ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ
ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ
ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ Read Post »
ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ
ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ Read Post »
ವಿಶೇಷ ಸಂಗಾತಿ ಡಾ.ಸಿದ್ದರಾಮ ಹೊನ್ಕಲ್ “ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ” ಕೇಂದ್ರ ಸಾಹಿತ್ಯ ಅಕಾಡೆಮಿ,ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಡಾ.ಸಿದ್ದರಾಮ ಹೊನ್ಕಲ್ ಮಂಡಿಸಿದ ಪ್ರಬಂಧ.( ಪ್ರತಿಯೊಬ್ಬ ಕನ್ನಡ ಕವಿಯೂ ಓದಲೇಬೇಕಾದ ಬರಹ.) *ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ..*(ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ. ಪ್ರತಿಯೊಬ್ಬ ಕನ್ನಡದ ಕವಿಗಳು ಓದಬೇಕು.)ಲೇಖಕ – *ಡಾ.ಸಿದ್ಧರಾಮ ಹೊನ್ಕಲ್* ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಮುಗಿದು ಈಗಾಗಲೇ 79 ವರ್ಷಗಳ ಸಂಭ್ರಮದಲ್ಲಿ ಈ ಅಗಸ್ಟ ೧೫ ರಂದು ನಾವು ಭಾರತದ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸ್ವಾತಂತ್ರ್ಯ ಹೋರಾಟದ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆಯನ್ನು ಕುರಿತು ಮಾತಾಡಲು ನನಗೆ ಅವಕಾಶ ಒದಗಿಸಿದ್ದಕ್ಕೆ ಮೊಟ್ಟ ಮೊದಲನೆಯದಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯವರಿಗೆ ಅದರ ಎಲ್ಲ ಸದಸ್ಯರಿಗೆ ಮತ್ತು ಅಧ್ಯಕ್ಷರಿಗೆ ಗೌರವಯುತ ವಂದನೆಗಳನ್ನು ಅರ್ಪಿಸಿ ನನ್ನ ಮಾತುಗಳನ್ನು ಆರಂಭಿಸುತ್ತಿದ್ದೇನೆ.