ಧಾರಾವಾಹಿ ಸಂಗಾತಿ–42
ಸವಿತಾ ದೇಶಮುಖ

ಜಯದೇವಿತಾಯಿ ಲಿಗಾಡೆ
ಜೀವನಗಾಥೆ
ಮಹಾಜನ ಆಯೋಗ –
ಜಯದೇವಿ ತಾಯಿಯವರು

ಜಯದೇವಿತಾಯಿಯವರು ಕನ್ನಡಿಗರ ಜೊತೆಗೂಡಿ ನಡೆಸಿದ ನಿರಂತರ ಹೋರಾಟ ನಡೆದೇ ಇತ್ತು. ಜಯದೇವಿತಾಯಿಯವರ ಕನ್ನಡಪರ ಕಾಳಜಿ ಮತ್ತು ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ದೂರದೃಷ್ಟಿಯನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಿದೆ…..
ಕನ್ನಡಿಗರ ಹಕ್ಕುಗಳ ಪ್ರಶ್ನೆ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿತ್ತು.
೧೯೬೧ ರಲ್ಲಿ ನಾಲ್ಕು ಜನರ ಸಮಿತಿಯನ್ನು ಸರ್ಕಾರದಿಂದ ನೇಮಿಸಲ್ಪಟ್ಟಿತು. ಮಹಾರಾಷ್ಟ್ರಿಯರ ಪ್ರಭಾವವು ಕೇಂದ್ರದ ಮೇಲಿದ್ದ ಕಾರಣ ಯಾವ ಆಯೋಗದಿಂದಲೂ ನಮಗೆ ಅನುಕೂಲವಾಗಲಿಲ್ಲ
ಸಿದ್ದರಾಮನ ಸೊನ್ನಲಿಗೆಯೂ ಕರ್ನಾಟಕದಿಂದ ಬೇರೆಗೊಂಡಿತ್ತೆಂದು ತಾಯಿಯವರು ಕಳವಳ ಪಟ್ಟರು.
ಇಂತಹ ಬೆಳವಣಿಗೆಗಳನ್ನು ಜಯದೇವಿತಾಯಿಯವರು ಕಳಕಳಿಯಿಂದ ಗಮನಿಸುತ್ತಿದ್ದರು .
ಪಟಾಸ್ಕರ್ ಸೂತ್ರದ ಸಂದರ್ಭ ಮತ್ತು ಗಡಿಭಾಗದ ಆತಂಕ,ಗಡಿವಿವಾದಗಳನ್ನು ಬಗೆಹರಿಸಲು ನಡೆದ ಪ್ರಯತ್ನಗಳ ನಡುವೆಯೇ ಬೆಳಗಾವಿ, ನಿಪ್ಪಾಣಿ, ಕಾರವಾರ ಮೊದಲಾದ ಪ್ರದೇಶಗಳ ಭವಿಷ್ಯದ ಕುರಿತು ಹಲವು ಚರ್ಚೆಗಳು ನಡೆಯುತ್ತಿದ್ದವು. ಈ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಲಿವೆ ಎಂಬ ಊಹಾಪೋಹಗಳು ಹರಡಿದಾಗ, ಅಲ್ಲಿನ ಕನ್ನಡಿಗರ ಮನಸ್ಸಿನಲ್ಲಿ ಸಹಜವಾಗಿಯೇ ಆತಂಕ ಮೂಡುತ್ತಿತ್ತು.

ಸೊಲ್ಲಾಪುರವನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬ ಮನವಿ ಪತ್ರ ಇಂದಿರಾ ಗಾಂಧಿಯವರಿಗೆ ಬೆಂಗಳೂರಿನಲ್ಲಿ ಕೋಟ್ಟರು.ಹಾಗೆ ಅವರು ವಚನಗಳನ್ನು ಮರಾಠಿಯಲ್ಲಿ ಅನುವಾದಿಸಿದ ಪುಸ್ತಕವನ್ನು ಕೊಟ್ಟರು.
