ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಭಾಗ್ಯ ಸಂ ಕೋಟಿ ಅವರ ಕವಿತೆ “ಮೌನದೊಳಗೆ ಏನೆಲ್ಲಾ”

ಕಾವ್ಯ ಸಂಗಾತಿ ಭಾಗ್ಯ ಸಂ ಕೋಟಿ “ಮೌನದೊಳಗೆ ಏನೆಲ್ಲಾ” ಮೌನವೆಂದರೆ ಶೂನ್ಯವಲ್ಲಮನದ ಬೆಳಕು ಹೇಳದ ನಿಶಬ್ದ ನಾದಹೇಳಲಾಗದ ಆಳವಾದ ಹಾಡು ಗದ್ದಲದಲ್ಲಿ ಕಳೆದುಹೋದ ಸತ್ಯನಿಶ್ಚಲದಲ್ಲಿ ಕಾಣುವ ನಿತ್ಯ ಕಣ್ಣೀರಲ್ಲಿ ಮರೆಯಾದ ಕಥೆನಗುಮುಖದ ಹಿಂದಿನ  ವ್ಯಥೆ ಮೌನವು ಸಹನೆಯ ಸುಹಾಸನೆಸಮಾಧಾನದ ಪ್ರೇರಣೆ ಹ್ರದಯದ ಹಂಬಲಆತ್ಮದೊಳಗಿನ ನಂಬಲ ಅಹಂಕಾರ ಶಮನವಾದಾಗಆಂತರಿಕ ಶಾಂತಿ ಅರಳುವಾಗ ಮಾತು ಮೀರಿದ ಭಾಷೆಮಾನವೀಯತೆ ಉಳಿಸುವ  ಆಶೆ ಮೌನ ಅರಿತ ಮನದೊಳಗೆಜೀವನವೇ ಕಾವ್ಯವಾಯಿತು ಮೌನವೆಂದರೆ ಖಾಲಿತನವಲ್ಲಮನದ ಆಳದ  ಅಲೆ  ಮೌನದಲ್ಲಿಯೇ  ಸಾಧನೆ ಮೌನದಲ್ಲಿಯೇ ಶಿಖಿರ ಭಾಗ್ಯ  ಸಂ ಕೋಟಿಜಮಖಂಡಿ

ಭಾಗ್ಯ ಸಂ ಕೋಟಿ ಅವರ ಕವಿತೆ “ಮೌನದೊಳಗೆ ಏನೆಲ್ಲಾ” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-38 ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅರ್ಜುನ ಉವಾಚ ಅಗಸನ ಮಾತದು ರಾಮಚಿತ್ತವ ಮಲಿನಗೊಳಿಸಿತು  ಅಗಸನ ಮಾತದು ರಾಮಚಿತ್ತವ ಮಲಿನಗೊಳಿಸಿತು ಬಿದ್ದ ಕನಸದು ಬೀಳಿಸಿತು ಶ್ರೀರಾಮನನ್ನು ಆರಾಮ, ವಿರಾಮಗಳಿರದ ಚಿಂತೆಯ ಕೂಪದಲ್ಲಿ. ಪ್ರಜಾಪರ ಪುರುಷೋತ್ತಮ ಪ್ರಭುವೆನಿಸಿಕೊಂಡವನು ಪ್ರಜೆಗಳ ಯೋಗಕ್ಷೇಮ ವಿಚಾರಿಸುವುದನ್ನೂ ಮರೆತುಬಿಟ್ಟ. ಮೂರು ಹಗಲುಗಳು ಎರಡು ಇರುಳುಗಳು ಕಳೆದುಹೋದವು.ಮೂರನೆಯ ಇರುಳು ಅರಮನೆಯನ್ನು ಬಿಟ್ಟು ಹೊರಟ ಶ್ರೀರಾಮ ಪ್ರಭು ಗೂಢಚಾರನೊಬ್ಬನನ್ನು ಕಂಡು ಕೇಳಿದ ತನ್ನ ಆಳ್ವಿಕೆಯ ಪರಿಯನ್ನು. ತನ್ನನ್ನು ನಿಂದಿಸುವ, ಹೀಗಳೆಯುವ ಪ್ರಜೆಗಳು ಯಾರಾದರೂ ಇದ್ದಾರೆಯೇ? ಹಾಗೆ ಟೀಕಿಸುವವರಿದ್ದರೆ ಯಾವ ಕಾರಣಕ್ಕೆ ತೆಗಳುತ್ತಿರಬಹುದು ತನ್ನನ್ನು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿತ್ತು ಅವನಲ್ಲಿ. “ಕೊಂಕು ಕೊರತೆಗಳೇನಿವೆ ನನ್ನ ಬಗೆಗೆ ಪ್ರಜೆಗಳದ್ದು?” ಎಂದು ಕೇಳಿದ ಗೂಢಚಾರನಲ್ಲಿ.ಒಳ್ಳೆಯ ರಾಜನ ಲಕ್ಷಣವಿದು. ಅರಸನಾದವನು ತನ್ನನ್ನು ಹೊಗಳುವವರ ಮಾತನ್ನು ಎದೆಗಿಸಿಕೊಂಡರಷ್ಟೇ ಸಾಲದು. ತೆಗಳುವವರ ಕಟು ನುಡಿಗಳನ್ನೂ ತಲೆಗೇರಿಸಿಕೊಳ್ಳಬೇಕು. ಬೈದದ್ದರಲ್ಲಿ ನಿಜಾಂಶವೆಷ್ಟಿದೆ ಎನ್ನುವುದನ್ನು ವಿವೇಚಿಸಿ, ತನ್ನಲ್ಲಿರುವ ದೋಷವನ್ನು ಸರಿಪಡಿಸಿಕೊಳ್ಳಬೇಕು. ಪೂರ್ಣ ಜಗವದು ಹೊಗಳಿ ನಲಿಯುವಂತೆ ಆಡಳಿತ ನೀಡಿದ್ದ ಶ್ರೀರಾಮಚಂದ್ರನೀಗ ತನ್ನ ಆಳ್ವಿಕೆಯ ಲೋಪದೋಷಗಳನ್ನು ತಿಳಿದುಕೊಳ್ಳುವ ಮನಸ್ಸು ಮಾಡಿದ್ದ.ಗೂಢಚಾರ ವಿನಯಪೂರ್ವಕವಾಗಿ ನುಡಿದ. “ಪ್ರಭುಗಳೇ, ಸೂರ್ಯನನ್ನು ಮಂಜು ಮುಸುಕಿದ ತಕ್ಷಣವೇ ಸೂರ್ಯನ ಕಾಂತಿಯದು ಮಂಕಾಗುವುದೇ! ಸೂರ್ಯನ ಪ್ರಬಲ ಕಿರಣಗಳಿಗೆ ಮಂಜು ಮಣಿದುಹೋಗುತ್ತದೆಯಷ್ಟೇ” ಎಂಬ ಗೂಢಚಾರನ ಮಾತು ಬಲವಾದ ಸುಳುಹನ್ನು ಒದಗಿಸಿತು, ಶ್ರೀರಾಮನ ಸೂಕ್ಷö್ಮಮತಿಗೆ.ಸೂರ್ಯನನ್ನು ಮಂಜು ಮುಸುಕಿದೆಯೆಂದು ಗೂಢಚಾರ ಹೇಳಬೇಕಾದರೆ ತನ್ನ ಬಗೆಗೆ ಕೆಟ್ಟ ಮಾತು ವ್ಯಕ್ತವಾಗಿದೆ ಎನ್ನುವುದನ್ನು ಅರ್ಥೈಸಿಕೊಳ್ಳುವುದಕ್ಕೆ ಅಧಿಕ ಸಮಯ ಬೇಕಾಗಲಿಲ್ಲ ಅಯೋಧ್ಯಾಪತಿಗೆ. “ಯಾವ ಟೀಕೆಯ ಮಾತದು ಬಂದಿದೆ ನನ್ನ ಬಗೆಗೆ?” ಎಂದು ಕೇಳಿದ ಅವನನ್ನು.“ಅಂದು ಗೌತಮ ಋಷಿಯ ಪತ್ನಿ ಅಹಲ್ಯೆಗೆ ಮೋಕ್ಷದ ದಾರಿ ತೋರಿದವರು ನೀವು. ಎಂತಹ ಪರಮಪಾವನರು ನೀವು ಎನ್ನುವುದನ್ನು ಅರಿತುಕೊಳ್ಳಲು ಇನ್ನೇನು ಬೇಕು! ಮೂರ್ಖರೆನಿಸಿಕೊಂಡವರು ನುಡಿದ ಮಾತನ್ನು ನಿಮಗೆ ಹೇಳುವ ಇಚ್ಛೆಯಿಲ್ಲ ನನಗೆ. ಮನ್ನಿಸಬೇಕು ನನ್ನನ್ನು” ಎಂದು ಹೇಳಲು ಹಿಂಜರಿದ ಆ ಗೂಢಚಾರ.