ಕವಿತೆ
ಒಡಲ ಸತ್ಯ
ನಾಗರಾಜ್ ಹರಪನಹಳ್ಳಿ
ಬರೆದು ಅಳಿಸುವುದು
ಬರೆಯಲಾಗದ್ದು
ಮನದಲ್ಲೇ ಉಳಿಯುವುದು
ಭೂಮಿಯಲ್ಲಿ ಪಿಸುಗುಡುವ ಬೀಜದಂತೆ
ಹೇಳದ್ದು , ತುಟಿಗೆ ಬಂದು ನಿಂತದ್ದು
ತುಟಿಯಿಂದ ತುಳುಕದ್ದು
ನದಿಯೊಳಗೆ ಮಾತಾಡುವ ಮೀನಿನ ದನಿಯಂತೆ
ಕಂಡದ್ದು, ಕಾಣಲಾಗದ್ದು
ಹೃದಯದ ಕಣ್ಣಿಗೆ ಮಾತ್ರ ಕಂಡದ್ದು
ಹೊರ ಜಗತ್ತಿಗೆ ಕೂಗಿ ಹೇಳಲಾಗದ್ದು
ಎಂದು ತಲುಪದ ಆಗಸದ
ಚಂದ್ರ ದೂರದಲ್ಲೇ
ಕಣ್ಣು ಹೊಡೆದಂತೆ
ಎಲ್ಲೋ ಇರುವ , ಇರುವು
ಎಂದೂ ತಲುಪದವನ (ಳ)
ತಲುಪುವುದು ;
ಮುಟ್ಟದೇ ಮುಟ್ಟುವುದು
ಹೂವೊಳಗಿನ ಪರಿಮಳ ದಂತೆ
*******************
ಹೊಸತನ ತುಂಬಿರುವ ಉಪಮೆಗಳು ಮನೋಹರವಾಗಿವೆ
ಥ್ಯಾಂಕ್ಸ ಮೇಡಂ