ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

 
ಕಾಡುತಿಹೆ ವ್ಯಸನವಾಗಿ
ಘನತೆ ಕಳೆವ ಮೌನವಾಗಿ
ದೂರ ಸರಿಸಿಬಿಡು ಮನವೇ ಕೊಬ್ಬಿದ  ಅಹಂಕಾರವ
ಹರಡಿಬಿಡು ಬಾಂಧವ್ಯದ ಮೃದುತನವ

ನಾನು ನನ್ನದು ಎಂದು
ಮೆರೆಯುವ ಮನವೇ
ಈ ಜಗದಲಿ ಯಾವ ತನಗಳು ಶಾಶ್ವತ?
ಕೊನೆಯಲಿ ಏನಾಗುವೆ ಎಂಬುದ ಅರಿಯದ ಮೂರ್ಖತನವೇ ನಿನಗೆ?

ನಾ ಕಾಣುವುದೇ ಸತ್ಯ
ಆನೆ ನಡೆದದ್ದೇ ದಾರಿ
ಎಂಬುವ ಹುಚ್ಚುಭ್ರಮೆ ಬೇಡ
ಕೊಚ್ಚಿ ಹೋಗುವೆ ನೀ ಹೊಳೆಯಲಿ ಅದ ತಿಳಿಯೋ
ಮನವೇ

ನಾನೇ ಶ್ರೇಷ್ಠವೆಂಬ ಭಾವ
ಅಹಂಕಾರದ ಪರಾಕಾಷ್ಠೆ
ಸರ್ವರೊಳಗೂ ಒಂದಾಗಿ  ಶಾಂತಿದೂತ ಬುದ್ಧನಾಗು
ಬದುಕಿಗೆ ಅದೇ ಪರಮಸುಖ
ಚಿರನೂತನ ಪ್ರೇಮ ಕಾವ್ಯ

ಕೋಟೆ ಕಟ್ಟಿ ಮೆರೆದವರು
ಮಣ್ಣಾಗಿ ಕಣ್ಣಮುಂದೆ ಹೋಗುತಿಹರು
ಅಹಂಕಾರದ ಅಮಲು
ವ್ಯಕ್ತಿತ್ವದ ಕೊನೆಯ ಉಯಿಲು

ಮನವೇ ನೀ ಶುದ್ಧ ಮನಸ್ಸಿನ ಮಗುವಾಗು
ದುರಹಂಕಾರಿಯಾಗಬೇಡ
ನೆಮ್ಮದಿಯ ಬದುಕಿಗೆ ಭಂಗ ತಂದುಕೊಳ್ಳಬೇಡ


About The Author

Leave a Reply

You cannot copy content of this page

Scroll to Top