ಜನಪದ ಸಂಗಾತಿ
ದಯಾನಂದ ಪಾಟೀಲ
“ಪಿ.ಡಿ.ವಾಲೀಕಾರಯವರ
ಜನಪದ ಸಾಹಿತ್ಯದ
ಒಂದು ಅವಲೋಕನ.”


ಬಾಗಲಕೋಟ ಜಿಲ್ಲೆಯ ಜನಪದ ತಜ್ಞರು ಸಾಹಿತಿಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.ಕನ್ನಡ ಸಾರಸ್ವತ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಜನಪದಕ್ಕೆ ವಿಶೇಪವಾದ ಸ್ಥಾನ ಪಡೆದಿದೆ.ವಾಲೀಕಾರಯವರು ರಚನೆ ಮಾಡಿರುವ ಜನಪದ ಹಾಡುಗಳ ಒಂದು ಝಲಕ ನಿಮ್ಮ ಮುಂದೆ..
ಆದಿ ಸ್ಥಳದಲ್ಲಿ ಇದ್ದ ಕಂಬಳಿ
ಹಾಲು ಮತದ ಧರಮಕ ಬತ್ತ ಕಂಬಳಿ ಶಿಷ್ಯಾರದಿಂದ ಹುಟ್ಟಿತ ಕ೦ಬಳಿ ಜಗದ ಗುರುವ ಮಡ್ಡಿಸಿದ್ಯಾಗ ಹೊರುವ ಕಂಬಳಿ ಮಳಿ ರಾಜ ಬಂದಾಗ ಬೆಚ್ಚಾತ ಕಂಬಳಿ ತಲಿ ಮ್ಯಾಲ ಸುತ್ತುವ ಪಾವ ಡಾತ ಕಂಬಳಿ…
ಮಳೆರಾಜ ನೀನಿಲ್ಲದೆ ಈ ಜೀವರಾಶಿಗಳು ಬದುಕಲು ಸಾಧ್ಯವಿಲ್ಲ ಆದ್ದರಿಂದ ನೀ ಧರೆಗೆ ಬಾ ಅಂತ ಪರಿಪರಿಯಾಗಿ ಭಕ್ತಿಯಿಂದ ಬೇಡಿಕೊಂಡು ಭಕ್ತಿಯಿಂದ ಕುರುಬರು ಕಂಬಳಿಬೀಸಿದರೆ ಮಳೆ ಆಗುತ್ತದೆ. ಎ೦ದು ಹಿರಿಯರು ಕ್ಷೇತ್ರ ಕಾರ್ಯದಲ್ಲಿ ಹೇಳಿದ್ದಾರೆ.
ಬೆಳೆಗಾಗಿ ನಾನೆದ್ದು /ಯಾರಾರ ನೆನೆಯಲಿ /
ಎಳ್ಳು ಜೀರಿಗಿ ನೆನೆಯೊಳೆ “ಭೂಮಿತಾಯಿ
ಎದ್ದೊಂದು ಗಳಿಗಿ ನೆನದೋ ಣೊ”
ಭೂಮಿ ತಾಯಿ ದೇವರು ಸಕಲ ಚರಾಚರ ಜೀವ ರಾಶಿ ಬದುಕುವುದು ಈ ಭೂಮಿಯ ಮೇಲೆ ಇರುವ 84 ಲಕ್ಷ ಜೀವರಾಶಿ ಇದೆ ಈ ಭೂಮಂಡಲದಲ್ಲಿ ಬದುಕುತ್ತಿವೆ. ಎಲ್ಲಾ ಜೀವರಾಶಿಗೆ ಭೂಮಿ ತಾಯಿ ಅನ್ನ ಹಾಕುತ್ತಿದ್ದಾಳೆ..
ಬೆಳ್ಳನೆ ಬೆಳಗಾಗಿ ಬೆಳ್ಳಿ ಮೂಡಲ ಗೈದು ಒಳ್ಳೊಳ್ಳೆ ಮೀನು ಗರಿ ಗಟ್ಟಿ ಆಡ್ಯಾವೋ
ಗರತಿ ಗಂಗಮ್ಮನ ಉಡಿಯಾಗೆ/
ಒಕ್ಕಲಿಗನಿಗೆ ನೀರು ಬರಿಯ ನೀರಲ್ಲ ಗರತಿ ಗಂಗವ್ವ ನಸುಕಿನಲ್ಲಿ ಈಕೆಯ ಉಡಿಯಲ್ಲಿ ಮೀನು ಗರಿ ಬಿಚ್ಚಿ ಆಡುವುದೆಂದು ಜನಪದರು ಬಣ್ಣಿಸಿರುವುದು ನೈಜವಾಗಿದೆ ಬೆಳಗು ಕೂಡ ಅವರ ಪಾಲಿಗೆ ಕೇವಲ ಬೆಳಕಲ್ಲ ಬೆಳ್ಳಿ ಬೆಳಕು..
