ಅಂಕಣ ಬರಹ

ಭೂತದಿಂದ ವರ್ತಮಾನದವರೆಗೆ…

White female Hand Fist set isolated, woman rights, protest, conflict or winner concept, Girl power creative banner. 3d illustration White female Hand Fist set isolated, woman rights, protest, conflict or winner concept, Girl power creative banner. 3d illustration sculptures oflibarated woman stock pictures, royalty-free photos & images

ಯತ್ರನಾರ್ಯಸ್ತು ಪೂಜ್ಯಂತೆ

ರಮಂತೆ ತತ್ರ ದೇವತಃ’

ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೊ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳಿದ ಅದೇ ಮನು ಮುಂದೆ ನ:ಸ್ತ್ರೀ ಸ್ವಾತಂತ್ರ್ಯ’ಎಂದು ಹೇಳಿದ ಮಾತು ಉಂಟು.

ಹೀಗಾಗಿ ನಮ್ಮ ಭಾರತೀಯ ಪಾರಂಪರಿಕ ಹಾಗೂ ಚಾರಿತ್ರಿಕ ಅಧ್ಯಾಯಗಳನ್ನು ತೆರೆದು ನೋಡಿದಾಗ ಸ್ತ್ರೀಯರ ಬಗೆಗೆ ಇಬ್ಬಗೆಯ ನೀತಿ, ಮಾತುಗಳು ಇರುವುದನ್ನು ಕಾಣುತ್ತೇವೆ.

ಮಾತೆಯೆಂದು ಗೌರಾವಾರ್ಥಗಳಿಂದ ವೈಭವೀಕರಿಸುವ ನೆಲೆಯೊಂದಾದರೆ, ದಾಸಿಯೆಂದು ಭೋಗದ ವಸ್ತುವನ್ನಾಗಿ ಕಾಣುವ ಪುರುಷ ಪ್ರಧಾನ ನೆಲೆ ಇನ್ನೊಂದು. ಅಂದು, ಇಂದೂ ಕೂಡಾ ಸ್ತ್ರೀಯ ಅಂತಸ್ತು ಮಾತ್ರ ಕೆಳಸ್ತರವೇ. ರೂಪ ಬೇರೆ ಬೇರೆ ಅಷ್ಟೇ. ಸಮಾಜವೆಂದರೆ ಅದು ಪುರುಷನದು. ಸಂಸ್ಕೃತಿಯೆಂದರೆ ಅದು ಪಿತರೂಪಿಯದು. ಆರ್ಥಿಕತೆ ಮತ್ತು ಆಯವ್ಯಯ ಎಂದರೆ ಅದು ಪುರುಷನ ದುಡಿಮೆಯನ್ನು ಅವಲಂಬಿಸಿಕೊಂಡು ರೂಪಗೊಳ್ಳುವಂತದ್ದು. ಧರ್ಮವೆಂದರೆ ಅದು ಪತಿಧರ್ಮ. ಸ್ತ್ರೀಯೆಂದರೆ ಮಾತ್ರ ಅದು ಅವನ ಸೊತ್ತು.

ಅಲ್ಲಿ ಚರಿತ್ರೆಯಾಗುವುದು ಎಲ್ಲವೂ (His’tory) ಹೀಜ್ ಸ್ಟೋರಿ ಮಾತ್ರ. ಹರ್ ಸ್ಟೋರಿ ಮಾತ್ರ ಗೌಣವೇ. ವೇದಗಳಿಗೆ ಎಷ್ಟೇ ಭಾಷ್ಯ ಬರೆದರೂ ಕಾನೂನು ರೂಪಿತವಾಗುವುದು ಸಾಂಪ್ರದಾಯಿಕ ತತ್ವಗಳ ಆಧಾರದ ಮೇಲೆಯೇ.

ಇದರಿಂದ ನೇರ ತಿಳಿದು ಬರುವುದೆಂದರೆ; ಸಮಾಜ ಮಹಿಳೆಯನ್ನು ನೋಡಿದ್ದು, ನೋಡುತ್ತಿರುವುದು ಪುರುಷಪ್ರಧಾನ ನೆಲೆಯಿಂದಲೇ ಎನ್ನುವುದು ಕೂಡಾ ಪ್ರಧಾನ ಅಂಶವೇ.

