Day: July 25, 2021

ಮಕಾನದಾರರ ಪ್ಯಾರಿ ಪದ್ಯಗಳಲ್ಲಿ ಭಾಷೆಯ ಬೆಡಗು

ಮಕಾನದಾರರ ಪ್ಯಾರಿ ಪದ್ಯಗಳಲ್ಲಿ ಭಾಷೆಯ ಬೆಡಗು ಶಮಾ. ಜಮಾದಾರ.   ಮಾನವೀಯ ಸಂಬಂಧಗಳನ್ನು ಸಾಹಿತ್ಯದಲ್ಲಿ ಹುಡುಕುವ ಸಮನ್ವಯ ಕವಿ, ಎ. ಎಸ್. ಮಕಾನದಾರ ಅವರು. ನ್ಯಾಯಾಲಯದ ಕಡತಗಳಲ್ಲಿ ತಡಕಾಡುತ್ತಲೇ ಸಾಹಿತ್ಯದ ಲೋಕದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ.. ಅಕ್ಕಡಿಸಾಲುಗಳಲ್ಲಿ ಅಕ್ಷರ ಬೀಜ ಬಿತ್ತುತ್ತಾ..ಮತ್ತು ಪ್ಯಾರಿಯ ಎದೆಯಲ್ಲಿ ಪ್ರೀತಿಯ ದೀಪ ಬೆಳಗುತ್ತಾ. ಸುಮಾರು ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಎ. ಎಸ್. ಮಕಾನದಾರ ಅವರು ಈವರೆಗೂ ಆರು ಸ್ವರಚಿತ ಕವನ ಸಂಕಲನಗಳನ್ನು ನಮ್ಮ ಕೈಯಲ್ಲಿ ಇಟ್ಟಿದ್ದಾರೆ. ಉಳಿದ ಪ್ರಕಾರದ ಸಾಹಿತ್ಯದಲ್ಲೂ […]

‘ಒಳಗೊಂದು ವಿಲಕ್ಷಣ ಮಿಶ್ರಣ’

ಪುಸ್ತಕ ಸಂಗಾತಿ ‘ಒಳಗೊಂದು ವಿಲಕ್ಷಣ ಮಿಶ್ರಣ’ ಪ್ರತಿಯೊಂದು ಕಾಲಘಟ್ಟದ ಮನೋಧರ್ಮ ಆಯಾ ಕಾಲದ ಸಾಹಿತ್ಯ, ಕಲೆ ಇತ್ಯಾದಿ ಮಾಧ್ಯಮಗಳ ಮೂಲಕ ಸೂಕ್ಷ್ಮವಾಗಿ ವಿಶ್ಣೇಷಣೆಗೋ ವಿಮರ್ಶೆಗೋ ಒಳಗಾಗುತ್ತಾ ವಿಧವಿಧವಾಗಿ ಅಭಿವ್ಯಕ್ತಗೊಳ್ಳುತ್ತಿರುತ್ತದೆ. ಸಮಕಾಲೀನ ಆಗುಹೋಗುಗಳನ್ನು ಸೂಕ್ಷ್ಮ ಮನಸ್ಸಿನ ಕವಿ/ಕಲಾವಿದ ತನ್ನದೇ ರೀತಿಯಲ್ಲಿ ಗ್ರಹಿಸುತ್ತಾ ಅಭಿವ್ಯಕ್ತಿಸುತ್ತಿರುತ್ತಾನೆ. ಆತನ ಪ್ರಶಾಂತ ಸಾಗರದಂಥಹ ಮನಸ್ಸನ್ನು ಕಲಕುವ ಸಂಗತಿಗಳು ಎಬ್ಬಿಸುವ ಅಲೆಗಳು ಅಗಾಧವೂ ಪರಿಣಾಮಕಾರಿಯೂ ಆಗಿರುತ್ತವೆ. ಕವಿ/ಕಲಾವಿದ ತನ್ನದೇ ಒಂದು ಕ್ಲೋಸ್ಡ್ ಜಗತ್ತೋಂದನ್ನು ನಿರ್ಮಾಣ ಮಾಡಿಕೊಂಡು ಅದರೊಳಗೆ ವಿಹರಿಸುತ್ತಿರುತ್ತಾನಾದರೂ ಆತನೂ ಮೂಲತಃ ಸಮಾಜದ ಒಂದು ಭಾಗವಾಗಿರುವುದರಿಂದ […]

