಾರಣಕ್ಕಾಗಿ ಅಲ್ಲ; ನೀವು ಶಾಂತಿಗೆ ಅರ್ಹರೆಂಬ ಕಾರಣಕ್ಕಾಗಿ…..”

ಸಭೆಯಿಂದ ಹೊರಹೋಗುತ್ತಿದ್ದ ಹೆಂಗಸರಿಬ್ಬರು ” ಗಂಡ, ಮನೆ,ಮಕ್ಕಳು, ಸಂಸಾರ ಅಂತ ಕಟ್ಟಿಕೊಂಡು ನಮ್ಮ ಹಾಗೆ ಏಗುವವರಿಗೆ ಕಥೆಕವಿತೆ ಬರೆಯುವ ಪುರುಸೊತ್ತಾದ್ರೂ ಎಲ್ಲಿರುತ್ತೆ? ಬಣ್ಣದ ಬೀಸಣಿಕೆಯಂತೆ ಬಳುಕುತ್ತಾ, ಅತ್ತೆ ಮಾವನಿಗೆ ಮನೆ ಚಾಕರಿ ಹಚ್ಚಿ ಝಂ ಅಂತ ಓಡಾಡಿಕೊಂಡಿರೋವ್ರು ಒಂದಲ್ಲ ನೂರು ಪುಸ್ತಕ ಬರೀತಾರೆ…

ಚೇರ್ಮನ್ ಸೋಮಯ್ಯ

ಯಾರು ಏನೇ ಹೇಳಲಿ ಸೋಮಯ್ಯ ಪಕ್ಷಾತೀತ ರಾಜಕಾರಣಿ. ಅವನಿಗೆ ಪಕ್ಷರಾಜಕಾರಣದಲ್ಲಿ ನಂಬಿಕೆ ಇಲ್ಲ. ಯಾವುದೋ ಪಕ್ಷದವರು ಸೇರಿಸಿಕೊಂಡರೆ ನಂಬಿಕೆ ಬರುತ್ತಿತ್ತೋ ಏನೋ. ಪಾಪ ಇವನದೇನು ತಪ್ಪು. ಇವನ ಮೇಲೆ ವಿಶ್ವಾಸ ಇಡುವ ಅರ್ಹತೆ ಯಾವ ಪಕ್ಷದವರಿಗಿದೆ? ಮತ್ತೊಂದು, ಇವನಿಂದ ಆಗುವ ಲಾಭವಾದರೂ ಏನು?

ರಾಧೆಗೆ

ಆದರೆ ಹೃದಯದ ಈ ಕುದಿತದೊಂದಿಗೆ ಏಕಾಂಗಿಯಾಗಿರುವ ನನಗೆ ಈ ಒತ್ತಡವನ್ನು ಹಂಚಿಕೊಳ್ಳಬಲ್ಲ ಸಖಿ, ಸಂಗಾತಿ ನೀನಲ್ಲದೇ ಇನ್ನಾರಾಗಲು ಸಾಧ್ಯ ?

ಹೊಸ ಮಾಡಲ್

ಕಥೆ ಹೊಸ ಮಾಡಲ್ ಗುರುರಾಜ ಶಾಸ್ತ್ರಿ ಅದು ಗಿರಿಜೆಯ ಮದುವೆ ಸಂಭ್ರಮ.  ಮದುವೆಮನೆಯಲ್ಲಂತು ಎಲ್ಲರದೂ ಓಡಾಟವೋ ಓಡಾಟ.  ಏನೋ ಬಹಳ  ಕೆಲಸವಿದೆಯೆಂಬಂತೆ ಮುಖ್ಯ ಆವರಣದ  ಆ ಕಡೆಯಿಂದ ಈಕಡೆಯವರೆಗೂ  ಓಡಾಡುತ್ತಿರುವ ರೇಷ್ಮೆ ಸೀರೆ ಉಟ್ಟ ಮದುವೆಯಾಗದ  ಹೆಣ್ಣುಮಕ್ಕಳು; ಮದುವೆಯಾಗಿದ್ದರೇನಂತೆ, ನಾವೂ ಇನ್ನೂ ಚಿಕ್ಕ ವಯಸ್ಸಿನವರೇ ಎಂದು ಭಾವಿಸುತ್ತಾ ಮದುವೆಯಾಗದ ಹುಡುಗಿಯರಿಗೆ ಸವಾಲೆಂಬಂತೆ ಓಡಾಡುತ್ತಿರುವ ಯುವ  ಗೃಹಿಣಿಯರು; ಅಲ್ಲಲ್ಲಿ ಕಣ್ಣಾಡಿಸುತ್ತಾ ಅವಳು ನೋಡು ಪಾದರಸದಂತೆ, ಇವಳು ನೋಡು, ತಾನೇ ರೂಪವತಿಯೆಂಬ ಅಹಂಕಾರ, ಇನ್ನು ಅವಳು ಮೂಷಂಡಿ ತರಹ ಮೂಲೆಯಲ್ಲಿ […]

ಅಪ್ಸರೆಯ ಮೂರನೆ ಮದುವೆ!

ಕೆಲವರು ಅನೇಕ ಅಂತಸ್ತುಗಳನ್ನು ಭೂದೇವಿಯ ಒಡಲೊಳಗೂ ಕೊರೆದು ನಿರ್ಮಿಸುವ ನಕ್ಷೆಗಳನ್ನು ಸರ್ಕಾರದ ಒಪ್ಪಿಗೆಗೆ ಕೊಟ್ಟರೂ, ಅವು ಅನುಮೋದನೆ ಆಗಲಿಲ್ಲ. ಹಾಗಾಗಿದ್ದರೆ ಭೂಮಿಯ ಗತಿ! ಸ್ವಾರ್ಥ ಬುದ್ಧಿಯ, ದುರಂತ ಮನದ ಖದೀಮರು, ಮನುಷ್ಯನ ಅಸ್ತಿತ್ವ ಭೂಮಿಯಲ್ಲಿ ನಶಿಸುವವರೆಗೂ ಇದ್ದೇ ಇರುವರು, ನಿದರ್ಶನಕ್ಕಾದರು!

Back To Top