ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕರ್ನಾಟಕ ಪ್ರಾಂತ್ಯ ನಿರ್ಮಾಣ ಮತ್ತು ಕನ್ನಡನಾಡಿನ ಏಕೀಕರಣದ ಹೋರಾಟ ಒಂದೇ ದಿನದಲ್ಲಿ, ಒಂದೇ ವೇದಿಕೆಯಲ್ಲಿ ಮುಗಿದ ಹೋರಾಟವಾಗಿರಲಿಲ್ಲ. ಕಾಲ ಬದಲಾದಂತೆ ಪ್ರಶ್ನೆಗಳು ಬದಲಾದವು ಪ್ರಶ್ನೆಗಳು ಬದಲಾದಂತೆ ಸರ್ಕಾರದ ಮುಂದೆ ಹೊಸ ಆಯೋಗಗಳು, ಸಮಿತಿಗಳು ಹುಟ್ಟಿಕೊಂಡವು. ಆದರೆ ಜಯದೇವಿತಾಯಿಯವರ ಗುರಿ ಮಾತ್ರ ಬದಲಾಗಲಿಲ್ಲ…!!.

ಪ್ರತಿ ಆಯೋಗವೂ ಕನ್ನಡಿಗರ ಅಸ್ತಿತ್ವವನ್ನು ಪರೀಕ್ಷಿಸುವ ಮತ್ತೊಂದು ಹಂತವಾಗಿತ್ತು. ಒಂದು ಕಡೆ ದಾಖಲೆಗಳು, ಅಂಕಿ-ಅಂಶಗಳು, ಆಡಳಿತದ ವಾದಗಳು…ಮತ್ತೊಂದು ಕಡೆ ಭಾಷೆ, ನೆಲ, ಸಂಸ್ಕೃತಿ ಮತ್ತು ಜನರ ಬದುಕಿನ ಪ್ರಶ್ನೆಗಳು. ಆಯೋಗಗಳು ಬದಲಾಗುತ್ತಿದ್ದವು,ಕಾಲ ಬದಲಾಗುತ್ತಿತ್ತು, ಹೋರಾಟದ ವಿಧಾನ ಬದಲಾಗುತ್ತಿತ್ತು…. ಆದರೆ ಜಯದೇವಿತಾಯಿಯವರ ಸಂಕಲ್ಪ ಮಾತ್ರ ಅಚಲವಾಗಿತ್ತು.

ಎಲ್ಲೆಡೆ ಅವರ ಧ್ವನಿ ವಿಭಿನ್ನವಾಗಿದ್ದರೂ, ಅದರ ಅಂತರಾಳದಲ್ಲಿ ಮೊಳಗುತ್ತಿದ್ದ ಮಾತು ಒಂದೇ… “ಕನ್ನಡಿಗರಿಗೆ ಕನ್ನಡ ನಾಡು ಬೇಕು. ಕನ್ನಡಿಗರೆಲ್ಲರೂ ಒಂದಾಗಬೇಕು.ಚದುರಿಹೋಗಿದ್ದ ಕನ್ನಡಿಗರನ್ನು ಒಂದೇ ನಾಡಿನ ಅಡಿಯಲ್ಲಿ ಒಗ್ಗೂಡಿಸುವುದಾಗಿತ್ತು”

೧೯೨೮ರ ನೆಹರು ಸಮಿತಿ, ಸೈಮನ್ ಆಯೋಗ, ೧೯೨೯ರ ವಿಶ್ವನಾಥ್ ಜೋಗೂರ ಗೊತ್ತುವಳಿ, ವರದಿ,೧೯೪೮ರ ಧಾರಾ ಆಯೋಗ,೧೯೪೯ ಜೆ.ವಿ.ಪಿ ಸಮಿತಿಗೆ , ೧೯೪೬, ೧೯೫೧, ೧೯೫೨ರ ಪ್ರಾಂತ್ಯ ರಚನೆ ಆಯೋಗ, ೨೯೫೪ರಂದು ಕೆಪಿಸಿಸಿ ಉಚ್ಛಾಧಿಕಾರಿ ನಿಯೋಗದ ಉಪಸಮಿತಿ, ಫಜಲ್ ಅಲಿ ಆಯೋಗ,೧೯೫೫ರ ತ್ರಿಮೂರ್ತಿ ಆಯೋಗ, ೧೯೫೬ರ ರಾಜ್ಯ ವಿಧಾನ ಮಂಡಳಿಯ ವಿಧೇಯಕ ಸುಕೃತಿ, …೦೧-೧೧-೧೯೫೬ರಂದು ಕನ್ನಡಿಗರಿಗೆ ಪ್ರತ್ಯೇಕ ಮೈಸೂರು ರಾಜ್ಯ ದೊರಕಿದ್ದು…
ಈ ಎಲ್ಲ ಹೋರಾಟಗಳಲ್ಲಿ ಜಯದೇವಿ ತಾಯಿಯವರ ಪ್ರಮುಖ ಪಾತ್ರವನ್ನು ವಹಿಸಿದ್ದರು

