Category: ದೀಪದ ನುಡಿ

ದೀಪದ ನುಡಿ ಇಲ್ಲಿಗೆ ಮುಗಿಯುತ್ತದೆ. ಹದಿನಾಲ್ಕು ವಾರಗಳ ಕಾಲ ಮೂಡಿ ಬಂದ ಈ‌ ಅಂಕಣದಲ್ಲಿ ನಾ ಕಂಡ, ಕೇಳಿದ ,ಅನುಭವಿಸಿದ ಘಟನೆಗಳು, ಜೀವನದ ತಿರುವುಗಳು ಕಳಿಸಿದ ಒಳನೋಟಗಳಿಗೆ ಅಕ್ಷರದ ರೂಪು ಕೊಡಲು ಪ್ರಯತ್ನಿಸಿರುವೆ.ದೀಪ ಎಂದಿಗೂ ಮಾತಾಡದು ಎನ್ನುವವರೂ ಇದ್ದಾರೆ. ಆದರೆ ದೀಪದ ಬೆಳಕೇ ದೀಪದ ಮಾತು.ಜಗತ್ತಿರುವವರೆಗೂ ಬೆಳಕಿರಲೇಬೇಕು.ದೀಪಗಳು ಬೆಳಗಲೇ ಬೇಕು.ಅದು ಸೂರ್ಯನಿರಬಹುದು ಅಥವಾ ಪುಟ್ಟ ಹಣತೆಯಿರಬಹುದು.ಬೆಳಕು ಬೆಳಕೇ…ಬೆಳಕಲ್ಲೇ ನಮ್ಮ ಬದುಕು ಭಾವಗಳು ಅರಳಬೇಕು ಎನ್ನುವುದಂತೂ‌ಸತ್ಯ..ನಮ್ಮ ನಮ್ಮ ಎದೆಯಲ್ಲಿನ ಹಣತೆಗಳು ನಾವಿರುವವರೆಗೂ ಆರಂದತೆ ಕಾಪಿಡುವ ಜಬಾಬ್ದಾರಿ ನಮ್ಮದೇ.

*ಮತ್ತೆ ಒಂದು ದಿನ ನಾವೆಲ್ಲ …ಉಸಿರಾಡುತ್ತೇವೆ ..ನಿರಾಳವಾಗಿ…ನಮ್ಮ ನಮ್ಮ ಅಸ್ತಿತ್ವಗಳ , ಗುರುತುಗಳ ಮರಳಿ ಪಡೆದೇ ಪಡೆಯುತ್ತೇವೆ ….ಈ ಯುದ್ಧ ನಿಲ್ಲದು …ನಾವು ಗೆಲುವವರೆಗೂ*

ಅಂಕಣ ಬರಹ ದೀಪದ ನುಡಿ ಗೆಲ್ಲುವುದು ಬೆಳಕೇ ಒಳಿತು-ಕೆಡುಕುಗಳು‌ ಇಲ್ಲದೆ ಈ ಜಗತ್ತಿಲ್ಲ. ಇಲ್ಲಿ ಅಳತೆಗಳು ಮಾತ್ರಾ ಸಾಪೇಕ್ಷವೇ ಹೊರತು ಒಳತು-ಕೆಡುಕುಗಳಲ್ಲ. ಒಳಿತು ಕೆಡುಕುಗಳಿಲ್ಲವೇ ಇಲ್ಲ ಎಂದು ವಾದಿಸುವವರೂ ಇದ್ದಾರೆ ನಮ್ಮ ನಡುವೆ. ಆದರೆ ಹಾಗೆ ವಾದಿಸಿದವರೆಲ್ಲ ಬಹುತೇಕ ಯಾವುದೋ ಸಂದರ್ಭದಲ್ಲಿ ಕೆಡುಕಿಗೆ ಬಲಿಯಾಗಿ ನೋಯಬಹುದು ಅಥವಾ  ಇತರರಿಗೂ ಕೆಡುಕು ಮಾಡಲೂಬಹುದು. ಮಾನಸಿಕವಾಗಿ, ದೈಹಿಕವಾಗಿ , ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂಸಿಸುವುದನ್ನೇ ಕೆಡುಕು ಎಂದು ಬಹಳ ಸರಳವಾಗಿ ಹೇಳಬಹುದು.ದೊಡ್ಡ ದೊಡ್ಡ ವ್ಯಾಖ್ಯಾನದ ಅವಶ್ಯಕತೆಯೇ ಇಲ್ಲ. ಬಹಳಷ್ಟು ಸಲ ಸಜ್ಜನರೇ […]

ಮನುಷ್ಯ ಮನುಷ್ಯನಿಗಾಗದೆ ಮತ್ತಾರಿಗಾಗುತ್ತಾನೆ? ಸಂಬಂಧಿಗಳು, ಸ್ನೇಹಿತರೆಂದ ಮೇಲೆ ಒಂದಲ್ಲ ಒಂದು ಸಂದರ್ಭದಲ್ಲಿ ಪರಸ್ಪರರಿಗೆ ಸಹಾಯಮಾಡಲೇಬೇಕಾಗುತ್ತದೆ.ಆ ಸಹಾಯ ಭೌತಿಕ ವಸ್ತುವಿನ ರೂಪದಲ್ಲಿರಬಹುದು ಅಥವಾ ಮಾನಸಿಕ ಸಾಂತ್ವನದ ರೂಪದಲ್ಲಿರಬಹುದು. ಇದರಲ್ಲಿ ಅಚ್ಚರಿಯೇನೂ ಇಲ್ಲ

ಸಾವಿನೊಂದಿಗೇ ಬದುಕುವ ಅನಿವಾರ್ಯತೆ ಈ ಬದುಕಿನದು. ಏನೇ ಇದ್ದರೂ ಏನೇ ಗೆದ್ದರೂ ಕೊನೆಗೊಮ್ಮೆ ಎಲ್ಲ ತೊರೆದು ಹಿಡಿ ಬೂದಿಯಾಗುವುದು ಅಥವಾ ಮಣ್ಣಲ್ಲಿ ಸೇರುವುದು ಕಾಲಚಕ್ರದ ನಿಯಮ.

