ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ರಚನೆ  : ಎಚ್ ಎಸ್ ಶಿವಪ್ರಕಾಶ್
ಪ್ರಕಾಶಕರು  :  ಬಿ ಹೆಚ್  ಮಲ್ಲಿಕಾರ್ಜುನ
ಆಡಳಿತಾಧಿಕಾರಿ
ಕನ್ನಡ ಪುಸ್ತಕ ಪ್ರಾಧಿಕಾರ
ಪ್ರಥಮ ಮುದ್ರಣ  : 2011
ಪುಟಗಳು : 534

ಪ್ರತಿಯೊಂದು ದೇಶವು ಆಯಾ ಪ್ರದೇಶದ ಜನ ಜೀವನದ ಸ್ಥಳಿಯ ಸಂಪ್ರದಾಯಗಳು ಅಲ್ಲಿಯ ಕಲೆಗಳ ವಸ್ತುಗಳಾಗಿ ರೂಪುಗೊಂಡಿವೆ. ಭಾರತವೂ ವಿವಿಧ ಸಂಪ್ರದಾಯಗಳ ಜನ ಜೀವನವನ್ನು ಹೊಂದಿದ್ದು ಪ್ರತಿಯೊಂದು ಭಿನ್ನ ನಡಾವಳಿಗಳನ್ನು ಸೂಚಿಸುತ್ತವೆ. ಅದರಲ್ಲೂ ಬುಡಕಟ್ಟು ಸಮುದಾಯಗಳ ಕಟ್ಟು ನಿಟ್ಟಾದ ಸಂಪ್ರದಾಯಗಳು ಅಲ್ಲಿನ ಜೀವನ ಪದ್ದತಿಯನ್ನು ಬಿಂಬಿಸುತ್ತವೆ. ಅವು ಭಾರತದ ಜನಪದ ಸಂಸ್ಕೃತಿಯ ಅಡಿಗಲ್ಲಾಗಿ ಪರಿಣಮಿಸಿವೆ. ವೈವಿಧ್ಯಮಯ ಸಂಸ್ಕೃತಿˌ ಆಚಾರ ವಿಚಾರಗಳು ಆಯಾ ಪ್ರದೇಶಗಳ ಹಿರಿಮೆಯನ್ನು ಎತ್ತಿ ಹಿಡಿಯುತ್ತವೆ.
ನಾಟಕಕಾರರಾದ ಡಾ. ಎಚ್ ಎಸ್ ಶಿವಪ್ರಕಾಶ್ ಅವರ *ಮದುವೆ ಹೆಣ್ಣು* ನಾಟಕವು ಜನಪದ ಸಂಸ್ಕೃತಿಯ ಬುಡಕಟ್ಟು ಸಮುದಾಯದ ಜೀವನ ಪದ್ದತಿಯ ಕಥೆಯನ್ನಾಧರಿಸಿ ರಚನೆಯಾಗಿದೆ. ಆ ಸಮುದಾಯದಲ್ಲಿ ಮದುವೆಯಾಗಬೇಕಾದರೆ ಅನುಸರಿಸಬಹುದಾದ ನಿಯಮವನ್ನು ನಾಟಕ ವಿವರಿಸುತ್ತದೆ. ಹರೆಯಕ್ಕೆ ಬಂದ ಯುವಕ ಯುವತಿಯರು ತಮ್ಮ ಸಂಗಾತಿಯನ್ನು ತಾವೇ ಹುಡುಕಿ ಕೊಳ್ಳುವ ಅವಕಾಶವಿದ್ದು. ಆ ಸಮಯ ಬಂದಾಗ ಯುವಕನು ತಾನು ವರಿಸುವ ವಧುವನ್ನು ಮದುವೆಗೆ ಮುಂಚೆ ಯುವಕ ನಾನು ಮದುವೆಯಾಗುವ ಹೆಣ್ಣನ್ನು ಯಾವುದೇ ಸಂದರ್ಭದಲ್ಲೂ ಎಂಥವರಿಂದಲೂ ಸಂರಕ್ಷಣೆ ಮಾಡಬಲ್ಲವನು. ಅಂತಹ ಸಾಮರ್ಥ್ಯ ಉಳ್ಳವನು ಎಂಬು ಸಾಬೀತುಪಡಿಸಲು  ಕಾಡಿನೊಳಗೆ ಒಬ್ಬಂಟಿಯಾಗಿದ್ದು ಗಂಡಾಳು ಒಬ್ಬನನ್ನು ಕೊಂದುˌ ಆತನ ರುಂಡವನ್ನು ತಂದು ಹೆಣ್ಣು ಕೊಡುವ ಮಾನವನಿಗೆ ಬಲಿ ಕೊಡಬೇಕಾಗುತ್ತದೆ. ಒಂದು ವೇಳೆ ಅವನು ಈ ಕಾರ್ಯ ಮಾಡಲಾಗದಿದ್ದರೆ ಅವಿವಾಹಿತನಾಗಿಯೇ ಉಳಿಯಬೇಕಾಗುತ್ತದೆ.
ಈ ನಿಯಮದಂತೆ ಒಮ್ಮೆ ಊರ ಒಡೆಯನ ಮಗ ತನ್ನ ತಂದೆಯಿಂದ ನಿಯಮಗಳನ್ನು ತಿಳಿದು ತಾನು ವರಿಸುವ ಹೆಣ್ಣಿಗಾಗಿ ಕಾಡಿಗೆ ಹೋಗುತ್ತಾನೆ. ಗಂಡಾಳುವಿನೊಂದಿಗೆ ಹೋರಾಡಲು ಕಾಡೆಲ್ಲಾ ಸುತ್ತಾಡುತ್ತಾನೆ. ಒಬ್ಬನನ್ನು ಕೊಂದು ಅವನ ತಲೆ ಬುರುಡೆಯನ್ನು ತರಲು ಹರಸಾಹಸ ಪಡುತ್ತಾನೆ. ವೀರಾವೇಷದಿಂದ ಹೋರಾಡಲು ಪ್ರತಿದಿನ ಗಂಡಾಳುವಿಗಾಗಿ ಹುಡುಕುತ್ತಿರುತ್ತಾನೆ. ಬಹಳ ದಿನಗಳಾದರೂ ಯಾರೊಬ್ಬರೂ ಸಿಗದಿದ್ದಾಗˌ ಇತ್ತ ಇವನು ಬರುವಿಕೆಯನ್ನೇ ಕಾಯುತ್ತಿದ್ದ ಮದುವೆಯಾಗಬೇಕಿದ್ದ ಹೆಣ್ಣು  ಮದುವೆಯಾಗುವವನ್ನು ಬಿಟ್ಟಿರಲಾರದೆ ಅವನ ಕಷ್ಟವನ್ನು ನೋಡಲಾಗದೆ. ಅವನನ್ನೇ ಹುಡುಕಿ ಕಾಡಿಗೆ ಹೊರಡುತ್ತಾಳೆ. ಆದರೆ ಬಲಿಗಾಗಿ ತಿರುಗಾಡುತ್ತಿದ್ದ ಯುವಕನಿಗೆ ಈ ವಿಷಯ ತಿಳಿಯದಾಗಿತ್ತು. ಹೇಗಾದರೂ ಮಾಡಿ ಒಬ್ಬನನ್ನು ಕೊಂದುˌ ಅವನ ರುಂಡದೊಂದಿಗೆ ಮರಳಿ ಮದುವೆಯಾಗಬೇಕು. ಎಂದು ಹಂಬಲಿಸುತ್ತಿದ್ದ ಯುವಕ ಪ್ರತಿ ದಿನ ಪ್ರತಿ ಕ್ಷಣ ಬಲಿಗಾಗಿ ಹುಡುಕುತ್ತಲೇ ಇದ್ದನು. ಕೆಲ ದಿನಗಳ ನಂತರ ಯಾರೋ ನನ್ನನ್ನು ಹಿಂಬಾಲಿಸುತ್ತಿರುವುದು ಅರಿವಿಗೆ ಬಂತು. ಯಾರವರು ಎಂದು ಬೆನ್ನಟ್ಟಿ ಹೊರಟನು.  ಯಾವನೋ ಗಂಡಿರಬೇಕು ಎಂದು ಭಾವಿಸಿ ಮರದ ಕೆಳಗೆ ಮಲಗಿದ್ದ ಅವಳ ರುಂಡವನ್ನು ಕತ್ತರಿಸಿ ರುಂಡವನ್ನು ಹಿಡಿದು ಮಾನವನ ಮನೆ ತಲುಪಿದನು. ಈತನ ಬರುವಿಕೆಯನ್ನೇ ಕಾತುರದಿಂದ ಕಾಯುತ್ತಿದ್ದತಂದೆˌ ಮಾವ ಮತ್ತು ಪೂಜಾರಿ (ಧಾರ್ಮಿಕ ವಿಧಾನಗಳಿಂದ ಮದುವೆ ಮಾಡಿಸುವವನು) ಹಾಗೂ ಊರಿನ ಮಂದಿ. ತಲೆ ಬುರುಡೆ ಹಿಡಿದು ಬಂದ ಯುವಕನ ಉತ್ಸಾಹವನ್ನು ನೋಡಿ ಅತ್ಯಾನಂದ ಪಡುತ್ತಾರೆ. ಇಡೀ ಊರನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸುತ್ತಾರೆ. ಸಡಗರದಿಂದ ಮದುವೆಯ ಸಿದ್ದತೆ ನಡೆಯುತ್ತದೆ. ಆದರೆ… ಇದನ್ನೆಲ್ಲಾ ಸೂಕ್ಷ್ಮಮತಿಯಿಂದ ಗಮನಿಸುತ್ತಿದ್ದ ಹೆಣ್ಣೊಂದು ಓಡೋಡಿ ಬಂದುˌ  ನಿಲ್ಲಿಸಿ… ನಿಲ್ಲಿಸಿ…. ನಿಲ್ಲಿಸಿ. ನಿಮ್ಮ ಮದುವೆಯ ಸಂಭ್ರಮದ ಕಾರ್ಯಗಳನ್ನು ನಿಲ್ಲಿಸಿ. ಎನ್ನುತ್ತಾಳೆ.  ನೆರೆದಿದ್ದವರೆಲ್ಲಾ ಯಾಕೆ ?  ಕಾರಣವೇನು ? ಎಂದಾಗ.  ಈಗ ಅವನು ತಂದಿರುವ ತಲೆ ಬುರುಡೆ ಬೇರೆ ಯಾರದೋ ವ್ಯಕ್ತಿಯದಲ್ಲ. ಅಂದಾಗ ಆಚ್ಚರಿಗೊಂಡ ಜನ ಮತ್ಯಾರದು ? ಎಂದು ಪ್ರಶ್ನಿಸುವರು. ಆಗ ಆ ಹೆಣ್ಣು ಆ ತಲೆ ಬುರುಡೆ ಬೇರೆ ಯಾರದೋ ಅಲ್ಲ. ಅವನು ಮದುವೆಯಾಗಬೇಕೆಂದಿದ್ದ ಹೆಣ್ಣಿನದು. ಎಂದಾಗ ಅಲ್ಲಿದ್ದವರೆಲ್ಲಾ ಒಂದು ಕ್ಷಣ ದಿಕ್ಕೇ ತೋಚದವರಂತಾಗುತ್ತಾರೆ. ಮಮ್ಮಲ ಮರುಗುತ್ತಾರೆ. ಇಂತಹ ನೀಚ ಕೆಲಸ ಮಾಡಿದ ಆ ಯುವಕನನ್ನು ಊರಿಂದ ಬಹಿಷ್ಕಾರ ಹಾಕಿ ಆಚೆ ಕಳುಹಿಸುತ್ತಾರೆ. ಊಟ ನೀರು ಕೊಡದೆ. ಯಾರೂ ಅವನನ್ನು ಮಾತನಾಡಿಸಕೂಡದು. ಒಂದು ವೇಳೆ ಯಾರಾದರೂ ಇಂತಹ ಕೆಲಸ ಮಾಡಿದರೆ ಅಂತವರನ್ನೂ ಬಹಿಷ್ಕರಿಸಬೇಕಾಗುತ್ತದೆ. ಎಂದು ಎಚ್ಚರಿಸುತ್ತಾರೆ.ಇಂತಹ ಅವಮಾನವನ್ನು ಮತ್ತು ತಾನು ಮದುವೆ ಆಗಬೇಕಿದ್ದವಳನ್ನು ಅರಿಯದೆ ಕೊಂದೆನಲ್ಲ ಕೊರಗಿನಿಂದ ಹತಾಶೆಯಿಂದ ತನ್ನ ಬರ್ಚಿಗೆ ಕೊರಳು ಕೊಟ್ಟು ಪ್ರಾಣ ಬಿಡುತ್ತಾನೆ.
