“ಸಾವಿರದ ಶರಣವ್ವ ಕನ್ನಡದ ತಾಯೇ — ಪುಸ್ತಕ ವಿಶ್ಲೇಷಣೆ” ವೆಂಕಟೇಶ ಈಡಿಗರ
ಪುಸ್ತಕ ಸಂಗಾತಿ ವೆಂಕಟೇಶ ಈಡಿಗರ “ಸಾವಿರದ ಶರಣವ್ವ ಕನ್ನಡದ ತಾಯೇ“ ಅಂಕಿತ ಪ್ರಕಾಶನಪ್ರಕಾಶಕರು ಮತ್ತು ಮಾರಾಟಗಾರರು53ˌ ಶಾಮ್ ಸಿಂಗ್ ಕಾಂಪ್ಲೆಕ್ಸ್ಗಾಂಧಿ ಬಜಾರ್ .ಮುಖ್ಯ ರಸ್ತೆಬಸವನಗುಡಿ. ಬೆಂಗಳೂರುಪುಸ್ತಕದ ಬೆಲೆ — 250 ರೂ ಜನಪದವೇ ಜನಾನುರಾಗದ ಮೂಲಮಂತ್ರ ಎಂದು ನಂಬಿ ಮುನ್ನೆಡೆಯುತ್ತಿರುವ ಬಿತ್ತಿ ಬೆಳೆಸುತ್ತಿರುವ ಹಿರಿಯ ಸಾಹಿತಿˌ ನಾಟಕಕಾರರು ಹಾಗೂ ಜನಪದ ಕಲಾವಿದರಾದ ಚಂದ್ರಶೇಖರ ಕಂಬಾರರು ನೆಲಮೂಲ ಸಂಸ್ಕೃತಿಯಲ್ಲಿಯನ್ನೇ ಆಧಾರವಾಗಿಟ್ಟುಕೊಂಡು ನಾಟಕˌ ಕಾವ್ಯ. ಕಾದಂಬರಿ ಕಥೆ. ರೂಪಕ ಮುಂತಾದ ಸಾಹಿತ್ಯ ಪ್ರಕಾರದ ಕೃತಿಗಳನ್ನು ರಚಿಸಿದ್ದಾರೆ ಮತ್ತು ರಚಿಸುತ್ತಿದ್ದಾರೆ. ರಂಗಭೂಮಿˌ ಸಿನಿಮಾ ಪತ್ರಿಕೆ ಮುಂತಾದ ಹಲವು ಮಾಧ್ಯಮಗಳಲ್ಲಿ ತಮ್ಮ ಆಶಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಎಲ್ಲಾ ಕಲೆಗಳ ತಾಯಿಬೇರಿನಂತಿರುವ ಜನರ ಜೀವನ ವಿಧಾನದ ಮೂಲ ಸೆಲೆ ಜನಪದ ಚಟುವಟಿಕೆಗಳು ಜೀವನುತ್ಸಾಹದ ಸೆಲೆಗಳು ಎಂಬುದನ್ನು ಸಮಾಜಕ್ಕೆ ತಿಳಿಸುತ್ತಿದ್ದಾರೆ. ಜೀವನದ ಜೀವಾಳ ಎಂದಿದ್ದಾರೆ.ಕನ್ನಡ ರಂಗಭೂಮಿಯ ಹಿರಿಮೆ ಪಾಲುದಾರರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರು ನಾಡು ಕಂಡ ಶ್ರೇಷ್ಠ ಜನಪದ ವಿದ್ವಾಂಸರು. ನೆಲಮೂಲ ಸಂಸ್ಕೃತಿಯನ್ನು ತಮ್ಮ ಬರವಣಿಗೆಯಲ್ಲಿ ಹಿಡಿದಿಟ್ಟು ಅದರ ಸೊಗಸನ್ನು ಮುಂದಿನ ಪೀಳಿಗೆಗೆ ಧಾರೆಯಾಗಿ ಎರೆದವರು. ಜನಪದ ಸಂಗೀತˌ ಜನಪದ ಸಾಹಿತ್ಯ ಹಾಗೂ ಜನಪದ ನಾಟಕಗಳನ್ನು ರಚಿಸುವುದರಿಂದಲೇ ನಾಡಿನ ನೆಲಮೂಲ ಸಂಸ್ಕೃತಿಗೆ ಘನತೆ ತಂದವರು. ಅದರಲ್ಲೂ ನಾಟಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. ಹಿರಿಯರಿಗಾಗಿ ಅನೇಕ ಪತಿಹಾಸಿಕ. ಜನಪದ. ವಾಸ್ತವವಾದಿ ಮುಂತಾದ ವಿಷಯಗಳನ್ನಿಟ್ಟುಕೊಂಡು ನಾಟಕ ರಚಿಸಿದವರು. ಬೆಳೆಯುವ ಸಿರಿ ಮೊಳಕೆಯಲ್ಲಿ ಆಗಿರುವುದರಿಂದ *ಸಾವಿರದ ಶರಣವ್ವ ಕನ್ನಡದ ತಾಯೇ* ಎಂಬ ಏಕಾಂಕ ನಾಟಕಗಳ ಸಂಕಲವನ್ನು ಮಕ್ಕಳಿಗಾಗಿ ರಚಿಸಿದ್ದಾರೆ. ಇನ್ನೂರ ನಾಲ್ಕು ಪುಟಗಳಿರುವ ಈ ಪುಸ್ತಕವನ್ನು ಕ್ರಿ ಶ 2023 ರಲ್ಲಿ ಅಂಕಿತ ಪ್ರಕಾಶನವು ಮುದ್ರಣಗೊಳಿಸಿದೆ. ಮಕ್ಕಳಿಗಾಗಿಯೇ ರಚನೆಗೊಂಡ ಈ ಕೃತಿಯು ಹನ್ನೆರಡು ಏಕಾಂಕ ನಾಟಕಗಳನ್ನು ಒಳಗೊಂಡಿದೆ.ಮಕ್ಕಳ ರಂಗಭೂಮಿಯಲ್ಲಿ ಮಕ್ಕಳಿಗಾಗಿ ಮತ್ತು ಮಕ್ಕಳು ಪ್ರದರ್ಶನ ಮಾಡುವ ಮಕ್ಕಳ ನಾಟಕಗಳೇ ರಚನೆಯಾಗುತ್ತಿಲ್ಲ. ಮತ್ತು ರಚಿಸುವವರಿಲ್ಲ ಎಂಬ ಕೊರಗನ್ನು ಚಂದ್ರಶೇಖರ ಕಂಬಾರರು ಹೋಗಲಾಡಿಸಿದವರು. ಕಂಬಾರರೇ ರಚಿಸಿರುವ ಅಲಿಬಾಬ ಮತ್ತು 40 ಜನ ಕಳ್ಳರು. ಪುಷ್ಪರಾಣಿ ಮುಂತಾದ ಮಕ್ಕಳ ನಾಟಕಗಳಿವೆ. ಇವುಗಳ ಜೊತೆಗೆ ಮಕ್ಕಳು ಸುಲಭವಾಗಿ ಅಭಿನಯಿಸಬಹುದಾದ ಹನ್ನೆರಡು ನಾಟಕಗಳನ್ನು *ಸಾವಿರದ ಶರಣವ್ವ ಕನ್ನಡದ ತಾಯೆ* ಎಂಬ ಶೀರ್ಷಿಕೆಯ ಅಡಿಯಲ್ಲಿ ಮಕ್ಕಳ ರಂಗಭೂಮಿಗೆ ಕೊಡುಗೆ ನೀಡಿದ್ದಾರೆ. ಇವು ಜನಪದˌ ಪೌರಾಣಿಕ. ಐತಿಹಾಸಿಕ ನಾಟಕಗಳ ವಸ್ತು ಒಳಗೊಂಡವುಗಳಾಗಿವೆ.ತಂದೆ ಮಾತನ್ನು ಪರಿಪಾಲಿಸಿ ತಾಯಿಯ ಶಿರವನ್ನು ಕಡಿದ ಪರಶುರಾಮˌ ವೀರ ಮೈಯೂರˌ ಚಾಲುಕ್ಯರ ಚಕ್ರೇಶ್ವರˌ ರಾಷ್ಟೃಕೂಟ ದೊರೆ ಅಮೋಘವರ್ಷ ನೃಪತುಂಗˌ ಬಾಹುಬಲಿˌ ಕಲ್ಯಾಣದ ಕೂಗುˌ ಜಕಣಾಚಾರ್ಯˌ ಸಾಮ್ರಾಜ್ಯದ ಕತೆ. (ವಿಜಯನಗರ ಸಾಮ್ರಾಜ್ಯ ಸ್ಥಾಪನೆ)ˌ ಪುರಂದರದಾಸರುˌ ಸಾವಳಿಗಿ ಶಿವಲಿಂಗˌ ಕೆಂಪೇಗೌಡ ಹಾಗೂ ಕಿತ್ತೂರು ಚನ್ನಮ್ಮ ಎಂಬ ಹನ್ನೆರಡು ನಾಟಕಗಳು ಮಕ್ಕಳಲ್ಲಿ ಕನ್ನಡ ನಾಡಿನ ವಿವಿಧ ಕಾಲಘಟ್ಟದ ಸಾಮಾಜಿಕ. ರಾಜಕೀಯˌ ಸಂಸ್ಕೃತಿˌ ಸಂಪ್ರದಾಯ ಹಾಗೂ ಸಾಂಸ್ಕೃತಿಕ ಸ್ಥಿತಿಗತಿಯನ್ನು ತಿಳಿಸಲು ಸಹಕಾರಿಯಾಗಿವೆ.ಪಿತೃ ವಾಕ್ಯ ಪರಿಪಾಲಕನಾಗಿ ತಾಯಿಯ ಶಿರವನ್ನೇ ಕಡಿದ ಪರಶುರಾಮನ ಕತೆಯು ಕೊನೆಗೆ ತಾಯಿಯ ಜೀವವನ್ನೇ ವರವಾಗಿ ಪಡೆದು ತನ್ನ ಮಾತೃಹತ್ಯೆಯ ದೋಷದಿಂದ ಮುಕ್ತನಾಗುವ ಕತೆ ತಂದೆ ಮತ್ತು ತಾಯಿಯ ಮಹತ್ವವನ್ನು ಸಾರುತ್ತದೆ. ಕನ್ನಡದ ಮೊದಲ ಸಾಮ್ರಾಜ್ಯವೆಂದೆ ಹೇಳಿಕೊಳ್ಳಬಹುದಾದ ಕದಂಬ ವಂಶ ಸಂಸ್ಥಾಪಕನಾದ ಮೈಯೂರ ವರ್ಮ ಮೈಯೂರಶರ್ಮನಾಗಿ ಸಾಮ್ರಾಜ್ಯ ಕಟ್ಟಿದ ಕತೆಯಾಗಿದೆ. ಚಾಲುಕ್ಯ ಚಕ್ರೇಶ್ವರ ಎಂದು ಖ್ಯಾತನಾದ ಹಿಮ್ಮಡಿ ಪುಲಿಕೇಶಿಯು ದಕ್ಷಿಣ ಪಥೇಶ್ವರನಾಗಿ ಉತ್ತರದ ಹರ್ಷವರ್ಧನನ್ನು ಸೋಲಿಸಿದ ಸಾಹಸದ ಕತೆಯನ್ನು ಮನೋಜ್ಞವಾಗಿ ವಿವರಿಸಲಾಗಿದೆ. ರಾಷ್ಟೃಕೂಟರ ಸಂಸ್ಥಾಪಕ ಅಮೋಘವರ್ಷ ನೃಪತುಂಗನು ಕನ್ನಡವನ್ನು ಹೇಗೆ ಉತ್ತುಂಗ ಮಟ್ಟಕ್ಕೆ ಹೊಯ್ದನು ಎಂದು ತಿಳಿಸುತ್ತದೆ.ಭರತ ಮತ್ತು ಬಾಹುಬಲಿಯ ಕತೆಯಂತೂ ತಿಳಿಯೇ ಇದೆ . ಚಕ್ರರತ್ನದ ಮೂಲಕ ಸಹೋದರರೆಲ್ಲರನ್ನೂ ಜಯಿಸಿದ ಭರತ ತಮ್ಮ ಬಾಹುಬಲಿಯನ್ನು ಸಕಲ ಯುದ್ದದಲ್ಲೂ ಗೆಲ್ಲಲಾಗದೆ ಕೊನೆಗೆ ಅಣ್ಣ ಭರತನಿಗೆ ಸಾಮ್ರಾಜ್ಯವನ್ನೇ ಬಿಟ್ಟು ಬಾಹುಬಲಿ ಶ್ರವಣಬೆಳಗೋಳಕ್ಕೆ ಹೋದ ಕತೆಯನ್ನು ಹೇಳುತ್ತದೆ. *ಕಲ್ಯಾಣದ ಕೂಗು* ನಾಟಕವು ಹನ್ನೆರಡನೇ ಶತಮಾನದ ಕಲ್ಯಾಣದ ಕ್ರಾಂತಿಯ ವಸ್ತುವನ್ನು ಹೊಂದಿದೆ. ಅಂತರ್ಜಾತಿ ವಿವಾಹ ಮಾಡಿ ಕ್ರಿಂತಿಗೆ ಕಾರಣನಾದ ಬಸವಣ್ಣ ಮತ್ತು ಶರಣರನ್ನು ಬ್ರಾಹ್ಮಣ ಕುಲದವರು