ವಿಶೇಷವಾಗಿ ತಳಸಮುದಾಯದ ಮಹಿಳೆಯಂತೂ ತೀರಾ ಹೇಳತೀರದ ಅವಮಾನಕ್ಕೆ ತುತ್ತಾಗುತ್ತಲೇ ಇದ್ದಾಳೆ. ಅವಗಣನೆಗೆ ಗುರಿಯಾಗುತ್ತಿದ್ದಾಳೆ. ಕಾರಣ ಒಂದು ಅಧ್ಯಯನ ಪ್ರಕಾರ ಕಟಿಬದ್ದ ಸಂಪ್ರದಾಯ ಹೇರಿಕೊಂಡವರು ಇವರುಗಳೇ ಆಗಿರುವುದು ಅಂತಲೂ ಹೇಳಲಾಗುತ್ತದೆ. ಜೊತೆಗೆ ಲಿಂಗಾನುಪಾತದಲ್ಲಿ ಸ್ತ್ರೀ ಸಂಖ್ಯೆ ಕಡಿಮೆಯಾಗುತ್ತ ಬಂದಿರುವುದು ಅವಗಣನೆಯ ಘೊರ ಸತ್ಯದರ್ಶನ ಮಾಡಿಸುತ್ತದೆ. ಈ ಮಹಿಳೆ ಅನೇಕ ನಿಷಿದ್ಧಗಳನ್ನು ಹೇರಿಸಿಕೊಂಡಿದ್ದಾಳೆ. ಇದಕ್ಕೆ ತನ್ನ ಜೈವಿಕ ರಚನೆಯ ಕಾರಣ ಇರಲೂಬಹುದು. ಈ ತೆರನಾದ ನಿಷಿದ್ಧಗಳೇ ಅವಳನ್ನು ಅಧೀರಳನ್ನಾಗಿ ಮಾಡಿವೆ.ಮಹಿಳೆಯನ್ನು ಉಪಯೋಗಿಸಿಕೊಂಡ ಪುರುಷನ  ಎಡಬಿಡಂಗಿತನ ಹಾಗೂ ಸ್ತ್ರೀಯ ಸಹಜ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಒಂದು ಕಾವ್ಯದ ಸಾಲುಗಳು ಹೀಗಿವೆ

ಬಂದರು ಭೀಕ್ಷುಕರಂತೆ

ತ್ರಿಮೂರ್ತಿಗಳೊ

ಚತುರ್ಮುಖ ಬ್ರಹ್ಮರೊ

ಗಂಡಸರು ಭೂಮಿಗೆ

ಕೈಯಲ್ಲಿ ಭಿಕ್ಷಾ ಪಾತ್ರೆ

ಬಗಲಲ್ಲಿ ಹರಿತ ಚೂರಿ

ನಕ್ಕಳು ವಸುಂಧರೆ ಅರುಂಧತಿ

ಧೂರ್ತ ಗಂಡಸರ ಮುಖವಾಡ ಕಿತ್ತೆಸೆದು

ಮಾಡಿದಳು ಮಕ್ಕಳ

ಇಟ್ಟಳು ಬಾಯಲ್ಲಿ ಮೊಲೆತೊಟ್ಟುಗಳ”

ಅವನೇ ನಿರ್ಮಿಸಿದ ಪುರಾಣ ಕಾನೂನುಗಳು ಉಪಯೋಗಿಸಿದ ಮಹಿಳಾವಾದದ ನೆಲೆಯಿಂದ ತಿಳಿದುಕೊಂಡು ಸ್ವತಃ ಅವನಿಗೇ ಎದಿರೇಟು ಕೊಡುವ ಸಾಲುಗಳು ಚರಿತ್ರೆಯ ಪುಟಗಳಲ್ಲಿ ಉಳಿಯಬೇಕಾದದ್ದೇ ಆಗಿವೆ. ಇಲ್ಲಿ ಪುರಾಣ ಭಂಜನ ಮಾಡಿ ಮಹಿಳಾಪರವಾದ ಕಥನವಾಗಿಸುವ ಕಲೆ ಅಪರಿಮಿತವಾದುದು.

ಇನ್ನು ಮಹಿಳೆಯರೆಲ್ಲ ಕುಟುಂಬ ಲಾಭದ ಬಹುಪಾಲು ಕೆಲಸಗಳಲ್ಲಿ ತಮ್ಮ ಉಪಸ್ಥಿತಿ ಇದ್ದರೂ  ಅಧಿಕಾರದ ಹಂಚಿಕೆ ವಿಷಯದಲ್ಲಿ ಅವನದೇ ಮೇಲುಗೈ. ನಾನು ಎನ್ನುವ ಅವಳು ಬರಿ ಭೋಗದ ವಸ್ತು. ಊಳಿಗಮಾನ್ಯ ವ್ಯವಸ್ಥೆಯಿಂದ ಬಂದಿರುವ ಈ ಫ್ಯೂಡಲ್ ಮನಸ್ಥಿತಿಯಿಂದ ಬಹುತೇಕ ಮಹಿಳೆಯರು ಅದರ ಫಲಾನುಭವಿಗಳೆ ಆಗಿದ್ದಾರೆ.

