ಕಾವ್ಯ ಸಂಗಾತಿ
ಎಮ್ಮಾರ್ಕೆ ಅವರ ಗಜಲ್


ಕತ್ತಲೆಗೊಂದಷ್ಟು ವಿಶ್ರಾಂತಿ ನೀಡೋಣ ಬಾ
ಬೆಳಕಿಗೊಂದಷ್ಟು ಕೆಲಸವ ಕೊಡೋಣ ಬಾ
ಹೊರಗೋ ಒಳಗೋ ಕತ್ತಲನ್ನ ಕಳಿಬೇಕಂತ
ಹೊಳಪಿಗೊಂದಷ್ಟು ಹಾಡು ಹಾಡೋಣ ಬಾ
ಕತ್ತಲೆ ಕವಿದಲ್ಲೆಲ್ಲ ಕವಿ ಕಂದೀಲಾಗಬೇಕಂತ
ತಿಮಿರಕ್ಕೊಂದಷ್ಟು ತಿವಿದು ಕಾಡೋಣ ಬಾ
ಎದೆಹಣತೆಯದು ಸದಾಕಾಲ ಬೆಳಗಬೇಕಂತ
ಜತೆಯಾಗೊಂದಷ್ಟು ಹೆಜ್ಜೆಯ ಇಡೋಣ ಬಾ
ನಾ ಹೆಚ್ಚು ನೀ ಹೆಚ್ಚು ಎಂಬುದೆಲ್ಲ ಹುಚ್ಚಂತ
ಕುಡಿಯಲ್ಲೊಂದಷ್ಟು ಸೊಕ್ಕ ಸುಡೋಣ ಬಾ
ಎಮ್ಮಾರ್ಕೆ