ಹೇಗೆ ಓಡಾಡಿಸಿ ಕೊಂದರು ಎಂಬ ಕತೆಯನ್ನು ವಿವರಿಸುತ್ತದೆ. ಶಿಲ್ಪಕಲೆಯ ಜತುರನಾದ ಜಕಣಾಚಾರ್ಯ ಮತ್ತು ಆತನ ಕೌಟುಂಬಿಕ ಕತೆಯನ್ನು ಅರುಹುವ *ಜಕಣಿಚಾರ್ಯ* ನಾಟಕವು ಕಲೆ ರಕ್ತಗತವಾಗಿ ಬರುತ್ತದೆ ಎಂಬುದರ ಜೊತೆಗೆ ತನ್ನ ಹೆಂಡತಿಯ ಮೇಲೆ ಸಂಶಯ ಪಟ್ಟು ಕುಟುಂಬವನ್ನೇ ತೊರೆದು ಬಂದು ಹೊಯ್ಸಳರ ಆಸ್ಥಾನದಲ್ಲಿದ್ದ ಜಕಣಾಚಾರ್ಯರು ಕೊನೆಗೆ ತಂದೆಯನ್ನು ಹುಡುಕಿಕೊಂಡು ಬಂದ ಡಂಕಣನು ತಂದೆಯನ್ನು ಮೀರಿಸುವಷ್ಟು ಶಿಲ್ಪಕಲಾ ಪಂಡಿತನಂತೆ ಬೆಳೆಯುತ್ತಾನೆ. *ಸಾಮ್ರಾಜ್ಯದ ಕತೆ* ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕಬುಕ್ಕರ ಜೀವನ ಮತ್ತು ಸಾಮ್ರಾಜ್ಯ ಕಟ್ಟಿದ ಪರಿಯನ್ನು ವಿವರಿಸುತ್ತದೆ. *ಪುರಂದರದಾಸರು* ನಾಟಕವೂ ಇದೆ ಹನ್ನೆರಡನೆಯ ಶತಮಾನದ ಕತೆಯಾಗಿದ್ದು ಶ್ರೀನಿವಾಸನಾಯಕ ಎಂಬ ಶ್ರೀಮಂತ ಬಂಗಾರದ ವ್ಯಾಪಾರಿಯೊಬ್ಬನು ಜೀವನದಲ್ಲಿ ಭಕ್ತಿಯನ್ನು ಹೊತ್ತಿಸಿಕೊಂಡು ದಾಸನಾಗುತ್ತಾನೆ. ಅವನೇ ಪುರಂದರದಾಸ. ಈ ಕತೆಯನ್ನು ವಿವರಿಸುತ್ತದೆ. ಕೆರೆಗೆ ಹಾರವಾದ ಕತೆಯಂತೆ ಬೆಳಗಾವಿಯ ಭಾಗದಲ್ಲೂ ಈ ಘಟನೆ ನಡೆಯುತ್ತದೆ. ಹಿಂದು — ಮುಸ್ಲಿಂ ಬೇಧವನ್ನು ತೊಡೆದು ಹಾಕಲು ಸೂಫಿ ಮತ್ತು ಭಕ್ತಿಪಂಥಗಳು ಉದಯವಾಗುತ್ತವೆ. ಅಂತೆಯೇ ಸಾವಳಿಗಿ ಶಿವಲಿಂಗನೂ ಸಾಮರಸ್ಯದ ಬದುಕಿಗೆ ನಾಂದಿಯಾಡುತ್ತಾನೆ.ಕನ್ನಡ ನಾಡಿನ ಹೆಮ್ಮೆಯ ಪುತ್ರ ಕೆಂಪೇಗೈಡರನ್ನು ವಿಜಯನಗರದ ಸಾಮಂತ ಅರಸರಾಗಿ ಬೆಂಗಳೂರನ್ನು ನಿರ್ಮಾಣ ಮಾಡಿದ ಹಾಗೂ ಕೆರೆ ಕಟ್ಟೆ. ಕೋಟೆ ಅರಮನೆಗಳನ್ನು ಕಟ್ಟಿ ನಾಡಿನ ಸಮೃದ್ದಿಗೆ ಕಾರಣರಾದ ಇತಿಹಾಸವನ್ನು ಈ ನಾಟಕ ತಿಳಿಸಿಕೊಡುತ್ತದೆ.