ಶ್ರೀರಾಮ ಕೌತುಕವದು ಕೆರಳಿತು. ಇನ್ನು ಆಲಿಸದಿರಲಾರೆ ಟೀಕೆಯ ಮಾತನ್ನು ಎಂದುಕೊAಡವನು ಗೂಢಚಾರನನ್ನು ಒತ್ತಾಯಪಡಿಸಿದ. “ಅರಸನ ಆಜ್ಞೆಯಿದು. ನುಡಿಯಲೇಬೇಕು ನೀನೀಗ. ಮುಚ್ಚಿಟ್ಟರೆ ನನ್ನ ಮೇಲಾಣೆ” ಎಂದ.ಅರಸನ ಮೇಲಿನ ಪ್ರೀತಿ ಗೂಢಚಾರನ ಬಾಯಿ ತೆರೆಸಿತು. ತಾನು ಗುಟ್ಟಾಗಿ ಕಂಡದ್ದನ್ನು, ಕೇಳಿದ್ದನ್ನು ಅರುಹತೊಡಗಿದ. “ನಿಮ್ಮ ಮಹಿಮೆಯನ್ನು ಅರಿಯುವ ಸಾಮರ್ಥ್ಯವಿರದ ಅಗಸನೊಬ್ಬ ಆಡಿದ ಮಾತಿದು. ಅವನ ಹೆಂಡತಿ ಅವನ ಮೇಲೆ ಮುನಿಸಿಕೊಂಡು ತವರುಮನೆ ಸೇರಿಕೊಂಡಿದ್ದಳು. ಅವಳ ತಂದೆ ತಾಯಿ ಮಗಳನ್ನು ಮತ್ತೆ ಗಂಡನ ಮನೆಗೆ ಬಿಟ್ಟುಹೋಗುವುದಕ್ಕಾಗಿ ಬಂದಿದ್ದರು. ಆಗ ಆ ಅಗಸ ಕೋಪದಿಂದ “ಬಿಟ್ಟುಹೋದ ಪತ್ನಿಯನ್ನು ಮತ್ತೆ ಆ ರಾಮನಂತೆ ಜೊತೆ ಸೇರಿಸಿಕೊಂಡು ಬದುಕುವವ ನಾನಲ್ಲ” ಎಂದು ಅಬ್ಬರಿಸಿದ. ಇಂಥದ್ದೊAದು ಟೀಕೆ ವ್ಯಕ್ತವಾಗಿದೆ ನಿಮ್ಮ ಬಗೆಗೆ” ಹೀಗೆ ಹೇಳಿದ ಗೂಢಚಾರ.ಅವನನ್ನು ಕಳುಹಿಸಿದ ಶ್ರೀರಾಮ ಯೋಚನಾಸಾಗರದಲ್ಲಿ ಮುಳುಗಿಹೋದ. ಬಂಧನಕ್ಕೆ ಸಿಲುಕಿದ ಮದಗಜದಂತಾಯಿತು ಅವನ ಸ್ಥಿತಿ. ಪ್ರತೀ ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತಿದ್ದ ಅವನಿಗೆ ಬಟ್ಟೆಯನ್ನೊಗೆದು ಮಲಿನವನ್ನು ಇನ್ನಿಲ್ಲವಾಗಿಸುವವನ ಮಲಿನದ ಮಾತು ಬಲವಾಗಿಯೇ ಘಾಸಿಯನ್ನುಂಟುಮಾಡಿತ್ತು. ಒಬ್ಬನ ಮಾತು ಹಲವರ ಮಾತಾಗಿರಬಹುದು. ಹಲವರ ಅಭಿಪ್ರಾಯವದು ಒಬ್ಬನ ಸಿಡಿನುಡಿಯಲ್ಲಿ ವ್ಯಕ್ತಗೊಂಡಿರಬಹುದು ಎನಿಸಿತು ಅವನಿಗೆ. ಸೀತೆಯನ್ನು ತೊರೆಯುವುದೇ ಸೂಕ್ತ ಎಂದುಕೊAಡ ಪ್ರಭು ಶ್ರೀರಾಮಚಂದ್ರ.ಸಭೆಯನ್ನು ನಡೆಸದೆ, ಯಾರಲ್ಲಿಯೂ ಬೆರೆಯದೆ, ರಾಜರಲ್ಲಿ ಮಾತನಾಡದೆ ಅನ್ಯಮನಸ್ಕನಾಗಿದ್ದ ಅಣ್ಣನ ರೀತಿ ಅಚ್ಚರಿ ಮೂಡಿಸಿತು ಅವನ ತಮ್ಮಂದಿರಲ್ಲಿ. ಅಂತಃಪುರ ಹೊಕ್ಕವರು ಕಂಡದ್ದು, ಆಲಸ್ಯದ ಭಾವದಲ್ಲಿ ಮೈಮರೆತವನಂತೆ ಕುಳಿತಿದ್ದ ಸಹೋದರ ಶ್ರೀರಾಮನನ್ನು. ಕಾಲಿಗೆರಗಿದರು ತಮ್ಮಂದಿರು. ನುಡಿಸುವ ಮನಸ್ಸಾಗಲಿಲ್ಲ.ರಾಮನೇ ಮಾತನಾಡಿದ ಅವರಲ್ಲಿ. ಮನದ ದುಗುಡವನ್ನು ಬಿಚ್ಚಿಟ್ಟ. ಅಗಸನಾಡಿದ ಮಾತನ್ನು ಅವರಿಗೆ ಅರುಹಿದ. ತನ್ನ ಸತಿ ಸೀತೆ ಪತಿವ್ರತೆ ಎನ್ನುವುದರ ಅರಿವು ತನಗಿದೆ ಎಂದ. ಪ್ರಜೆಯ ಮಾತಿಗೆ ಮನ್ನಣೆ ಕೊಟ್ಟು ಅವಳನ್ನು ತೊರೆಯುವವ ತಾನೆಂದ.ಅಣ್ಣನ ಮಾತು ಅಸಹನೀಯವಾಯಿತು ಆ ಕ್ಷಣವೇ ಅವನ ತಮ್ಮಂದಿರಿಗೆ. ಭರತನ ಕಂಠ ಗದ್ಗದಿಸಿತು ಶೋಕದಿಂದ. ಭಾರ ಹೃದಯದವನಾದ ಭರತ. “ಬುದ್ಧಿ ಇದ್ದವರು ಹಾಲು ಕೊಡುವ ಹಸುವನ್ನು ಕಾಡಿಗೆ ಬಿಡುತ್ತಾರೆಯೇ! ಅಂದು ನಿನ್ನ ಪತ್ನಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಲಾಗಿದೆ. ಆಗಲೇ ಅವಳ ಸತ್ಯ ಸಾಬೀತಾಗಿದೆ. ಹಾಗಿದ್ದೂ ಈಗ ಇಂಥ ನಿರ್ಧಾರವೇಕೆ?” ಎಂದು ಕೈಕೊಡವಿದ ಕೈಕೇಯಿಸುತ.“ಸರಿ ತಪ್ಪುಗಳ ವಿವೇಚನೆಯಿಲ್ಲದೆ ಮೂರ್ಖನಂತೆ ವರ್ತಿಸಬೇಡ” ಎಂದು ಅಣ್ಣ ರಾಮನ ಮೇಲೆ ಉರಿಉರಿದ ಶತ್ರುಘ್ನ, ಶತ್ರುವಿನಂತೆ.“ತುಂಬು ಗರ್ಭಿಣಿಯಾದವಳನ್ನು ಪ್ರೀತಿಯಿಂದ ಸಲಹಬೇಕೇ ಹೊರತು ತೊರೆಯುವುದು ಉಚಿತವಲ್ಲ” ಎಂದ ಲಕ್ಷö್ಮಣ.ತಮ್ಮಂದಿರ ನುಡಿಯ ಹಿಂದಿನ ಒಲವದು ಶ್ರೀರಾಮನಿಗೆ ಮನದಟ್ಟಾಯಿತು. ಆದರೆ ಪರಿಸ್ಥಿತಿಗೆ ಕಟ್ಟುಬಿದ್ದ ಅವನು ಸೀತೆಯನ್ನು ತ್ಯಜಿಸಿ ಬದುಕುವ ದೃಢನಿರ್ಧಾರವನ್ನು ಈಗಾಗಲೇ ಕೈಗೊಂಡಿದ್ದ. ಸೀತೆಯನ್ನು ಅರಣ್ಯದಲ್ಲಿ ಬಿಟ್ಟುಬರುವ ಹೊಣೆಯನ್ನವನು ವಹಿಸಿದ್ದು ತಮ್ಮ ಲಕ್ಷö್ಮಣನಿಗೆ.

