ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಜೀವಂತಿಕೆ ಇಲ್ಲದ ಮಣ್ಣು;
ಭೂಮಿಯನ್ನು ನಾವೇ
ಕೊಂದು ನೇತು ಹಾಕಿದ್ದೇವೆ  

​***
ಕೊಡಲಿಯ ಅಲಗಿನಲಿ
ಮರಗಳ ಒಡಲು:
ಭೂಮಿ ಬೆತ್ತಲೆ..! ಬೇಯುತ್ತಿದೆ  

​***
ಎಲ್ಲ ಬದಲಾಗಿದೆ;
ಊರುಕೇರಿ ಜೊತೆಗೆ
ಮನುಷ್ಯರೂ ಕೂಡಾ  

​***
ಸೂರ್ಯ ಸತ್ತು ಕತ್ತಲಾಗಿದೆ
ಜಗತ್ತು ಬೆತ್ತಲು;
ನಾವು ಕಪ್ಪು ಚುಕ್ಕಿಗಳು  

​***
ಮರಗಳು ಪದೇ-ಪದೇ
ಕೊಡಲಿಗೇ ಓಟು ಹಾಕುತ್ತಿದ್ದವು!
ಭೂಮಿ ಬರಡಾಗಿದೆ  

​***
ಮೌನದಲಿ ಆರಿದ ದೀಪ,
ಹೊಂಬಿಸಲಾಗಿ ಬಾನಿಗೆಲ್ಲ ಹರಡಿದೆ
ಬಣ್ಣಗಳ ಗರಿಬಿಚ್ಚಿ ಭೂಮಿ ಅಪ್ಪಿದೆ  

​***
ಗಾಯಗೊಂಡ ಜಾಗೆಯಲ್ಲಿ ರಕ್ತಕಣ್ಣೀರು;
ಚಿತ್ರ ಬಿಡಿಸುತ್ತಾ ರೂಪ ಕಳೆದುಕೊಂಡ ಪರಿಸರ,
ಭೂಮಿ ರೋಧಿಸುತ್ತಿದೆ!   

About The Author

Leave a Reply

You cannot copy content of this page

Scroll to Top