Month: April 2021

ಇನ್ನು ‘ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು ಜೀವದಾತೆಯನಿಂದು ಕೂಗಬೇಕು’. ಹಾಗೇ ಅಕ್ಷರಗಳಿಂದಲೇ ಕೂಗಿ ಕರೆಯಬೇಕು ಎಲ್ಲಾ ಎಚ್ಚರಗಳಿಗೆ. ಅಪಾಯಗಳ ಬಾಯಿಗೆ ಆಹಾರವಾಗುವ ಮುನ್ನ .

ಗಜಲ್

ಪರಪಂಚದ ಕಂಬನಿಗೆ ನನ ಹೃದಯವೆ ತಂಗುದಾಣವಾಗಿದೆ
ನೀನೊಮ್ಮೆ ಆಲಂಗಿಸಿ ಬಿಸಿಯುಸಿರಿನಲಿ ಸಂತೈಸಬಾರದೆ..

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-4 ಬೆಳಗಿನ ಜಾವ ಐದೂವರೆಗೆ ಇಲ್ಲಿಯ ಏಳುವರೆಯಷ್ಟು ಬೆಳಕು ಮತ್ತು ಎಳೆ ಬಿಸಿಲು. ಒಳ್ಳೆಯ ನಿದ್ರೆಯಾಗಿ ತಾಜಾತನ ತುಂಬಿಕೊಂಡಂತೆ ಮೈ ಮನಸ್ಸು ಉಲ್ಲಸಿತವಾಗಿತ್ತು. ಮನೆಯಲ್ಲಿದ್ದರೆ ಹಲವಾರು ಕೆಲಸಗಳು ಸಾಲಾಗಿ ಧಬಧಬನೆ ಮೈ ಮೇಲೆ ಬಿದ್ದ ಹಾಗೆ ಧಾವಿಸಿ ಬರುತಿದ್ದವು. ಇಲ್ಲಿ ಯಾವ ಕೆಲಸದ ಗೊಡವೆಯೂ ಇಲ್ಲದೆ ಹಾಯಾಗಿ ಆ ಬೆಳಗಿನ ಜಾವವನ್ನು  ಆನಂದಿಸಿದೆ. ಸ್ನಾನಾದಿಗಳನ್ನು ಮುಗಿಸಿ ಬೆಳಗಿನ ಉಪಹಾರವೂ ಆಯಿತು. […]

ಗಜ಼ಲ್

ಮನಸ್ಸಿದ್ದರೆ ಹರಿದು ಹೋದ ಬಾಳನ್ನು ಮತ್ತೆ ಹೊಲೆದುಕೊಳ್ಳಬಹುದು
ಕೆಟ್ಟು ನಿಂತ ಯಂತ್ರವೂ ದಡ ಸೇರಿಸಬಹುದೆಂದು ನಂಬಿಕೆ ಇಟ್ಟಿದ್ದೇವೆ

ಅಂಕಣ ಬರಹ ಮೌನದ ಮಾತು… ಇದನ್ನ ಈ ಮುಂಚೆ ಯಾರಾದರೂ ಹೇಳಿರಬಹುದು ..ನನಗೆ ಗೊತ್ತಿಲ್ಲ… ಈ ಕ್ಷಣ ಹೊಳೆದ ಮಾತುಗಳಿವು.     ಬಹಳಷ್ಟು ಸಂದರ್ಭಗಳಲ್ಲಿ ಬಹಳಷ್ಟು ಜನರ ಮೌನವನ್ನು ದೌರ್ಬಲ್ಯ ಎಂದೇ ಪರಿಗಣಿಸಿ ಇನ್ನಷ್ಟು ತುಳಿಯಲು ಸಮಾಜದಲ್ಲಿ , ವ್ಯವಸ್ಥೆಯಲ್ಲಿ ಪ್ರಯತ್ನಗಳು ನಡೆದಿವೆ , ನಡೆಯುತ್ತಲೇ ಇವೆ ..     ಮೌನ ಕಾಯುತ್ತಿರುತ್ತದೆ ..ಒಳಗೊಳಗೇ ಮಾಗುತ್ತಿರುತ್ತದೆ ..ಒಡಕು ಪಾತ್ರಗಳೆಲ್ಲ ಸದ್ದು ಮಾಡಿ ಮಾಡಿ ಸೋತು ಸುಮ್ಮನಾದ ನಂತರ ಮೌನ ಮಾತಾಗುತ್ತದೆ..           ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು […]

ನೆನಪಿನ ನವಿಲು ಗರಿಗಳ ನೇವರಿಕೆ

ಸ್ಮಿತಾ ಅಮೃತರಾಜ್ ಅವರ ಒಂದು ವಿಳಾಸದ ಹಿಂದೆ ಪುಸ್ತಕದ ಬಗ್ಗೆ ಬರೆದಿದ್ದಾರೆ ಮಮತಾ ಶಂಕರ್

ಬಿಸಿಲ ನೆಲ ಕಂಡ ಬೆಳದಿಂಗಳ ಚೇತನ

ನೀ ಹೋದ ಮರುದಿನ ಮತ್ತ ನಂ ಬದುಕು ಮದಲಿನಂಗ ಆಗ್ಯಾದೋ ಬಾಬಾಸಾಹೇಬ!
ನಿನ್ನಂಗ ನುಡಿವಾಂವಾ,ಕಳ ಕಳಿಯ
ಪಡುವಂವ ಬರಲಿಲ್ಲೋ ಒಬ್ಬ!!
ಚನ್ನಣ್ಣ ವಾಲೀಕಾರ