Read Post »

ಕಾವ್ಯಯಾನ

ಪೃಥ್ವಿ ಬಸವರಾಜ್‌ ಕವಿತೆ “ಪಂಜರದ ಹಕ್ಕಿ”

ಕಾವ್ಯ ಸಂಗಾತಿ ಪೃಥ್ವಿ ಬಸವರಾಜ್‌ “ಪಂಜರದ ಹಕ್ಕಿ” ಎಲ್ಲರಂತೆ ರೆಕ್ಕೆ ಬಿಚ್ಚಿ ಆಕಾಶ ಮುಟ್ಟುವ ಕನಸು ನನಗೂ ಇತ್ತು,ಆದರೆ ನನ್ನ ದಾರಿಯ ತಿರುವುಗಳನ್ನು ನನ್ನ ಹೆಜ್ಜೆಗಳು ಬರೆಯಲಿಲ್ಲ.ನಗುವಿನ ಹಿಂದೆ ಮರೆತಿದ್ದ ಸಾವಿರ ಪ್ರಶ್ನೆಗಳು ಮಾತಾಗಲಿಲ್ಲ,ಮೌನವೇ ನನ್ನ ಭಾಷೆಯಾಗಿ ಹೃದಯದೊಳಗೆ ನೆಲೆಸಿತು. ಪಂಜರವು ಕಬ್ಬಿಣದಿಂದ ಕಟ್ಟಿದ್ದಲ್ಲ, ಸಂಪ್ರದಾಯದ ನೋಟಗಳಿಂದ ಹೆಣೆದಿತ್ತು;ರಕ್ಷಣೆ ಎಂಬ ಹೆಸರಿನಲ್ಲಿ ನನ್ನ ಕನಸುಗಳ ಕಿಟಕಿಗಳು ನಿಧಾನವಾಗಿ ಮುಚ್ಚಿಕೊಂಡವು.ನಾನು ಹಾರಲು ಬಯಸಿದ್ದು ಆಕಾಶವನ್ನು ಗೆಲ್ಲಲು ಅಲ್ಲ,ನನ್ನದೇ ದಿಕ್ಕನ್ನು ಒಮ್ಮೆ ನಾನು ಆರಿಸಿಕೊಳ್ಳಲು ಮಾತ್ರ. ಪ್ರೀತಿಯೂ ಬೇಕು… ಗೌರವವೂ ಬೇಕು… ಆದರೆ ಉಸಿರಾಡುವಷ್ಟು ಸ್ವಾತಂತ್ರ್ಯವೂ ಬೇಕು.ಹಕ್ಕಿಗೆ ಪಂಜರ ಎಷ್ಟೇ ಬಂಗಾರವಾದರೂ, ಅದು ಆಕಾಶವಾಗುವುದಿಲ್ಲ.ಒಂದು ದಿನ ನನ್ನ ರೆಕ್ಕೆಗಳ ಸದ್ದನ್ನು ಲೋಕ ಕೇಳುತ್ತದೆ—ಏಕೆಂದರೆ ಹೆಣ್ಣಿನ ಕನಸುಗಳಿಗೆ ಧರ್ಮವಿಲ್ಲ… ಅವಕ್ಕೂ ಆಕಾಶವೇ ಗಡಿ. ಪೃಥ್ವಿ ಬಸವರಾಜ್‌

ಪೃಥ್ವಿ ಬಸವರಾಜ್‌ ಕವಿತೆ “ಪಂಜರದ ಹಕ್ಕಿ” Read Post »

ಕಥಾಗುಚ್ಛ

ಕಥೆ:”ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ”ಡಾ.ವೆಂಕಟೇಶ ಪಿ.ಗುಡೆಪ್ಪನವರ

ಕಥಾ ಸಂಗಾತಿ ಡಾ.ವೆಂಕಟೇಶ ಪಿ.ಗುಡೆಪ್ಪನವರ “ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ” ಬ್ಲರ್ಬ     “ಇಲ್ಲಿ ಬರೀ ಸಿಮೆಂಟ್ ದೂಳು ಮಳೆಯಾಗಿ ಸುಳಿಯುವುದಿಲ್ಲ; ಬಡತನದ ಒರಟುತನದಲ್ಲೂ ಚಿಗುರಿದ ಶುದ್ಧ ಪ್ರೀತಿಯೊಂದು ಅಂದದ ಜೀವಗಳನ್ನೇ ಬೂದಿ ಮಾಡಿತು!”   ಹಸಿರಿನಿಂದ ಕಂಗೊಳಿಸುತ್ತಿದ್ದ ಅವಳಿ ನಗರದ ತೋಟದ ಪಕ್ಕ ಕಾರ್ಖಾನೆಯೊಂದು ತಲೆಎತ್ತಿದಾಗ, ಅಲ್ಲಿನ ಪ್ರಕೃತಿಯಷ್ಟೇ ಮನುಷ್ಯರ ಉಸಿರೂ ಕಲುಷಿತವಾಯಿತು. ಅದೇ ದೂಳಿನಲ್ಲಿ ದಿನವಿಡೀ ಬೆವರು ಹರಿಸಿ ದುಡಿಯುವ ಒರಟು ಮೈಯ ಮರಗಪ್ಪ ಮತ್ತು ಶ್ರೀಮಂತ ಸಾವುಕಾರನ ಮುದ್ದಿನ ಮಗಳು ಗೌರಮ್ಮನ ನಡುವೆ ಚಿಗುರಿದ ಮೂಕ ಪ್ರೀತಿ, ವರ್ಗ-ಜಾತಿಯ ಗೋಡೆಗಳನ್ನು ಮೀರಿ ಬೆಳೆಯುತ್ತದೆ.ಆದರೆ, ವಿಧಿಯ ಕ್ರೂರ ಆಟವೆಂಬಂತೆ, ಅದೇ ಸಿಮೆಂಟ್ ದೂಳು ನಿಧಾನವಾಗಿ ಅವರ ಶ್ವಾಸಕೋಶವನ್ನು ತಿಂದುಹಾಕಿ ಮಾರಕ ‘ಕ್ಯಾನ್ಸರ್’ ಎಂಬ ಮಹಾಮಾರಿಯಾಗಿ ಪರಿಣಮಿಸುತ್ತದೆ. ಸಮಾಜದ ಕಣ್ಣಿಗೆ ಬಿಸುಕಿಸಲ್ಪಟ್ಟ ಆ ಪ್ರೇಮಿಗಳು ಕೊನೆಗೆ ಅದೇ ಬೂದಿ ಮಳೆಯ ನಡುವೆ ಒಂದೇ ಚಿತೆಯಲ್ಲಿ ಅಮರರಾಗುತ್ತಾರೆ.ಜಾತಿ-ಅಂತಸ್ತಿನ ಅಹಂಕಾರವನ್ನು ಕರಗಿಸಿ, ಓದುಗರ ಕಣ್ಣಾಲೆಗಳನ್ನು ಒದ್ದೆ ಮಾಡುವ ಈ ಕರುಳು ಹಿಂಡುವ ಪ್ರೇಮ ಕಥೆಯೇ  ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ… ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ ಅವಳಿ ನಗರಗಳ ಅಂಚಿನಲ್ಲಿ ಹಬ್ಬಿರುವ ಆ ಮಣ್ಣಿನ ವಾಸನೆಯೇ ಹಂಗೆ, ಅದಕ್ಕೊಂದು ಒಂಥರಾ ವಿಶಿಷ್ಟವಾದ ಗತ್ತು, ಗಮ್ಮತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಆ ಗಾಳಿಯ ಹಂಗೆ ಸಂಪೂರ್ಣವಾಗಿ ಬದಲಾಗಿಹೋಗಿದೆ. ಕೆಂಪು ಮಣ್ಣಿನ ಘಮಲು ಮಾಸಿ, ಯಂತ್ರಗಳ ಗರ್ಜನೆ ಆ ಪ್ರಾಂತ್ಯವನ್ನು ಆವರಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಸತ್ಯಪ್ಪ ಸಾವುಕಾರನ ನೂರಾರು ಎಕರೆ ವಿಶಾಲವಾದ ತೋಟದ ಪಕ್ಕದಲ್ಲೇ ದೈತ್ಯಾಕಾರದಲ್ಲಿ ತಲೆಎತ್ತಿದ ಆ ಸಿಮೆಂಟ್ ಕಾರ್ಖಾನೆಯಂತೂ ಆ ಇಡೀ ಪ್ರದೇಶದ ಜೀವಸೆಲೆಯನ್ನು ಬತ್ತಿಸಿಬಿಟ್ಟಿದೆ. ಕಣ್ಣು ಹಾಯಿಸಿದಷ್ಟು ಹಸಿರಿನಿಂದ ಕಂಗೊಳಿಸುತ್ತಿದ್ದ ಬಾಳೆ ತೋಟ, ಮಾವಿನ ತೋಪು, ಸಪೋಟಾ ಗಿಡಗಳು ಈಗ ಜೀವ ಕಳೆದುಕೊಂಡು ನಿಂತಿವೆ. ಆ ತೋಟದ ಎಲೆಗಳ ಮೇಲೆಲ್ಲಾ ಹಸಿರು ಬಣ್ಣ ಮಾಸಿ, ಕಾರ್ಖಾನೆಯ ಬೂದಿ ಬಣ್ಣ ಮೈಮೇಲೆ ಅಂಟಿಕೊಂಡಿದೆ. ಇಲ್ಲಿನ ಜನರ ಬದುಕು ಕೂಡ ಆ ಸಿಮೆಂಟ್ ದೂಳಿನ ಮಳೆಯಲ್ಲಿ ನಲುಗಿ, ಬೂದಿಯಾಗಿಹೋಯ್ತು ಎಂದರೆ ತಪ್ಪಾಗಲಾರದು.ಅದೇ ತೋಟದ ಮೂಲೆಯಲ್ಲಿ, ಬಿರು ಬೇಸಿಗೆಯ ಸುಡು ಬಿಸಿಲಿಗೂ ಕ್ಯಾರೆ ಎನ್ನದೆ ಮೈಯೆಲ್ಲಾ ಕರಗಿ ಹೋದ ಬೆವರನ್ನು ಹರಿಸಿ ದುಡಿಯುವ ಒಬ್ಬ ಅಪ್ಪಟ ಒರಟು ಮನುಷ್ಯ ಮರಗಪ್ಪ. ಎದೆಗೆ ಬಿದ್ದ ದೊಡ್ಡ ದೊಡ್ಡ ಕಲ್ಲುಗಳನ್ನೂ ಹೂವಿನಂತೆ ಎತ್ತುವ ಗಟ್ಟಿಮುಟ್ಟು ಮೈಕಟ್ಟು ಅವನದು. ಕುತ್ತಿಗೆಯ ಮೇಲೆ ಬಿದ್ದ ಬಿಳಿ ಸಿಮೆಂಟ್ ದೂಳು ಅವನ ಇಡೀ ಮೈಯನ್ನು ಆವರಿಸಿಕೊಂಡು, ನೋಡಲು ಯಾವುದೋ ಶಿಲ್ಪಿಯ ಕೈಯಲ್ಲಿ ರೂಪುಗೊಂಡ ಬಿಳಿ ಕಲ್ಲಿನ ಮೂರ್ತಿಯಂತೆ ಕಾಣುತ್ತಿದ್ದ. ಬಡತನದ ರೇಖೆಗಿಂತಲೂ ಕೆಳಗೆ ಹುಟ್ಟಿ, ಹೊಟ್ಟೆಪಾಡಿಗೆ ದಿನಗೂಲಿ ನಂಬಿ ಬದುಕುತ್ತಿದ್ದರೂ, ಅವನ ಒರಟು ಎದೆಯ ಒಳಗೆ ಮೃದುವಾದ ಹೃದಯವಿತ್ತು; ಕಣ್ಣುಗಳಲ್ಲಿ ಮಾತ್ರ ಒಂಥರಾ ಜೀವನದ ಕಳೆಯಿತ್ತು. ಮುಖದ ಮೇಲಿನ ಸಿಮೆಂಟ್ ದೂಳನ್ನು ಆಗಾಗ್ಗೆ ಬಿಳಿ ಕೈಯಿಂದ ಒರೆಸಿಕೊಳ್ಳುತ್ತಾ, ಸೂರ್ಯ ಮೂಡುವುದರಿಂದ ಹಿಡಿದು ಮುಳುಗುವವರೆಗೂ ದುಡಿಯುವುದೇ ಅವನ ಏಕೈಕ ಕಾಯಕವಾಗಿತ್ತು.ಅದೇ ಸತ್ಯಪ್ಪ ಸಾವುಕಾರನ ಮುದ್ದಿನ ಹಾಗೂ ಏಕೈಕ ಮಗಳು ಗೌರಮ್ಮ. ಆ ಊರಿನ ದೊಡ್ಡ ಶ್ರೀಮಂತನ ಮಗಳಾದ್ದರಿಂದ ಅವಳಿಗೆ ಯಾವುದೇ ರೀತಿಯ ಕೊರತೆ ಇರಲಿಲ್ಲ. ಅಪ್ಪನ ಆಸ್ತಿ-ಪಾಸ್ತಿಗೆ ಇವಳೇ ಕಣ್ಣಿನುಸಿರು, ರಾಣಿ. ಮೈತುಂಬಾ ಒಡವೆಗಳನ್ನು ಹಾಕಿಕೊಳ್ಳದಿದ್ದರೂ, ಅವಳ ಸ್ವಾಭಾವಿಕ ಅಂದವೇ ಆ ಊರಿನ ಯುವಕರ ನಿದ್ದೆಗೆಡಿಸಿತ್ತು. ಸಿಂಗಾರಗೊಂಡು ಕಾಲೇಜಿಗೆ ಹೋಗುವ ವಯಸ್ಸು ಅವಳದ್ದು. ಪಟ್ಟಣದ ದೊಡ್ಡ ಕಾಲೇಜಿನಲ್ಲಿ ಸೈನ್ಸ್ ಓದುತ್ತಿದ್ದರೂ, ವಾರಾಂತ್ಯದಲ್ಲಿ ಅಥವಾ ರಜೆ ದಿನಗಳಲ್ಲಿ ತಂದೆಯ ಈ ತೋಟಕ್ಕೆ ಬಂದಾಗಲೆಲ್ಲಾ ಆ ನಿಸರ್ಗದ ಮಡಿಲಲ್ಲಿ ಪಕ್ಷಿಯಂತೆ ಉಲ್ಲಾಸದಿಂದ ಓಡಾಡುತ್ತಿದ್ದಳು. ಬಿಳಿಯ ಸಲ್ವಾರ್ ಧರಿಸಿ, ಮುಡಿಯಲ್ಲಿ ಯಾವಾಗಲೂ ತಾಜಾ ಮಲ್ಲಿಗೆ ಹೂವನ್ನು ಮುಡಿದು ಆಕೆ ನಡೆದುಬರುತ್ತಿದ್ದರೆ, ಕಳೆಗುಂದಿದ್ದ ಆ ಸಾವುಕಾರನ ತೋಟಕ್ಕೆ ಮರಳಿ ಹೊಸ ಜೀವ ಬಂದಹಾಗಾಗುತ್ತಿತ್ತು. ಅವಳ ನಗು ಆ ಬಿಸಿಲಿನ ತಾಪವನ್ನೂ ತಣಿಸುವಂತಿತ್ತು.ಅದೊಂದು ದಿನ ಮಧ್ಯಾಹ್ನದ ಹೊತ್ತು. ಬಿಸಿಲು ತನ್ನ ಪ್ರತಾಪವನ್ನು ಸಂಪೂರ್ಣವಾಗಿ ತೋರುತ್ತಿತ್ತು. ಕಾರ್ಖಾನೆಯಿಂದ ಹೊರಬರುತ್ತಿದ್ದ ದೂಳು ಗಾಳಿಯಲ್ಲಿ ತೇಲಾಡುತ್ತಾ ಎಲ್ಲರ ಮೇಲೂ ಸುರಿಯುತ್ತಿತ್ತು. ಮರಗಪ್ಪ ತೋಟದ ಒಂದು ಮೂಲೆಯಲ್ಲಿ ಮರದ ನೆರಳಿನಲ್ಲಿ ನಿಂತು ಕೆಲಸ ಮಾಡಿ ಸುಸ್ತಾಗಿ ಹೋಗಿದ್ದನು. ಗಂಟಲು ಒಣಗಿಹೋಗಿತ್ತು, ಬಾಯಾರಿಕೆ ತೀವ್ರವಾಗಿತ್ತು. ನೀರು ಕುಡಿಯಲು ತೋಟದ ಮೂಲೆಯಲ್ಲಿದ್ದ ಪುರಾತನ ಕಲ್ಲು ಬಾವಿಯ ಬಳಿಗೆ ಹೆಜ್ಜೆ ಹಾಕಿದನು. ಅದೇ ಸಮಯದಲ್ಲಿ, ಅಪ್ಪನಿಗೆ ಊಟ ತಂದಿದ್ದ ಗೌರಮ್ಮ, ಕೈಯಲ್ಲಿ ತಣ್ಣನೆಯ ನೀರಿರುವ ತಾಮ್ರದ ಬಿಂದಿಗೆ ಹಿಡಿದು ಅದೇ ಬಾವಿಯ ಕಡೆಗೆ ಬಂದಿದ್ದಳು.ಅನಿರೀಕ್ಷಿತವಾಗಿ ಇಬ್ಬರ ಕಣ್ಣುಗಳೂ ಒಂದಕ್ಕೊಂದು ನೇರವಾಗಿ ಬೆಸೆದುಕೊಂಡವು. ಆ ಕ್ಷಣದಲ್ಲಿ ಜಗತ್ತೇ ನಿಂತುಹೋದ ಅನುಭವ. ಮಾತೇ ಆಡದ ಆ ಮೂಕ ಸೆಳೆತದಲ್ಲಿ, ಇಬ್ಬರ ಮನಸ್ಸಿನ ಆಳದಲ್ಲೂ ಏನೋ ಒಂದು ಹೊಸ ಅಲೆಯೊಂದು ಹುಟ್ಟಿಕೊಂಡಿತು. ಬಡತನದ ಮುಖವಾಡ ಧರಿಸಿದ ಮರಗಪ್ಪನ ಕಣ್ಣುಗಳಲ್ಲಿ ಬೆರಗು ಮೂಡಿದರೆ, ಶ್ರೀಮಂತಿಕೆಯ ಅಹಮಿಕೆಯಿಲ್ಲದ ಗೌರಮ್ಮನ ಕಣ್ಣುಗಳಲ್ಲಿ ಮೃದುವಾದ ಅರಿವು ಮೂಡಿತು.