ಎಲ್ಲವೂ ಸರಿ ಇದ್ದಲ್ಲಿ ಸುಳ್ಳಿನ ಅವಶ್ಯಕತೆಯೇ ಬಾರದು.ಎಲ್ಲಿ ಸ್ವಾರ್ಥ, ಮೋಸ, ನಯವಂಚಕತನ,ಅಹಂಗಳು ವಿಜೃಂಭಿಸುತ್ತವೋ ಅಲ್ಲಿ ಸುಳ್ಳು ಆಹ್ವಾನಕ್ಕೇ ಕಾಯದ ಅತಿಥಿಯಂತೆ ಧಾವಿಸಿ ಹೋಗಿ ನೆಲೆಸುತ್ತದೆ.ಮತ್ತು ಅಲ್ಲೇ ಖಾಯಂ ಆಗಿ ಉಳಿಯಲು ಪ್ರಯತ್ನಿಸುತ್ತದೆ.

ಮೌಲ್ಯಗಳ ಕಡೆಗಾಣಿಸುವ ಮನಸಿಗೆ ಸರಿ- ತಪ್ಪುಗಳ ವಿವೇಚನೆ ಇರುವುದಿಲ್ಲ.ಸರಿ — ತಪ್ಪುಗಳ ವಿವೇಚನೆಯಿಲ್ಲದ ಬದುಕು ತಾನೂ ಬೆಳಗದು ಇತರರ ಬದುಕನ್ನೂ ಬೆಳಗಿಸದು.

ದೀಪ ಮತ್ತೊಂದು ದೀಪವನ್ನು ಹಚ್ಚುತ್ತದೆಯೆ ಹೊರತು ಅಸೂಯೆಯಿಂದ ತಾನೇ ಬೆಳಗಬೇಕೆಂಬ ಸ್ವಾರ್ಥದಿಂದ ಅಥವಾ ಅಹಂನಿಂದ ಇನ್ನೊಂದು ದೀಪವನ್ನು ನಂದಿಸುವುದಿಲ್ಲ. ನಾವುಗಳೂ ದೀಪಗಳಾಗಬೇಕಿದೆ. ಹಿತಶತೃಗಳ ಮುಖವಾಡ ಕಿತ್ತೆಸೆದು ನಿಜ ಮಾನವರಾಗಿ ಬದುಕಬೇಕಿದೆ

ಅಂಕಣ ಬರಹ ಮೂರು ಗಳಿಗೆಯ ಬಾಳಿನಲ್ಲಿ…           ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ..        ಶುದ್ಧ ವೈರಾಗ್ಯ ಮೂಡಿಸುವ ಈ ದಾಸರ ಪದವನ್ನು  ಬಹುಶಃ ಹಳೆಯ ತಲೆಮಾರಿನವರು ಅದೆಷ್ಟು ಸಲ ಗುಣುಗುಣಿಸಿರಬಹದೋ ಏನೋ..        ನಿಜವೆ ?  ಈ ಪ್ರಪಂಚದಲ್ಲಿ ಯಾರಿಗೂ ಇಲ್ಲವೆ? ಲೌಕಿಕ ವ್ಯಾಪಾರಿಗಳಾದ ನಾವುಗಳು ಕಟ್ಟಿಕೊಂಡ ಸಂಸಾರ , ಕೈಕೊಂಡ ವೃತ್ತಿ , ಗೆಳೆಯರು ,ಬಂಧುಗಳು ಇವರೆಲ್ಲ ಏನೂ ಅಲ್ಲವೆ? ನೀರಿನೊಳಗಿದ್ದರೂ ನೀರನ್ನು ಸೋಕಿಸಿಕೊಳ್ಳದ ಕಮಲಪತ್ರದಂತಹ ಬದುಕು […]

ಈ ಬದುಕಿನಲ್ಲಿ ಗಳಿಸಿದ ಪ್ರತಿಯೊಂದನ್ನೂ ಕಾಲದ ಜೊತೆಜೊತೆಗೇ ಮುಂದೆ ಸಾಗುತ್ತ ಪ್ರತಿಯೊಬ್ಬರೂ ಕಳೆದುಕೊಳ್ಳಲೇಬೇಕಾಗುತ್ತದೆ. ಹುಟ್ಟಿನೊಂದಿಗೆ ಅಂಟಿಕೊಂಡ ನಂಟುಗಳ ಜೊತೆಜೊತೆಗೇ ಗಳಿಸಿದ ಸಮಸ್ತವೂ ಬದುಕಿನ ಸಂಕಲನಕ್ಕೆ ಬಂದರೆ ಎಲ್ಲೆಲ್ಲಿ ಯಾವ ಯಾವುದರ ಘಳಿಗೆ ತೀರುತ್ತದೋ ಅಲ್ಲಲ್ಲಿ ಅವುಗಳೆಲ್ಲಾ ಬದುಕಿನಿಂದ ಕಳೆದುಹೋಗಲಾರಂಭಿಸುತ್ತವೆ.

Back To Top