ಪದವಿ ಸಂಗಾತಿ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
“ಕನ್ನಡ ಸಾಹಿತ್ಯ ಪರಿಷತ್ತಿನ
ಅಧ್ಯಕ್ಷರಾಗಿ ಸಾಹಿತಿಗಳು
ಆಯ್ಕೆಯಾಗಲಿ”


ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದವನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಸ್ಥಾಪಿತವಾಗಿರುವ ಒಂದು ಪ್ರಮುಖ ಹಾಗೂ ಸ್ವಾಯತ್ತ ಸಂಸ್ಥೆಯಾಗಿದೆ. ಇದರ ಪ್ರಧಾನ ಕಛೇರಿಯು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿದೆ.
ಇತಿಹಾಸ ಮತ್ತು ಹಿನ್ನೆಲೆ
• ಸ್ಥಾಪನೆ: ಈ ಸಂಸ್ಥೆಯು ೧೯೧೫ರ ಮೇ ೫ ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಸ್ಥಾಪನೆಯಾಯಿತು.
• ಮೂಲ ಹೆಸರು: ಆರಂಭದಲ್ಲಿ ಇದನ್ನು ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಎಂದು ಕರೆಯಲಾಗುತ್ತಿತ್ತು.
ನಂತರ ೧೯೩೫ರಲ್ಲಿ (ಬಳ್ಳಾರಿ ಸಮ್ಮೇಳನದಲ್ಲಿ) ಇದರ ಹೆಸರನ್ನು ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದು ಮರುನಾಮಕರಣ ಮಾಡಲಾಯಿತು.
• ಸಂಸ್ಥಾಪಕರು: ಮೈಸೂರಿನ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಪ್ರಮುಖ ಕಾರಣಕರ್ತರಾಗಿದ್ದರು. ಇವರೊಂದಿಗೆ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರಂತಹ ಮಹನೀಯರ ಸಹಕಾರ ಮತ್ತು ಹೆಚ್.ವಿ. ನಂಜುಂಡಯ್ಯ (ಮೊದಲ ಅಧ್ಯಕ್ಷರು) ಅವರ ಶ್ರಮದಿಂದಾಗಿ ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು.
ಇಂತಹ ಐತಿಹಾಸಿಕ ಸಾಹಿತಿಕ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ವಿವಾದ ಅವ್ಯವಹಾರ ಬ್ರಷ್ಟಾಚಾರ ಅನೇಕ ಕೆಟ್ಟ ಕಾರ್ಯಗಳಿಗೆ
ಹೆಸರುವಾಸಿಯಾಗಿದೆ.
ಹಿಂದಿನ ಅಧ್ಯಕ್ಷರಾದ ಶ್ರೀ ಮಹೇಶ್ ಜೋಶಿ ಅವರು ಎಲ್ಲಾ ನಿಯಮ ಉಲ್ಲಂಘನೆ ಮಾಡಿ ತಮ್ಮದೇ ಆದ ರೀತಿಯಲ್ಲಿ ಅತ್ಯಂತ ದರ್ಪ ಸರ್ವಾಧಿಕಾರ ಮನೋಭೂಮಿಕೆಯಿಂದ ಅತ್ಯಂತ ಹೆಚ್ಚು ಹೆಚ್ಚು ಬಾಡಿ ನಲ್ಲಿ ವಿವಾದಕ್ಕೆ ಗುರಿಯಾಗಿ ಶತಮಾನದ ಸಂಸ್ಥೆಗೆ ಕೆಟ್ಟ ಕಳಂಕವನ್ನು ತಂದರು.
ಈಗ ಮತ್ತೆ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ನಡೆಯಲಿದೆ. ಸಾಹಿತ್ಯ ಪ್ರೇಮಿಗಳು ಕನ್ನಡ ಸಾಹಿತ್ಯ ಸಂಘಟನೆ ನಾಡು ನುಡಿ ಭಾಷೆ ನೆಲ ಜಲಗಳ ಬಗ್ಗೆ ಕಾಳಜಿ ಇರುವ ಸಾಹಿತಿಗಳನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ನಿವೃತ್ತ ಅಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪದವಿಯ ಮೇಲೆ ಕಣ್ಣಿಟ್ಟು
ಕುರ್ಚಿ ಪಡೆಯಲು ಹೊಂಚು ಮಾಡಿದ್ದಾರೆ
ಕಾರಣ ಇದು ಸಾಹಿತಿಕ ಸಾಂಸ್ಕೃತಿಕ ಸಂಸ್ಥೆ ಇಲ್ಲಿ ರಾಜಕಾರಣ ಜಾತಿ ಧರ್ಮಗಳ ಲಾಬಿ ಮಾಡದೆ
ಕರ್ನಾಟಕದ ಅಸ್ಮಿತೆಯನ್ನು
ಕಾಪಾಡುವ ಯೋಗ್ಯ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕೋರಲಾಗಿದೆ.
*ಡಾ ಶಶಿಕಾಂತ ಪಟ್ಟಣ
9552002338 ರಾಮದುರ್ಗ ಬೆಳಗಾವಿ ಜಿಲ್ಲೆ*



