ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
“ಒಳಗಿನ ಗೂಡು”


ಮಣ್ಣಿಂದ ಹುಟ್ಟಿದ
ಭತ್ತ ಪ್ರೀತಿ ಹಂಚಿ
ಜೀವವಾಗಿ ನಗುವುದಂತೆ
ಮಣ್ಣಿಂದ ಹುಟ್ಟಿದ
ಹೂವಿಗೂ ಘನತೆಯ
ಪರಿಮಳ ಹರಡಿ
ಉಳಿಯುವ ಪುಳಕ
ಗೂಡು ಕಟ್ಟುವ
ಹಕ್ಕಿಗೆ ಪರಿಶ್ರಮದ
ಎಳೆ ಎಳೆಯೂ
ದಿವ್ಯ ತಪಸ್ಸಿನ ಛಾಯೆ
ಮಲಗಿರುವ ಮಗುವಿನ
ಮೇಲೆ ಅಮ್ಮನ ಮುತ್ತಿನ
ಕನಸಿನ ಜೋಕಾಲಿಯ ಹಾಡು
ಎಳೆ ಬಿಸಿಲಿಗೆ
ಹೂ ಹರಡಿ ಕುಳಿತ
ಮುಗುದೆಗೆ ಹಸಿವೆ ಮರೆತ
ಮೌನ ಕಾಣದ ದಾರಿ
ಕರಗಳಿಗೆ ಉಪಕಾರದ
ಋಣದ ಭರವಸೆ
ಎಲ್ಲವೂ ಹೃದಯ
ಒಳಗೂಡಿನ ಒಳಗೆ
ದಿನವೂ ನಡೆಯುವ
ತಕದಿಮಿತದ ಒಂದು
ಉಸಿರಿನ ಕುಣಿತ
ನಾಗರಾಜ ಬಿ.ನಾಯ್ಕ
.



