ಕಾವ್ಯ ಸಂಗಾತಿ
ಶಮಾ ಜಮಾದಾರ
ಗಜಲ್


ನಿನ್ನ ಮಡಿಲಿನಲಿ ಮುಖವಿಟ್ಟು ಅಳಬೇಕೆಂದಿರುವೆ
ಮನಸಿನಲ್ಲಿಯ ತಳಮಳಗಳ ಹೇಳಬೇಕೆಂದಿರುವೆ
ಕುಣಿಯೊಳಗಿಳಿಸಿ ಹೊರಟೆ ತಿರುಗಿಯೂ ನೋಡದೆ
ವಿರಹದ ಭಾವವಿಹೀನತೆಯನು ಕೇಳಬೇಕೆಂದಿರುವೆ
ಭೂಗರ್ಭದ ಶೀತಲತೆ ನೆನಪಿಸಿದೆ ನಿನ್ನ ಸಡಿಲಪ್ಪುಗೆ
ಬೇಡವಾದ ಬೇಡಿಯ ಸಂಸಾರ ಹೂಳಬೇಕೆಂದಿರುವೆ
ಕೊನೆಯ ಉಸಿರಿನ ನಿರಾಳತೆಯ ಖುಷಿ ಹೇಳಲೆಂತು
ನೆನಪುಗಳ ಸಿರಿ ಸಂಪತ್ತಿನೊಂದಿಗೆ ಬಾಳಬೇಕೆಂದಿರುವೆ
ಕೂದಲೆಳೆಯಿಂದ ಶಮೆಯ ಕತ್ತು ಸೀಳಿದ ಕಥೆಯಿದು
ಪ್ರೀತಿಯಲಿ ಶಹೀದಾಗಿ ಪ್ರೇಮವ ಆಳಬೇಕೆಂದಿರುವೆ
ಶಮಾ ಜಮಾದಾರ




ವಾಹ್ ಮೇಡಂ ಜೀ
ಕೂದಲೆಳೆಯಿಂದ ಶಮೆಯ ಕತ್ತು ಸೀಳಿದ ಕಥೆಯಿದು !
ಯಬ್ಬೋ .. ಎಂತಹ ಆಲೋಚನೆ? !
ಶ್ರೀವಲ್ಲಭ ಕುಲಕರ್ಣಿ
ಗಝಲ್ ಚೆನ್ನಾಗಿದೆ