ಕಾವ್ಯ ಸಂಗಾತಿ
ಡಾ. ಲತಾ ಎ.ಆರ್ ಬಾಳೆಹೊನ್ನೂರು
“ಪ್ರೀತಿ”


ಸುಂದರ ಬದುಕಿಗೆ ಬರೆದು ಮುನ್ನುಡಿ
ಸಾರ್ಥಕತೆಗೆ ಬೇಕಿದೆ ನೆನೆವ ಬೆನ್ನುಡಿ
ಎಲ್ಲರಲಿ ತುಂಬಿರಲಿ ಸಿಹಿಯಾದ ಸವಿನುಡಿ
ಮುನ್ನಡೆಸುವ ಹಾದಿಗೆ ಮುಖ ಮಾಡಿ
ಬಾಳಲಿ ಬೇಕಿದೆ ಬಲವಾದ ನಂಬಿಕೆ
ಗಳಿಸಬೇಕು ಅದಕಾಗಿ ಬರದ ಸಡಿಲಿಕೆ
ಬೇಕಿಲ್ಲ ಎಲ್ಲಾ ನನ್ನವರೆಂಬ ಮೂಢನಂಬಿಕೆ
ಸತ್ಯ ನಿಷ್ಠೆ ಕರುಣೆ ಸಾರಿರಿ ಜಗಕೆ
ನವ ಬದುಕಲಿ ಸ್ನೇಹವ ಗಳಿಸು
ಆತ್ಮೀಯತೆಯ ನಗುವನ್ನು ಸಂಪಾದಿಸು
ನೆನಪಿಡುವ ಕಾರ್ಯದಿ ಏನಾದರೂ ಸಾಧಿಸು
ಎಲ್ಲರ ಪ್ರೀತಿ ವಿಶ್ವಾಸ ಗಳಿಸು
ಅತಿಥಿಗಳು ನಾವು ಬರೀ ಭೂಮಿಗೆ
ಹೋಗಲೇಬೇಕು ಒಂದು ದಿನ ಸಾವಿಗೆ
ಆಗಬೇಕು ಬೂದಿ ಉರಿವ ಚಿತೆಗೆ
ಹೆಜ್ಜೆ ಗುರುತು ಬಿಟ್ಟುಹೋಗು ನಿನ್ನ ನಡೆಗೆ.
ಡಾ. ಲತಾ ಎ.ಆರ್ ಬಾಳೆಹೊನ್ನೂರು.
.