ಗೌರಮ್ಮ ತನ್ನ ಕೈಯಲ್ಲಿದ್ದ ಬಿಂದಿಗೆಯಿಂದ ತಣ್ಣನೆಯ ನೀರನ್ನು ಒಂದು ಲೋಟಕ್ಕೆ ಸುರಿದು ಮರಗಪ್ಪನ ಕಡೆಗೆ ಚಾಚುತ್ತಾ, ತನ್ನ ಮೃದು ಧ್ವನಿಯಲ್ಲಿ ನಸುನಗುತ್ತಾ ನುಡಿದಳು: “ಏನ್ಲಾ ಮರಗಪ್ಪ, ಮೈಯೆಲ್ಲಾ ಸಿಮೆಂಟ್ ದೂಳು ತುಂಬಿಕಂಡೈತಿ, ಗಂಟಲು ಒಣಗಿರಬೇಕಲ್ಲ, ಈ ನೀರು ಕುಡಿದು ಸ್ವಲ್ಪ ತಣ್ಣಗಾಗು.”ಅವಳ ಆ ಸಣ್ಣ ಎರಡು ಮಾತುಗಳು ಮರಗಪ್ಪನ ಒಣಗಿದ ಗಂಟಲಿಗೆ ಮಾತ್ರವಲ್ಲ, ಇಡೀ ಎದೆಗೆ ತಂಪಾದ ಮಳೆಯ ಅಲೆ ಅಪ್ಪಳಿಸಿದಂತಾಯಿತು. ಕೈಲಿದ್ದ ಲೋಟವನ್ನು ನಡುಗುವ ಕೈಗಳಿಂದ ಪಡೆದುಕೊಂಡು ನೀರು ಕುಡಿದ ಮರಗಪ್ಪನಿಗೆ, ಜಗತ್ತಿನ ಸಮಸ್ತ ಸಿಹಿಯೂ ಆ ನೀರಿನಲ್ಲೇ ಇದ್ದಹಾಗೆನಿಸಿತು. ಅಂದಿನಿಂದ ಆ ಸಿಮೆಂಟ್ ದೂಳು ತುಂಬಿದ ಕಲುಷಿತ ವಾತಾವರಣದಲ್ಲೂ ಅವರಿಬ್ಬರ ಮನಸ್ಸಿನಲ್ಲಿ ಪ್ರೀತಿಯ ಅಪುರೂಪದ ಚಿಗುರು ಒಡೆಯಲು ಶುರುವಾಯಿತು.ದಿನಗಳು ಕಳೆದಂತೆ ಆ ಭೇಟಿಗಳು ನಿತ್ಯದ ಅಭ್ಯಾಸವಾಯಿತು. ಫ್ಯಾಕ್ಟರಿಯಿಂದ ದಿನನಿತ್ಯ ಹೊರಬರುವ ಆ ಕೆಟ್ಟ ವಾಸನೆ ಮತ್ತು ಬಿಳಿ ದೂಳು ಇಡೀ ಊರನ್ನೆಲ್ಲಾ ಆವರಿಸುತ್ತಿದ್ದರೂ, ಆ ದೂಳಿನ ಕಣ ಕಣದಲ್ಲೂ ಅವರಿಬ್ಬರ ಪ್ರೀತಿ ಮಾತ್ರ ಮಕರಂದದಂತೆ ಹರಡಿಕೊಳ್ಳುತ್ತಾ ಹೋಯ್ತು. ಸತ್ಯಪ್ಪ ಸಾವುಕಾರನ ಕಣ್ಣಿಗೆ ಮಣ್ಣೆರಚಿ, ಯಾರೂ ಇಲ್ಲದ ವೇಳೆಗಳಲ್ಲಿ ಆ ಬೃಹತ್ ಬಾಳೆ ತೋಟದ ದಟ್ಟ ಮರಗಳ ಮರೆಯಲ್ಲಿ ಇಬ್ಬರೂ ಗುಟ್ಟಾಗಿ ಮಾತುಕತೆ ಆಡಲಾರಂಭಿಸಿದರು. ಗೌರಮ್ಮ ತನ್ನ ಕಾಲೇಜಿನ ಕಥೆಗಳನ್ನು ಹೇಳುತ್ತಿದ್ದರೆ, ಮರಗಪ್ಪ ತಾನು ಅನುಭವಿಸುತ್ತಿದ್ದ ಕಷ್ಟಗಳನ್ನೂ, ಈ ಕಾರ್ಖಾನೆ ಬಂದು ತೋಟ ಹಾಳಾಗುತ್ತಿರುವುದರ ನೋವನ್ನೂ ಹಂಚಿಕೊಳ್ಳುತ್ತಿದ್ದನು. ಪ್ರೀತಿ ಎನ್ನುವುದು ವರ್ಗ, ಜಾತಿ, ಬಡತನ, ಸಿರಿತನದ ಗಡಿಗಳನ್ನು ಮೀರಿ ಹೇಗೆ ಬೆಳೆಯುತ್ತದೆ ಎಂಬುದಕ್ಕೆ ಇವರೇ ಸಾಕ್ಷಿಯಾದರು.ಆದರೆ, ಈ ಪ್ರೀತಿಯ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ, ಮುಳ್ಳು ಹಾಸಿದ ಹಾದಿಯಾಗಿತ್ತು. ಕಾರ್ಖಾನೆಯಿಂದ ಸದಾ ಕಾಲ ಹೊರಬರುತ್ತಿದ್ದ ಆ ವಿಷಪೂರಿತ ಅನಿಲ, ಕೆಟ್ಟ ವಾಸನೆ ಮತ್ತು ದೂಳು ಕೇವಲ ಪ್ರಕೃತಿಯ ಹಸಿರನ್ನಷ್ಟೇ ಅಲ್ಲ, ಅಲ್ಲಿನ ಜನರ ಉಸಿರಾಟವನ್ನೂ ನಿಧಾನವಾಗಿ ಹೈರಾಣು ಮಾಡುತ್ತಿತ್ತು. ಆ ಬಿಳಿ ದೂಳು ಮನುಷ್ಯರ ಒಳಹೊಕ್ಕು ಶ್ವಾಸಕೋಶವನ್ನು ಗಾಯಗೊಳಿಸುತ್ತಿತ್ತು, ಉಸಿರುಗಟ್ಟಿಸುತ್ತಿತ್ತು. ಆದರೂ, ಮರಗಪ್ಪ ಮತ್ತು ಗೌರಮ್ಮನ ಪ್ರೀತಿಯ ಉಸಿರು ಮಾತ್ರ ಆ ದೂಳಿನ ಮಧ್ಯೆಯೂ ಯಾವುದಕ್ಕೂ ಜಗ್ಗದೆ ಗಟ್ಟಿಯಾಗಿ ನಿಂತಿತ್ತು….ಅವಳಿ ನಗರಗಳ ಆ ಹವಾಮಾನ ದಿನದಿಂದ ದಿನಕ್ಕೆ ಉಸಿರುಗಟ್ಟುವಂತಾಗುತ್ತಿತ್ತು. ಸತ್ಯಪ್ಪ ಸಾವುಕಾರನ ತೋಟದ ಅಂಚಿನಲ್ಲಿ ನಿಂತು ನೋಡಿದರೆ, ಆಕಾಶದಲ್ಲಿ ಮೋಡ ಕವಿದಿದೆಯೋ ಅಥವಾ ಸಿಮೆಂಟ್ ಕಾರ್ಖಾನೆಯ ಬೂದಿ ಆವರಿಸಿದೆಯೋ ಎಂದು ಪತ್ತೆ ಹಚ್ಚುವುದೇ ಕಷ್ಟವಾಗಿತ್ತು. ಮೇಲ್ನೋಟಕ್ಕೆ ಅದೊಂದು ಹವಾಮಾನ ವೈಪರೀತ್ಯದಂತೆ ಕಂಡರೂ, ವಾಸ್ತವದಲ್ಲಿ ಅದೊಂದು ನಿಧಾನವಾಗಿ ಹರಡುತ್ತಿದ್ದ ಮಾರಕ ವಿಷವಾಗಿತ್ತು. ಆ ಬಿಳಿ ದೂಳು ದಿನವಿಡೀ ಮಳೆಯ ಹನಿಗಳಂತೆ ಇಡೀ ಊರಿನ ಮೇಲೆ ಸುರಿಯುತ್ತಿತ್ತು. ಗಿಡಮರಗಳ ಎಲೆಗಳು ತಮ್ಮ ಅಸಲಿ ಹಸಿರು ಬಣ್ಣವನ್ನು ಕಳೆದುಕೊಂಡು, ಬಿಳಿಚಿಕೊಂಡಿದ್ದವು. ಆದರೆ, ಪ್ರಕೃತಿಯ ಈ ವಿನಾಶದ ನಡುವೆಯೂ, ಮರಗಪ್ಪ ಮತ್ತು ಗೌರಮ್ಮನ ಪ್ರೀತಿ ಮಾತ್ರ ಆ ಬೂದಿಯ ಮಳೆಯಲ್ಲೂ ಗಟ್ಟಿಯಾದ ಬೇರು ಬಿಟ್ಟು ಬೆಳೆಯುತ್ತಿತ್ತು.