ಧಾರಾ ಆಯೋಗ…

ಸ್ವಾತಂತ್ರ ದೊರೆತ ಮೇಲೆ ಆಂಧ್ರ ಕೇರಳ ಕರ್ನಾಟಕಕ್ಕೆ ಮಹಾರಾಷ್ಟ್ರ ಭಾಷಾ ಅನುಗುಣ ಪ್ರಾಂತ ರಚನೆ ಗೆ ಧಾರ ಆಯೋಗ ನಿರ್ಮಿಸಲ್ಪಟ್ಟಿತು. ಗಡಿನಾಡ ಪ್ರದೇಶಗಳು ತಮ್ಮದೇ ಆದ ಅವಶ್ಯಕತೆಗಳನ್ನು ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ತಮಗೆ ಅನುಕೂಲಸಿದಂತೆ ಹೊಂದಿಕೊಂಡು ಬಾಳುತ್ತಿದ್ದರು… ಅವರಿಗೆ ಒಡೆಯದೆ ಅವರವರಿಗೆ ಬಿಡಬೇಕೆಂದು ೨೦- ೧೨-೪೮ ರಂದು ವರದಿಯಲ್ಲಿ ತಿಳಿಸಿತ್ತು.

ಜಯದೇವಿ ತಾಯಿಯವರು ಧಾರಾ ಆಯೋಗವು ಕೊಟ್ಟ ಪರಿಹಾರವನ್ನು ಹೀಗೆ ಖಡಾ ಖಂಡಿತವಾಗಿ ಖಂಡಿಸಿದರು “ರೊಟ್ಟಿ ಬೇಡಿದ ಹೊಟ್ಟೆಗೆ ಕಲ್ಲು ಕೊಟ್ಟಂತಾಯಿತು. …ಮೊಲೆ ಕುಡಿಯುವ ಕರು ಅಟ್ಟದ ಮೇಲೆ ಹಾಲು ಕುಡಿಸುವ ಆಕಳು ಬೆಟ್ಟದ ಮೇಲೆ ಇದ್ದಂತೆ ಹಾಶ್ಯಾಸ್ಪದವಾದದ್ದು,
ಅವಾಸ್ತವಿಕವೂ…ಆಗಿದೆ ಪ್ರಾಂತೀಕರಣವೇ ಎಲ್ಲಕ್ಕೂ ಅತ್ಯುತ್ತಮ ಉಪಾಯವೆಂಬ ಸರಳ ವಿಚಾರವೂ ಮೇಧಾವಿಗಳಿಗೆ ತಿಳಿಯದಿದ್ದದ್ದು ವಿಷಾದನೀಯ, ಯಾರಿಗೂ ಇದು ಒಪ್ಪಿದರು…. ಕನ್ನಡಿಗರಿಗೆ ಮಾತ್ರ ಪ್ರಾಂತೀಕರಣವಿಲ್ಲದ ಸ್ವಾತಂತ್ರ್ಯವು ಕೇವಲ ಕನಸಿನ ಗಂಟು ಅದನ್ನು ದೊರಕಿಸುವುದು ನಮ್ಮ ಜನ್ಮ ಸಿದ್ಧ ಹಕ್ಕು ಇಂತಹ ಸಂದಿಗ್ಧ ಸಂದರ್ಭದಲ್ಲಿ ಕನ್ನಡಿಗರು ಮುಂದಾಳುಗಳಾಗಿ ದಾರಿ ಹುಡುಕಬೇಕು “ಎಂದು ಕರೆಕೊಟ್ಟರು .
ಧಾರಾ ಆಯೋಗವು ವರದಿ ಒಪ್ಪಿಸಿದ ಮೇಲೆ ಸೊಲ್ಲಾಪುರ ಎರಡು ತಾಲೂಕುಗಳಲ್ಲಿ ಒಡೆಯಲ್ಪಟ್ಟಿತು ಜಯದೇವಿ ತಾಯಿಯವರು ಎಷ್ಟೇ ವಿರೋಧಿಸಿದರು ಸೊಲ್ಲಾಪುರ ಮುಂದೆ ಒಂದಾಗಲಿಲ್ಲ.