ಅಷ್ಟೇ ಅಲ್ಲದೇ ಈ ಅಧೀರೆ ಮಹಿಳೆ ತನ್ನ ಆತಂಕಗಳನ್ನು, ಅಭೀಪ್ಸೆಗಳನ್ನು  ಪುರುಷನೊಂದಿಗೆ ಹಂಚಿಕೊಳ್ಳಲಾಗದೇ ಅವ್ಯಕ್ತ ರೂಪದ ದೇವರಲ್ಲಿ ಮೊರೆಹೋಗಿ ಹರಕೆಗಳ ಮಹಾಮಡುವಿನಲ್ಲೂ ಸಿಲುಕಿದ್ದಾಳೆ. ಇಂಥ ಮೌಢ್ಯದ ಹರಕೆಯಂಥ ಇಕ್ಕಟ್ಟಿಗೆ ಸಿಲುಕಲು ಪುರುಷನ ದಿವ್ಯ ಉಪೇಕ್ಷೆಯ ನಿಲುವುಗಳೆ ಕಾರಣ ಆಗಿರುತ್ತವೆ.

ಕಾಲ ಗತಿಸಿದಂತೆ ಅನೇಕಾನೇಕ ಸ್ಥಿತ್ಯಂತರಗಳು ಘಟಿಸುವುದು ಸಹಜ ಪ್ರಕ್ರಿಯೆ.ಹಾಗೇಯೆ ಆಧುನಿಕ ಶಿಕ್ಷಣಕ್ರಮ, ಕಾಯ್ದೆ ಕಾನೂನುಗಳು, ನೌಕರಿಗಳಂತಹ ಸವಲತ್ತುಗಳು ಸ್ತ್ರೀಗೆ ಬಂಧನದ ಬಿಡುಗಡೆಯ ದಾರಿ ತೋರಿವೆ.

ಹೊಸ್ತಿಲಿಗೆ ಬಾಚಿ ಮೊಳೆ ಬಡಿಸಿ ಗೃಹಬಂಧನದಲ್ಲಿ ಉಳಿದಿದ್ದ ಮಹಿಳೆ ಈಗ ಸಂಸ್ಕೃತಿ ಮುರಿದು ಕಟ್ಟುವ ಸನ್ನಾಹದಲ್ಲಿದ್ದಾಳೆ. ಕಾರಣ ಅವಳೀಗ ಹೊಸ ದಿಗಂತಗಳ ಮೇಲೆ ಅಡಿ ಇಡುತ್ತಿದ್ದಾಳೆ. ಇಷ್ಟಾದರೂ ನಾನು ಹೋಗುವ ದಾರಿಯಲ್ಲಿ ಮೂರು ಪ್ರಕಾರದ ಮಹಿಳೆಯರನ್ನು ನೋಡುತ್ತೇನೆ.

ಹಣೆಯ ತುಂಬಾ ಕುಂಕುಮವಿಟ್ಟು ಜಾನುವಾರುಗಳೊಂದಿಗೆ ವಾಕ್ ಮಾಡುವ ಜಾನಕಿಯರು, Dad,I want a crazy smile of Padukone ಎನ್ನುತ್ತ ಅರೆಬರೆಯ ಇಂಗ್ಲೀಷ್ ಮಾತನಾಡುತ್ತ ನೋಟ್ ಪುಸ್ತಕ ಹೊರಳಾಡಿಸುವ ಬಾಲೆಯರು, what a girl! ಅಂತಲೇ ಉದ್ಘಾರ ತೆಗೆಸುವ ಸಾಧಕ ಮಹಿಳೆಯರ ಪಿಸುಪಿಸು ವಿರಳ ಮಾತುಗಳು ಕೇಳುತ್ತೆವೆ.

 ಇನ್ನು ‘ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು ಜೀವದಾತೆಯನಿಂದು ಕೂಗಬೇಕು’. ಹಾಗೇ ಅಕ್ಷರಗಳಿಂದಲೇ ಕೂಗಿ ಕರೆಯಬೇಕು ಎಲ್ಲಾ ಎಚ್ಚರಗಳಿಗೆ. ಅಪಾಯಗಳ ಬಾಯಿಗೆ ಆಹಾರವಾಗುವ ಮುನ್ನ .

***************************

ತೇಜಾವತಿ ಹೆಚ್ ಡಿ

ಶಿಕ್ಷಕಿ,ಲೇಖಕಿ. ಪ್ರಕಟಿತ ಕವನ ಸಂಕಲನಗಳು:

1 ಕಾಲಚಕ್ರ 2 ಮಿನುಗುವ ತಾರೆ 2 ಬಾ ಭವಿಷ್ಯದ ನಕ್ಷತ್ರಗಳಾಗೋಣ

8 thoughts on “

  1. ಸ್ತ್ರೀವಾದಿ ನೋಟಕ್ರಮದ‌ ಬರಹ ಸೊಗಸಾಗಿ ಮೂಡಿಬಂದಿದೆ.

Leave a Reply

Back To Top