ದಿನಗಳು ಕಳೆದಂತೆ ಅವರ ಭೇಟಿಗಳ ಕಾತರ ಹೆಚ್ಚಾಯಿತು. ಸಾವುಕಾರ ಸತ್ಯಪ್ಪ ತನ್ನ ವ್ಯಾಪಾರ ವ್ಯವಹಾರಗಳಲ್ಲಿ ಮತ್ತು ರಾಜಕೀಯ ತಿಕ್ಕಾಟಗಳಲ್ಲಿ ಸಿಲುಕಿಕೊಂಡು ದಿನದ ಹೆಚ್ಚಿನ ಸಮಯ ಮನೆಯ ಹೊರಗಿರುತ್ತಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಆ ಜೋಡಿ, ತೋಟದ ಕಡೆಗೆ ಯಾರೂ ಬಾರದ ನಿರ್ಜನ ಮೂಲೆಗಳಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾ ಕಾಲ ಕಳೆಯುತ್ತಿತ್ತು. ಮರಗಪ್ಪ ತನ್ನ ಒರಟು ಕೈಗಳಿಂದ ಗೌರಮ್ಮಳ ಕೈಯನ್ನು ಸ್ಪರ್ಶಿಸಿದಾಗ, ಆ ಕೈಗಳಲ್ಲಿನ ಬೆವರು ಮತ್ತು ಸಿಮೆಂಟ್ ದೂಳು ಕೂಡ ಅವರಿಗೆ ಒಂದು ಪವಿತ್ರವಾದ ಗಂಧದಂತೆ ಭಾಸವಾಗುತ್ತಿತ್ತು. ಗೌರಮ್ಮ ಕಾಲೇಜಿನಿಂದ ತಂದ ಪುಸ್ತಕಗಳನ್ನು ಮರಗಪ್ಪನ ಕೈಗೆ ನೀಡಿ, “ಇದನ್ನು ಓದು ಮರಗಪ್ಪ, ಅಕ್ಷರ ಕಲಿತರೆ ಈ ಜಗತ್ತನ್ನು ಬೇರೆ ರೀತಿಯಲ್ಲಿ ನೋಡಬಹುದು” ಎಂದು ಪ್ರೀತಿಯಿಂದ ಹೇಳುತ್ತಿದ್ದಳು. ಅಕ್ಷರದ ಗಂಧವೇ ಇಲ್ಲದ ಮರಗಪ್ಪ, ಗೌರಮ್ಮಳಿಗಾಗಿ ಅಕ್ಷರಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದ. ಅವಳ ಆ ಮಾತುಗಳು ಅವನಿಗೆ ಜಗತ್ತಿನ ಯಾವುದೇ ದೊಡ್ಡ ವಿಶ್ವವಿದ್ಯಾಲಯದ ಪಾಠಕ್ಕಿಂತ ಮಿಗಿಲಾಗಿ ಕಾಣುತ್ತಿದ್ದವು.ಅಂದು, ಕಾರ್ಖಾನೆಯ ಸೈರನ್ ಭೀಕರವಾಗಿ ಮೊಳಗಿತು. ಆ ಶಬ್ದಕ್ಕೆ ಬೆಚ್ಚಿಬಿದ್ದ ಪಕ್ಷಿಗಳು ಗೂಡಿಗೆ ಹಾರಿದವು. ಅದೇ ಸಮಯದಲ್ಲಿ ಬಾಳೆ ತೋಟದ ನಡುವೆ ನಿಂತಿದ್ದ ಆ ಇಬ್ಬರ ಪ್ರೇಮಿಗಳ ಲೋಕದಲ್ಲಿ ದೊಡ್ಡದೊಂದು ಆತಂಕದ ಅಲೆ ಹರಿಯಿತು. ದೂರದಿಂದ ಕೆಲಸಗಾರನೊಬ್ಬ ಕೂಗುವ ಸದ್ದು ಕೇಳಿಸಿತು. “ಸಾವುಕಾರರು ಬರ್ತಿದಾರೆ! ಜಲ್ದಿ ಬನ್ನಿ!” ಎಂಬ ಆ ಮಾತು ಕೇಳುತ್ತಿದ್ದಂತೆ ಗೌರಮ್ಮನ ಮುಖದಲ್ಲಿ ಭಯದ ಛಾಯೆ ಆವರಿಸಿತು. ಅವಳ ತಂದೆ ಸತ್ಯಪ್ಪ ಸಾವುಕಾರನ ಕೋಪದ ಬಗ್ಗೆ ಆ ಊರಿನಲ್ಲಿ ಎಲ್ಲರಿಗೂ ಗೊತ್ತಿತ್ತು. ಬಡವ-ಸಿರಿವಂತರ ನಡುವಿನ ಈ ಅಂತರ ಮುರಿದುಬಿದ್ದರೆ, ಆತ ಏನು ಬೇಕಾದರೂ ಮಾಡಲು ಹಿಂದೆಮುಂದೆ ನೋಡುವುದಿಲ್ಲ ಎಂಬ ಸತ್ಯ ಅವರಿಬ್ಬರಿಗೂ ಚೆನ್ನಾಗಿ ತಿಳಿದಿತ್ತು.ಆದರೂ ಆ ಭಯವೇ ಅವರ ಪ್ರೀತಿಗೆ ಇನ್ನಷ್ಟು ಬಲ ತುಂಬಿತು. ವಿಧಿಯ ಆಟವೇ ವಿಚಿತ್ರವಲ್ಲವೇ? ಎಷ್ಟು ದಿನಗಳವರೆಗೆ ಈ ಕದ್ದುಮುಚ್ಚಿದ ಪ್ರೀತಿ ಮುಂದುವರಿಯಲು ಸಾಧ್ಯ? ಒಂದು ದಿನ ಸತ್ಯಪ್ಪ ಸಾವುಕಾರನ ಕಣ್ಣಿಗೆ ಆ ದೃಶ್ಯ ಬಿತ್ತು. ಅಂದು ಮಧ್ಯಾಹ್ನ ಸಾವುಕಾರ ತೋಟದ ಲೆಕ್ಕಪತ್ರಗಳನ್ನು ನೋಡಲು ಅನಿರೀಕ್ಷಿತವಾಗಿ ಬಂದಿದ್ದನು. ಎಂದೂ ಇಲ್ಲದಂತೆ ಆತ ಕಾರ್ಮಿಕರು ವಿಶ್ರಾಂತಿ ಪಡೆಯುವ ಶೆಡ್‌ಗಳ ಕಡೆಗೆ ಹೆಜ್ಜೆ ಹಾಕಿದನು. ದಟ್ಟವಾದ ಬಾಳೆ ಮರಗಳ ಮರೆಯಲ್ಲಿ ಗೌರಮ್ಮ ಮರಗಪ್ಪನ ಜೊತೆ ಮಾತನಾಡಿ ನಗುತ್ತಿರುವುದನ್ನು ಆತ ದೂರದಿಂದಲೇ ಕಣ್ಣಾರೆ ಕಂಡನು. ಆ ಕ್ಷಣದಲ್ಲಿ ಸಾವುಕಾರನ ಕಣ್ಣುಗಳು ಕೆಂಪಾದವು. ರಕ್ತದ ಕುದಿ ತಲೆಗೆ ಏರಿತು. ತನ್ನ ಮರ್ಯಾದೆ, ತನ್ನ ಆಸ್ತಿ, ತನ್ನ ಇಡೀ ವಂಶದ ಪ್ರತಿಷ್ಠೆ ಆ ಬಡ ಕಾರ್ಮಿಕನ ಕಾಲ್ತುಳಿತಕ್ಕೆ ಸಿಲುಕಿತು ಎಂದು ಭಾವಿಸಿದ ಆತನ ಮತಿ ಭ್ರಮಣೆಯಾಯಿತು.“ಏಯ್ ಮರಗಪ್ಪ!” ಎಂಬ ಆ ಸಿಂಹಘರ್ಜನೆ ಇಡೀ ತೋಟದಲ್ಲೇ ಪ್ರತಿಧ್ವನಿಸಿತು. ಆ ಧ್ವನಿಯನ್ನು ಕೇಳಿದ ತಕ್ಷಣ ಮರಗಪ್ಪ ಮತ್ತು ಗೌರಮ್ಮ ಬೆಚ್ಚಿಬಿದ್ದರು. ಸಾವುಕಾರ ಕೋಪದಿಂದ ಹತ್ತಿರ ಬಂದು, ಮರಗಪ್ಪನ ಕಾಲರ್ ಹಿಡಿದು ಎಳೆದಾಡಿದನು. “ನನ್ನ ಮನೆತನದ ಮರ್ಯಾದೆಯೊಂದಿಗೆ ಆಟವಾಡ್ತಿಯೇನ್ಲಾ ಬಡಪಾಯಿ ಮೂರ್ಖ? ನಿನ್ನ ಯೋಗ್ಯತೆಗೆ ನನ್ನ ಮಗಳನ್ನು