ಜೆ.ವಿ ಪಿ ಆಯೋಗವು…
ಜೆ ವಿ ಪಿ ಆಯೋಗವು ೧-೪-೧೯೪೯ರಲ್ಲಿ ಒಪ್ಪಿಸಿದ ವರದಿಯಿಂದಲೂ ಕರ್ನಾಟಕ ನಿರಾಸೆಯಾಯಿತು. ಆಗ ಜಯದೇವಿ ತಾಯಿಯವರು ಸುಮ್ಮನಿರಲಿಲ್ಲ ಸಭೆ ಸಮಾರಂಭಗಳನ್ನು ಕರೆದು ಗೋತ್ತುವಳಿ ಪಾಸು ಮಾಡಿಸಿ ಕನ್ನಡಿಗರನು ಕೂಡ್ರಿಕರಸಿ ಮನವಿ ಅರ್ಪಿಸಿದರು. ಮಹಿಳಾ ಪರಿಷತ್ತನ್ನು ಕರೆದು ಒಂದು ಮಹತ್ವದ ಹೊತ್ತುವಳಿ ತೆಗೆದುಕೊಂಡರು.
ಜೆವಿಪಿ ಆಯೋಗದ ವರದಿಯನ್ನು ವಿರೋಧಿಸಿ ಕರ್ನಾಟಕದ ಪ್ರತಿನಿಧಿಗಳು ಕೇಂದ್ರ ಮತ್ತು ಶಾಸನಸಭೆಗಳಿಗೆ ರಾಜೀನಾಮೆ ಕೊಡಬೇಕೆಂಬ ಬೇಡಿಕೆ ಇಟ್ಟರು….ಈ ಗೊತ್ತುವಳಿಂದ ಕರ್ನಾಟಕದ ಜನತೆಯಲ್ಲಿ ಮಿಂಚು ಸಂಚಾರವಾಯಿತು .

ಎಲ್ಲ ಭಾಗಗಳಿಂದ ಬೆಂಬಲ ಬರಲು ಪ್ರಾರಂಭಿಸಿತು ಸ್ವತಂತ್ರ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದ ನಾಗಪ್ಪಣ್ಣ ಕಾಡಾದಿವರನ್ನು ಅಭಿನಂದಿಸಲಾಯಿತು.

” ಕನ್ನಡಿಗರ ಪ್ರಾಣ ಮರಣಗಳಂಥ ಅಗ್ನಿ ಪರೀಕ್ಷೆಯ ಕಾಲದಲ್ಲಿ ಜಾತಿ ಪಂಥ ಮತ ಭೇದಗಳನ್ನು ಕಡೆಗಣಿಸಿ ಅಖಿಲ ಕನ್ನಡಿಗರ ಕುಲವೊಂದು ಎಂಬ ಭವ್ಯ ಭಾವ ನರನಾಡಿಗಳಲ್ಲಿ ಹರಿಯಲಿ…..ಭವ್ಯ ಕರ್ನಾಟಕ ಕಟ್ಟಲು ಸಿದ್ಧರಾಗಿ ಎಂದರು…
ಮೈಸೂರು ಮಹಾರಾಜರು ವಂಶ ಪಾರಂಪರದಿಂದ ಜನಾನುರಾಗಿಗಳೆಂಬುದನ್ನು ಯಾರು ಮರೆಯುವಂತಿಲ್ಲ ಆದರೆ ಕನ್ನಡಿಗರು ಉಸಿರಾಡಲು ಕಷ್ಟವಾಗಿರುವ ಈ ಸಂದರ್ಭದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅಖಿಲ ಕನ್ನಡಿಗರ ಸಭೆಗೆ ಸೋಪಾನವಾದ ಮಹಾ ಕರ್ನಾಟಕದ ರಚನೆಯಲ್ಲಿ ತಮ್ಮ ಕೈ ಮೊದಲನೆಯದೆಂದು ಮುಂದೆ ಬಂದು ಅವರ ಕೀರ್ತಿ ಸಂಪಾದಿಸಬೇಕು” ಎಂದು ಸಭೆಯಲ್ಲಿ ವಿನಂತಿಸಿಕೊಂಡರು.
ಈ ಗೊತ್ತುಗಳಿಗೆ ಅವಶ್ಯವಾದ ಆಂದೋಲನ ನಡೆಸಲು ಸಿದ್ಧರಾಗಬೇಕೆಂದು ಮೈಸೂರಿನ ಭಗಿನಿಯರಲ್ಲಿಯೂ ಕೇಳಿಕೊಳ್ಳುತ್ತಾರೆ .ಬಳ್ಳಾರಿ ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ಕರ್ನಾಟಕದಲ್ಲಿ ಅದನ್ನು ಇಡಿಯಾಗಿ ಸೇರಿಸಲು ಆಗ್ರಹ ಪಡಿಸುತ್ತಾರೆ.