ಇದಿಷ್ಟು ನಾಟಕದ ಮುಖ್ಯ ಕಥಾ ವಸ್ತುವಾಗಿದೆ. ನಾಟಕದ ಪ್ರಾರಂಭದಲ್ಲಿಯೇ ಆತ್ಮಗಳು  ಮರು ಹುಟ್ಟಿನ ರೂಪದಲ್ಲಿ ಕಾಣುತ್ತಿವೆ.  ಬೌದ್ದ ಸನ್ಯಾಸಿಗಳು ಅಲ್ಲಲ್ಲಿ ತಿರುಗಾಡುತ್ತಿರುತ್ತಾರೆ. ತಾನು ಮದುವೆಯಾಗುವ ಯುವತಿಗೆ ಯುವಕ ರಕ್ತ ಪಿಪಾಸುವಿನಂತೆ ಗೋಳಾಡುತ್ತಾ ತನ್ನ ಪೂರ್ವ ಜನ್ಮದ ಕತೆಯನ್ನು ಹೇಳಲಾರಂಭಿಸುತ್ತಾನೆ. ಇದನ್ನೆಲ್ಲಾ ಆಲಿಸಿದ ಆ ಯುವತಿ ಇದು ತನ್ನದೇ ಕಥೆ. ಅವನೇ ಇವನು. ಎಂದು ಮರು ಜನ್ಮದಲ್ಲಿ ಮದುವೆಯಾಗಲು ನಿಶ್ಚಯಿಸುತ್ತಾಳೆ.
ಪ್ರೇಕ್ಷಕನಾಗಿ ನಾಟಕ ನೋಡುವ ನನಗೆ ಅನಿಸುವುದೇನೆಂದರೆ ! ವಿಧಿಯಾಟದ ಮುಂದೆ ಏನೂ ನಡೆಯುವುದಿಲ್ಲˌ ಎಂದು ಮನವರಿಕೆಯಾಗುತ್ತದೆ. ಷೇಕ್ಷ್ಸ್ ಫಿಯರ್ ನಾಟಕ ಮ್ಯಾಕ್ ಬೆತ್ ನ ಛಾಯೆ ಇಲ್ಲಿದೆ. ಗ್ರೀಕ್ ನಾಟಕಕಾರ ಸೋಫೋಕ್ಲಿಸ್ ನ ಈಡಿಪಸ್ ನಾಟಕದ ಛಾಯೇಯೂ ಇದೆ. ಭಾರತೀಯರ ನಂಬಿಕೆಯೂ ಇದೆ ಆಗಿದೆ.
ಈಡಿಪಸ್ ನಾಟಕದಲ್ಲಿ ಮಗ ತಾಯಿಯನ್ನು ಮದುವೆಯಾದರೆˌ ಇಲ್ಲಿ ಯುವಕ ತಾನು ವರಿಸುವ ಹೆಣ್ಣನ್ನು ತನಗೆ ಅರಿವಿಲ್ಲದೆ ಆಕೆಯನ್ನೇ ಕೊಲ್ಲುತ್ತಾನೆ. ಷೇಕ್ಷ್ಸ್ ಫಿಯರ್ ನ ಮ್ಯಾಕ್ ಬೆತ್ ನಾಟಕದಲ್ಲಿ ಮ್ಯಾಕ್ ಬೆತ್ ಮತ್ತು ಲೇಡಿ ಮ್ಯಾಕ್ ಬೆತ್ ಸೇರಿ ತಮ್ಮ ರಾಜನನ್ನೇ ಕೊಲ್ಲುತ್ತಾರೆ. ಆತನ ರಕ್ತದ ಮಡುವನ್ನು ಕಂಡ ಇಬ್ಬರೂ ಅದೆ ಭ್ರಮೆಯಲ್ಲಿ ಯಾತನೆಯನ್ನು ಅನುಭವಿಸಿದರೆˌ ಇಲ್ಲಿ ಯುವಕ ಮರು ಜನ್ಮದಲ್ಲಿ ತಾನು ಮದುವೆಯಾಗಬೇಕಿದ್ದ ಯುವತಿಯನ್ನು ನೆನೆದು ಕೊರಗುತ್ತಾನೆ. ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಕಥಾ ವಸ್ತು ಹೊಂದಿರುವ ಎಚ್ ಎಸ್ ಪ್ರಕಾಶ ಅವರ ನಾಟಕ *ಮದುವೆ ಹೆಣ್ಣು* ಬಂಧದಲ್ಲಿ ಅತ್ಯಂತ ಗಟ್ಟಿತನವನ್ನು ಹೊಂದಿದೆ. ಈ ನಾಟಕವನ್ನು ಬಲು ನಾಜೂಕಿನಿಂದ ನಿರ್ಧೇಶಿಸಿದ ಅಸ್ಸಾಂ ನ ಪವಿತ್ರಾ ರಾಬಾ ಅವರ ರಂಗಭೂಮಿಯ ಜ್ಞಾನ ಎದ್ದು ಕಾಣುತ್ತದೆ.