ಮಳೆ ಹನಿಗಳು

ಮಳೆ ಹನಿಗಳು ವಿಶ್ವನಾಥ ಎನ್. ನೇರಳಕಟ್ಟೆ ಮಳೆಯಿರದ ಇರುಳಿನಲಿಗಡಿಯಾರದ ಮುಳ್ಳಿಗೂವಿರಹ ವೇದನೆ* ನನಗೆ ಗೊತ್ತಿದೆಮಳೆ ಪ್ರಿಯತಮೆಯಿದ್ದಂತೆಪ್ರೀತಿಸುವವರನ್ನು ಹೆಚ್ಚು ಆಟವಾಡಿಸುತ್ತದೆ* ಅಬ್ಬ! ಮಳೆ ಬಂತುಇನ್ನು ನನ್ನ ಕಣ್ಣೀರುಯಾರಿಗೂ ತಿಳಿಯುವುದಿಲ್ಲ* ದೇವರೂ ಅಳುತ್ತಾನೆ ನನ್ನಂತೆಎಂದು ತಿಳಿದು ಸಮಾಧಾನವಾಯಿತುಮಳೆ ಬಂದಾಗ* ಮಳೆಯ ಜೊತೆಗೆ ಬಂದಅವಳ ಕನವರಿಕೆ, ಕನಸುಗಳಿಗೆತೆರಿಗೆ ಕಟ್ಟಬೇಕಾಗಿಲ್ಲ* ಮಳೆ ಬಂದಾಗಕೊಡೆ ಮರೆತುಬಂದವನು‘ನೆನೆದ’* ಕಲ್ಲಿನಂಥ ಕಲ್ಲೂಕರಗಿತು‘ನೆನೆದಾಗ’* ಪ್ರಕೃತಿ ಸುರಿಸಿತು ಕಣ್ಣೀರುಮನುಷ್ಯತೊಯ್ದುಹೋಗಿದ್ದಾನೆ* ಸುರಿಯುತ್ತಿದ್ದ ಮಳೆನಿಂತಾಗಮನಸ್ಸೆಲ್ಲ ಖಾಲಿ ಖಾಲಿ*******************************

ಪಟ ಗಾಳಿಯಲಿ ಹಾರಿ

ಕೆಲವು ದಶಕಗಳ ಹಿಂದೆ ಆಷಾಢಮಾಸದಲ್ಲಿ ತಲೆಯೆತ್ತಿದರೆ “ ಜಿಗಿ ಜಿಗಿಯುತ ಪಟ ಗಾಳಿಯಲಿ ತೇಲಿ ಬಾನಲ್ಲಿ ಹಾರಾಡುತ್ತಿದ್ದ ಪಟಗಳು ಕಾಣುತ್ತಿದ್ದವು ನಮ್ಮ ಹಳೇ ಮೈಸೂರು ಪ್ರದೇಶದ ಊರು, ಕೇರಿ, ಹಳ್ಳಿ ಹಾಡಿಗಳಲ್ಲಿ. ಈಗ ಅವೆಲ್ಲಾ ಮರೆಯಾಗಿವೆ

ಸಭೆಯಿಂದ ಹೊರಹೋಗುತ್ತಿದ್ದ ಹೆಂಗಸರಿಬ್ಬರು ” ಗಂಡ, ಮನೆ,ಮಕ್ಕಳು, ಸಂಸಾರ ಅಂತ ಕಟ್ಟಿಕೊಂಡು ನಮ್ಮ ಹಾಗೆ ಏಗುವವರಿಗೆ ಕಥೆಕವಿತೆ ಬರೆಯುವ ಪುರುಸೊತ್ತಾದ್ರೂ ಎಲ್ಲಿರುತ್ತೆ? ಬಣ್ಣದ ಬೀಸಣಿಕೆಯಂತೆ ಬಳುಕುತ್ತಾ, ಅತ್ತೆ ಮಾವನಿಗೆ ಮನೆ ಚಾಕರಿ ಹಚ್ಚಿ ಝಂ ಅಂತ ಓಡಾಡಿಕೊಂಡಿರೋವ್ರು ಒಂದಲ್ಲ ನೂರು ಪುಸ್ತಕ ಬರೀತಾರೆ…

Back To Top