ತಮ್ಮ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಬೆಸೆದುಕೊಂಡಿದ್ದ ನೆಲದ ಭವಿಷ್ಯವನ್ನು ಕೇವಲ ರಾಜಕೀಯ ಲೆಕ್ಕಾಚಾರಗಳ ಆಧಾರದಲ್ಲಿ ನಿರ್ಧರಿಸುವುದನ್ನು ಕನ್ನಡಪರ ಮನಸ್ಸುಗಳು ಒಪ್ಪಿಕೊಳ್ಳುವುದು ಕಷ್ಟವಾಗಿತ್ತು. ಗಡಿಭಾಗದ ಜನರ ಅಭಿಪ್ರಾಯವನ್ನು ಕಡೆಗಣಿಸಿ ಯಾವುದೇ ತೀರ್ಮಾನ ಕೈಗೊಂಡರೆ, ಅದು ಕನ್ನಡ ಜನರ ನಂಬಿಕೆಗೆ ಧಕ್ಕೆಯುಂಟುಮಾಡಬಹುದು ಎಂಬ ಆತಂಕವೂ ಇತ್ತು.
ಇಂಥ ಸ್ಥಿತಿಯಲ್ಲಿ ಮಹಾಜನ ಆಯೋಗ ಗಡಿವಿವಾದದ ಮತ್ತೊಂದು ಅಧ್ಯಾಯ ಶುರುವಾಯಿತು.
ಕರ್ನಾಟಕ,ಮಹಾರಾಷ್ಟ್ರ ಗಡಿವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಭಾರತ ಸರ್ಕಾರವು ೧೯೬೬ರ ಅಕ್ಟೋಬರ್ನಲ್ಲಿ ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಮೆಹರ ರ್ಚಂದ ಮಹಾಜನ್ ಅವರ ಅಧ್ಯಕ್ಷತೆಯಲ್ಲಿ ಮಹಾಜನ ಆಯೋಗವನ್ನು ರಚಿಸಿತು. ಆಯೋಗವು ೧೯೬೭ರ ಆಗಸ್ಟ್ನಲ್ಲಿ ತನ್ನ ವರದಿಯನ್ನು ಸಲ್ಲಿಸಿತು.

ನಿಜಲಿಂಗಪ್ಪನವರನ್ನು ಭೇಟಿಯಾಗಲು ಹೋದರೆ ಪೊಲೀಸರು ತಡೆಗಟ್ಟದ್ದು ಆದರೂ ಕೇಳದೆ ಒಳನುಗ್ಗಿದರು
ಈ ವರದಿಯಲ್ಲಿ ಬೆಳಗಾವಿ ಕರ್ನಾಟಕದಲ್ಲಿಯೇ ಉಳಿಯಬೇಕೆಂದು ಶಿಫಾರಸು ಮಾಡಲಾಗಿತ್ತು. ಆದರೆ ನಿಪ್ಪಾಣಿ ಸೇರಿದಂತೆ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸುವ ಶಿಫಾರಸುಗಳೂ ಇದ್ದವು. ಮಹಾರಾಷ್ಟ್ರ ಸರ್ಕಾರವು ವರದಿಯನ್ನು ಒಪ್ಪಲಿಲ್ಲ…ಕರ್ನಾಟಕದಲ್ಲಿ ವರದಿಯ ಅನುಷ್ಠಾನಕ್ಕೆ ಒತ್ತಾಯ ಮುಂದುವರಿಯಿತು. ಹೀಗೆ ಗಡಿವಿವಾದವು ಮತ್ತೊಂದು ರಾಜಕೀಯ ಸಂಘರ್ಷದ ಹಂತವನ್ನು ಪ್ರವೇಶಿಸಿತು.
ಈ ಬೆಳವಣಿಗೆಗಳು ಒಂದು ಸಂಗತಿಯನ್ನು ಸ್ಪಷ್ಟಪಡಿಸುತ್ತ… ಅದು ಜನರ ಭವಿಷ್ಯದೊಂದಿಗೆ ಬೆಸೆದುಕೊಂಡಿರುವ ಸೂಕ್ಷ್ಮ ವಿಷಯವಾಗಿತ್ತು
ಜನರ ಸಮ್ಮತಿಯೇ ಪ್ರಜಾಪ್ರಭುತ್ವದ ನೆಲೆ
ಒಂದು ಪ್ರದೇಶದ ಭವಿಷ್ಯವನ್ನು ನಿರ್ಧರಿಸುವಾಗ ಅಲ್ಲಿನ ಜನರ ಭಾವನೆಗಳು ಮತ್ತು ಆಶಯಗಳನ್ನು ನಿರ್ಲಕ್ಷಿಸಬಾರದು ಎಂಬುದು ಪ್ರಜಾಪ್ರಭುತ್ವದ ಮೂಲತತ್ವ. ಗಡಿಭಾಗದ ಜನರ ಬದುಕು, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಕಾಳಜಿ ಹೊಂದಿದ್ದವರಿಗೆ ಈ ತತ್ವ ಇನ್ನಷ್ಟು ಮಹತ್ವದ್ದಾಗಿದೆ ಎಂಬುವದು
ಜಯದೇವಿತಾಯಿಯವರ ನಿಲುವಾಗಿತ್ತು.
