“ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಅನುಷ್ಠಾನ ಕಲೆಯ ನವ್ಯತೆ” ಗೊರೂರು ಅನಂತರಾಜು.
ಚಿತ್ರಕಲಾ ಸಂಗಾತಿ ಗೊರೂರು ಅನಂತರಾಜು,. ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಅನುಷ್ಠಾನ ಕಲೆಯ ನವ್ಯತೆ ಯುವ ಕಲಾವಿದ ಕೃಷ್ಣಚಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಅನುಷ್ಠಾನ ಕಲೆಯ ನವ್ಯತೆಗೊರೂರು ಅನಂತರಾಜು,. ಹಾಸನ.ಹಾಸನದ ಹಾಸನಾಂಬ ಕಲಾಕ್ಷೇತ್ರದ ಹೊರಗೆ ಯುವ ಕಲಾವಿದ ಕೃಷ್ಣಾಚಾರಿ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದಲ್ಲಿ ಪ್ರದರ್ಶಿತ ಚಿತ್ರಕಲೆ, ಅನುಷ್ಠಾನ ಕಲೆ ಯುವ ಕಲಾವಿದನ ತಾಜಾ ಪ್ರತಿಭೆ ಅನಾವರಣಗೊಳಿಸಿತು.೧೯೯೬ ನವೆಂಬರ್ ೨೭ ಜನ್ಮದಿನದ ಕೃಷ್ಣಾಚಾರಿ ಬ್ಯಾಚುಲರ್ ಆಫ್ ವಿಶುಯಲ್ ಆರ್ಟ್ ಕಲಾವ್ಯಾಸಂಗವನ್ನು ಹಾಸನದ ನಿರ್ಮಲ ಕಾಲೇಜಿನಲ್ಲಿ ಮಾಸ್ಟರ್ ಆಫ್ ವಿಶುಯಲ್ ಆರ್ಟ್ ವ್ಯಾಸಂಗವನ್ನು ಎಂ.ಎಂ.ಕೆ ಕಾಲೇಜು ಕಲ್ಬುರ್ಗಿಯಲ್ಲೂ ಮಾಡಿದ್ದಾರೆ. ೨೦೨೪ರಲ್ಲಿ ಚಾರು ಕಲಾ ಗ್ಯಾಲರಿ ಮೈಸೂರು, ಐಜಿಎನ್ ಸಿಎ ಗ್ರೂಪ್ ಶೋ ಬೆಂಗಳೂರು ಹೀಗೆ ಕೆಲವು ಗುಂಪು ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ೨೦೨೩ರಲ್ಲಿ ದೆಹಲಿಯ ಇಂಡಿಯನ್ ಆರ್ಟ್ ಆರ್ಕಿಟೆಕ್ಚರ್ ಡಿಸೈನ್ ಬೈನ್ನಲೆ, ಆಹಮದಬಾದ್‌ನ ಅಬಿರ್ ಫಸ್ಟ್ ಟೇಕ್, ೨೦೨೨ರಲ್ಲಿ ರೂಟ್ ಆಫ್ ಸಾಯಿಲ್ ಏಕವ್ಯಕ್ತಿ ಪ್ರದರ್ಶನ, ಸಿಕೆಪಿ ಬೆಂಗಳೂರು, ೨೦೨೧ರಲ್ಲಿ ಕಲ್ಬುರ್ಗಿಯಲ್ಲಿ ನಡೆದ ೫೨ನೇ ಕಲಾಮಹೋತ್ಸವ, ವಿಜಯಪುರ ಕರ್ನಾಟಕ ಲಲಿತಕಲಾ ಅಕಾಡೆಮಿ ೪೨ನೇ ವಾರ್ಷಿಕ ಕಲಾ ಪ್ರದರ್ಶನ, ಬೆಂಗಳೂರಿನ ಶಿಲ್ಪಕಲಾ ಅಕಾಡೆಮಿ ವಾರ್ಷಿಕ ಪ್ರದರ್ಶನ, ಅಮೃತ ದೃಶ್ಯಕಲಾ ಉತ್ಸವ ಪೈಂಟಿAಗ್ ಶೋ..ಹೀಗೆ ಇವರ ಪ್ರದರ್ಶನಗಳು ಸಾಕಷ್ವಟು ನಡೆದಿವೆ. ಹಲವಾರು ಕಲಾ ಕ್ಯಾಂಪ್‌ನಲ್ಲೂ ಭಾಗವಹಿಸಿದ್ದಾರೆ ಅಲ್ಲದೇ ಹತ್ತಾರು ಅವಾರ್ಡ್ ಪಡೆದಿದ್ದಾರೆ. ಹಾಸನದ ಏಕವ್ಯಕ್ತಿ ಕಲಾಪ್ರದರ್ಶನದಲ್ಲಿ ಈ ವ್ಯಕ್ತಿಯನ್ನು ಮಾತನಾಡಿಸಿದೆ. ಸಾರ್, ನನ್ನ ಕಲಾ ಅಭ್ಯಾಸವು ಮಣ್ಣು, ಪ್ರಕೃತಿ, ಪರಿಸರ ಮತ್ತು ಮಾನವ ಬದುಕಿನ ನಡುವಿನ ಆಳವಾದ ಸಂಬAಧವನ್ನು ಅನ್ವೇಷಿಸುತ್ತದೆ. ಭೂಮಿ ಕೇವಲ ನಮ್ಮ ಬದುಕಿನ ಆಧಾರವಲ್ಲ. ಅದು ಅನೇಕ ನೆನಪುಗಳು, ಅನುಭವಗಳು, ಸಂಸ್ಕೃತಿಗಳು ಮತ್ತು ಬದಲಾವಣೆಗಳನ್ನು ತನ್ನೊಳಗೆ ಸಂಗ್ರಹಿಸಿಕೊAಡ ಜೀವಂತ ಅಸ್ತಿತ್ವ. ನನ್ನ ಕಲಾಕೃತಿಗಳಲ್ಲಿ ಮಣ್ಣು, ನೈಸರ್ಗಿಕ ಬಣ್ಣಗಳು, ಬೀಜಗಳು, ಎಲೆ, ಬಿದಿರು, ಮರ ಇದ್ದಿಲು, ಟೆರಾಕೋಟಾ, ಕೈಯಿಂದ ತಯಾರಿಸಿದ ಕಾಗದ, ಖಾದಿ ಬಟ್ಟೆ.. ಹೀಗೆ ನೈಸರ್ಗಿಕ ವಸ್ತು ಬಳಸುತ್ತೇನೆ. ಈ ವಸ್ತುಗಳು ನನಗೆ ಕೇವಲ ಕಲಾ ಮಾಧ್ಯಮಗಳಲ್ಲ. ಅವು ತಮ್ಮದೇ ಆದ ಇತಿಹಾಸದ ನೆನಪು ಮತ್ತು ಸಾಂಸ್ಕೃತಿಕ ಅರ್ಥ ಹೊಂದಿರುವ ಜೀವಂತ ಅಂಶ.. ಮಣ್ಣಿನ ಪದರಗಳು, ಭೂ ದೃಶ್ಯಗಳ ಬದಲಾವಣೆ, ಜೀವ ವೈವಿಧ್ಯದ ಕಾಡು ಪರಿಸರ ನಾಶ, ನಗರೀಕರಣ, ಅತಿಯಾದ ಅಭಿವೃದ್ಧಿ, ಮಾನªನ ಪ್ರಕೃತಿಯ ಮೇಲಿನ ಹಸ್ತಕ್ಷೇಪ ಇವು ಇವರ ಕಲೆಯ ಒಳಸುಳಿ ಹುಳಿ ಪೆಟ್ಟು. ಪ್ರಕೃತಿಯೊಂದಿಗೆ ಮಾನವನ ಸಂಬAಧ ಬದಲಾಗುತ್ತಿರುವುದನ್ನು ಕಲಾಕೃತಿಗಳು ಪ್ರಶ್ನಿಸುತ್ತವೆ. ಹಾಗೆಯೇ ನಮ್ಮ ಸುತ್ತಲ ಪರಿಸರವನ್ನು ನಾವು ಮತ್ತೊಮ್ಮೆ ಮಗದೊಮ್ಮೆ ಗಮನಿಸುವಂತೆ ಸೂಚಿಸುತ್ತಲೇ ಹೊಸ ಹೊಳವು ಮನದಲ್ಲಿ ಮೂಡಿಸುತ್ತವೆ.ನೋಡಿ ಅದು ಒಂದು ಓಲ್ಡ್ ಮರದ ಖುರ್ಚಿ. ಬಹುಶ: ಅದರ ಮೇಲೆ ಇವರ ತಂದೆ ಅಥವಾ ತಾತಾ ಕೂರುತ್ತಿದ್ದಾರೇನೋ..? ಅದು ಸರಿ ಅದರ ಮೇಲೇಕೆ ಮಂಜಿನ ಗೆಡ್ಡೆ..? ಎಂದು ಕೇಳಿದರೆ ಅದಕ್ಕೊಂದು ವ್ಯಾಖ್ಯಾನ. ಅಜ್ಜ ಕೂರುತ್ತಿದ್ದ ಖುರ್ಚಿ ಕಾಲ ಕಳೆದಂತೆ ಶಿಥಿಲವಾಗುತ್ತದೆ. ಮಂಜು ಕರಗಿದಂತೆ ಅಜ್ಜನ ನೆನಪು ಕಾಲ ಕಳೆದಂತೆ ಮಾಸುತ್ತಾ ಹೋಗುತ್ತದೆ. ಅರೇ ಹೀಗೂ ಈ ಅನುಷ್ಟಾನ ಕಲೆ ಅರ್ಥೈಸುವುದೇ..? ಎಂದು ಆಶ್ಚರ್ಯಚಿಕಿತನಾದೆ. ಮತ್ತೊಂದು ಕಡೆ ಮೇಲೆ ಪ್ಲಾಸ್ಟಿಕ್ ತೆಳು ಪರದೆಯ ಉಯ್ಯಾಲೆಯಂತೆ ತೂಗುಹಾಕಿರುವಲ್ಲಿ ಅದರ ತುಂಬಾ ಪೇಪರ್ ದೋಣಿಗಳು. ನಾವು ಸಾಮಾನ್ಯವಾಗಿ ಮಳೆಗಾಲದಲ್ಲಿ ಮನೆಯ ಮುಂದೆ ಮಣ್ಣಿನ ಗುಂಡಿ ರಸ್ತೆಯಲ್ಲಿ ಅಥವಾ ಹರಿಯುವ ಚರಂಡಿ ನೀರಿನಲ್ಲಿ ಪೇಪರ್ ದೋಣಿ ಅದು ಸಾದಾ ದೋಣಿ, ಕತ್ತಿ ದೋಣಿ ಎಂದೆಲ್ಲಾ ಮಾಡಿ ಹರಿಯಲು ಬಿಟ್ಟು ಖುಷಿ ಪಡುತ್ತಿರಲಿಲ್ಲವೇ ಅದು ನೆನಪಾದರೆ ದೇಸಾಯಿ ಹೇಳಿದÀರು ಕೊಲ್ಲಿ ಯುದ್ಧದಲ್ಲಿ ಹರ್ಮುಜ್ ಜಲಸಂಧಿ ಬಂದ್ ಮಾಡಿ ಅಲ್ಲಿ ಬಾಂಬ್ ಹಾಕಿದ್ದರೆ ಪೆಟ್ರೋಲ್, ಗ್ಯಾಸ್ ಹಡಗುಗಳು ಹೀಗೆ ಮುಳುಗಿ ವುಡ್ ತೇಲುತ್ತಿತ್ತು ಪ್ರಪಂಚ ಫುಡ್ ಗಾಗಿ ಬಾಯಿ ಬಡಿದುಕೊಳ್ಳುತ್ತಿತ್ತು. ಅಣ್ಣಾ ಎತ್ತಣಿಂದ ಎತ್ತಣ ಹೋಲಿಕೆ..!ಓಕೆ ನೀವು ಏನಾದರೂ ಊಹಿಸಿಕೊಳ್ಳಿ, ಏನಾದರೂ ಹೇಳಿಕೊಳ್ಳಿ ನಿಮ್ಮ ಚಿಂತನೆ ನಿಮಗೆ ಬಿಟ್ಟಿದ್ದು ಎಂದು ಮೈಕ್ ಹಿಡಿದು ಎಲ್ಲರೂ ಶಾಂತವಾಗಿರಿ ಎನ್ನುತ್ತಿದ್ದರು ಕೃಷ್ಞಾಚಾರಿಯವರು. ಏಕೆಂದರೆ ಅಂದು ಅದೇ ಕಲಾಭವನದಲ್ಲಿ ಒಳಗೆ ವಾರ್ಷಿಕೋತ್ಸವ ಏರ್ಪಾಡು ನಡೆಯುತ್ತಿದ್ದರೆ, ಹೊರಗೆ ಮಾಸ್ತರುಗಳ ಉಭಯ ಕುಶಲೋಪರು ಮಾತುಕತೆಗಳು ನಡೆದಿದ್ದವು. ಮೈಕ್ ನಲ್ಲೇ ಜೋರಾಗಿ ಹೇಳಿ ಕೇಳಿಸಿಕೊಳ್ಳುತ್ತೇವೆ ಎಂದೆ.ನಾನು ಬಳಸುವ ನೈಸರ್ಗಿಕ ವಸ್ತುಗಳ ವಿನ್ಯಾಸ, ವಿನ್ಯಾಸದಲ್ಲಿನ ಸರಳತೆ ಮತ್ತು ಅವುಗಳ ಸಹಜ ಗುಣಗಳನ್ನು ಉಳಿಸಿಕೊಂಡು ಸಮಕಾಲೀನ ದೃಶ್ಯಭಾಷೆಯನ್ನು ರೂಪಿಸಲು ಪ್ರಯತ್ನಿಸುತ್ತೇನೆ. ನನ್ನ ಕಲಾಕೃತಿಗಳು ಒಂದು ನಿರ್ದಿಷ್ಠ ಕಥೆಯನ್ನು ಹೇಳವುದಕ್ಕಿಂತಲೂ ಪ್ರೇಕ್ಷಕರಲ್ಲಿ ನೆನಪು ಪ್ರಶ್ನೆ ಮತ್ತು ಅನುಭವಗಳನ್ನು ಹುಟ್ಟಿಸುವ ಒಂದು ಮುಕ್ತ ಸಂವಾದದAತೆ ಇರಬೇಕೆಂದು ಬಯಸುತ್ತೇನೆ..ಸರಿ, ಅಲ್ಲೊಂದು ಬಾವಿಯಲ್ಲಿ ನೀರು ಸೇದುವ ಹಗ್ಗವನ್ನು ಗುಪ್ಪೆಯಾಗಿ ಹುತ್ತದಂತೆ ಮಾಡಿ ಹಗ್ಗದ ತುದಿಗಳಿಗೆ ಕೆಂಪುಬಣ್ಣ ಹಚ್ಚಿದ್ದೀರಲ್ಲಾ ಇದರ ಕಥೆಯೇನು.. ? ಎಂದು ಕೇಳಿದೆ. ಅದು ಒಂದು ಕಡೆಯಿಂದ ನೋಡಿದರೆ ಯಾರೋ ಮುನಿವರ್ಯ ಮನೆಯಲ್ಲಿ ಧರ್ಮಪತ್ನಿಯೊಂದಿಗೆ ಮುನಿಸಿಕೊಂಡು ಕಾಡಿನಲ್ಲಿ ತಪಸ್ಸಿಗೆ ಕುಳಿತು ಕರ್ಮ ಕಳೆದುಕೊಳ್ಳುವಂತೆ ಕಂಡಿತು. ಈ ಹಗ್ಗಕ್ಕೆ ಕೊನೆ ಎಲ್ಲ ಅನಂತರಾಜು.. ಎಂದು ಚಿತ್ರಕಲಾ ಗುರು ಕಾರದಕಟ್ಟಿ ಹೇಳಿದರು. ಋಷಿ ಮೂಲ ಗುರು ಮೂಲ ಹುಡುಕಬಾರದು ತೆಪ್ಪಗಾದೆ. ನೋಡಿ ಈ ಅನುಷ್ಠಾನ ಕಲೆಗೆ ಅಕಾಡೆಮಿ ಪ್ರಶಸ್ತಿ ಬಂದಿದೆ ಎಂದು ಗುರುಗಳು ಶಿಷ್ಯನ ಕಲೆಗಾರಿಕೆ ಕಡೆ ಬೆರಳು ತೋರಿಸಿದರು. ಕಾರದಕಟ್ಟಿ ನಿರ್ಮಲ ಕಲಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಈಗ ನಿವೃತ್ತರು. ಇದು ಮಣ್ಣಿನಲ್ಲಿ ರೂಪಿಸಿದ ಅನುಷ್ಠಾನ ಕಲೆ ಎಂದರು. ಅಕಾಡೆಮಿಯೇ ಪ್ರಶಸ್ತಿ ಕೊಟ್ಟಮೇಲೆ ಕಲೆಯ ಗೂಢರ್ಥ ಕೇಳಲುಂಟೆ..? ಶಿಷ್ಯ ಮಾತು ಮುಂದುವರೆಸಿದರು. ನನ್ನ ಕಲಾ ಪ್ರಯಾಣದ ಮೂಲಕ ಭೂಮಿ ನಮ್ಮ ಹೊರಗಿನ ಆಸ್ತಿತ್ವವಲ್ಲ. ಅದು ನಮ್ಮ ಬದುಕಿನ ಅವಿಭಾಜ್ಯ ಭಾಗ ಎಂಬ ಅರಿವನ್ನು ಮೂಡಿಸುವುದು ನನ್ನ ಉದ್ದೇಶ. ಮಣ್ಣು ಮತ್ತು ಪ್ರಕೃತಿಯೊಂದಿಗೆ ನನ್ನ ನಿರಂತರ ಸಂವಾದದ ಮೂಲಕ ಕಳೆದು ಹೋಗುತ್ತಿರುವ ಪರಿಸರ, ಸಂಸ್ಕೃತಿ ನೆನಪುಗಳನ್ನು ಕಲೆಯ ಮೂಲಕ ದಾಖಲಿಸಿ ಅವುಗಳೊಂದಿಗೆ ಹೊಸ ಸಂಬAಧವನ್ನು ಕಟ್ಟಿಕೊಳ್ಳುವ ಪ್ರಯತ್ನ ಮುಂದುವರಿಸುತ್ತೇನೆ.. ಗುಡ್ ಲಕ್ ಎಂದೆ. ಬ್ಯಾಡ್ ಲಕ್ ಎಂದರೆ ಅದೇ ರೀತಿ ಮತ್ತೊಂದು ಅನುಷ್ಠಾನ ಕಲೆ ಪಕ್ಕದಲ್ಲಿತ್ತು. ಒಂದು ಹಸುವಿನ ಹೊಟ್ಟೆಯಲ್ಲಿ ಕರಗದ ಪ್ಲಾಸ್ಟಿಕ್ ಚೀಲಗಳು, ಹಾಲು ಕರೆಯುವ ಯಂತ್ರ ಗೋಮಾತೆಯ ಕೆಚ್ಚಲಿನಿಂದ ಹಾಲನ್ನು ಬಕೇಟಿಗೆ ಕರೆಯುತ್ತಿತ್ತು. ಈ ಕಲೆಯ ಕೆಳಗಿನ ದೃಶ್ಯವು ಆನೆಯ ಹೊಟ್ಟೆಯಲ್ಲಿ ಕಲ್ಲುಗಳ ರಸ್ತೆ. ಬಹುಶ: ಅದು ಎತ್ತಿನಹೊಳೆ ರಸ್ತೆ ಇರಬೇಕೆನಿಸಿತು. ಕೇಳಲಿಲ್ಲ ಅಷ್ಟೇ..! ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.