ಆ ಸ್ವಾತಂತ್ರ್ಯ ಪೂರ್ವದ ಸಂಗ್ರಾಮಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಸಾಕಷ್ಟು ಇದೆ. ನನಗೆ ಕಾವ್ಯ ಕ್ಷೇತ್ರದಿಂದ ಆದಂತಹ ಕೊಡುಗೆಯನ್ನು ಕುರಿತು ವಿಷಯ ಕೊಟ್ಟಿರುವದರಿಂದ ಹಾಗೂ ಹದಿನೈದು ನಿಮಿಷಗಳ ಸಮಯದ ಮಿತಿಯಲ್ಲಿ ಪ್ರಬಂಧ ಮಂಡಿಸಲು ಹೇಳಿರುವದರಿಂದ ಆ ನಿಗದಿತ ಅವಧಿಗೆ ಸಾಧ್ಯವಾಗುವಷ್ಟು ಇಲ್ಲಿ ನಾನು ನನಗೆ ದೊರೆತ ಆಕರಗಳ, ಕವಿತೆಗಳ ಹಿನ್ನೆಲೆಯಲ್ಲಿ ಪ್ರಾಮಾಣಿಕವಾಗಿ ನನ್ನ ಅನಿಸಿಕೆ ಹಂಚಿಕೊಳ್ಳಲು ಪ್ರಯತ್ನಿಸುವೆ ಎಂದು ಈ ಮೂಲಕ ಭರವಸೆ ನೀಡುತ್ತೇನೆ.ನಮ್ಮ ಈ ಭಾರತದ ಬಹುತೇಕ ಜನತೆಗೆ ಒಂದು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತ್ರ ಗೊತ್ತು.ಅದು 1947 ಅಗಸ್ಟ್ ಹದಿನೈದರಂದು ದೊರೆತ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತ್ರ.ಆದರೆ ನಾನು ಬಂದಿರುವ ಹೈದರಾಬಾದ್ ಕರ್ನಾಟಕದ ಅಂದರೆ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶದವರಾದ ನಮಗೆ ಈ ಸ್ವಾತಂತ್ರ್ಯ ಒಂದು ವರ್ಷ ಒಂದು ತಿಂಗಳು ತಡವಾಗಿ ದೊರೆಯಿತು.ಇಡೀ ದೇಶ ಸ್ವಾತಂತ್ರ್ಯ ದ ಸಂಭ್ರಮದಲ್ಲಿ ಪುಳಕಗೊಂಡು ಜೈ ಭಾರತಮಾತೆ..ಎಂದು ಹರ್ಷದಿಂದ ಉದ್ಗಾರ ಮಾಡುವಾಗ ನಾವು ನಮ್ಮ ಪ್ರದೇಶದ ಜನ ಅಖಂಡ ಭಾರತದ ಒಕ್ಕೂಟದಲ್ಲಿ ಸೇರದೇ ಹೊರಗೆ ಉಳಿದ ಹೈದರಾಬಾದ್ ನ ನಿಜಾಂನ ಹಾಗೂ ಆತನ ಸೇನಾಧಿಪತಿ ಕಾಸಿಂ ರಜ್ವಿ ಕಟ್ಟಿದ ಖಾಸಗಿ ಸೈನ್ಯ ರಜಾಕಾರರ ಬೂಟು ಗಾಲಿನಿಂದ ಒದೆ ತಿನ್ನುತ್ತಾ,ಅವರ ದೌರ್ಜನ್ಯ,ಹಿಂಸೆ ಅತ್ಯಾಚಾರಕ್ಕೆ ಒಳಗಾಗಿ ದೆಹಲಿಯ ಕೆಂಪು ಕೋಟೆಯ ಮೇಲೆ ಹಾರಿದ ತಿರಂಗಿ ಧ್ವಜ ದ ಸಂಭ್ರಮ ನೋಡಲಾಗದೇ; ಅದನ್ನು ಕಲ್ಪಿಸಿಕೊಳ್ಳಲು ಸಹ ಭಯ ಭೀತರಾದಂತಹ ಪರಸ್ಥಿತಿಯಲ್ಲಿ ನಲುಗಿ ಹೋಗಿದ್ದರು. ಆ ಹಿನ್ನೆಲೆಯಲ್ಲಿ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕರೆ, ನಿಜಾಂ ಸರ್ಕಾರದ ಅಡಿಯಲ್ಲಿದ್ದ ಹೈದರಾಬಾದ್ ಕರ್ನಾಟಕದ ನಮಗೆ ಮತ್ತೋಂದು ಬಹು ಭೀಕರ ಹೋರಾಟ ಮಾಡಿದ ನಂತರ ಒಂದು ವರ್ಷ ಒಂದು ತಿಂಗಳು ತಡವಾಗಿ ಸ್ವಾತಂತ್ರ್ಯ ಸಿಕ್ಕಿತು.ಆ ಹಿನ್ನೆಲೆಯಲ್ಲಿ ನಾನು ಈ ಸಂದರ್ಭದಲ್ಲಿ ಎರಡು ಹೋರಾಟಗಳ ಕುರಿತು ನಮ್ಮ ಕನ್ನಡ ಕಾವ್ಯವನ್ನು ಗಮನಿಸಿ ಕಟ್ಟಿಕೊಡಲು ಯತ್ನಿಸುತ್ತೇನೆ.ಯಾವುದೇ ಕಾಲಮಾನದಲ್ಲಿ ಲೇಖಕ,ಕವಿ,ಕಲಾವಿದ ನಾದವನು ಆ ಒಂದು ಕಾಲಮಾನದ ಸಾಕ್ಷಿ ಪ್ರಜ್ಞೆ ಯಾಗಿರುತ್ತಾನೆ. ತನ್ನ ಕಾಲಮಾನದಲ್ಲಿ ನಡೆದ ಯಾವುದೇ ವಿದ್ಯಮಾನಗಳಿಗೆ ಸ್ಪಂದಿಸುತ್ತಾನೆ.ಕವಿ ಲೇಖಕ ಬರಹಗಾರ ಒಟ್ಟಾರೆ ಅಕ್ಷರಬಲ್ಲ ಸೃಜನಜನಶೀಲ ವ್ಯಕ್ತಿ ಕಲಾವಿದ ಹೋರಾಟಗಾರ ಇವರೆಲ್ಲರೂ ಆ ಸಂದರ್ಭದಲ್ಲಿ ಸ್ಪಂದಿಸದೇ ಹೋದರೆ ಆತ ಸಮಾಜಿಮುಖಿ, ಜನಮುಖಿ ಕವಿಯಾಗಲಾರ.ಹೋರಾಟಗಾರನಾಗಲಾರ.ಕಲಾವಿದ ಆಗಲಾರ. ಸಾಮಾನ್ಯ ಜನತೆ ಒಬ್ಬ ಅಥವಾ ಒಂದು ಸಮೂಹ ನಾಯಕತ್ವದಲ್ಲಿ ಯಾವುದೇ ಒಂದು ಹೋರಾಟವನ್ನು ರೂಪಿಸಿದವರ ಜೊತೆ ಆ ಹೋರಾಟಕ್ಕೆ ಕೈ ಜೋಡಿಸುತ್ತಾರೆ. ಆಗ ಯಾವುದೇ ಒಂದು ಹೋರಾಟಕ್ಕೆ ಬೇಕಾದ ಹೋರಾಟದ ಹಾಡುಗಳು,ಕವಿತೆಗಳು,ಮಾತುಗಳು,ಭಿತ್ತಿ ಚಿತ್ರಗಳು,ಒಟ್ಟಾರೆ ಆಗ ಸೃಷ್ಠಿಯಾದ ಸಾಹಿತ್ಯ ಬಹುಮುಖ್ಯ ವಾಗಿ ಜನಮನ ಸೆಳೆದು ಹೋರಾಟದ ಕಡೆಗೆ ಜನರನ್ನು ಆಕರ್ಷಿಸುವ ಹಾಗೂ ತಮ್ಮ ಆ ಹೋರಾಟದ ಹಿಂದಿನ ಕೈಗೆ ಹಾಕಿದ ಬೇಡಿಯನ್ನು, ಬಂಧನವನ್ನು ಕಳಚಿಕೊಳ್ಳುವ ಆ ಸಂದರ್ಭದಲ್ಲಿ ಆಗಬೇಕಾದ ದೈಹಿಕ ಮಾನಸಿಕ ಶಿದ್ಧತೆಗೆ ಒಂದು ಪ್ರೇರಣೆಯನ್ನು ಖಂಡಿತಾ ಸಾಹಿತ್ಯ ಕ್ಷೇತ್ರ ಒದಗಿಸುತ್ತದೆ.