ಕಾವ್ಯ ಸಂಗಾತಿ
ಡಾ ಅನ್ನಪೂಣ೯ ಹಿರೇಮಠ
ಗಜಲ್


ನಿನ್ನ ಕಣ್ಣ ಕೊಳದಲಿ ಒಲವಿನ ಹಂಸೆಗಳ ಆಟ ಕಂಡೆ
ನಿನ್ನ ಭಾವಬಿತ್ತಿಲಿ ಪ್ರೇಮದ ಅಕ್ಷರಗಳ ತೋಟ ಕಂಡೆ
ಮಂದಹಾಸದಿ ಮುಖಾರವಿ೦ದ ಅರಳಿ ನಗುತಿಹುದು
ನಿನ್ನಧರಗಳ ದಳದಲಿ ಹೂ ದುಂಬಿಗಳ ಕೂಟ ಕಂಡೆ
ಪಿಸು ಮಾತುಗಳ ಪುಳಕವು ಮೈಮನ ಅರಳಿಸುತಿದೆ
ಬಿಗಿದ ಬಾಹು ಬಂಧನದಲಿ ತೋಳುಗಳ ಕಾಟ ಕಂಡೆ
ಹಗಲಿರುಳು ಬಿಟ್ಟಿರಲಾರದಂತ ಪ್ರೀತಿಯೇ ತುಂಬಿದೆ
ದೇಹ ದೇಗುಲದ ತುಂಬಾ ಚಿತ್ತಾರಗಳ ಮಾಟ ಕಂಡೆ
ನಿನ್ನ ಗುಂಗಿನಲಿ ಹುಚ್ಚಿಯಾಗಿರುವೆ ಕೊಚ್ಚು ವಿರಹ
ಮನ ಮಂದಾರದಲಿ ಸವಿ ನೆನಪುಗಳ ಪುಟ ಕಂಡೆ
ಸಲುಗೆಯ ಸರಸ ಸಾಮಿಪ್ಯವೇ ಸ್ವರ್ಗ ನನಗಿಂದು
ರತಿ ಮನ್ಮಥರ ಒಡನಾಟದಲಿ ಜೀವಿಗಳ ಹಠ ಕಂಡೆ
ಅನುಳ ಮನ ಮಂದಾರವು ಅರಳಿದ ಸುಮವಾಗಿದೆ
ಶಿವಪಾರ್ವತಿಯರ ಅನುರಕ್ತ ಹೃದಯಗಳ ತಟ ಕಂಡೆ
ಡಾ ಅನ್ನಪೂಣ೯ ಹಿರೇಮಠ



