Month: July 2021

ಆಡುತ್ತಿದ್ದ ಮಗುವನ್ನೆತ್ತಿಕೊಂಡು ಎಂದಿನಂತೆ ಬಾಲ್ಕನಿಗೆ ನಡೆದು ತಿನ್ನಿಸತೊಡಗಿದಳು. ʻಇದೇ ನಾನು ಇವ್ನಿಗೆ ತಿನ್ನಿಸ್ತಿರೋ ಕಡೇ ಊಟವಾಗಿದ್ರೆ….ʼ ಅನ್ನಿಸಿ ಮೈಯೆಲ್ಲಾ ನಡುಗಿತು. ಯಾವುದರ ಅರಿವೂ ಇಲ್ಲದ ಪುಟ್ಟ ರಾಮ ಅಮ್ಮನ ಮುಖ ನೋಡಿ ನಕ್ಕಿತು. ಹಾಗೆಯೇ ಮಗುವನ್ನಪ್ಪಿಕೊಂಡವಳ ಕಣ್ಣಲ್ಲಿ ತಡೆಯಿಲ್ಲದೆ ಕಣ್ಣೀರು ಸುರಿಯತೊಡಗಿತು.

ಇದ್ದ ಬದ್ದ ವಸ್ತ್ರ, ಪುಸ್ತಕಗಳಿಂದ ತುಂಬಿದ ನನ್ನ ಸೂಟ್‌ಕೇಸ್ ತುಂಬಾ ಭಾರವಾಗಿತ್ತು. ಪ್ರಯಾಸದಿಂದ ಅದನ್ನು ಹೇಗೂ ಬಳಸಿಕೊಂಡು ಸುಧಾರಿಸಿಕೊಳ್ಳುತ್ತ ಬಸ್‌ಸ್ಟಾಫಿನಲ್ಲಿ ನಿಂತು ನಾನು ಹೋಗಿ ಸೇರಿಕೊಳ್ಳಬೇಕಾದ ಮೊದಲ ವರ್ಷದ ವಿದ್ಯಾರ್ಥಿಗಳ ವಸತಿ ನಿಲಯ “ಶಾಲ್ಮಲಾ ಹಾಸ್ಟೆಲ್” ಯಾವ ದಿಕ್ಕಿನಲ್ಲಿದೆ? ಎಂಬುದನ್ನು ಅಲ್ಲಿಯೇ ನಿಂತಿರುವ ವಿದ್ಯಾರ್ಥಿಗಳ್ಲಿ ಕೇಳಿ ತಿಳಿದುಕೊಂಡೆ.

ನಾನೆಂದರೆ…

ಗೊಂದಲಗಳ ಗೂಡು ಒಮ್ಮೊಮ್ಮೆ
ಭಾವನೆಗಳ ಪರಿಧಿಯಲ್ಲಿ
ಮತ್ತೊಮ್ಮೆ ಗೆದ್ದು ಬೀಗುತ್ತೇನೆ, ಭೌದ್ಧಿಕತೆಯ ಪ್ರಶಾಂತತೆಯಲಿ

ತತ್ವಪದ

ಕವಿತೆ ತತ್ವಪದ ಲೀಲಾ ಕಲಕೋಟಿ ಅಡಿಗೆಯ ಮಾಡಿದೆಅಡಿಗೆಯ ಮಾಡಿದೆಅರಿವೆಂಬ ಅಂಗಳದಅಜ್ಞಾನವೆಂಬ ಕಟ್ಟಿಗೆತಂದು ಐದು ಗುಂಡಿನಒಲೆಯ ಹೂಡಿ …..ಅಡಿಗೆಯ ಮಾಡಿದೆಒಮ್ಮನದ ಅಕ್ಕಿಯತರಿಸಿ ಹಮ್ಮಿನ ಹೊಟ್ಟುತೂರಿ ಸುಜ್ಞಾನವೆಂಬನೀರಲಿ ತೊಳೆದು..ಕಾಮ ಕ್ರೋಧವೆಂಬಬೆಂಕಿಯಲಿ ನಯವಾದಪಾತ್ರೆಯ ಬಳಸಿ…ಅಡಿಗೆಯ ಮಾಡಿದೆಅಡಿಗಡಿಗೆ ಬಿಮ್ಮನೆಬಿಗಿದ ಅಗಳನು ಒತ್ತಿನೋಡಿ ಮೆತ್ತಗಾಗಿಸುತಅಡಿಗೆಯ ಮಾಡಿದೆನಾನು………….