ಸೊಲ್ಲಾಪುರದಲ್ಲಿ ಕನ್ನಡ ಮಾತನಾಡುವುದೇ ಅಪರಾಧವೆಂದು ಕಡೆಗಣಿಸಲ್ಪಡುತ್ತಿದ್ದ ಹೆದರುತ್ತಿದ ಕಾಲದಲ್ಲಿ ಜಯದೇವಿ ತಾಯಿಯವರ ಜಯನಿಕೇತನದಲ್ಲಿ (ಸ್ವಂತ ಮನೆಯಲ್ಲಿ)ಇಂತಹ ಸಮ್ಮೇಳನಗಳನ್ನು ಹಮ್ಮಿಕೊಂಡು ಗಂಭೀರ ವಿಷಯಗಳಿಂದ ಎಲ್ಲರ ಮನ ಸೆಳೆಯುತ್ತಿದ್ದರು. ಈ ವಿಷಯವನ್ನು ಇಲ್ಲಿಗೆ ಬಿಡದೆ ಹುಬ್ಬಳ್ಳಿಯ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಸಮಿತಿ ನಿರ್ಮಿಸಿದರು.

ಏಕೀಕರಣ ಸಪ್ತಾಹ ಸಹಿ ಸಂಗ್ರಹ ಮೆರವಣಿಗೆಗೆ ನಡೆದು ಮುಂದಾಳುಗಳು ರಾಜೀನಾಮೆ ಕೊಡುವಂತೆ ಒತ್ತಾಯಿಸಬೇಕೆಂದು ಜಯದೇವಿ ತಾಯಿಯವರು ತಿಳಿಸಿದರು. ಅವರು ನಡೆಸಿದ ಮಹಿಳಾಪಷತ್ತಿನ ಗೊತ್ತುವಳಿಯಲ್ಲಿ ನಿಜಲಿಂಗಪ್ಪನವರು ಮುಂದಾಗಿ ಶಾಸನಸಭೆಗಳಿಗೆ ರಾಜೀನಾಮೆ ಕೊಟ್ಟರು ಇದು ಸೊಲ್ಲಾಪುರದ ಮಹಿಳಾ ವರ್ಗಕ್ಕೆ ಉತ್ಸಾಹ ಉಕ್ಕಿ ಹರಿಯಿತು ಆದರೂ ಯಾವ ಪ್ರಯತ್ನ ಯಶಸ್ವಿಯಾಗಲಿಲ್ಲ.
ಕರ್ನಾಟಕ ನಾಡ ದೇವಿಯ ಒಲುಮೆಗಾಗಿ ರಾಜೀನಾಮೆಗಳನ್ನು ಕೊಟ್ಟವರಿಗೆ ಧನ್ಯವಾದಗಳು ನಿಮ್ಮ ತ್ಯಾಗ ಮಾರ್ಗದರ್ಶನವಾಗಿದೆ ನೀವೆಲ್ಲ ಹಾಕಿಕೊಟ್ಟ ಕಾರ್ಯಕ್ಕೆ ಸೋಲಾಪುರದ ಮಹಿಳೆಯರೆಲ್ಲ ಕಂಕಣಬದ್ಧರಾಗಿ ಸಿದ್ದರಿದ್ದೇವೆ ಎಂದು ಜಯದೇವಿ ತಾಯಿಯವರು ಪತ್ರಿಕೆಗಳಿಗೆ ವರದಿ ನೀಡಿದರು

