ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ನಾಗಶ್ರೀ ಕಾವ್ಯಪ್ರಶಸ್ತಿ
೨೦೨೧ನೇ ಸಾಲಿನ ನಾಗಶ್ರೀ ಕಾವ್ಯಪ್ರಶಸ್ತಿಯು ಕಾತ್ಯಾಯಿನಿ ಕುಂಜಿಬೆಟ್ಟುರವರ ‘ಅವನು ಹೆಣ್ಣಾಗಬೇಕು’ ಎಂಬ ಕವನಸಂಕಲನಕ್ಕೆ ದೊರೆತಿದೆ. ಈ ಪ್ರಶಸ್ತಿಯು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.ಕೋವಿಡ್ ನಿಯಮಾವಳಿ ಅನುಸರಿಸಿ ಸಮಾರಂಭದ ದಿನಾಂಕ ತಿಳಿಸಲಾಗುತ್ತದೆ.ಎಂದು ಪ್ರಶಸ್ತಿ ಸಮಿತಿಯ ಸಂಚಾಲಕರಾದ ಶ್ರೀಮತಿ ತೇಜಾವತಿ ಹೆಚ ಡಿ ಅವರು ತಿಳಿಸಿದ್ದಾರೆ.
ಕವಿ ಪರಿಚಯ:
ಕಾತ್ಯಾಯಿನಿ ಕುಂಜಿಬೆಟ್ಟುರವರು ಉಡುಪಿಯ ಕಾಪು ಬಳಿಯ ಕರಂದಾಡಿಯವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಮುಂಬೈಯ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತದಲ್ಲಿ ‘ವಿಶಾರದ’ ಪದವಿಯನ್ನು ಪಡೆದಿದ್ದಾರೆ. ಕುಂಜಿಬೆಟ್ಟರವರು ಇದುವರೆಗೂ ತೊಗಲುಗೊಂಬೆ, ಮಕ್ಕಳ ಮೂರು ನಾಟಕಗಳು, ನೀನು, ಒಳದನಿಯ ಪಲುಕುಗಳು, ಮೊಗ್ಗಿನ ಮಾತು ಮುಂತಾದ 26 ಕೃತಿಗಳನ್ನು ಬರೆದಿದ್ದಾರೆ.
**********************
ತೇಜಾವತಿ ಹೆಚ್.ಡಿ.
Katyayani kunjibettu ಅವರಿಗೆ ಅಭಿನಂದನೆಗಳು
ಅಭಿನಂದನೆ ಕಾತ್ಯಾಯಿನಿ ಮೇಡಂ
ಅಭಿನಂದನೆಗಳು ಕಾತ್ಯಾಯಿನಿ ಮೇಡಂ
ಅಭಿನಂದನೆಗಳು ಮೇಡಂ.
ಅಭಿನಂದನೆಗಳು ಮತ್ತು ಶುಭಾಶಯಗಳು
ಅಭಿನಂದನೆ ಕಾತ್ಯಾಯನಿ ಮೇಡಂ.ಖುಷಿಯಾಯಿತು