ಯೋಗವನು ಮನ ಮುಟ್ಟಿ ? ಭೋಗವನು ತೊರೆದಿಹರೆ |ಮಾಗಿಯಾ ಮಳೆಯ ಸುರಿದ೦ತೆ ಆ…. ಯೋಗ ಸಾಗುತ್ತ ಲಿಹುದು ಸರ್ವಜ್ಞII
ಯೋಗಿಯ ದೇಹದ ಬೋಗಗಳೆನ್ನೆಲ್ಲ ಮನಸ್ಸಿನಿಂದ ತಿರಸ್ಕರಿಸಿ ಯೋಗ ಸಾಧನೆಯಲ್ಲಿ ಮನಸು ಲೀನಗೊಳಿಸುತ್ತಾನೆ. ಮಾಗಿಯ ದಿವಸಗಳಲ್ಲಿ ಮಳೆಯಾದರೆ ಭೂಮಿಯ ಮೇಲಿನ ಬೆಳೆಗೆ ಹಿತಕರವಾಗುವುದು ಅದರ೦ತೆಯೇ ಬೆಳೆಯುವ ಬೆಳೆಗೆ ಮಳೆ ನೀರು ಹನಿ ಹನಿಯಾಗಿ ದೊರಕಿದಾಗ ಅದರಲ್ಲಿ ಕಾಣಬರುವ ಸಂತೃಪ್ತಿ ಯೋಗಿಯ ಸಾಧನೆ…
ಹಾಕಪ್ಪ ಅಗಳಿ ಹಾಕಪ್ಪ /ಜೋಕಪ್ಪ ಹಾಕಿದ ಅಗಳಿ ಹಿರಿಯಪ್ಪ / ನನ ಕೊಮರ”
ಯಾಕೋ ಕೊಮರಾಮ ನೋ ನಿನ್ನ ಬಾಯಿಗೆ ಬೆಣ್ಲಿಲ್ಲ ಮೇಲೆ ಮಾಣಿಕದ ಹರಳಿಲ್ಲ / ಈ ಊರ ಓಣ್ಯಾಗ ನಿನ್ನ ಸುಳಿವಿಲ್ಲII
ಡಾ.ಬೆಟಗೇರಿ ಕೃಷ್ಣ ಶರ್ಮ ಇವರು ಜೋಕುಮಾರ ಪದದ ಅರ್ಥ ಬಗ್ಗೆ ವಿವರಿಸಿದ್ದಾರೆ. ಜೋಕುಮಾರ – ಪದದ ಅಪಭ್ರ೦ಶ ಯೋಗ ಕುಮಾರ ಇದು ಸೋಮಾರಿ ಪಿ೦ಡ ಪೋಲಿ ಪೋಕರಿಸೋ ಮಾರಿ ಎಂದು ಕರೆಯಲಾಗುತ್ತದೆ ಎಂದು ವಿವರಿಸಿದ್ದಾರೆ.
ಉತ್ತರ ದಿಕ್ಕಿಗೆ ಎತ್ತರಿಸಿ ಗಾಳಿ |
ಬೀಸಿದರೆ ಉತ್ತಮ | ಮಳೆ ಎಂದ ಸರ್ವಜ್ಞ |
ಶ್ರೀ ಮಳಿಯಪಯ್ಯ ಸ್ವಾಮಿಗಳು ಗ್ರಾಮದಲ್ಲಿ ಹಾದು ಹೋಗುವಾಗ ರೈತರು ಮಳೆ ಕೇಳಿಕೆ ಕೈತೆ ಆಗ ಮಳಿಯಪಯ್ಯ ಸ್ವಾಮಿಗಳು ತಡಿಹಾಕುನ 3 ದಿನಕ್ಕೆ ಬರತನ ಅಂತೆ ಹೇಳಿದಾರ೦ತಾ 3 ದಿನಕ್ಕೆ ಸಾಕಷ್ಟು ಮಳೆ ಆತು ಅಂತ ಹಿರಿಯರ ಹೇಳತಾರ..
ಅಂದು ರೊಕ್ಕ ಕಡಿಮೆ ಇತ್ತು ಗೌರವ ಹೆಚ್ಚ ಇತ್ತು.
ಇಂದು ರೊಕ್ಕ ಹೆಚ್ಚಾ ಗೈತಿ ಗೌರವ ಕಡಿಮೆ ಆಗೈತಿ..
ದೂರದಶ೯ನಮಕ್ಕಳ ಜಾನಪದ ಎಷ್ಟೆಂದು ಸುಂದರ ಇತ್ತು ಅದೆನ್ನೆಲ್ಲ ಕಸಿದುಕೊಂಡಿದ್ದಾರೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಈ ಮಳೆ ಆಚರಣೆ ಕಡಿಮೆಯಾಗುತ್ತಿದೆ.ಹಿರಿಯರಿಗೆ ಗೌರವ ಕೊಡುತ್ತಿಲ್ಲ ಜನಪದ ಸಾಹಿತ್ಯ ಮಾಯವಾಗುತ್ತಿದೆ.ಬಬಲಾದಿ ಚಿಕ್ಕಪ್ಪಯ್ಯಾನವರು ಸಾರಿ ಸಾರಿ ಹೇಳಿದ್ದಾರೆ.
ಸಾಹಿತಿ ಜನಪದ ವಿದ್ವಾಂಸರಾದ ಪಿ.ಡಿ.ವಾಲೀಕಾರ ಯವರು ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದಾರೆ.ಅವರಿಗೆ ಸವಿ ನೆನಪುಗಳೊಂದಿಗೆ …
ದಯಾನಂದ ಪಾಟೀಲ
ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ..