ಕರ್ನಾಟಕ ಏಕೀಕರಣದ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದ ಸಂದರ್ಭದಲ್ಲಿ, ಜಯದೇವಿತಾಯಿಯವರ ಹೋರಾಟದ ತೀವ್ರತೆಯನ್ನು ತೋರಿಸುವ ಒಂದು ಮಹತ್ವದ ಘಟನೆ ಉಲ್ಲೇಖಿತವಾಗಿದೆ. ಅಖಂಡ ಕರ್ನಾಟಕದ ಕನಸಿಗಾಗಿ ಅವರು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ರಕ್ತದಲ್ಲಿ ಪತ್ರ ಬರೆದರು ಎಂದು ಲಭ್ಯವಿರುವ ಸಂಶೋಧನಾ ದಾಖಲೆಯೊಂದು ತಿಳಿಸುತ್ತದೆ.
ಕನ್ನಡಿಗರ ಚದುರಿದ ಬದುಕನ್ನು ಒಂದೇ ಆಡಳಿತದ ಅಡಿಯಲ್ಲಿ ತರಬೇಕು, ಕನ್ನಡದ ನೆಲನುಡಿಗೆ ನ್ಯಾಯ ದೊರೆಯಬೇಕು ಎಂಬ ಒತ್ತಾಯದ ಪ್ರತೀಕವಾಗಿತ್ತು. ತಮ್ಮ ರಕ್ತವನ್ನೇ ಮಸಿಯಾಗಿ ಮಾಡಿಕೊಂಡು ದೇಶದ ಪ್ರಧಾನಿಗೆ ಮನವಿ ಸಲ್ಲಿಸುವ ಮಟ್ಟಿಗೆ ಅವರ ಏಕೀಕರಣದ ಬದ್ಧತೆ ಗಾಢವಾಗಿತ್ತು. ಎಂದು ಜಯದೇವಿ ತಾಯಿಯವರು ಪತ್ರಿಕೆಗಳಿಗೆ ವರದಿ ಸಲ್ಲಿಸಿದರು.
ಜೆ.ವಿ.ಪಿ ವರದಿಯ ಪರಿಣಾಮದಿಂದ ಗಡಿನಾಡಿನಲ್ಲಿ ಕನ್ನಡಿಗರ ಜಾಗೃತಿ ಅವಶ್ಯವಿತ್ತು .ಈ ಕಾಲದಲ್ಲಿ ಜಯದೇವಿಯ ಅವರು ಹೋರಾಟ ಮುಂದುವರಿಸಿದರು 3,00,000 ಜನಸಂಖ್ಯೆ ಇದ್ದ ಸೊಲ್ಲಾಪುರದಲ್ಲಿ ಕನ್ನಡದ ಅಸ್ತಿತ್ವ ಪ್ರಶ್ನಿಸುವಂತಹ ಪರಿಸ್ಥಿತಿ ಇತ್ತು

ಜಯದೇವಿತಾಯಿಯವರ ಈ ನಡೆ ಅವರ ಹೋರಾಟದ ಸ್ವರೂಪವನ್ನು ನಮಗೆ ಪರಿಚಯಿಸುತ್ತದೆ. , ಏಕೀಕರಣವು ಅವರಿಗೆ ಕನ್ನಡಿಗರ ಅಸ್ತಿತ್ವಭಾಷೆ ಮತ್ತು ಸ್ವಾಭಿಮಾನದ ಪ್ರಶ್ನೆಯಾಗಿತ್ತು.
(ಮೂಲಾಧಾರನಲ್ಲಿ ಲಭ್ಯವಿರುವ ಸಂಶೋಧನಾ ದಾಖಲೆಯ ಪ್ರಕಾರ…” “ಕರ್ನಾಟಕ ಏಕೀಕರಣ ಚಳವಳಿ”ಗೆ ಸಂಬಂಧಿಸಿದ ಸಂಶೋಧನಾ ಲೇಖನದಲ್ಲಿ ಜಯದೇವಿತಾಯಿಯವರು ನೆಹರು ಅವರಿಗೆ ರಕ್ತದಲ್ಲಿ ಪತ್ರ ಬರೆದ ಘಟನೆಯ ಉಲ್ಲೇಖವಿದೆ.)

