ಕಾವ್ಯ ಸಂಗಾತಿ
ವಾಣಿ ಭಂಡಾರಿ
ಗಜಲ್


ನನ್ನ ಪ್ರೀತಿ ಗರಿಕೆಯಂತೆ ಆದರೀಗ ನೋಡು ಸೋತು ಶವವಾಗಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ.
ನೋವಿರದ ಊರೆಲ್ಲಿದೆ ಆ ನೋಟ ಆಟವೀಗ ನೋಡು ಜೀವ ಹಣ್ಣಾಗಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ.
ಸಾವಿನ ಊರಿಗೆ ತೆರಿಗೆ ಕಟ್ಟಬೇಕು ಕನಸಿಗಲ್ಲ ಒಲವು ಒಲವಾಗೇ ಮಣ್ಣಾಗುತಿದೆ ನೋಡಿಲ್ಲಿ.
ಬದುಕೊಂದು ಪಾಠ ಶಾಲೆ ಮೊಹಬತ್ ಮುದುರಿ ಕುಸಿದಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ.
ನನ್ನ ನಾನು ಅರಿತ ಮೇಲೆ ಯೌವ್ವನಕ್ಕೂ ಮುಪ್ಪು ಅಡರಿ ಹೆಪ್ಪಾಗಿರುವೆ.
ವಿಳಾಸವಿರದ ದಾರಿ ನನ್ನದು ನಿನ್ನ ಪ್ರೀತಿಯುಸಿರು ಜನ್ನತ್ ಗೆ ಚಲಿಸಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ.
ಏನಿದ್ದರೇನು ಇಲ್ಲಿ ಎಲ್ಲ ಮಣ್ಣೊಳಗೆ ಸಿಗುವಾಗ ನನ್ನಾಸೆಗೂ ಅಲ್ಲೆ ಮುಕ್ತಿ ಸಿಗಲಿ ಬಿಡು
ಈಜಲಾಗದ ಪಾಡು ಕಡಲ ಕಣ್ಣೀರು ಬಡಿದಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ.
ಎಂತ ಗೋಳು “ವಾಣಿ” ನಿನ್ನ ಬಾಳು ಗೆಲ್ಲಲಾಗದ ಒಲವೊಂದು ನಗುತಿದೆ ಬಾನಾಡಿ ಚೆಲ್ಲಿ.
ಕನಸಿನ ಅರಮನೆ ಮುರಿದು ಉಸಿರು ತಣ್ಣಗಾಗಿದೆ ಈಗಲಾದರೂ ನನ್ನ ದಫನ್ ಗೆ ಬರುವೆಯಾ.
ವಾಣಿ ಭಂಡಾರಿ
ಶಿವಮೊಗ್ಗ



