ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಹೋಗು ಮನಸೆ ಹೋಗು
ನಲ್ಲೆ ಇರುವಲ್ಲಿಗೆ ಹೋಗು
ಕೇಳು ಮೌನಕ್ಕೆ ಕಾರಣ
ಕೇಳು ಇದೆಂತ ಜೀವನ//
ಅವಳಿಲ್ಲದಾ ಬಾಳಿನಲ್ಲಿ
ನಗುವಿಲ್ಲ ನಲಿವಿಲ್ಲ ಸಂತೋಷವಿಲ್ಲಾ
ಅವಳಿಲ್ಲದಾ  ಬದುಕಿನಲ್ಲಿ
ರವಿಚಂದ್ರರಿಲ್ಲಾ, ಹೂಕಂಪೇಯಿಲ್ಲಾ
ಎದೆಯೇಕೋ ತಳಮಳವಾಯಿತಲ್ಲಾ //
ಅವಳಿದ್ದರೇ ಬಾಳಲ್ಲಿ
ಅಮೃತವುಂಟು
ಸಿರಿಸಂಪದವುಂಟು
ನಗೆಯ ನಗನಾಣ್ಯವುಂಟು
ಅವಳಿದ್ದರೇ ತಾನೇ ಎಲ್ಲಾ//
ಅವಳಿಲ್ಲದ ಮನೆಯಲ್ಲಿ
ಹೆಜ್ಜೆಗಳೇ ಇಲ್ಲಾ
ಗೆಜ್ಜೆಗಳೇ ಇಲ್ಲಾ
ನೆಲ ನೊಂದು ಬಿರುಕಾಯುತ್ತಲ್ಲಾ //
ಅವಳಿದ್ದ ಬಾಗಿಲಲ್ಲಿ
ಬೆಳಕುಂಟು, ರಂಗುಂಟು
ರಂಗೋಲಿಯುಂಟು
ಅವಳಿದ್ದರೆ ತಾನೆ ಎಲ್ಲಾ.. ಎಲ್ಲಾ //
ಜೀವನಾಲಯದಲ್ಲಿ
ಕಥೆಯುಂಟು! ವ್ಯಥೆಯುಂಟು!
ಜೊತೆಯೂ ಉಂಟು
ಅವಳಿದ್ದಾ ನೌಕೆಗೆ ನೆಲೆಯುಂಟು//


About The Author

1 thought on “ಡಾ.ಸರಸ್ವತಿ ಕಳಸದ ಅವರ ಕವಿತೆ “ಸಂಗಾತಿ””

Leave a Reply

You cannot copy content of this page

Scroll to Top