ಕಾವ್ಯ ಸಂಗಾತಿ
ಡಾ.ಸರಸ್ವತಿ ಕಳಸದ
“ಸಂಗಾತಿ”


ಹೋಗು ಮನಸೆ ಹೋಗು
ನಲ್ಲೆ ಇರುವಲ್ಲಿಗೆ ಹೋಗು
ಕೇಳು ಮೌನಕ್ಕೆ ಕಾರಣ
ಕೇಳು ಇದೆಂತ ಜೀವನ//
ಅವಳಿಲ್ಲದಾ ಬಾಳಿನಲ್ಲಿ
ನಗುವಿಲ್ಲ ನಲಿವಿಲ್ಲ ಸಂತೋಷವಿಲ್ಲಾ
ಅವಳಿಲ್ಲದಾ ಬದುಕಿನಲ್ಲಿ
ರವಿಚಂದ್ರರಿಲ್ಲಾ, ಹೂಕಂಪೇಯಿಲ್ಲಾ
ಎದೆಯೇಕೋ ತಳಮಳವಾಯಿತಲ್ಲಾ //
ಅವಳಿದ್ದರೇ ಬಾಳಲ್ಲಿ
ಅಮೃತವುಂಟು
ಸಿರಿಸಂಪದವುಂಟು
ನಗೆಯ ನಗನಾಣ್ಯವುಂಟು
ಅವಳಿದ್ದರೇ ತಾನೇ ಎಲ್ಲಾ//
ಅವಳಿಲ್ಲದ ಮನೆಯಲ್ಲಿ
ಹೆಜ್ಜೆಗಳೇ ಇಲ್ಲಾ
ಗೆಜ್ಜೆಗಳೇ ಇಲ್ಲಾ
ನೆಲ ನೊಂದು ಬಿರುಕಾಯುತ್ತಲ್ಲಾ //
ಅವಳಿದ್ದ ಬಾಗಿಲಲ್ಲಿ
ಬೆಳಕುಂಟು, ರಂಗುಂಟು
ರಂಗೋಲಿಯುಂಟು
ಅವಳಿದ್ದರೆ ತಾನೆ ಎಲ್ಲಾ.. ಎಲ್ಲಾ //
ಜೀವನಾಲಯದಲ್ಲಿ
ಕಥೆಯುಂಟು! ವ್ಯಥೆಯುಂಟು!
ಜೊತೆಯೂ ಉಂಟು
ಅವಳಿದ್ದಾ ನೌಕೆಗೆ ನೆಲೆಯುಂಟು//
ಡಾ.ಸರಸ್ವತಿ ಕಳಸದ




ಹೋಗು ಮನಸೇ ಹೋಗು….ಕವಿತೆ ಚೆನ್ನಾಗಿದೆ… ಮೇಡಂ
ನಿಮ್ಮ ಪ್ರೇರಣಾತ್ಮಕ ಮಾತುಗಳಿಗೆ ಧನ್ಯವಾದಗಳು
ಬಹುಕಾಲ ನೆನಪಲ್ಲಿ ಉಳಿಯುವಂತೆ ಕವಿತೆ!
ಪದ ಬಂಧ ದಾಂಪತ್ಯ ಸಂಬಂಧ
ಅನುಬಂಧದ ಭಾವ ಬೆಸುಗೆ ಎರಕ ಹೊಯ್ದಂತೆ!…
ಸೋಗಸಾದ ಕವಿತೆ…..ಸುಬ್ರಾಯ ಬಿದ್ರೆಮನೆ
ತುಂಬಾ ಧನ್ಯವಾದಗಳು. ಪ್ರೇರಣೆ ಹೀಗೆ ಇರಲಿ ಸಹೋದರ ಸುಬ್ರಾಯ
Beautiful poem
Thanks for your motivational words