ಶಂಕರಗೌಡ ಪಾಟೀಲ್, ನಾರಾಯಣಪ್ಪ, ತಲ್ಲೂರು ರಾಯನಗೌಡ ಪಾಟೀಲರು ದೊಡ್ಡ ಮೀಟಿ ಅಂದಾನಪ್ಪ ಇವರೆಲ್ಲರೂ ಉಪವಾಸ ಕುಳಿತಿದ್ದ ಸತ್ಯಾಗ್ರಹ ನೋಡಿ ತಾಯಿಯವರು ನೊಂದು ನಾವೆಲ್ಲರೂ ಸೇರಿ ಹೋರಾಡೋಣ ಎಂದು ತಿಳಿಸಿ ಹೆಬ್ಬೆರಳಿನಳಿ ರಕ್ತ ಚಿಹ್ನಾಂಕೀತ ಪತ್ರ ಕಳಿಸಿದರು .ಈ ರೀತಿಯ ಘಟನೆ ಗಂಧದ ವಾತಾವರಣ ಉಂಟಾಯಿತು.
ಈ ರೀತಿಯಾಗಿ ಕರ್ನಾಟಕಕ್ಕೆ ಉಳಿಯಲು ಬಿ.ಎಂ.ಶ್ರೀ, ಬೆನಗಲ್ ರಾಮರಾಯ, ಜಿನರಾಜ ಹೆಗಡೆ ಮಾಸ್ತಿ ,ಆರ.ನಾಗನಗೌಡ, ದೇವಡು ನರಸಿಂಹ ಶಾಸ್ತ್ರಿ, ಎಚ್. ಸಿದ್ದಯ್ಯ, ಬಿ.ಎಂ. ದಾತರ, ಡಿ.ಪಿ ಕರಮಕರ, ಎಸ್. ಎಸ್. ಬಸವನಾಳ, ಪಂಜೇ ಮಂಗೇಶರಾಯರು, ಗೋವಿಂದ ಪೈ, ರಾಮಕೃಷ್ಣ ಕಾರಂತ,ಎಂ.ಎಸ.ಕೃಷ್ಣ, ಬಿ. ಶಿವಮೂರ್ತಿ ಶಾಸ್ತ್ರಿ,ಎಂ. ಎಸ. ಸರ್ದಾರ್ ,ಮೋದಿ ಮೊದಲಾದವರೊಂದಿಗೆ ಹೋರಾಟದಲ್ಲಿ ಜಯದೇವಿ ತಾಯಿಯವರು ಪ್ರಮುಖರಾಗಿದ್ದರು.

೧೯೫೩ಫಜಲ್ ಅಲಿ ಆಯೋಗ…

೨೨-೧೨-೧೯೫೩-ರಂದು ಭಾರತ ಸರ್ಕಾರ ಸೈಯದ ಫಜಲ್ ಅಲಿ ಅವರ ಅಧ್ಯಕ್ಷತೆ ಪಂಡಿತ ಹೃದಯನಾಥ್ ಕುಂಜರು ಹಾಗೂ ಸರ್ದಾರ್ ಅವರ ಸದಸ್ಯತ್ವದಲ್ಲಿ ರಾಜ್ಯ ಪುನರ ರಚನಾ ಆಯೋಗ ರಚಿಸಿದರು 33 ವರ್ಷಗಳಿಂದ ಬಳ್ಳಾರಿಯ ಬಗ್ಗೆನಡೆದ ವಿವಾದ ಆರು ಸಲ ವಿಚಾರಣೆ ನಡೆದಿತ್ತು. ಮೂರು ತಾಲೂಕು ಸೇರಿಸುವ ಹಿಂದಿನ ನಿರ್ಣಯವನ್ನು ಈ ವರದಿ ಒಪ್ಪದಿದ್ದದ್ದು ಜನತೆಯಲ್ಲಿ ತೀವ್ರ ಅಸಮಾಧಾಮನ ಉಂಟು ಮಾಡಿತ್ತು.

