ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬದುಕಿನ ಸತ್ಯವನು ನೀನಿನ್ನೂ
ಹರಿಯಲೇ ಇಲ್ಲ ಹಲುಮಾನವ

ಮೂರು ದಿನದ ಬಾಳಿನ ಪಯಣದಲಿ
ನೂರಾರು ಆಸೆಗಳ ಹೊತ್ತು
ವಾಸ್ತವ ಸತ್ಯ ಅರಿಯಲೇ ಇಲ್ಲ

ಮಣ್ಣಿನಿಂದ ಬಂದು ಮಣ್ಣಿಗೆ
ಮರಳುವೆನೆಂಬುದ ಮರೆತು
ಮಹಡಿ ಮನೆ ಕಟ್ಟಿ ಮೆರೆಯುವೆಯಲ್ಲ

ಹಣ ಹುದ್ದೆ, ಹೆಸರಿಗಾಗಿ ಹಂಬಲಿಸಿ
ನಿನ್ನೊಳಗಿನ ಮಾನವೀಯತೆ
ಮನುಷ್ಯತ್ವದ ಮೌಲ್ಯ ಮರತೆಯಲ್ಲ

ಅಧಿಕಾರದ ಅಮಲಿನಲಿ
ಅಹಂಕಾರದ ಕಿರೀಟವ ಧರಿಸಿ
ಆಡಂಭರಕ್ಕೆ ಅದೀನವಾದೆಯಲ್ಲ

ಕಂಡ ದೇವರಿಗೆಲ್ಲ ಕೈಮುಗಿಯುತ್ತ
ತನ್ನಲ್ಲಿಯ ದೈವತ್ವ ಅರಿಯದೆ
ದಯೆ ಇಲ್ಲದೆ ದು:ಖಿಯಾದೆಯಲ್ಲ

ಜಾತಿ ಧರ್ಮದ ಗೋಡೆಗಳ ಕಟ್ಟಿ
ದ್ವೇಷ ಅಸೂಯೆಗಳ ಬೀಜ ಬಿತ್ತಿ
ಭಾಷೆ ಭಾವನೆಗಳ ಬೆಸೆಯಲಿಲ್ಲ

ಹುಟ್ಟಿ ಬಂದಿರುವ ಜಗತ್ತಿಗೆ
ಕೊಟ್ಟು ಹೋಗುವುದು ಬೆಟ್ಟದಷ್ಟಿದೆ
ಎಂಬುದ ತಿಳಿಯದೆ ಮೂಢನಾದೆಯಲ್ಲ

ಬದುಕಿನ ಸತ್ಯವನು ನೀನಿನ್ನೂ
ಅರಿಯಲೇ ಇಲ್ಲ ಹುಲುಮಾನವ


About The Author

Leave a Reply

You cannot copy content of this page

Scroll to Top