Month: July 2021

ಬಿದ್ದು ಬಿಡುತ್ತಾಳೇನೋ ಎಂದು ಗಟ್ಟಿಯಾಗಿ ಅವಳನ್ನು ಹಿಡಿದುಕೊಂಡವನಿಗೆ ಅವಳನ್ನು ಬಿಡಬೇಕೆನ್ನಿಸಲಿಲ್ಲ. ಅವನು ತನ್ನನ್ನು ಬಿಡಲಿ ಎಂದು ಅವಳಿಗೂ ಅನ್ನಿಸಲಿಲ್ಲ… ಬೇಸಗೆಯ ಮೊದಲ ಮಳೆ ಇದ್ದಕ್ಕಿದ್ದಂತೆ ಶುರುವಾಗಿ ಕಾದ ಭೂಮಿ ನೆಂದು ತಣಿಯತೊಡಗಿತ್ತು

ಒಡಲ ಸತ್ಯ

ಎಲ್ಲೋ ಇರುವ , ಇರುವು
ಎಂದೂ ತಲುಪದವನ (ಳ)
ತಲುಪುವುದು ;
ಮುಟ್ಟದೇ ಮುಟ್ಟುವುದು
ಹೂವೊಳಗಿನ ಪರಿಮಳ ದಂತೆ

ಪ್ರೇಮ ಸಂವೇದನೆ’

ಹಾರಾಡುವಾಗ,
ಮರದ ಒಡಲು ಒಲವುಗೊಂಡು
ಬೀಸಿದ ತಂಗಾಳಿ, ಹಕ್ಕಿಗಳ ಪ್ರೇಮ
ಕಲರವ.. ಸೋಕಿ, ಎದೆ ಛಲ್ಲೆನುವಾಗ

ಹೊಯಿದವರೆನ್ನ ಹೊರೆದವರೆಂಬೆ

ಬಸವಣ್ಣ ಜಗತ್ತಿನ ಒಬ್ಬ ಶ್ರೇಷ್ಠ ಸಮಾಜವಾದಿ ಹಾಗೂ ದಾರ್ಶನಿಕ ,ತನ್ನನ್ನು ತಾನು ಸಮಾಜಕ್ಕೆ ಜಂಗಮಕ್ಕೆ ತೊಡಗಿಸಿಕೊಂಡವರು ಇನ್ನೊಬ್ಬರಿಲ್ಲ . ಸಮಾಜದಲ್ಲಿ ದುಡಿಯುವಾಗ ಅನೇಕ ನೋವು ಸಂಕಟ ಕಷ್ಟಗಳು ಬರುವುದು ಸಹಜ .ಸತ್ಯ ನಿಷ್ಟುರತೆ ಯಾವಾಗಲೂ ಒಂಟಿಯಾಗಿರುತ್ತದೆ. ಸುಳ್ಳು ವಂಚನೆ ವೈಭವಕ್ಕೆ ಪಾತ್ರವಾಗುತ್ತದೆ.

ಬಿಡಾಲವ್ರತಿಗಳಿಗೆ ನೀಡಬೇಕಿದೆ ಬಡಿಗೆ ಏಟು…!

ಭಾರತವು ನಿಡುಗಾಲದಿಂದಲೂ ಪರಧರ್ಮ ಸಹಿಷ್ಣುತೆಗೆ ನೆಲೆಬೀಡಾಗಿದೆ. ಇತರರ ವಿಚಾರ ಮತ್ತು ಧಾರ್ಮಿಕ ಅಂಶಗಳನ್ನು ಯಾವ ರೀತಿ ಸಹಿಸಿಕೊಳ್ಳಬೇಕು‌ ಮತ್ತು ಅದು ಹೇಗೆ ಬದುಕಿನ ಬಹುಮುಖ್ಯವಾದ ಅಂಶ ಎಂಬುದನ್ನು ಕನ್ನಡದ ಉದ್ಗ್ರಂಥ ಕವಿರಾಜಮಾರ್ಗದ ಈ ಮುಂದಿನ ನುಡಿಗಳು ಬಹಳ ಉತ್ತಮವಾಗಿ ವಿಶದೀಕರಿಸುತ್ತವೆ

ಗಜಲ್

ಉಸುಕಿಗೂ ಹೊನ್ನಿಗೂ ಮಣ್ಣೇ ಮಡಿಲಾದರೂ ಧಾರಣೆ ಭಿನ್ನವಲ್ಲವೆ !
ಸತ್ಯ ಶೋಧನೆಯ ಸಂಗಾತಕೆ ಅಪಥ್ಯ ನಂಜುಣಿಸಿ ಕೊರಗಬೇಕಿಲ್ಲ ಇಲ್ಲಿ

ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ನಾಗಶ್ರೀ ಕಾವ್ಯಪ್ರಶಸ್ತಿ

ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ನಾಗಶ್ರೀ ಕಾವ್ಯಪ್ರಶಸ್ತಿ

ವಾರದ ಕವಿತೆ ಮಿಣುಕುಹುಳ ವಿಜಯಶ್ರೀ ಹಾಲಾಡಿ ನಡುರಾತ್ರಿಒಗೆದ ಬಟ್ಟೆಗಳ ಹರಡಿಅಡುಗೆಮನೆ ಶುಚಿಗೊಳಿಸಿಹೊದಿಕೆ ಜೋಡಿಸಿಕೊಂಡುಮಲಗುವ ಮುನ್ನಸಣ್ಣದೊಂದು ಬ್ಯಾಟರಿ ಬೆಳಕುಹಾಕಿಕೊಂಡು ಮನೆಯೆಲ್ಲತಿರುಗಿ ಬರಬೇಕೆನಿಸಿತು ಮಗುವಿನಂತೆ ನಿದ್ರಿಸಿದ ಮನೆಮನೆಮಂದಿ, ಕಗ್ಗತ್ತಲ ಜಗ….!ಕಪ್ಪೆ ಜೀರುಂಡೆ ಕೀಟಾದಿಗಳುಮೌನದೊಂದಿಗೆ ಸಂವಾದದಲ್ಲಿದ್ದವುಸುರಿದು ಸಾಕಾಗಿ ಬಿಟ್ಟ ಮಳೆಗೆನೆಲವೆಲ್ಲ ಥಂಡಿ ಶೀತಕಿಟಕಿಯಾಚೆಯ ಮಿಣುಕುಹುಳಗಳಜೊತೆ – ನಾನೇ ಒಂದುಮಿಂಚುಹುಳವೆಂದು ಭ್ರಮಿಸುತ್ತಕೋಣೆ ಕೋಣೆಗಳ ಸುತ್ತಾಡಿದೆಪಾದದುಸುರಿಗೆ ಬೆಚ್ಚಿದ ಹಲ್ಲಿಜಿರಳೆಗಳು ಮರೆಗೆ ಸರಿದವುದೂರದಲ್ಲೆಲ್ಲೋ ನಾಯಿಯೊಂದುಗೊಣಗುತ್ತ ಮಲಗುವ ಸೂಚನೆ ರವಾನಿಸುತ್ತಿರುವಾಗಲೇ…..ಮಿಣುಕುಹುಳವೊಂದು ಮಿಣಿಮಿಣಿಯೆಂದು ತೇಲಿಬಂದಿತು….ಮನೆಯೊಳಗೇ!!ಅಜ್ಜಿ ನೆನಪಿಸುತ್ತಿದ್ದ ‘ಜಕ್ಣಿ’ಯ ಕತೆ-ಗಳು ನುಗ್ಗಿಬಂದು ಕೈದೀಪವಾರಿಸಿದೆ!…….ವಟಗುಟ್ಟುವ ಕಪ್ಪೆಗಳುಕಣ್ಣ ಹಿತ ನೇವರಿಸುವ ಮಸಿಕತ್ತಲು!** ಟಿಪ್ಪಣಿ- […]

ಗಿಳಿಯು ಪಂಜರದೊಳಿಲ್ಲ

ಸೀನಂಗೆ ಇಪ್ಪತ್ತೈದು ವರ್ಷವಾದಾಗ್ಲಿಂದ ಅವನಿಗೊಂದು ಹುಡುಗಿ ಹುಡುಕಕ್ಕೆ ಶುರುಮಾಡಿದ್ದು. ಆಗ್ಲೇ ಅವ್ನಿಗೆ ನಲವತ್ತರ ಹತ್ತಿರತ್ತಿರ ವಯಸ್ಸೇನೋ ಅನ್ನೋ ಹಾಗೆ ಕಾಣ್ತಿದ್ದ. ಅರ್ಧ ತಲೆಕೂದ್ಲು ನೆರೆತುಹೋಗಿತ್ತು. ಎಷ್ಟು ರೀತೀಲಿ ಹೆಣ್ಣು ಹುಡುಕಿದ್ದು. ಹೊಸ ಸಂಬಂಧಗಳೂ ಕೂಡಿ ಬರ‍್ಲಿಲ್ಲ;

Back To Top