ಕಥೆ:”ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ”ಡಾ.ವೆಂಕಟೇಶ ಪಿ.ಗುಡೆಪ್ಪನವರ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ–129 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಬೆಂಗಳೂರು ತಲುಪಿದ ಸುಮತಿ ಸುಮತಿಯ ಎರಡನೇ ಮಗಳು ತನ್ನ ದೊಡ್ಡಮ್ಮನ ಮನೆಗೆ ಹೋಗಿ ಬೆಂಗಳೂರಿನಲ್ಲಿರುವ ಮಾವನ ವಿಳಾಸವನ್ನು ಪಡೆದುಕೊಂಡು ಬಂದಳು. ಹೆಚ್ಚು ತಡ ಮಾಡಿದರೆ ಸುಮತಿಯ ಆರೋಗ್ಯದಲ್ಲಿ ಮತ್ತೆ ಇನ್ನೇನು ಏರುಪೇರು ಆಗುವುದೋ ಎಂದು ಆದಷ್ಟು ಬೇಗ ಒಂದೆರಡು ದಿನಗಳಲ್ಲಿ ಬೆಂಗಳೂರಿಗೆ ಹೋಗುವ ತಯಾರಿಯನ್ನು ಸುಮತಿಯ ಕುಟುಂಬ ಮಾಡತೊಡಗಿತು. ತನ್ನ ತಾಯಿಗೆ ಹೆಚ್ಚು ನಡೆದಾಡಲು ಕಷ್ಟವಾಗುತ್ತದೆ. ಹಾಗಾಗಿ ಊರಿಗೆ ಕರೆದುಕೊಂಡು ಹೋಗುವುದು ಕಷ್ಟ ಸಾಧ್ಯ ಎಂಬುದನ್ನು ಅರಿತ ಎರಡನೇ ಮಗಳು ಅನಾಥಾಶ್ರಮದ ಸೆಕ್ರೆಟರಿಯವರ ಅನುಮತಿಯನ್ನು ಪಡೆದು ತನ್ನ ಜೊತೆಯಲ್ಲಿ ತನ್ನ ಕೋಣೆಯಲ್ಲಿ ಇರಿಸಿಕೊಳ್ಳುವ ತೀರ್ಮಾನ ಮಾಡಿದಳು. ಮಾರನೇ ದಿನ ಎಸ್ಟೇಟಿನ ಸಾಹುಕಾರರು ತಮ್ಮ ಕಾರು ಹಾಗೂ ಚಾಲಕನನ್ನು ಅನಾಥಾಶ್ರಮಕ್ಕೆ ಕಳುಹಿಸಿ, ಸುಮತಿಯನ್ನು ಸುರಕ್ಷಿತವಾಗಿ ಬೆಂಗಳೂರಿನ ಸುಮತಿಯ ತಮ್ಮನ ಮನೆಗೆ ತಲುಪಿಸುವಂತೆ ತಿಳಿಸಿದರು. ಸುಮತಿಯ ಎರಡನೇ ಮಗಳ ಕೈಲಿ ಹೆಚ್ಚು ಹಣವಿರಲಿಲ್ಲ. ಇದನ್ನು ಅರಿತ ಆಶ್ರಮದಲ್ಲಿ ಇತರೆ ಕೆಲಸಗಳಿಗೆ ಸಹಾಯಕ್ಕೆ ಬಂದಿದ್ದ ಹುಡುಗಿ ತನ್ನ ಗೆಳತಿಯ ಸ್ಥಿತಿಯನ್ನು ಗಮನಿಸಿ, ತಾನು ಮುಂದಿನ ವರ್ಷದಲ್ಲಿ ನರ್ಸಿಂಗ್ ತರಬೇತಿಗೆ ಸೇರಬೇಕೆಂದು ಕೂಡಿಟ್ಟಿದ್ದ ಹಣವನ್ನು ತಂದು ತನ್ನ ಸ್ನೇಹಿತೆಯ ಕೈಯಲ್ಲಿ ಇಟ್ಟು…. “ನೀನು ಮೊದಲು ನಿನ್ನ ತಾಯಿಗೆ ಚಿಕಿತ್ಸೆಯನ್ನು ಕೊಡಿಸು…. ಮುಂದಿನ ವರ್ಷ ತಾನೇ ನಾನು ತರಬೇತಿಗೆ ಸೇರಿಕೊಳ್ಳುವುದು… ಅಷ್ಟರ ಒಳಗಾಗಿ ನೀನು ನಿಧಾನವಾಗಿ ಈ ಹಣವನ್ನು ನನಗೆ ಹಿಂತಿರುಗಿ ಕೊಡುವಿಯಂತೆ”….. ಎಂದು ಹೇಳಿದಳು.  ಬೆಂಗಳೂರಿಗೆ ಹೋಗಿ ಬರುವ ಖರ್ಚಿಗಾಗಿ ಹಣವನ್ನು ಹೇಗೆ ಹೊಂದಿಸುವುದು ಎಂಬ ಚಿಂತೆಯಲ್ಲಿದ್ದ ಸುಮತಿಯ ಮಗಳಿಗೆ ಆಕೆಯ ಗೆಳತಿಯೇ ಆಪದ್ಬಾಂಧವಳಾಗಿ ಬಂದು ಸಹಾಯವನ್ನು ಮಾಡಿದ್ದಳು. ತನ್ನ ಪರಿಸ್ಥಿತಿಯನ್ನು ಅರಿತು ಕಷ್ಟಕ್ಕೆ ನೆರವಾದ ಗೆಳತಿಯನ್ನು ಅಪ್ಪಿಕೊಂಡು ಆ ಹುಡುಗಿ ಗದ್ಗದಿತಳಾದಳು…. ₹ನಿನ್ನ ಈ ಉಪಕಾರವನ್ನು ನಾನು ಈ ಜನ್ಮದಲ್ಲಿ ಮರೆಯುವುದಿಲ್ಲ…. ನೀನು ಹೀಗೆ ನನಗೆ ಸಹಾಯ ಮಾಡುತ್ತೀಯಾ ಎಂದು ನಾನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ…. ನಿನ್ನ ಅಂತಃಕರಣ ದೊಡ್ದದು…..ಯಾವ ರೀತಿಯಲ್ಲಿ ನಿನಗೆ ಕೃತಜ್ಞತೆ ಸಲ್ಲಿಸಲಿ ಎಂದು ತಿಳಿಯುತ್ತಿಲ್ಲ”…ಎಂದು ಹೇಳುತ್ತಾ ಅತ್ತುಬಿಟ್ಟಳು. ತನ್ನ ಗೆಳತಿಯ ತಲೆಯನ್ನು ನೇವರಿಸುತ್ತಾ…..”ನಿನ್ನ ತಾಯಿ ಮತ್ತು ನನ್ನ ತಾಯಿ ಬೇರೆ ಬೇರೆಯಲ್ಲ…. ಇಬ್ಬರೂ ಒಂದೇ ಎಂದು ನಾನು ತಿಳಿದಿದ್ದೇನೆ… ನನ್ನ ಕೈಲಿ ಆದ ಪುಟ್ಟ ಸಹಾಯವನ್ನು ನಾನು ನಿನಗೆ ಮಾಡಿದ್ದೇನೆ….. ನೀನು ಮಾಡಬೇಕಾಗಿದ್ದು ಇನ್ನೂ ಇದೆ…. ಆದಷ್ಟು ಬೇಗ ನಿನ್ನ ತಾಯಿಗೆ ಚಿಕಿತ್ಸೆ ಕೊಡಿಸು….ಇಲ್ಲಿನ ಕೆಲಸಗಳನ್ನು ಮಾಡಲು ನಾನಿದ್ದೇನೆ….ಈಗ ಹೇಗಿದ್ದರೂ ಮಕ್ಕಳಿಗೆ ವಾರ್ಷಿಕ ಪರೀಕ್ಷೆ ಮುಗಿದಿದೆ…. ಶಾಲೆಗೆ ರಜೆಯೂ ಇದೆ….ಹಾಗಾಗಿ ನೀನು ನಿಶ್ಚಿಂತೆಯಿಂದ ಹೋಗಿ ಬಾ”…. ಎಂದು ಹೇಳುತ್ತಾ ತನ್ನ ಗೆಳತಿಗೆ ಸಾಂತ್ವನ ಹೇಳಿ ಬೀಳ್ಕೊಟ್ಟಳು. ಅಳಿಯ ಹಿಂದಿನ ರಾತ್ರಿಯೇ ಬಂದು ಸುಮತಿಯ ಜೊತೆಯೇ ಉಳಿದುಕೊಂಡಿದ್ದರಿಂದ ಬೆಳಗ್ಗೆ ಬೇಗನೇ ಬೆಂಗಳೂರಿಗೆ ಹೊರಡಲು ಅನುಕೂಲವಾಯಿತು.  