ಒಡಲ ಸತ್ಯ
ಎಲ್ಲೋ ಇರುವ , ಇರುವು
ಎಂದೂ ತಲುಪದವನ (ಳ)
ತಲುಪುವುದು ;
ಮುಟ್ಟದೇ ಮುಟ್ಟುವುದು
ಹೂವೊಳಗಿನ ಪರಿಮಳ ದಂತೆ
ಪ್ರೇಮ ಸಂವೇದನೆ’
ಹಾರಾಡುವಾಗ,
ಮರದ ಒಡಲು ಒಲವುಗೊಂಡು
ಬೀಸಿದ ತಂಗಾಳಿ, ಹಕ್ಕಿಗಳ ಪ್ರೇಮ
ಕಲರವ.. ಸೋಕಿ, ಎದೆ ಛಲ್ಲೆನುವಾಗ
ನೀನು
ನೀನಿಲ್ಲ ಅಂತ ಅನ್ನಿಸಿಲ್ಲ
ನಾನಿದ್ದೇನಲ್ಲಾ….ಜೀವಂತ
ಅಂದರೆ ನೀ ಎದೆಗೂಡಲ್ಲಿ ಬಂಧಿ?
ಹೊಯಿದವರೆನ್ನ ಹೊರೆದವರೆಂಬೆ
ಬಸವಣ್ಣ ಜಗತ್ತಿನ ಒಬ್ಬ ಶ್ರೇಷ್ಠ ಸಮಾಜವಾದಿ ಹಾಗೂ ದಾರ್ಶನಿಕ ,ತನ್ನನ್ನು ತಾನು ಸಮಾಜಕ್ಕೆ ಜಂಗಮಕ್ಕೆ ತೊಡಗಿಸಿಕೊಂಡವರು ಇನ್ನೊಬ್ಬರಿಲ್ಲ . ಸಮಾಜದಲ್ಲಿ ದುಡಿಯುವಾಗ ಅನೇಕ ನೋವು ಸಂಕಟ ಕಷ್ಟಗಳು ಬರುವುದು ಸಹಜ .ಸತ್ಯ ನಿಷ್ಟುರತೆ ಯಾವಾಗಲೂ ಒಂಟಿಯಾಗಿರುತ್ತದೆ. ಸುಳ್ಳು ವಂಚನೆ ವೈಭವಕ್ಕೆ ಪಾತ್ರವಾಗುತ್ತದೆ.
ಬಿಡಾಲವ್ರತಿಗಳಿಗೆ ನೀಡಬೇಕಿದೆ ಬಡಿಗೆ ಏಟು…!
ಭಾರತವು ನಿಡುಗಾಲದಿಂದಲೂ ಪರಧರ್ಮ ಸಹಿಷ್ಣುತೆಗೆ ನೆಲೆಬೀಡಾಗಿದೆ. ಇತರರ ವಿಚಾರ ಮತ್ತು ಧಾರ್ಮಿಕ ಅಂಶಗಳನ್ನು ಯಾವ ರೀತಿ ಸಹಿಸಿಕೊಳ್ಳಬೇಕು ಮತ್ತು ಅದು ಹೇಗೆ ಬದುಕಿನ ಬಹುಮುಖ್ಯವಾದ ಅಂಶ ಎಂಬುದನ್ನು ಕನ್ನಡದ ಉದ್ಗ್ರಂಥ ಕವಿರಾಜಮಾರ್ಗದ ಈ ಮುಂದಿನ ನುಡಿಗಳು ಬಹಳ ಉತ್ತಮವಾಗಿ ವಿಶದೀಕರಿಸುತ್ತವೆ