ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನೇಹ ಬೋರಾ..
ಸ್ತ್ರೀ ಹೋರಾಟದ ಹೊಸ ರೂಪ

ಪ್ರಸಿದ್ಧಿಗಾಗಿ ರ್ಯಾಂಪ್ ಗಳ ಮೇಲೆ ಕ್ಯಾಟ್ ವಾಕ್ ಹೆಜ್ಜೆಗಳ ಹಾಕಿದ
ಸುಂದರಿ ಲಾರ, ಸುಷ್ಮೀತ, ಐಶ್ವರ್ಯ ವಜ್ರದ ಕಿರೀಟ ಧರಿಸಿ
ಭುವನ ಸುಂದರಿಯಾದರು

ನೇಹ…..
ನೀನು ಮಣ್ಣಲ್ಲಿ ಅರಳಿ, ಬೀದಿಯಲ್ಲಿ ತೆವಳಿ ಸೌಂದರ್ಯದ ಹೊಸ ಭಾಷ್ಯ
ಬರೆದವಳು

ಅನ್ಯಾಯದ ವಿರುದ್ಧ ಸಿಡಿದವಳು
ಅದುಮಿದಷ್ಟು
ಚೆಂಡಿನಂತೆ ಪುಟಿಯುವವಳು
ಬಭ೯ರತೆ, ಕ್ರೂರತೆಯ ಎದುರು
ಶಾಂತಿಯ ಮಾತಾಡಿದವಳು

ನೀರಜಾ , ಥೆರೆಸಾ, ಝಾನ್ಸಿ ,  ಚೆನ್ನಮ್ಮ, ಅಕ್ಕಳ ನಂತರ ನೀನೆ ಇರಬೇಕು
ಭಗತ್, ಸುಭಾಷ್, ಬಿಸ್ಮಿಲ್
ನಿನ್ನ ಅವತಾರ ಎತ್ತಿದಂತಿದೆ

‘ ಸಹನೆ ಸುಟ್ಟ ಕಿಡಿ,  
ಕತ್ತಲೆ ಸೀಳಿದ  ಬೆಳಕು ನೀನು ‘
ಲತೆ, ಕೋಮಲೆ ಅವರೆಲ್ಲ ಬೇರೆ
ನೀನು ಸುಡುವಾಗ್ನಿ, ಬೋಗ೯ರೆವ ಶರಧಿ
ತಲೆ ಮೇಲೆ ಮುಳ್ಳಿನ ಕಿರೀಟ ಧರಿಸಿದ  ‘ ಭುವನ ಸುಂದರಿ’


About The Author

Leave a Reply

You cannot copy content of this page

Scroll to Top