ಹಿಂದಿನ ದಿನವೇ ಹಿರಿಯ ಮಗಳು, ಮೊಮ್ಮಕ್ಕಳು, ಮೂರನೇ ಮಗಳು ಸುಮತಿಯನ್ನು ನೋಡಲು ಬಂದಿದ್ದರು. ಕೊನೆಯ ಮಗಳು ಮಧ್ಯ ಪ್ರದೇಶದ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದುದರಿಂದ ಅವಳು ಬರಲು ಸಾಧ್ಯವಿರಲಿಲ್ಲ. ಹಾಗಾಗಿ ಪತ್ರದ ಮೂಲಕ ತಾಯಿಯ ಯೋಗಕ್ಷೇಮದ ವಿವರಗಳನ್ನು ತಿಳಿಸಲಾಗುತ್ತಿತ್ತು. ಅವಳು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದುದರಿಂದ ಅವಳ ವ್ಯಾಸಂಗಕ್ಕೆ ತೊಂದರೆಯಾಗದೆ ಇರಲೆಂದು ತನ್ನ ಆರೋಗ್ಯ ತೀರಾ ಹದಗಟ್ಟಿದೆ ಎಂಬ ವಿಚಾರವನ್ನು ಅವಳಿಗೆ ತಿಳಿಸುವುದು ಬೇಡ ಎಂದು ಸುಮತಿ ತಾಕೀತು ಮಾಡಿದ್ದಳು. ತಾಯಿಯ ಅಣತಿಯಂತೆ ಮಕ್ಕಳು ನಡೆದುಕೊಂಡರು. ಸುಮತಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಬೆಳಗ್ಗೆ ಕಾರು ಬರುವುದೆಂದು ಹಿಂದಿನ ದಿನ ಟೆಲಿಫೋನ್ ಮುಖಾಂತರ ಸಾಹುಕಾರರ ಜೊತೆಗೆ ಎರಡನೇ ಮಗಳು ಮಾತನಾಡಿದಾಗ ತಿಳಿಸಿದ್ದರು. ಹಾಗಾಗಿ ಬೆಳಗ್ಗೆಯೇ ಸುಮತಿ,ಅಳಿಯ ಮತ್ತು ಎರಡನೇ ಮಗಳು ತಯಾರಾದರು. ಅವರಿಗೆ ಚಿರಪರಿಚಿತನಾದ ಚಾಲಕನಾದ ಕಾರಣ ದಾರಿಯಲ್ಲಿ ಅವರಿಗೆ ಯಾವುದೇ ತೊಂದರೆಯಾಗಲಿಲ್ಲ. ಸುಮತಿಗೆ ಯಾವುದೇ ರೀತಿಯಲ್ಲೂ ಆಯಾಸವಾಗದಂತೆ ನಿಧಾನ ಗತಿಯಲ್ಲಿ ಚಾಲಕನು ಕಾರಿನ ಚಾಲನೆ ಮಾಡುತ್ತಿದ್ದ. ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟಕ್ಕೆ ಉತ್ತಮವಾದ ಹೋಟೆಲ್ ಗಳಿಗೆ ಕರೆದುಕೊಂಡು ಹೋಗಿ ಊಟ ಮಾಡಲು ಅನುಕೂಲ ಮಾಡಿಕೊಟ್ಟು ಅವರಿಗೆ ಯಾವುದೇ ತೊಂದರೆ ಆಗದಂತೆ ಕಾಳಜಿ ವಹಿಸುತ್ತಿದ್ದ. ಸುಮತಿಗೆ ಡಯಾಬಿಟಿಸ್ ಇರುವ ಕಾರಣ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕಿತ್ತು.  ಮಧ್ಯಾಹ್ನದ 3:00 ಹೊತ್ತಿಗೆ ಕಾರು ಸುಮತಿಯ ತಮ್ಮನ ಮನೆಯನ್ನು ತಲುಪಿತು. ಅಕ್ಕನ ಮಗಳು ಪತ್ರದ ಮೂಲಕ ಬರೆದು ತಿಳಿಸಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅಕ್ಕ ಬೆಂಗಳೂರಿಗೆ ಬರುವುದು ತಮ್ಮನಿಗೆ ತಿಳಿದಿತ್ತು. ಸುಮತಿಯನ್ನು ಕಂಡು ಅವಳ ತಮ್ಮನ ಕುಟುಂಬದ ಎಲ್ಲರಿಗೂ ಸಂತಸವಾಯಿತು. ತಮ್ಮನ ಹೆಂಡತಿ ಮತ್ತು ಮಕ್ಕಳು ಬಂದು ಜಾಗ್ರತೆಯಿಂದ ಸುಮತಿಯನ್ನು ಮನೆಯ ಒಳಗೆ ಕರೆದುಕೊಂಡು ಹೋದರು. ಸಕಲೇಶಪುರದಿಂದ ಸುಮತಿಯನ್ನು ಕರೆದುಕೊಂಡು ಬಂದ ಚಾಲಕನನ್ನು ಮನೆಯ ಒಳಗೆ ಕರೆದು ಆತನಿಗೆ ಕಾಫಿ ತಿಂಡಿಯನ್ನು ಕೊಟ್ಟು ಉಪಚರಿಸಿ, ಕೃತಜ್ಞತೆಗಳನ್ನು ತಿಳಿಸಿ ಕಳುಹಿಸಿಕೊಟ್ಟರು. ಸುಮತಿಯ ತಮ್ಮ ಮೊದಲೇ ಆಸ್ಪತ್ರೆಯ ಬಗ್ಗೆ ಕೂಲಂಕುಶವಾಗಿ ಕೇಳಿ ತಿಳಿದುಕೊಂಡಿದ್ದ. ಮಾರನೇ ದಿನ ಬೆಳಗ್ಗೆ ಬೇಗನೆ ಆಸ್ಪತ್ರೆಗೆ ಹೋಗುವುದು ಎಂದು ತೀರ್ಮಾನಿಸಲಾಯಿತು. ಅಂದು ರಾತ್ರಿ ತಮ್ಮನ ಹೆಂಡತಿ ಸುಮತಿಗೆ ಇಷ್ಟವಾದ ವಿಶೇಷ ಅಡಿಗೆಯನ್ನು ಮಾಡಿ ಬಡಿಸಿದಳು. ಎಲ್ಲರೂ ಸಂತೋಷದಿಂದ ರಾತ್ರಿ ಊಟ ಮಾಡಿ ಮಾತನಾಡುತ್ತಾ ಕಾಲ ಕಳೆದರು.  ಅತ್ತೆಯೆಂದರೆ ತಮ್ಮನ ಮಕ್ಕಳಿಗೆ ಅಚ್ಚುಮೆಚ್ಚು. ಅತ್ತೆ ಹೇಳುವ ಕಥೆಯು ಅವರಿಗೆ ಪ್ರಿಯ. ತಮ್ಮನ ಮಕ್ಕಳ ಜೊತೆ ಕಾಲ ಕಳೆಯುವುದೆಂದರೆ ಸುಮತಿಗೂ ಖುಷಿ. ಆದರೆ ಸುಮತಿಯ ಆರೋಗ್ಯ ಸರಿ ಇಲ್ಲದೇ ಇರುವುದನ್ನು ಅರಿತ ಮಕ್ಕಳು ಅತ್ತೆಗೆ ತೊಂದರೆ ಕೊಡುವುದು ಬೇಡವೆಂದು ಸುಮ್ಮನಾದರು. ಅಕ್ಕನ ಆರೋಗ್ಯ ತೀರಾ ಹದಗಟ್ಟಿರುವುದನ್ನು ಅರಿತ ತಮ್ಮ ಬಹಳ ಚಿಂತಿತನಾದನು. 

Read Post »

You cannot copy content of this page

Scroll to Top