ಮಹಾಜನ ಆಯೋಗದ ವಿರುದ್ಧ ಜಯದೇವಿತಾಯಿಯವರ ಹೋರಾಟ.. ಪ್ರಾರಂಭವಾಯಿತು.ಗಡಿಭಾಗದ ಕನ್ನಡಿಗರ ಹಕ್ಕುಗಳಿಗಾಗಿ ಒಂದು ದಿಟ್ಟ ದನಿ
ಗಡಿವಿವಾದದ ಹಿನ್ನೆಲೆಯಾಯಿತು.
ಐಸಿಸಿ ಸಭೆಯಲ್ಲಿ ನಿಜಲಿಂಗಪ್ಪನವರು ಏಕ ಸದಸ್ಯ ಆಯೋಗವನ್ನು ಒಪ್ಪಿಕೊಂಡಿದ್ದು ಕನ್ನಡಿಗರಿಗೆ ಆಘಾತಕಾರಿ ನಿರ್ಣಯವಾಗಿತ್ತು.
ಜಯದೇವಿ ತಾಯಿಯವರು ಬೆಂಗಳೂರಿನಲ್ಲಿ ಬಹಿಷ್ಕಾರ ಚಳುವಳಿಗೆ ತೊಡಗಿದರು ಫಲಕಗಳನ್ನು ಹಿಡಿದು ಘೋಷಣೆ ಹಾಕುತ್ತಾ ಮೆರವಣಿಗೆಯಲ್ಲಿ ಎಂಪಿಸಿಸಿ ಅತ್ತ ಹೊರಟರು…. ಮೆರವಣಿಗೆಯ ಮುಂದೆ ಜಯದೇವಿ ತಾಯಿಯವರ ಮಗಳು ಲಲ್ಲೇಶ್ವರಿ ತಾಯಿಯವರು ಜೊತೆಗೆ ನಡೆದಿದ್ದರು ಕೆಂಪೇಗೌಡ ವೃತ್ತದ ಬಳಿ ನಿಂತು ಸಭೆ ಮಾಡಿ ಮತ್ತೇ ಮೆರವಣಿಗೆ ಮುಂದೆ ನಡೆಯಿತು…

ಏಕ ಸದಸ್ಯತ್ವ ಆಯೋಗದ ವಿರುದ್ಧ ಹೋರಾಟ ಕೆಂಪೇಗೌಡ ರಸ್ತೆ ಬೆಂಗಳೂರು
ಎಂಪಿಸಿಸಿ ಭವನದ ಹತ್ತಿರ ಬಂದಾಗ ಪೊಲೀಸರು ಯಾರನ್ನು ಒಳಗೆ ಬರದಂತೆ ತಡೆದರು ಜಯದೇವಿ ತಾಯಿಯವರು ಯಾರನ್ನು ಲೆಕ್ಕಿಸದೆ ಒಳಗೆ ಬಂದೇ ಬಿಟ್ಟರು. ನಿಜಲಿಂಗಪ್ಪನವರು ಜಯದೇವಿ ತಾಯಿಯರೊಂದಿಗೆ ಈ ಮಾತುಕತೆ ನಡೆಸಿ” ನಾನು ಕರ್ನಾಟಕದ ಯಾವ ಭಾಗವನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲವೆಂದು” ತಾಯಿಯವರಿಗೆ ಮಾತು ಕೊಟ್ಟರು.
“ಕನ್ನಡಿಗರು ಈ ವಿಷಯಕ್ಕೆ ಗಟ್ಟಿಯಾಗಿ ನಿಲ್ಲಬೇಕು ಇವರಲ್ಲಿಯ ಭೀನಪ್ರಾಯ ಬಿಟ್ಟು ಒಂದೇ ಅಭಿಪ್ರಾಯದೊಂದಿಗೆ ಕನ್ನಡ ಭಾಗವನ್ನು ನಾವು ಪಡೆಯಬೇಕೆಂದು”ಜಯದೇವಿತಾಯಿಯವರು ಒತ್ತಾಯಿಸಿದರು.
