ಕಾವ್ಯ ಸಂಗಾತಿ
ಡಾ.ಗೀತಾ ದಾನಶೆಟ್ಟಿ
“ಅನುರಾಗ”


ಅನುರಾಗದ ಅಲೆಯ ಮೇಲೆ
ಜೀವ ಭಾವದ ಬೆಸುಗೆ
ಅಂತರಂಗದಲಿ ಅರಳಿದೆ
ಬಂಧನದ ಭಾವಗೀತೆ
ಒಡಲಾಳದ ಮೌನ ಮೃದಂಗ
ಮಧುರ ಮಾತುಗಳ ಮಿಲನ
ಹೃದಯ ತಂತಿ ಮೀಟಿದಾಗ
ಹೊರಹೊಮ್ಮುವುದು ನಿನಾದ
ನೀಳ ನೀರವ ರಾತ್ರಿಯಲಿ
ನಕ್ಷತ್ರಗಳ ಹೊಂಬೆಳಕಿನ ಸ್ಫೂರಣ
ಅಲೆ ಅಲೆಯಾಗಿ ತೇಲಿ ಬರುವ
ಒಲವಿನ ಅಪ್ಪುಗೆಯ ಆಲಿಂಗನ
ಕಣ್ಣುಗಳು ಮೇಳೈಸಿವೆ
ಸವಿನೆನಪಿನ ತೋರಣ
ಹಾಡಿದೆ ಹೃದಯರಾಗ ಕವನ
ಮೂಡಿದೆ ಅನುರಾಗ ಅನುದಿನ
ಡಾ.ಗೀತಾ ದಾನಶೆಟ್ಟಿ




