ಕವಿತೆ
ತತ್ವಪದ
ಲೀಲಾ ಕಲಕೋಟಿ
ಅಡಿಗೆಯ ಮಾಡಿದೆ
ಅಡಿಗೆಯ ಮಾಡಿದೆ
ಅರಿವೆಂಬ ಅಂಗಳದ
ಅಜ್ಞಾನವೆಂಬ ಕಟ್ಟಿಗೆ
ತಂದು ಐದು ಗುಂಡಿನ
ಒಲೆಯ ಹೂಡಿ …..
ಅಡಿಗೆಯ ಮಾಡಿದೆ
ಒಮ್ಮನದ ಅಕ್ಕಿಯ
ತರಿಸಿ ಹಮ್ಮಿನ ಹೊಟ್ಟು
ತೂರಿ ಸುಜ್ಞಾನವೆಂಬ
ನೀರಲಿ ತೊಳೆದು..
ಕಾಮ ಕ್ರೋಧವೆಂಬ
ಬೆಂಕಿಯಲಿ ನಯವಾದ
ಪಾತ್ರೆಯ ಬಳಸಿ…
ಅಡಿಗೆಯ ಮಾಡಿದೆ
ಅಡಿಗಡಿಗೆ ಬಿಮ್ಮನೆ
ಬಿಗಿದ ಅಗಳನು ಒತ್ತಿ
ನೋಡಿ ಮೆತ್ತಗಾಗಿಸುತ
ಅಡಿಗೆಯ ಮಾಡಿದೆ
ನಾನು………….
ಅರ್ಥವತ್ತಾಗಿದೆ
ಸೊಗಸಾಗಿ ಬರೆದಿದ್ದೀರಿ, ಓದಿದಷ್ಟೂ ಮತ್ತೆ ಓದಲು ಇಷ್ಟವಾಗುತ್ತದೆ
ಧನ್ಯವಾದಗಳು