ಕಾವ್ಯ ಸಂಗಾತಿ
ವನಜಾಕ್ಷಿ ಬೆಟ್ಟದಾಲೂರು


ಅವ್ವ ನೀನೆ ನಮ್ಮ ನಡೆಸಿದ ಶಕ್ತಿ
ನೀನೇ ನಮ್ಮನೆಯ ಬಾಗೀರತಿ
ನೀನಿರದ ಈ ಮನೆಯ ಸೊರಗೋಗೈತೆ
ಪ್ರತಿ ಗೋಡೆ ಗೂಡೆಯು ನಿನ್ನ ಕೂಗಿ ಕರೆದೈತೆ
ಅಮ್ಮಾ ನೀನೆ ನಮ್ಮನ್ನು ನಡೆಸಿದ ಶಕ್ತಿ
ಸಲಹು ನಮ್ಮ ಅಮ್ಮಾ ನೀನು
ನಿನ್ನ ನಂಬಿದ ಯಾರು ಸೋಲಲಿಲ್ಲಾ
ಮೋಸ ವಂಚನೆ ಭಾವ ನೀನು ತಿಳಿದವಳಲ್ಲಾ
ಹಸಿದವರಿಗೆ ಇಕ್ಕುವುದು ಮರೆತವಳಲ್ಲ .
ಆದರೂ ಈ ಮನೆಯು ಸೊರಗೋಯ್ತಲ್ಲಾ
ಅವ್ವ ನೀನೇ ನಮ್ಮನ್ನು ನಡೆಸಿದ ಶಕ್ತಿ.
ದೇವ ದೇವರ ನೀ ಹುಡುಕಿ ಹೋದವಳಲ್ಲಾ
ಹೋರಾಟದ ಬದುಕಾ ನೀ ಎಂದೂ ದೂರಲಿಲ್ಲಾ
ಬೆವರಿಳೆಯೇ ದುಡಿದರೂ ಸೋತೇ ಎನಲಿಲ್ಲಾ
ಒಂಟಿಯಾದರೂ ನೀನು ಯಾರಿಗೂ ಹೊರೆಯಾಗಲಿಲ್ಲಾ
ನಿನ್ನಾಸೆ ಏನೆಂದು ,ಎಂದೂ ಹೇಳಲಿಲ್ಲಾ
ಇಂಥಾದ್ದು ಬೇಕೆಂದು ಕೇಳಿದವಳಲ್ಲಾ
ಉಳಿಸುಳಿಸಿ ಪರರಿಗೆ ಕೊಟ್ಟೆಯಲ್ಲಾ
ನಮ್ಮ ಏಳಿಗೆ ಬಿಟ್ಟು ಬೇರೆ ಚಿಂತಿಸಲಿಲ್ಲಾ
ಅವ್ವ ನೀನೆ ನಮ್ಮ ನಡೆಸಿದಾ ಶಕ್ತಿ .
ಬೇಕಾದ್ದೆ ಇದ್ರೂ ನೀ ಅನುಭವಿಸಲಿಲ್ಲಾ
ನಮ ಜೊತೆಗಿರುವಾ ಭಾಗ್ಯವಾ ದೇವ ಕೊಡಲಿಲ್ಲಾ
ಧರ್ಮಕ್ಕೆಲ್ಲಿದೆ ಕಾಲ ನೀವೇ ಹೇಳೀರೆಲ್ಲಾ
ನನ್ನ ತಾಯಂತಾ ಭಾಗೀರಥಿಯು ಈ ಮನೆಗೆ ಬರಲಿ
ಬೆಳಕಾಗಿ ನನ್ನ ತೌರು ಎಂದೂ ಬೆಳಗಲಿ
ವನಜಾಕ್ಷಿ ಬೆಟ್ಟದಾಲೂರು