ಕಮ್ಯುನಿಸ್ಟ್ ಏಕೀಕರಣದ ಕುರಿತು ಕಾಂಗ್ರೆಸ್ ವಿಳಂಬ ನೀತಿಯನ್ನು ವಿರೋಧಿಸಿ
ಫಜಲ್ ಅಲಿ ಕಮಿಷನ್ ಗೆ ಮನವಿ ಸಲ್ಲಿಸುವ ಕುರಿತು ಚರ್ಚಿಸಲು ದಾವಣಗೆರೆಯಲ್ಲಿ ಕನ್ನಡಿಗರ ಸರ್ವ ಪಕ್ಷಿಯ ಸಭೆಯನ್ನು ಕೈಗೊಳ್ಳಲಾಯಿತು. ಅಖಂಡ ಕರ್ನಾಟಕ ರಚನೆಯ ಕುರಿತು ಸಲ್ಲಿಸಬೇಕಾದ ಆ ಕರಡಿನ ಮನವಿಯಲ್ಲಿ ಸೊಲ್ಲಾಪುರದ ಹೆಸರನ್ನು ಕೈ ಬಿಡಲಾಗಿತ್ತು .
ಈ ವಿಷಯವು ಜಯದೇವಿಯವರಿಗೆ ತಿಳಿದು ಈ ಸಭೆಗೆ ಬಂದಿದ್ದರು ಅಲ್ಲಿ ಅವರು ಮುಂದಾಳು ಕಾರ್ಯಕರ್ತರರಿಗೆ ಸೊಲ್ಲಾಪುರ ಸೇರಿಸುವಂತೆ ತಿಳಿಸಿದ ನಂತರ ಮನವಿಯಲ್ಲಿ ಸೇರಿಸಲಾಯಿತು. ಅಲ್ಲಿ ಜಯದೇವಿ ಅವರು ನೀವು ಇಂದು ಸೊಲ್ಲಾಪುರವನ್ನು ಬೇಡದೆ ಹೋದರೆ ಸೊಲ್ಲಾಪುರದಲ್ಲಿ ನಡೆಯುವ ಕನ್ನಡ ಚಳುವಳಿಯನ್ನು ಜೀವಂತವಿಡಲು ನೆರವಾಗದೆ ಹೋದರೆ ನಮಗೆ ಬೆಳಗಾವಿ ಉಳಿಯಲಾರದು ಸೊಲ್ಲಾಪುರ ಬೆಳಗಾವಿ ಕಳೆದುಕೊಂಡ ಮೇಲೆ ಅದರ ದಾಳಿ ದಾವಣಗೆರೆಗೂ ಬರಬಹುದು ನಾನೆಂದು ಇಲ್ಲಿ ಬಂದಿರುವುದು ಸೊಲ್ಲಾಪುರವನ್ನು ಉಳಿಸಿಕೊಳ್ಳಿ ಎಂದು ಹೇಳಲು ಅಲ್ಲ ಇಂದು ಸೋಲಾಪುರಕ್ಕೆ ಬಂದ ದುರ್ದಶೇ‌‌ ನಾಳೆ ದಾವಣಗೆರೆ ವರೆಗೂ ಬಾರದಿರುವಂತೆ ಜಾಗೃತವಾಗಿ ಇರುವಂತೆ ತಮ್ಮನ್ನು ಎಚ್ಚರಿಸಲು ಬಂದಿದ್ದೇನೆ ಸ್ವಾತಂತ್ರ ನಂತರ ಭಾಷಾವಾರು ಪ್ರಾಂತ ರಚನೆಗೆ ನೇಮಕವಾದ ಧರ ಮತ್ತು ಫಜಲ್ ಅಲಿ ಕಮಿಷನ್ ಎದುರು ಸೊಲ್ಲಾಪುರ ನಗರ ಅಧ್ಯಕ್ಷ ಮತ್ತು ವಿಧಾನಸಭಾ ಸದಸ್ಯರೊಡಗೊಂಡು 45 ಜನರ ಸಿಸ್ಟಮಂಡಳಿ ಹುಬ್ಬಳ್ಳಿ ಮಕ್ಕ ಮದಲಿ ಭೇಟಿಯಾಗಿ ಮನವಿ ಸಲ್ಲಿಸಿದರು ಈ ಮನವಿಯಲ್ಲಿ ಅಖಂಡ ಕರ್ನಾಟಕದಲ್ಲಿ ಸೊಲ್ಲಾಪುರ, ಬೆಳಗಾವಿ, ಕಾಸರಗೋಡ, ಮಡಕಶಿರ ,ತಾಳವಾಡ ,ಹೊಸೂರ,ಆದವಾನಿ, ಆಲೂರ, ರಾಮದುರ್ಗ, ಜತ್ತ ,ಅಕ್ಕಲಕೋಟೆ ,ದಕ್ಷಿಣ ಉಮೆರ್ಗಾಂ ಮೊದಲಾದ ಪ್ರದೇಶಗಳನ್ನು ಸೇರಿಸಿ ಅಖಂಡ ಕರ್ನಾಟಕ ರಚನೆಯಾಗಬೇಕೆಂಬ ಮನವಿ ಸಲ್ಲಿಸಲ್ಪಟ್ಟಿತು. ದೆಹಲಿಯಲ್ಲಿ ಜಯದೇವಿ ತಾಯಿಯವರ ಸಾಕ್ಷಿ ನುಡಿಯು ಸಂದರ್ಭ ಒದಗಿತು.