ಆ ಎಲ್ಲಾ ಹಿನ್ನೆಲೆಯಲ್ಲಿ ಈಗ ಮೊದಲನೆದಾಗಿ ನಾನು ಅಗಷ್ಟ ೧೫-೧೯೪೭ ರಲ್ಲಿ ದೊರೆತ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮ ಕನ್ನಡದ ಕವಿಗಳ ಕಾವ್ಯದ ಕೊಡುಗೆ ಹಿನ್ನೆಲೆಯಲ್ಲಿ ಚರ್ಚಿಸುತ್ತೇನೆ.*ನಮ್ಮದಿ ನಮ್ಮದಿ ಭರತಭೂಮಿ ಹೆರವರ ನಂಬದಲೇ**ಜಗದೀಶ್ವರಂ ತಾನೇ ಧರಸಿ ನಾನಾವತಾರಗಳನು**ಕರೆವ ಸರ್ವಸ್ವಮಂ ಧರೆಯ ಸಂರಕ್ಷಿಸುವ ತೆರೆವ**ಕಲಿಸಿದ ಪೂರ್ವ ಪಾಠಶಾಲೆ…*ಜೈ ಭಾರತ ರಾಷ್ಟ್ರಗೀತೆಯ ಕೃತಿಯಲ್ಲಿರುವ ಈ ಕವಿತೆಯ,ಹಾಡಿನ ಮೂಲಕ ೧೯ ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ರಾಷ್ಟ್ರಾಭಿಮಾನಿ ಕವಿ ಎಂದೇ ಖ್ಯಾತರಾಗಿರುವ *ಶಾಂತಕವಿ* ಎಂಬ ಕಾವ್ಯನಾಮದ ಬಾಳಾಚಾರ್ಯ ಸಕ್ರಿಯವರ ಈ ಕವಿತೆಯ ಮೂಲಕ ಹರಿದು ಬಂದ ಸ್ವಾತಂತ್ರ್ಯ ಸಂಗ್ರಾಮದ ಕಾವ್ಯವನ್ನು ಗಮನಿಸಬಹುದಾಗಿದೆ.ಸ್ವಾತಂತ್ರ ಪೂರ್ವದ ಬ್ರಿಟಿಷರ ಆಳ್ವಿಕೆಯಲ್ಲಿ ನಲುಗಿದ ಭಾರತಾಂಬೆಯನ್ನು , ಈ ಭರತ ಭೂಮಿಯನ್ನು ಸ್ವತಂತ್ರಗೊಳಿಸಬೇಕೆಂಬ ಕಲ್ಪನೆ ಅದಾಗಲೇ ಕವಿ, ಲೇಖಕ, ಹೋರಾಟಗಾರರು, ಕಲಾವಿದರಲ್ಲಿ ಸೂಪ್ತವಾಗಿ ಮೊಳಕೆ ಒಡೆಯುತ್ತಿದ್ದ ಕಾಲವದು.ನವೋದಯ ಸಾಹಿತ್ಯದ ಹರಿಕಾರರಾದ ಬಿ ಎಂ ಶ್ರೀ ಅವರಿಂದ ಆರಂಭಗೊಂಡು ಆ ಕಾಲಮಾನದ ಎಲ್ಲ ಕವಿಗಳು ಸ್ವಾತಂತ್ರದ ಹೋರಾಟಕ್ಕೆ ತಮ್ಮ ಕಾವ್ಯದ ಮೂಲಕ ಸ್ಪಂದಿಸಿದ್ದು ಸ್ವಾತಂತ್ರ್ಯ ಹೋರಾಟದ ಇತಿಹಾಸ ಬಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.*ತಂತ್ರ ವಾದ್ಯವು ಲೇಸು**ಮಂತ್ರಿಯ ಕಳೆ ಲೇಸು**ಯಂತ್ರ ವಾಹಕನ ದಯೆ ಲೇಸು**ಜಗದೀ ಸ್ವಾತಂತ್ರ್ಯವೇ ಲೇಸು*ಎಂದು ನಮ್ಮ ಲೋಕ ಸಂಚಾರಿ, ಲೋಕಾನುಭವಿ ಕವಿ ಸರ್ವಜ್ಞನು. ಈ ಜಗಕ್ಕೆ ಸ್ವಾತಂತ್ರ್ಯವೇ ಲೇಸು ಎಂದು ತಮ್ಮ ಬದುಕಿನ ಕಾಲ ಘಟ್ಟದಲ್ಲಿ ಹೇಳಿರುವುದು ಇಲ್ಲಿ ಉಲ್ಲೇಖನೀಯ.12ನೇ ಶತಮಾನದ ಬಸವಾದಿ ಶರಣರ ಕಾಲದಿಂದಲೇ ಸ್ವತಂತ್ರ ವಿಚಾರಧಾರೆ ಜನಮನಕ್ಕೆ ತಲುಪಿ ಪ್ರತಿಯೊಬ್ಬರಲ್ಲಿ ವ್ಯಕ್ತಿ ಗೌರವ, ಆತ್ಮವಿಶ್ವಾಸ, ಸಮಾನತೆ, ಸ್ವಾತಂತ್ರ್ಯದ ಪರಿಕಲ್ಪನೆ ಈ ನೆಲದಲ್ಲಿ ಬಿಜಾಂಕುರವಾಗಿತ್ತು. ಇದು ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಹೆಮ್ಮರವಾಗಿ ಬೆಳೆದು ಇಡೀ ನಾಡು ನುಡಿ ಗಡಿದಾಟಿ ಇಡೀ ದೇಶವನ್ನೇ ವ್ಯಾಪಿಸಿದ್ದು ಸುಳ್ಳಲ್ಲ.ಮುಖ್ಯವಾಗಿ ಯಾವುದೇ ದೇಶದ ಜನ ಸಮೂಹ ಹೆರವರ ಕಟ್ಟುಪಾಡುಗಳಲ್ಲಿ, ಉಸಿರುಗಟ್ಟಿಸುವ ವಾತಾವರಣದಲ್ಲಿ ತೆಲೆ ತಗ್ಗಿಸಿ ಬಹುದಿನ ಬದುಕಲಾಗುವುದಿಲ್ಲ.ಆ ಕಾಲಮಾನದ ಸಾಕ್ಷಿ ಪ್ರಜ್ಞೆಯುತ್ತಿರುವ ಕವಿ, ಲೇಖಕ, ಬರಹಗಾರ, ಪತ್ರಕರ್ತ ಸುಮ್ಮನೆ ಮೌನ ಪ್ರೇಕ್ಷಕರಾಗಿ ಉಳಿಯಲಾರರು.ಅದೇ ರೀತಿ ಈ ಸ್ವಾತಂತ್ರ್ಯದ ಸಂದರ್ಭದಲ್ಲಿ ಸಹ ತಮ್ಮ ಕಾವ್ಯದ ಮೂಲಕ ಸ್ವಾತಂತ್ಯ್ರದ ರೊಚ್ಚು ಕೆಚ್ಚು ಜನಮನಕ್ಕೆ ತಲುಪಿಸಿ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬಂತೆ ತಮ್ಮ ಕಾವ್ಯವನ್ನು ನೂರಾರು ಕವಿಗಳು ಹರಿಸಿದ್ದಾರೆ.ಅಕ್ಷರ ಬಾರದವರು ಜನಪದ ಹಾಡು,ಹಲಾಹಿ ಹಾಡು, ಲಾವಣಿ,ಭುಲಾಯಿ, ಗೀಗಿಪದಗಳ ಮೂಲಕ ತಮ್ಮ ರಾಷ್ಟ್ರಾಭಿಮಾನವನ್ನು ಪ್ರದರ್ಶಿಸಿ ಒಟ್ಟಾರೆ ಸ್ವಾತಂತ್ರ್ಯ ದ ಹೋರಾಟದಲ್ಲಿ ತೊಡಗಿದ ಮಹಾತ್ಮನನ್ನು ಒಳಗೊಂಡ ಎಲ್ಲಾ ಸಮರ ಸೇನಾನಿಗಳಿಗೆ ,ಮುಂದಾಳುಗಳಿಗೆ ಪೂರಕವಾಗಿ ಕೆಲಸ ಮಾಡಿದ್ದು ಗಮನೀಯವಾಗಿದೆ.*ಭಾರತಾಂಬೆಯ ಹೀನ ಸ್ಥಿತಿಯನ್ನು ಕಣ್ಣು ತೆರೆಯುತ ನೋಡಿರಿ**ಪಾರತಂತ್ರ್ಯದಿ ಸಿಲುಕಿ ಬಳಲುವ ತಾಯಿಯನು ನೀವು ಬಿಡಿಸಿರಿ*@*ನಮ್ಮ ನಾಡಿನ ಹೆಣ್ಣು ಮಕ್ಕಳು ವೀರಶ್ರೀಯನು ಬೀರುತ**ಒಮ್ಮನಸಿನೊಳೇ ರಾಷ್ಟ್ರ ಕಾರ್ಯಕ್ಕೆ ಪ್ರಾಣ ಕೊಡುತಿಹರಲ್ಲವೇ**ನಮ್ಮ ದೇಶದ ಸಿರಿಯು ಎಲ್ಲವೂ ಅನ್ಯ ದೇಶವ ಸೇರಿತು* *ಒಮ್ಮೆಯಾದರೂ ಹೊಟ್ಟೆ ತುಂಬಾ ಅನ್ನ ಸಿಗದಂತಾಯಿತು**ದೇಶ ಸೇವೆಯ ಸಮರ ಕಾಲದಿ ಪ್ರಾಣ ಹೋದರು ನೋಡದೆ**ದೇವ ಕೃಪೆಯನು ಪಡೆದು ದೇಶವನುಳಿಸಿಕೊಳ್ಳಲು ನಡೆಯಿರಿ*(ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಸಮರ ಕೃತಿಯ ಅನಾಮಿಕ ಕವಿಯೊಬ್ಬರ ಕವಿತೆ) ಹೀಗೆ ಅಜ್ಞಾತ ಕವಿ ಒಬ್ಬ ರಾಷ್ಟ್ರ ಪ್ರೇಮವನ್ನು ಮೆರೆದು,ಹಿಂದಿನ ಸಿರಿ ಸಂಪತ್ತಿನ ನಮ್ಮ ಭಾರತ ಹೇಗಾಗಿದೆ ನೋಡಿ. ತುತ್ತು ಅನ್ನವು ಸಿಗದಂತಾಗಿದೆ ಬಡ ಬಗ್ಗರಿಗೆ ಎಂದು ಎಚ್ಚರಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಬನ್ನಿ. ಇದಕ್ಕಾಗಿ ಪ್ರಾಣ ಹೋದರು ಪರವಾಗಿಲ್ಲ. ದೇವಕೃಪೆಯಿಂದ ಹೋರಾಡಿ ಗೆಲ್ಲೋಣವೆಂದು ಹೇಳಿದ ಈ ಮೇಲಿನ ಕವಿತೆಯ ಆಶಯ ಇಡೀ ಕನ್ನಡ ಕಾವ್ಯದ ಒಳ ಹರಿವಾಗಿತ್ತು ಅನಿಸದಿರದು.*ಸತ್ತಂತಿಹರನ್ನು ಬಡಿದೆಚ್ಚರಿಸು …ಎಂಬ ಕವಿ ಕುವೆಂಪುರವರು**ಸಾರಿ ಬಾ ಸರ್ವರ್ಗೆ ಸ್ವಾತಂತ್ರ್ಯಮಂ**ಸಾರಿ ಬಾ ಸರ್ವರ್ಗೇ ಸಾಮ್ಯತ್ವಮಂ *ಸರ್ವಂಗೆ ಸಾರಿ ಬಾ ಸೌಹಾರ್ದಮಂ**ಸರ್ವ ಲೋಕದ ಸರ್ವ ಸಂತೋಷ ಮಂ *ಸರ್ವರಿಂ ಸರ್ವರಾ ಉದ್ಧಾರಮಮಂ* ( ಭಾರತ ಸ್ವಾತಂತ್ರ ಗಾಯತ್ರಿ ಕೃತಿಯ ಕವಿತೆ) ಕವಿತೆಯಲ್ಲಿ ಉದಾತ್ತವಾಗಿ ಸರ್ವರಿಗೂ ಸ್ವಾತಂತ್ಯ ದ ಜೊತೆ ಜೊತೆಗೆ ಸೌಹಾರ್ದತೆ,ಸಂತೋಷ,ಸ್ವಾಮ್ಯತ್ವ ಹಾಗೂ ಏಳಿಗೆಯನ್ನು ಬಯಸುವ ಮೂಲಕ ಸ್ವಾತಂತ್ರ್ಯದ ಮೂಲಕ ದೊರೆಯಬಹುದಾದ ಸರ್ವ ಕನಸುಗಳನ್ನು ಕಟ್ಟಿಕೊಟ್ಟಿದ್ದಾರೆ. ಮುಂದುವರಿದು,ಮಹಾ ಕವಿ ಕುವೆಂಪು ಅವರು ಹೀಗೆ ಹೇಳಿದ್ದಾರೆ.