ಇಲ್ಲಿರುವ ಹನ್ನೆರಡು ನಾಟಕಗಳಲ್ಲಿ ಹಲವು ಜಾನಪದ ಕತೆಯ ಮೂಲವನ್ನು ಹೊಂದಿವೆ. ಕೆಲವು ಇತಿಹಾಸದ ವಸ್ತುವನ್ನು ಹೊಂದಿದ್ದು ಮತ್ತೆ ಕೆಲವು ಪೌರಾಣಿಕ ವಿಷಯಾಧಾರಿತ ನಾಟಕಗಳಾಗಿವೆ. ಎಲ್ಲವೂ ಮಕ್ಕಳಲ್ಲಿ ನೈತಿಕ ಮೌಲ್ಯವನ್ನು ಬಿತ್ತುವಂತವುಗಳೇ ಆಗಿವೆ. ಜನಪದ ಉಳಿದರೆ ಎಲ್ಲವೂ ಉಳಿದು ಬೆಳೆಯುತ್ತದೆ ಎಂಬ ಲೇಖಕರ ಆಶಯ ಇಲ್ಲಿನ ಎಲ್ಲಾ ನಾಟಕಗಳಲ್ಲಿ ಎದ್ದು ಕಾಣುತ್ತದೆ. ನಾಟಕಗಳ ಮೂಲಕ ಮಕ್ಕಳಲ್ಲಿ ನೈತಿಕ ಪ್ರಜ್ಞೆ. ಇತಿಹಾಸದ ಜ್ಞಾನ ಹಾಗೂ ಪೌರಾಣಿಕ ಕತೆಗಳ ಅರಿವನ್ನು ಮೂಡಿಸುವ ಮೂಲಕ ವಿಚಾರವಂತರನ್ನಾಗಿ ಮಾಡಬೇಕೆಂಬ ಆಶಯ ಲೇಖಕರದ್ದಾಗಿದೆ. ಕದಂಬˌ ಚಾಲುಕ್ಯˌ ರಾಷ್ಟೃಕೂಟರು ವಿಜಯನಗರ ಸಾಮ್ರಾಜ್ಯ. ಬಸವಣ್ಣನವರ ಕಾಲˌ ಕೆಂಪೆಗೌಡ ಹಾಗೂ ಕಿತ್ತೂರರಾಣಿ ಚನ್ನಮ್ಮ ಇವರ ಕಾಲದ ಐತಿಹಾಸಿಕ ಜ್ಞಾನವನ್ನು ತಮ್ಮ ನಾಟಕಗಳ ಮೂಲಕ ತಿಳಿಸಿದ್ದಾರೆ. ಹಾಗೆಯೇ ಪುರಂದರದಾಸರು. ಬಾಹುಬಲಿ. ಸಾವಳಿಗಿ ಶಿವಲಿಂಗ ಜಕಣಾಚಾರ್ಯರಂತವರ ಜೀವನ ಸಾಧನೆಯನ್ನೂ ಕತೆಯಾಗಿ ರೂಪಾಂತರಿಸಲಾಗಿದೆ.ಇಲ್ಲಿರುವ ಹನ್ನೆರಡು ನಾಟಕಗಳೂ ಏಕಾಂಕ ನಾಟಕಗಳಾಗಿದ್ದು ಶಾಲಾ ಕಾಲೇಜುಗಳಲ್ಲಿ ಮತ್ತು ಸಣ್ಣ ಪುಟ್ಟ ತಂಡಗಳಲ್ಲಿ ನಾಟಕ ತಯಾರಿಸಿ ಪ್ರದರ್ಶಿಸಲು ಅನುಕೂಲವನ್ನು ಹೊಂದಿವೆ. ಅತ್ಯಂತ ಸರಳ ಬಂಧದಲ್ಲಿ ರಚನೆಗೊಂಡಿರುವ ನಾಟಕಗಳು ಕತೆಯಂತೆ ನಿರಂತರವಾದ ದೃಶ್ಯಗಳನ್ನು ಹೊಂದಿರುವುದರಿಂದ ಪ್ರದರ್ಶನದ ತಾಂತ್ರಿಕ ತೊಂದರೆ ಎದ್ದು ಕಾಣುತ್ತದೆ. ದೃಶ್ಯಗಳು ಒಂದರ ನಂತರ ಒಂದಾಗಿ ಬರುವುದರಿಂದ ನಟರಿಗೆ ಅಭಿನಯಿಸಲು ತೊಂದರೆಯೂ ಆಗಬಹುದು ಎನಿಸುತ್ತದೆ. ಒಂದು ದೃಶ್ಯದಲ್ಲಿರುವ ಪಾತ್ರಧಾರಿಗಳು ಮುಂದೆ ಬರುವದೃಶ್ಯದಲ್ಲಿಯೂ ಬರುವುದರಿಂದ ನಿರಂತರವಾಗಿ ಅದೆ ಪಾತ್ರಗಳು