ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಸುಂದರ ಬದುಕಿಗೆ ಬರೆದು ಮುನ್ನುಡಿ
ಸಾರ್ಥಕತೆಗೆ ಬೇಕಿದೆ ನೆನೆವ ಬೆನ್ನುಡಿ
ಎಲ್ಲರಲಿ ತುಂಬಿರಲಿ ಸಿಹಿಯಾದ ಸವಿನುಡಿ
ಮುನ್ನಡೆಸುವ ಹಾದಿಗೆ ಮುಖ ಮಾಡಿ

ಬಾಳಲಿ ಬೇಕಿದೆ ಬಲವಾದ ನಂಬಿಕೆ
ಗಳಿಸಬೇಕು ಅದಕಾಗಿ ಬರದ ಸಡಿಲಿಕೆ
ಬೇಕಿಲ್ಲ ಎಲ್ಲಾ ನನ್ನವರೆಂಬ ಮೂಢನಂಬಿಕೆ
ಸತ್ಯ ನಿಷ್ಠೆ ಕರುಣೆ ಸಾರಿರಿ ಜಗಕೆ

ನವ ಬದುಕಲಿ ಸ್ನೇಹವ ಗಳಿಸು
ಆತ್ಮೀಯತೆಯ ನಗುವನ್ನು ಸಂಪಾದಿಸು
ನೆನಪಿಡುವ ಕಾರ್ಯದಿ ಏನಾದರೂ ಸಾಧಿಸು
ಎಲ್ಲರ ಪ್ರೀತಿ ವಿಶ್ವಾಸ ಗಳಿಸು

ಅತಿಥಿಗಳು ನಾವು ಬರೀ ಭೂಮಿಗೆ
ಹೋಗಲೇಬೇಕು ಒಂದು ದಿನ ಸಾವಿಗೆ
ಆಗಬೇಕು ಬೂದಿ ಉರಿವ ಚಿತೆಗೆ
ಹೆಜ್ಜೆ ಗುರುತು ಬಿಟ್ಟುಹೋಗು ನಿನ್ನ ನಡೆಗೆ.


About The Author

Leave a Reply

You cannot copy content of this page

Scroll to Top