ಒಂದು ರಾಜ್ಯವ ಗೆದ್ದು ಸಿರಿಯನೆಲ್ಲವ ಕದ್ದುಬಲವಂತರಾದವರು ಬಲವಿಲ್ಲದವರುಗಳತುಳಿಯುತ್ತಿರಲು ಜನರ ಮೊರೆ ಬಾನೆಡೆಗೆಮುಟ್ಟುತ್ತಿರಲು ಉರುಳುರುಳು ಹಗಲಿರಲುಎಲೆ ಧರಣಿ! ನೀ ನಿಷ್ಕರುಣಿಹೀಗೆ ಜನಮನದ ತವಕ ತಲ್ಲಣಗಳನ್ನು ಪಾರತಂತ್ರದ ಹಿನ್ನೆಲೆಯಲ್ಲಿ ಕವಿ ಕುವೆಂಪು ಅವರು ಅತ್ಯಂತ ಸಾತ್ವಿಕವಾಗಿಯೇ ಕಟ್ಟಿಕೊಟ್ಟು ರಾಜ್ಯದ ಸಿರಿಯನು ಕದ್ದವನು ಒಳಗಿನವನಾದರೂ ಅಷ್ಟೇ,ಅವನು ಹೊರಗಿನವನಾದರೂ ಅಷ್ಟೇ ಎಂದು ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ದೂರ್ತತನವನ್ನು ತೆರೆದಿಟ್ಟಿದ್ದಾರೆ.@*ಗೇಣು ಭೂಮಿಗಾಗಿ ಎನ್ನ ಪ್ರಾಣ ಹೋಗಲಿ ಎಂದೆನ್ನುವಿ ಕಾಣದೇನೋ ನಾಡೇ ಪರಾಧೀನವಾಗಿರುವುದು ಮನುಜಾ ಮಾತೃಭೂಮಿಯ..*ಕವಿ ಮುದವೀಡು ಕೃಷ್ಣರಾಯರು..ಹೀಗೆ ಕಾವ್ಯದ ಮೂಲಕ ಕರೆನೀಡಿ ಒಡ ಹುಟ್ಟಿದವರ ಜೊತೆ ಒಡೆದಾಡುವ ನೀ ಪರಕೀಯರು ನಾಡೇ ಕಬಳಸಿದಾರೆ ಹೋರಾಡು ಎಂದು ಹೇಳುವುದು ಮನನೀಯವಾಗಿದೆ.@*ಹಿಂದು ಮಾತೆ ಬಂಧು ಭಾವದಿಂದ ನಿನ್ನ ಕಂದರು**ಒಂದು ಗೂಡಿ ಪಾರತಂತ್ರ್ಯ ಬಂಧವ ಹರಿದೊಗೆವೆವು*ಎಂದು ಕವಿಭೂಷಣ ಬೆಟಗೇರಿ ಕೃಷ್ಣಶರ್ಮ ಅವಳನ್ನು ತಾಯಿಗೆ ಹೋಲಿಸಿ ಅವಳ ಬಿಡುಗಡೆಗಾಗಿ ನಾವೆಲ್ಲ ಒಂದಾಗಬೇಕೆಂಬ ಸಂದೇಶ ನೀಡಿದ್ದಾರೆ.@*ಭಾರತಾಂಭೆಯ ಹೀನ ಸ್ಥಿತಿಯನ್ನು ಕಣ್ಣು ತೆರೆಯುತ ನೋಡಿರಿ**ಪಾರತಂತ್ರ್ಯದಿ ಸಿಲುಕಿ ಬಳಲುವ ತಾಯಿಯನು ನೀವು ಬಿಡಿಸಿರಿ*ಎಂದು ಅನಾಮಿಕ ಕವಿಯೊಬ್ಬರ ಕವಿತೆಯ ಸಾಲುಗಳು ಇವು.ಇಂತಹ ನೂರಾರು ಅನಾಮಿಕ ಕವಿಗಳ ಕವಿತೆ ನಮಗೆ ಕಾಣಬರುತ್ತವೆ.ಕವಿ ಡಾ.ಸೂರ್ಯನಾಥ ಕಾಮತ ಅವರು ಸುಮಾರು ನೂರಾರು ಜನರ ನಾಲ್ಕು ನೂರಕ್ಕಿಂತ ಹೆಚ್ಚು ಕವಿತೆಗಳನ್ನು ಕವಿ ಜೆ ಎಸ್ ಎಸ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಇದ್ದಾಗ ಅವರ ಸಲಹೆ ಮೇರೆಗೆ ಸಂಪಾದಿಸಿಕೊಟ್ಟದ್ದನ್ನು ಬಿಡುಗಡೆಯ ಹಾಡುಗಳು ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.