ಸಂಗೀತ ಸಂಯೋಜನೆ ಸಂದರ್ಭಕ್ಕೆ ಅನುಸಾರವಾಗಿ  ಇನ್ನೂ ಸ್ವಲ್ಪ ಸುಧಾರಿಸಬೇಕಿತ್ತು ಅನಿಸುತ್ತದೆ. ದೃಶ್ಯ ಸಂಯೋಜನೆಯೂ ಗೊಂದಲದಲ್ಲಿತ್ತು. ಒಂದು ದೃಶ್ಯಕ್ಕೂ ಮತ್ತೊಂದು ದೃಶ್ಯಕ್ಕೂ ಬಹಳ ವಿರಾಮ ಇದ್ದಂತಿತ್ತು.  ಆದರೆ ನಟನೆˌ ವಸ್ತಾೃಲಂಕಾರ. ಬೆಳಕು ಹಾಗೂ ಪ್ರಸಾಧನಗಳು ನಾಟಕವನ್ನು ಗುರಿ ತಲುಪಿಸಿದವು. ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲವಾದವು. ರಂಗ ತರಬೇತಿ ಪಡೆಯದ ಹವ್ಯಾಸಿ ಕಲಾವಿದರಾದರೂ  ನುರಿತವರಂತೆ ಅಭಿನಯ ಮಾಡಿ ಸೈ ಎನಿಸಿಕೊಂಡರು. ನಾಟಕದ ವಸ್ತುವನ್ನು ಪ್ರೇಕ್ಷಕರ ಮನ ಮುಟ್ಟಿಸುವಲ್ಲಿ ಯಶಸ್ವಿಯಾದರು.
ನಾಟಕ ಅಸ್ಸಾಂ ನ ಬುಡಕಟ್ಟು ಜನಾಂಗದಸಂಪ್ರದಾಯದ ಭಾಗವಾಗಿದ್ದರೂˌ ಭಾಷೆ ಬೇರೆಯಾದರೂ. ಪ್ರೇಕ್ಷಕರೆಲ್ಲರೂ ಇದು ನಮ್ಮ ಜೀವನದಲ್ಲಿ ನಡೆದ ಗಂಟೆ ಇದೆ. ಪ್ರೇಕ್ಷಕರೆಲ್ಲರೂ ಈ ಕತೆ ನಮ್ಮ ಜೀವನದಲ್ಲಿ ನಡೆಯಿತೇನೋ ಎಂಬ ಭಾವನೆಯಾಯಿತು. ಪಾತ್ರಧಾರಿಗಳಾದ ವಿಜಯಪುರದ ಶ್ರೀರಂಗ ವಡೇಕರ್ ˌ ಉಡುಪಿಯ ಪುನೀತ್ˌ ಧಾರವಾಡದ ಸಾವಿತ್ರಿ ಮತ್ತು ರಂಜಿತ. ಬಳ್ಳಾರಿಯ ನಂದಕುಮಾರ ಮತ್ತು ರಂಜಿತಾ ಕೊಪ್ಪಳದ ಹುಲ್ಲೇಶ್  ಚಿತ್ರದುರ್ಗದ ಅಮಿತ್ ಇವರ ಅಭಿನಯ ಚನ್ನಾಗಿತ್ತು. ಲವಣ ಕಿಶೋರ ಅವರ ಬೆಳಕಿನ ವಿನ್ಯಾಸ ಭಾವನೆಗಳನ್ನು ಉದ್ದೀಪನಗೊಳಿಸುವಂತಿತ್ತು
ಥೇಯೇಟರ್ ಸಮುರಾಯ್ ಕಲಾ ತಂಡವು ರಾಜ್ಯದ ಪ್ರತಿಷ್ಠಿತ ರಂಗ ಶಿಕ್ಷಣ ಕೇಂದ್ರಗಳಾದˌ ನೀನಾಸಂ. ರಂಗಾಯಣ. ಶಿವಸಂಚಾರ. ಜಮುರಾ ಮುಂತಾದ ರೆಪರ್ಟಿ ಕಲಾವಿದರಂತೆ ಪ್ರಬುದ್ದತೆಯಿಂದ ಅಭಿನಯಿಸಿತು.


About The Author

Leave a Reply

You cannot copy content of this page

Scroll to Top