ಈಗ

ಕವಿತೆ ಈಗ  ಆನಂದ ಆರ್.ಗೌಡ ತಾಳೇಬೈಲ್ ರವಿವಾರದ ಸಂಜೆಅಮಲು ಚೆಲ್ಲಿದ ಎಂಥೆಂಥಾದೋಕಸ ಪೌರ ಸೇವಕರ ಪೊರಕೆಶುಚಿಗೊಳಿಸುತ್ತಿತ್ತು ರಸ್ತೆಯ ಇಕ್ಕೆಲಗಳಲ್ಲಿಆಗ ತಾನೇ ಪ್ರಸವವಾದಹೊಂಗಿರಣ ಅವರ ವದನಕ್ಕೆಮುತ್ತನೀಯುತ್ತಿತ್ತು ಅಲ್ಲಿಯೇ ಸೃಷ್ಟಿಸಿದ ನೇರಳೆಲೆಗಳನೆರಳು ಬೆಳಕಿನಾಟ ಕಲೆಗಾರನಕುಂಚದ ಕಲೆಯ ನಾಚಿಸಿದೆ ಕಾರ್ಪೋರೇಟ್ ರಸ್ತೆ ನಡುವೆನೆಟ್ಟ ಪುಟ್ಟ ಗಿಡಗಳುಆರೈಕೆ ಮಾಡಲು ತೂಗು ಹಾಕಿದದೊಡ್ಡ ದೊಡ್ಡ ವ್ಯಕ್ತಿಗಳ ನಾಮಫಲಕರಾರಾಜಿಸುತ್ತಿದೆಚುನಾವಣೆ ಮುಗಿದರೂ ಅದರಂಚಿನಲಿ ಹಾಯ್ದುಹೋಗುವ ಚಿರಯೌವನೆಅಂಗೈ ಸೋಕಿದರೆ ಹಾಲುತೊಟ್ಟಿಕ್ಕುವ ಸೊಬಗುಇನ್ನೂ ಹೊಟ್ಟೆಕಿಚ್ಚು ತರಿಸುವತೊಟ್ಟುಡುಗೆಯ ಸಿರಿವಂತಿಕೆಮುಚ್ಚಿದೆದೆಯೊಡ್ನಿಅರಿವಿಲ್ಲದೇ ಇಳಿದುಚಿಗುರಿದೆಲೆಗಳ ಸವರಿಅಮಲೇರಿಸುವ ಆ ನೋಟಮನಸ ಕೊಲ್ಲುವ ಸಂಚಲತೆಪಡ್ಡೆ ಹೈಕಳ ಹೃದಯ ಬಡಿತಇಮ್ಮಡಿಸಿದೆ […]

ಇನ್ನೂ ಎಷ್ಟು ದೂರ?

ಕವಿತೆ ಇನ್ನೂ ಎಷ್ಟು ದೂರ? ಡಾ.ಕಾತ್ಯಾಯಿನಿ ಕುಂಜಿಬೆಟ್ಟು ನಕ್ಷತ್ರ ಕದಿಯಲುಹೊರಟಿರುವೆಮೈ ತುಂಬ ನಕ್ಷತ್ರ ಹೊಂದಿರುವಆಕಾಶದಿಂದಎರಡೇ ಎರಡು ನಾನು ಕದ್ದರೆಯಾರ ಅಪ್ಪನ ಮನೆ ಗಂಟುಹೋದೀತು ಹೇಳು?ಹೊರಟಿದ್ದೇನೆಕನ್ನ ಕೊರೆಯಲುಯಾರಿಗೆ ಗೊತ್ತು?ನಕ್ಷತ್ರಗಳು ಎನ್ನುವುದುನೀಲಿ ಗೋಡೆಯ ಅಚಿನಿಂದಇನ್ನಾರೋ ಕನ್ನ ಕೊರೆದುಇಣುಕಿದ ತೂತಿರಬಹುದುಆಚೆ ಮೂಡಿರಬಹುದುಈಚೆ ಮುಳುಗಿದ ಸೂಯ೯ತನ್ನ ಕಿರಣಗಳ ಕನ್ನದ ತೂತುಗಳಿಂದಈಚಿನ ಕತ್ತಲಿಗೆ ತೂರಿರಬಹುದುಅಬ್ಬಾ! ಅಗಣಿತ ನಕ್ಷತ್ರಗಳು!ಬಹುಶಃ ಅದು ಕಳ್ಳರದ್ದೇ ಲೋಕವಿರಬಹುದುನನ್ನಂತೆ ಎರಡೇ ಎರಡುನಕ್ಷತ್ರ ಕದಿಯಲು ಹೊರಟವರು ನಡೆಯುತ್ತಲೇ ಇದ್ದೇನೆಇನ್ನೂ ಎಷ್ಟು ದೂರ? *************************

Back To Top