ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮುಟ್ಟು

ಡಾ.ಸುರೇಖಾ ರಾಠೋಡ್

Woman stomach ache Sad beautiful woman with stomach ache. Isolated vector illustration menstruation periods stock illustrations

ಮುಟ್ಟು
ಮುಟ್ಟಿನೊಳಗಿರುವ
ಗುಟ್ಟು
ಗೊತ್ತಿದ್ದು
ಗೊತ್ತಿಲ್ಲದಂತೆ ಇರುವಿರೇಕೆ..?

ಮುಟ್ಟು
ಸೃಷ್ಟಿಯ
ಗುಟ್ಟು
ಗೊತ್ತಿದ್ದು
ಗೊತ್ತಿಲ್ಲದಂತೆ ಇರುವಿರೇಕೆ…?

ಮುಟ್ಟು
ಇಲ್ಲದಿದ್ದರೆ
ಮನುಕುಲದ
ಅಂತ್ಯವೆಂದು
ಗೊತ್ತಿದ್ದು
ಗೊತ್ತಿಲ್ಲದಂತೆ ಇರುವಿರೇಕೆ…?

ಮುಟ್ಟಿನಿಂದಲೆ
ಹೆಣ್ಣು
ಗಂಡು
ಹುಟ್ಟಿರುವರೆಂದು
ಗೊತ್ತಿದ್ದು,
ಗಂಡು ಮೇಲು
ಹೆಣ್ಣು ಕೀಳೆಂದು
ಕಾಣುವಿರೇಕೆ…??

ಮುಟ್ಟು
ಅಪವಿತ್ರವಾದ್ರೆ
ಮುಟ್ಟಿನಿಂದ
ಹುಟ್ಟಿದ
ಪ್ರತಿಜೀವವು
ಅಪವಿತ್ರ
ಅಲ್ಲವೇ?

**************************

About The Author

Leave a Reply

You cannot copy content of this page

Scroll to Top