ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com



ಕಂಡದ್ದು ಕಂಡಹಾಗೆ
ತೋರಿದರೆ
ಕೆಂಡದಂತ ಕೋಪ
ಕನ್ನಡಿ ಸರಿಗಿಲ್ಲ
ಭೂತಗನ್ನಡಿ ಎನ್ನುವ
ಭೂತಗಳ ಕಂಡು

ನಿಜವನರಿಯದ ನಿತ್ಯ
ನಡೆವ ನಾಟಕದ ರೂವಾರಿಗಳ ಕಂಡು
ರಾವುಗನ್ನಡಿಯ ಹಿಂದೆ
ಮನದ ಕನ್ನಡಿ ಮುಚ್ಚಿದ ವಿಚಾರವಾದಿಗಳ ಕಹಿಸತ್ಯವ ಕಂಡು

ಜನಸಾಮಾನ್ಯರನು ಮಳ್ಳು
ಮಾಡುವ ವಿವೇಕಿಗಳ
ಅವಿವೇಕತೆಯ ಕಂಡು
ವಿವೇಕ ಇದ್ದರೂ ತಪ್ಪನ್ನು
ತಪ್ಪೆಂದು ಒಪ್ಪದವರ ಕಂಡು

ಅವರಿವರನು ಬಳಸಿಕೊಂಡು
ಶಾಂತಿ ನೆಮ್ಮದಿ ಸೌಹಾರ್ದ
ಹಾಳು ಮಾಡುವ ಮತಿಹೀನರ ಮಂಗನಾಟದಲಿ
ಮುಗ್ಧಜನರ ಬಲಿಪಶು ಕಂಡು

ಇದ್ದದ್ದು ಇದ್ದಂಗ ತೋರಿದರೂ
 ಮತ್ತೊಂದು ಬಣ್ಣ ಹಚ್ಚಿ ಕನ್ನಡಿಯ ಬಿಂಬ ಸರಿಯಿಲ್ಲ ಎನ್ನುವ ಸೈಲೆಂಟ ಕಿಲ್ಲರ್  ಮನಸುಗಳ ವಿಕ್ರತ ಮನಸು ಕಂಡು
ಮುಸು ಮುಸು ಕನ್ನಡಿ ನಕ್ಕಿತು
ಕನ್ನಡಿ ನಕ್ಕಿತು
ಲಲಿತಾ ಪ್ರಭು ಅಂಗಡಿ ಮಂಬಯಿ.

About The Author

Leave a Reply

You cannot copy content of this page

Scroll to Top