ಕ್ಷಿಣೀಸುತ್ತಿದೆ ಮೌಲ್ಯ ಗಳ ನೆಲೆ

ಕವಿ ಕುವೆಂಪು ಹೇಳುವಂತೆ”ಮಗು ಹುಟ್ಟುತ್ತ ವಿಶ್ವಮಾನವ, ಬೆಳೆಯುತ್ತ ಅಲ್ಪಮಾನವ ಅವನನ್ನು ಮತ್ತೆ ವಿಶ್ವಮಾನವನನ್ನಾಗಿಸುವ ಮುಖ್ಯ ಕಾರ್ಯ ಶಿಕ್ಷಣದ್ದಾಗಿದೆ”ಎಂಬಂತೆ ಮಕ್ಕಳ ಶಿಕ್ಷಣದ ಪ್ರಾರಂಭಿಕ ಹಂತದಿಂದಲೆ ಗಮನ ನೀಡಿದರೆ ಅವರ ಭವಿಷ್ಯ ಮೌಲ್ಯಗಳ ನೆಲೆಯಲ್ಲಿ ಯಶಸ್ವಿಯಾಗಲು ಸಾಧ್ಯ ಅಲ್ಲವೇ?

ಆಗ ಶಂಕರನೂ, ಪುರಂದರಯ್ಯನೂ ತುಸು ಗೆಲುವಾದರು. ನಂತರ ಹಾವು ಮತ್ತು ಮೊಟ್ಟೆಗಳನ್ನು ದಹಿಸುವ ಶಾಸ್ತ್ರೋಕ್ತ ವಿಧಿಗೆ ಚಾಲನೆ ನೀಡಿದ ಏಕನಾಥರು ಮೃತ ಸರ್ಪ ಕುಟುಂಬವನ್ನು ದೇಸಿ ದನದ ತುಪ್ಪದಿಂದಲೇ ಸುಟ್ಟು ಅವುಗಳ ಆತ್ಮಗಳಿಗೆ ಚಿರಶಾಂತಿ ಕೋರಿದರು.

ಸುಂದರಮ್ಮನೂ ಸುಮ್ಮನಿರಲಾಗದೆ “ವರ ಕೊಟ್ಟ ಹಾಗೆ ಕೊಡ್ತಿದೀಯ. ಇನ್ನೇನು ಗುನುಗು ಅವಳಿಗೆ. ನೀನು ಹೀಗೆ ತಲೆಮೇಲೆ ಕೂರಿಸ್ಕೊಂಡಿದ್ದಕ್ಕೇ ಅವ್ಳು ಹೀಗೆ ಹದಗೆಟ್ಟಿದ್ದು” ಸಿಡುಕಿದರು. ನಿಧಾನವಾಗಿ ಎದ್ದ ಪದ್ಮ ಏನೂ ಮಾತಾಡದೆ ತನ್ನ ಕೋಣೆಗೆ ಹೋಗಿ ಬಾಗಿಲು ಮುಚ್ಚಿದಳು.

ಜನಪದರ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ

ಆದರೆ ಇತ್ತಿತ್ತಲಾಗಿ ಮಾರಾಟಕ್ಕೆ ಸಿಗುವ ಬಣ್ಣದಲ್ಲಿ ಅಲಂಕೃತಗೊಂಡ ಸುಂದರ ಎತ್ತುಗಳನ್ನು ತಂದಿಟ್ಟು ಪೂಜಿಸುತ್ತಾರೆ. ಗ್ರಾಮೀಣ ಮಕ್ಕಳಿಗೆ ಎತ್ತು ತಯಾರಿಸುವುದರಲ್ಲಿ ವಿಶೇಷ ಒಲವು. ಮನೆಮನೆಗೆ ಹೋಗಿ ಮಾರುವುದುಂಟು.

Back To Top