ಅಭಿನಯಿಸಲು ತೊಡಕಾಗಬಹುದು ಎನಿಸುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಬದಲಿ ಪಾತ್ರಗಳು ಬರುವಂತೆ ಇದ್ದರೆ ಮತ್ತು ಮಧ್ಯೆ ಮಧ್ಯೆ ಸಂಗೀತ ಹಾಗೂ ನಾಟಕೀಯ ಸನ್ನಿವೇಷ ಬಂದರೆ ಅಭಿನಯಿಸಲು ಅನುಕೂಲವಾಗಹುದು ಎನಿಸುತ್ತದೆ. ಆದರೆ…ˌ ಇವು ಪಠ್ಯ ನಾಟಕಗಳಾದ್ದರಿಂದ ಹೀಗಿರಬಹುದು. ಪ್ರದರ್ಶಕ್ಕೆ ಬಂದಾಗ ನಿರ್ಧೇಶಕ ಮತ್ತು ನಟರ ಜಾಣ್ಮೆಯಿಂದ ಸಂಗೀತˌ ನಾಟಕೀಯತೆ ಹಾಗೂ ನಿರಂತರತೆಯ ತಾತ್ರಿಕ ದೋಷಗಳು ನಿವಾರಣೆಯಾಗಹುದು. ಲೇಖಕರ ಮತ್ತೊಂದು ಸಂತೃಪ್ತ ಭಾವ ಯಾವುದೆಂದರೆ ಇಂತಹ ಮಹನೀಯರೆಲ್ಲಾ ಕನ್ನಡದ ನೆಲದಲ್ಲಿ ಹುಟ್ಟಿ ಬೆಳೆದು ಘನವಾದ ಸಾಧನೆ ಮಾಡಿದ್ದಾರೆಲ್ಲ ಅದೆ ಕನ್ನಡದ ಹಿರಿಮೆ ಎನ್ನುತ್ತಾರೆ. ಅಂತಹ ಹಿರಿಮೆಯುಳ್ಳ ಕನ್ನಡ ನಾಡಿನಲ್ಲಿ ಹುಟ್ಟಿರುವುದೂ ನಮ್ಮ ಪುಣ್ಯ ಎಂಬ ಭಾವನೆ ನಮ್ಮಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ತಮ್ಮ ನಾಟಕಗಳನ್ನು ಮಕ್ಕಳಿಗೆ ಅನುಕೂಲವಾಗುವಂತೆ ರಚಿಸಿದ್ದಾರೆ. ನಾಡು ನುಡಿ ನೆಲ ಜಲದ ವಿಷಯ ಹಾಗೂ ಸಂಸ್ಕೃತಿಕಯನ್ನು ಕಾಪಾಡುವ ಜವಾಬ್ದಾರಿಯನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂಬುದನ್ನು ನಾಟಕಗಳು ತಿಳಿಸುತ್ತವೆ. ನಾಡಿನ ಸಮಸ್ತ ಕಲಾವಿದರು. ನಿರ್ದೇಶಕರುˌ ನಾಟಕ ತಂಡಗಳು ಹಾಗೂ ಪೋಷಕರು ಮಕ್ಕಳು. ಶಾಲಾ ಕಾಲೇಜಿನ ಶಿಕ್ಷಕರು ಈ ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಲಿ ಎಂಬ ಆಶಯ ಈ ಲೇಖನದ್ದಾಗಿದೆ. ವೆಂಕಟೇಶ ಈಡಿಗರರಾಣೇಬೆನ್ನೂರು
“ಸಾವಿರದ ಶರಣವ್ವ ಕನ್ನಡದ ತಾಯೇ — ಪುಸ್ತಕ ವಿಶ್ಲೇಷಣೆ” ವೆಂಕಟೇಶ ಈಡಿಗರ Read Post »