ಆ ಸಂದರ್ಭದಲ್ಲಿ ದೇಶಿಯ ದುಮದುಮೆ ಬರೆದ ದಿ.ಶ್ರೀಧರ ಖಾನೋಲ್ಕರ್ ಅವರ ಕಾವ್ಯನಾಮ ಸೀತಾತನಯ ಎಂಬವರದು ಪ್ರಕಟಿಸಿದ್ದ ಕಾರಣಕ್ಕೆ ದಿ.ರಂ.ರಾ.ದಿವಾಕರ ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿತ್ತು. ಅವರ ತಾಯಿಯ ಹೆಸರು ಸೀತಾ ಇರುವ ಕಾರಣಕ್ಕೆ .ಹೀಗಾಗಿ ಅನೇಕ ಕವಿಗಳು ತಮ್ಮ ಹೆಸರು ಮರೆ ಮಾಚಿಕೊಂಡು ಭೂಗತವಾಗಿದ್ದುಕೊಂಡೆ ಜನತೆಯಲ್ಲಿ ಸ್ವಾತಂತ್ರ್ಯ ದ ಕಿಚ್ಚು ಹಚ್ಚಿದ್ದು ಕಾಣಬಹುದಾಗಿದೆ. *ವೀರರನ್ನು ನೆನೆದು ನೆನೆದು ವೀರರಾಗಿ ಉಳಿಯುವಾ* ಎಂಬ ಬೇಂದ್ರೆಯವರ ಕಾವ್ಯ ಎಂತಹವರನ್ನೂ ಕಾಡುವಂತಹದು. 1918ರ ಮುಂಚೆಯೇ ಬೇಂದ್ರೆಯವರು ತುತ್ತೂರಿ ಮತ್ತು ಆಹಾ ಸ್ವಾತಂತ್ರದೇವಿ.. ಎಂಬ ಕವಿತೆ ಬರೆದು ಜೈಲಿಗೂ ಹೋಗಿ ಬಂದಿದ್ದರು. ಹಕ್ಕಿಹಾರುತಿದೆ ನೋಡಿದಿರಾ, ಸ್ವಾತಂತ್ರ್ಯದ ರೆಕ್ಕೆ ಬಿಚ್ಚಿ ನೋಡಿದಿರಾ ಎಂದು ಕೇಳುವ ಬೆಂದ್ರೆಯವರು ಕನ್ನಡವೂ, ಭಾರತವೂ ಜಗವೆಲ್ಲ ಒಂದೇ ಎಂಬ ಬಹು ವಿಶಾಲ ನೆಲೆಯಲ್ಲಿ ಈ ಸ್ವಾತಂತ್ರ್ಯದ ಹೋರಾಟದ ಕವಿತೆಗಳನ್ನು ನವೋದಯದ ಸಂಪ್ರದಾಯದ ನಂತರ ಇಡೀ ಕನ್ನಡ ಕಾವ್ಯ ಪ್ರಪಂಚಕ್ಕೆ ಹರಡಿದ್ದು ಅದು ಕಾವ್ಯದ ಅಂತ ಸತ್ವವೇ ಆಗಿದೆ. ಆರಂಭದಲ್ಲಿ ಮೈಸೂರು, ಕರಾವಳಿ ಪ್ರದೇಶದಲ್ಲಿಯ ಈ ನವೋದಯ ಕಾವ್ಯದ ಹರಿವು ನಂತರ ಉತ್ತರ ಕರ್ನಾಟಕ ಮುಂಬೈ ಕರ್ನಾಟಕದ ಕಡೆಗೆ ಸ್ವಲ್ಪ ವ್ಯಾಪಿಸಿತ್ತು.ಆದರೆ ದೇಶಿ ಕಾವ್ಯ ಪರಂಪರೆಯಲ್ಲಿ ಮುಳುಗಿದ್ದ ಹೈದರಾಬಾದ್ ಕರ್ನಾಟಕಕ್ಕೆ ನವೋದಯ ಸಾಹಿತ್ಯವಾಗಲಿ,ನವ್ಯ ಸಾಹಿತ್ಯವಾಗಲಿ ಗಾಢವಾಗಿ ಪರಿಚಯವೇ ಆಗಲಿಲ್ಲ.ಆ ಕಾರಣದಿಂದ ಈ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಆ ಭಾಗದ ಕವಿಗಳಿಗೆ ಈ ಕಾವ್ಯ ಪ್ರೇರಣೆ
You cannot copy content of this page