ಜುಲೈ ೫ರವರೆಗೆ ಕಾಯೋಣ ಆ ದಿನದ ನಿರ್ಣಯದ ಮೇಲೆ ನಮ್ಮ ಮುಂದಿನ ನೀತಿ ನಿಂತಿದೆ ಎಂದು ನಿಸರಿಂಗಪ್ಪನವರು ಜಯದೇವಿ ತಾಯಿಯವರಿಗೆ ಅತ್ಯಂತ ವಿನಮ್ರತೆಯಿಂದ ಹೇಳಿ ಸಮಾಧಾನ ಹೇಳಿದರು .
“ಹಾಗಿದ್ದರೆ ಕ್ರಿಯಾ ಸಮಿತಿ ನೀಡವ ನಿರ್ಣಯವು ನಮಗೆ ಪ್ರತಿಕೂಲವಾದರೆ ಮಂತ್ರಿಮಂಡಕ್ಕೆ ರಾಜಿನಾಮೆ ಕೊಡುವಿರಾ “ಎಂದು ನಿಜಲಿಂಗಪ್ಪನವರಿಗೆ ಜಯದೇವಿತಾಯಿಯವರು ಪ್ರಶ್ನಿಸಿದರು
“ಖಂಡಿತ ಕೊಡುತ್ತೇನೆ ತಾಯಿಯವರೇ” ಅಂತ ವಾಗ್ದಾನವನ್ನು ಮಾಡಿರು ನಿಜಲಿಂಗಪ್ಪನವರು.
ಹಾಗೇ ಭರವಸೆಯನ್ನು ನೀಡಿದ ತಕ್ಷಣ ಜಯದೇವಿ ತಾಯಿಯವರು ಧರಣಿಯನ್ನು ಹಿಂದೆ ತೆಗೆದುಕೊಂಡರು.
ಆದರೆ ದೂರದೃಷ್ಟವಶಾತ
ಏಕಸದಸ್ಯದ ಆಯೋಗದ ನಿರ್ಣಯವೂ ಮಹಾರಾಷ್ಟ್ರ ಪರವಾಗಿ ಇಲ್ಲವೆಂಬ ಕಾರಣಕ್ಕೆ ಅದು ಕೇಂದ್ರದಿಂದ ಸ್ವೀಕೃತವಾಗಲಿಲ್ಲ. ಅದಕ್ಕೆ ಚವ್ಹಾಣರ ಆಶಯದಂತೆ ನಡೆಯಿತು.
ಕರ್ನಾಟಕದಲ್ಲಿ ಸೋಲಾಪುರವನ್ನು ಸೇರ್ಪಡೆ ಮಾಡಿಕೊಂಡ ಮಹಾಜನ ಆಯೋಗದ ಪರವಾಗಿ ಅದನ್ನು ಬೇಗನೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಜಯದೇವಿ ತಾಯಿಯವರು ಅಲ್ಲಿಗೆ ಅವರ ಹೋರಾಟವನ್ನು ನಿಲ್ಲಿಸದೆ
ಇಂದಿರಾ ಗಾಂಧಿಯವರು ಬೆಂಗಳೂರಿಗೆ ಬಂದಾಗ ಜಯದೇವಿ ತಾಯಿಯವರು ಮನವಿ ಪತ್ರವನ್ನು ಸಲ್ಲಿಸಿದರು.ಇದಾವದರಿಂದಲೂ ಅದಾವ ಪ್ರಯೋಜನವಾಗಲಿಲ್ಲ .ಬಿಟ್ಟು ಹೋದ ಸಿದ್ದರಾಮನ ಸೊನ್ನಲಿಗೆ ಭೂಮಿಯು ಕನ್ನಡ ಮಾತೆಯ ಒಡಿಲಲ್ಲಿ ಉಳಿಸಿಕೊಳ್ಳಲಾಗಲಿಲ್ಲ ಎನ್ನುವ ಕೊರಗು ತಾಯಿಯವರು ಹೊತ್ತುಕೊಂಡು ಅವರು ಮುಂದೆ ಬಸವಣ್ಣನ ಕರ್ಮ ಭೂಮಿಯಾದ ಬಸವಕಲ್ಯಾಣದಲ್ಲಿ ನೆಲೆಸಬೇಕೆನ್ನುವ ನಿರ್ಧಾರವನ್ನು ಕೈಗೊಂಡರು.
ಸವಿತಾ ದೇಶಮುಖ