ಈ ಸಂದರ್ಭದಲ್ಲಿ ಕೇಂದ್ರ ಗೃಹ ಮಂತ್ರಿಯಾದ ಗೋವಿಂದ್ ವಲ್ಲಭ ಪಂಥರು ಜಯದೇವಿ ತಾಯಿಯವರನ್ನು ನೋಡಿ ಪ್ರತಿ ಸಿಸ್ಟಮಂಡಳಿಯಲ್ಲಿಯೂ ನೀವು ಇರುವಿರಲ್ಲ ಎಂದು ನಗುತ್ತಾ ಕೇಳಿದಾಗ … ತಾಯಿ ಯವರು…”ಕರ್ನಾಟಕಕ್ಕೆ ಬರಬೇಕಾದ ಪ್ರತಿ ಹಳ್ಳಿಯೂ ನಮಗೆ ಸಂಬಂಧಪಟ್ಟದ್ದು ಅದರ ಪರ ವಾದಿಸುವುದು ನನ್ನ ಪ್ರಥಮ ಕರ್ತವ್ಯ” ಎಂದು ಹೇಳಿದರು. ಅವರ ಕನ್ನಡ ಪ್ರೇಮಕ್ಕೆ ,ಅವರ ವರ್ಚಸ್ಸಿಗೆ ಪಂಥರು ತಲೆಬಾಗಿದರು.

ಕರ್ನಾಟಕ ಏಕೀಕರಣದ ಹೋರಾಟದಲ್ಲಿ ತಾಯಿ ನಿರಂತರವಾಗಿ ಪ್ರತಿಯೊಂದು ಸಭೆ, ಸಮಿತಿ, ಚರ್ಚೆ ಹಾಗೂ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದುದನ್ನು ಗಮನಿಸಿದ್ದ ಅವರು, ನಗುತ್ತಲೇ,
“ಪ್ರತಿ ಸಮಿತಿಯಲ್ಲಿಯೂ ನೀವು ಇದ್ದೀರಲ್ಲ!” ಎಂದು ಕೇಳಿದರು.
ಆ ಪ್ರಶ್ನೆಯಲ್ಲಿ ತುಸು ಆಶ್ಚರ್ಯವಿತ್ತು….ಆದರೆ ಜಯದೇವಿತಾಯಿಯವರ ಉತ್ತರದಲ್ಲಿ ಇಡೀ ಕರ್ನಾಟಕದ ನೋವು, ಕನಸು ಮತ್ತು ಹಕ್ಕಿನ ಧ್ವನಿ ಮೊಳಗಿತು.
“ಕರ್ನಾಟಕಕ್ಕೆ ಬರಬೇಕಾದ ಪ್ರತಿಯೊಂದು ಹಳ್ಳಿಯೂ ನಮಗೆ ಸಂಬಂಧಪಟ್ಟದ್ದು. ಅದರ ಪರವಾಗಿ ವಾದಿಸುವುದು ನನ್ನ ಪ್ರಥಮ ಕರ್ತವ್ಯ.”
ಅದು ತಾಯಿಯವರ ಬದುಕಿನ ಧ್ಯೇಯವಾಕ್ಯವಾಗಿತ್ತು.
ಅವರಿಗೆ ಕರ್ನಾಟಕವೆಂದರೆ ಗಡಿಯಾಚೆ ಉಳಿದ ಪ್ರತಿಯೊಂದು ಕನ್ನಡಿಗನ ನೋವೂ ತಮ್ಮದೇ ನೋವು, ಕನ್ನಡದ ನೆಲದಿಂದ ದೂರವಾಗುವ ಪ್ರತಿಯೊಂದು ಹಳ್ಳಿಯೂ ತಮ್ಮ ಮನೆಯ ಒಂದು ಭಾಗ ಕಳೆದುಹೋದಂತೆಯೇ ಅವರಿಗೆ ಭಾಸವಾಗುತ್ತಿತ್ತು.
ಅವರ ವಾದದಲ್ಲಿ ತೀಕ್ಷ್ಣತೆಯಿತ್ತು.ಕನ್ನಡಿಗರ ಹಕ್ಕನ್ನು ಗೆಲ್ಲಿಸುವ ಉದ್ದೇಶವಿತ್ತು…
ತಾಯಿಯವರ ಕನ್ನಡ ಪ್ರೇಮದ ಆ ಆಳವನ್ನು ಕಂಡವರು ಅವರ ವರ್ಚಸ್ಸಿಗೆ ತಲೆಬಾಗದೆ ಇರಲಿಲ್ಲ.


About The Author

Leave a Reply

You cannot copy content of this page

Scroll to Top